Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ನಿಟ್ಟೆ-50 ವರ್ಷ ಮೇಲ್ಪಟ್ಟ ಹಿರಿಯ ಆಟಗಾರರ ಕ್ರಿಕೆಟ್ ಪಂದ್ಯಾಕೂಟ

ಉಡುಪಿ ಜಿಲ್ಲೆಯ ಪ್ರತಿಷ್ಠಿತ ಲೆದರ್ ಬಾಲ್ ಕ್ರಿಕೆಟ್ ಕೋಚಿಂಗ್ ಅಕಾಡೆಮಿಗಳಾದ B.A.C.A ಮತ್ತು
K.R.S ಕ್ರಿಕೆಟ್ ಅಕಾಡೆಮಿ ಇವರ ನೇತೃತ್ವದಲ್ಲಿ,ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ ಇವರ ಸಹಯೋಗದಲ್ಲಿ
50 ರ ವರ್ಷ ಮೇಲ್ಪಟ್ಟ ಹಿರಿಯ ಆಟಗಾರರ ಕ್ರಿಕೆಟ್ ಪಂದ್ಯಾಕೂಟ ಆಯೋಜಿಸಲಾಗಿದೆ.
ನವೆಂಬರ್ 19,20 ಮತ್ತು 21 ರಂದು ನಿಟ್ಟೆಯ ಬಿ‌.ಸಿ‌.ಆಳ್ವ ಸ್ಟೇಡಿಯಂ ನಲ್ಲಿ ನಡೆಯಲಿರುವ ಈ ಪಂದ್ಯಾವಳಿಯಲ್ಲಿ B.A.C.A ಮತ್ತು K.R.S ಅಕಾಡೆಮಿ ಸಮ್ಮಿಶ್ರಣದ ತಂಡ ಹಾಗೂ ಮುಂಬಯಿಯ ರಾಯಲ್ ಇಂಡಿಯನ್ಸ್ ತಂಡಗಳ ನಡುವೆ ಪ್ರಬಲ ಪೈಪೋಟಿ ನಡೆಯಲಿದೆ.
 ಕಾಪು ಮಂದಾರ ರೆಸಿಡೆನ್ಸಿಯಲ್ಲಿ ಆಟಗಾರರಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು,ಸ್ಪೋರ್ಟ್ಸ್ ಕನ್ನಡ ಟೂರ್ನಮೆಂಟ್ ನ ಮೂರುದಿನಗಳ ವಿದ್ಯಮಾನಗಳನ್ನು ಪ್ರಕಟಿಸಲಿದೆ.ಹೆಚ್ಚಿನ ವಿವರಗಳಿಗಾಗಿ 8217289848 ಮತ್ತು 9980489299 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಪಡುಬಿದ್ರಿ-ಪಾಣರ ಪ್ರೀಮಿಯರ್ ಲೀಗ್ -2021

ಕ್ರೀಡಾ ಕ್ಷೇತ್ರದಲ್ಲಿ ತನ್ನದೆ ಆದ ಚಾಪನ್ನು ಮೂಡಿಸುತ್ತ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ ಪಡುಬಿದ್ರಿ ಯ ಬೋರ್ಡ್ ಶಾಲಾ ಮೈದಾನದಲ್ಲಿ ಈ ಬಾರಿ ಪಾಣರ ಪ್ರೀಮಿಯರ್ ಲೀಗ್ ಪಂದ್ಯಾಟಕ್ಕೆ ಸಿದ್ದವಾಗಿದೆ.
ಪಡುಬಿದ್ರಿಯ ಯುವ ಉತ್ಸಾಹಿ ಸಂಘಟಕರಾದ ಶ್ರೀ ಶಂಕರ್ ಕಂಚಿನಡ್ಕ ಇವರ ನೇತೃತ್ವದಲ್ಲಿ ತುಳುನಾಡಿನ ದೈವಾರಾಧನೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಲಿಕೆ ಯಾನೆ ಪಾಣರ ಸಮಾಜ ಬಾಂಧವರ ಒಗ್ಗಟ್ಟನ್ನು ಬಲಪಡಿಸುವ ಮತ್ತು  ಸಮಾಜದ ಆಸಕ್ತ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಂಡರ್ ಆರ್ಮ್ ಮಾದರಿಯಲ್ಲಿ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ.
ಆಕ್ಷನ್ ಪ್ರಕ್ರಿಯೆ
ಓವರ್ ಆರ್ಮ್ ಮಾದರಿಯ ಸಾಕಷ್ಟು ಪಂದ್ಯಾಟಕ್ಕೆ ಸಾಕ್ಷಿಯಾಗಿದ್ದ ಪಡುಬಿದ್ರ ಬೋರ್ಡ್ ಶಾಲಾ ಮೈದಾನ ಈ ಬಾರಿ ಅಂಡರ್ ಆರ್ಮ್ ಪಂದ್ಯಾಟಕ್ಕೂ ಪರಿಚಯವಾಗುತ್ತಿದೆ. ನಲಿಕೆ ಸಮಾಜದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇಷ್ಟೊಂದು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಹಾಗೂ  ಗರಿಷ್ಠ ಮೊತ್ತದ ನಗದು ಬಹುಮಾನಗಳನ್ನು ಒಳಗೊಂಡ ಪಂದ್ಯಾಟವಾಗಿದೆ. ಒಟ್ಟು 12 ಫ್ರಾಂಚೈಸಿಗಳ ನಡುವಿನ ಪ್ರೀಮಿಯರ್ ಲೀಗ್ ನಲ್ಲಿ ಸುಮಾರು  180 ಆಟಗಾರರು ಭಾಗವಹಿಸಲಿದ್ದು, ಇದೇ ಬರುವ ದಿನಾಂಕ 07.11.2021 ಭಾನುವಾರ ಪಡುಬಿದ್ರಿ ಅಮರ್ ಕಂಫರ್ಟ್ಸ್ ನಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.
 ಈಗಾಗಲೇ ಪಂದ್ಯಾಟಕ್ಕೆ ಚಿತ್ರರಂಗದ ಕಲಾವಿದರು,ಕ್ರೀಡಾ ತಾರೆಗಳು, ರಂಗಭೂಮಿ ನಟರು, ರಾಜಕೀಯ ಧುರೀಣರ ಶುಭಾಶಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಹುನಿರೀಕ್ಷೆಯೊಂದಿಗೆ ಪಂದ್ಯಾಟದ ರೂಪುರೇಷೆಗಳು ಸಿದ್ಧವಾಗುತ್ತಿದೆ.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಅಲೆವೂರು ಫ್ರೆಂಡ್ಸ್ ವತಿಯಿಂದ ವಿಪ್ರ ಕಪ್-ಆಕಾಶ್ ಟ್ರೋಫಿ-2021

ಉಡುಪಿಯ ಪ್ರಸಿದ್ಧ ತಂಡ ರಾಜಾ ಅಲೆವೂರು ಸಾರಥ್ಯದ ಅಲೆವೂರು ಫ್ರೆಂಡ್ಸ್  ವತಿಯಿಂದ ಅಕ್ಟೋಬರ್ 16 ಮತ್ತು 17 ರಂದು ಉಡುಪಿಯ ಬೀಡಿನಗುಡ್ಡೆ  ಮೈದಾನದಲ್ಲಿ “ವಿಪ್ರ ಕಪ್-ಆಕಾಶ್ ಟ್ರೋಫಿ-2021” ಪಂದ್ಯಾವಳಿ ಆಯೋಜಿಸಲಾಗಿದೆ.
ವಿಶೇಷವಾಗಿ ಶನಿವಾರದಂದು ಇನ್ನಿತರ ಸಮುದಾಯದ 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದ್ದು,ರವಿವಾರ ವಿಪ್ರ ಬ್ರಾಹ್ಮಣರ ತಂಡಗಳು ಸ್ಪರ್ಧಾಕಣಕ್ಕಿಳಿಯಲಿದ್ದಾರೆ.
ಪ್ರಥಮ ಬಹುಮಾನ ರೂಪದಲ್ಲಿ 40 ಸಹಸ್ರ ಹಾಗೂ ದ್ವಿತೀಯ 20 ಸಹಸ್ರ ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ  ರಾಜಾ ಅಲೆವೂರು  9448169458 ಮತ್ತು ವೆಂಕಟ್ 9591280462 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

T-10 ಬಿಗ್ ಬ್ಯಾಶ್ ಲೀಗ್-ಪಡುಬಿದ್ರಿ ಪ್ರೀಮಿಯರ್ ಲೀಗ್-2021

ಅಳಿವಿನಂಚಿನಲ್ಲಿರುವ ಟೆನ್ನಿಸ್ಬಾಲ್ ಕ್ರಿಕೆಟ್ ಗೆ ಹೊಸರೂಪ ಕೊಡುವ ನಿಟ್ಟಿನಲ್ಲಿ ಸೌಜನ್ ಪಡುಬಿದ್ರಿ ಹಾಗೂ ಅಪ್ಪು ಬದಿಯಡ್ಕ ಸ್ನೇಹಿತರೀರ್ವರ ಸಾರಥ್ಯದಲ್ಲಿ ಪಡುಬಿದ್ರಿ-ಎರ್ಮಾಳ್-ಹೆಜಮಾಡಿ ಪರಿಸರದ ಆಟಗಾರರಿಗಷ್ಟೇ ಸೀಮಿತವಾದ “ಪಡುಬಿದ್ರಿ ಪ್ರೀಮಿಯರ್ ಲೀಗ್-2021″ಪಂದ್ಯಾವಳಿ ಆಯೋಜಿಸಲಾಗಿದೆ.
ವಿಶೇಷವಾಗಿ 10 ಓವರ್ ಗಳ ಪಂದ್ಯಾಟ ಇದಾಗಿದ್ದು ಅಕ್ಟೋಬರ್ 15,16 ಮತ್ತು 17 ಮೂರು ದಿನಗಳ ಕಾಲ ಪಡುಬಿದ್ರಿಯ ಬೋರ್ಡ್ ಶಾಲಾ ಮೈದಾನದಲ್ಲಿ ನಡೆಯಲಿದೆ.ಪಂದ್ಯಾವಳಿಯ ಪ್ರಥಮ‌ ಪ್ರಶಸ್ತಿ ವಿಜೇತ ತಂಡ 33,333 ರೂ ಹಾಗೂ ದ್ವಿತೀಯ ಪ್ರಶಸ್ತಿ ರೂಪದಲ್ಲಿ 22,222 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದ್ದು,3 ಮತ್ತು 4 ನೇ ಸ್ಥಾನ ಪಡೆದ ತಂಡಗಳು ಹಾಗೂ ಶಿಸ್ತುಬದ್ಧ ತಂಡ ಹೀಗೆ ಇನ್ನಿತರ ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳನ್ನು
ಪಡೆಯಲಿದ್ದಾರೆ. M9 ಸ್ಪೋರ್ಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.
ಹೆಚ್ಚಿನ ವಿವರಗಳಿಗಾಗಿ 9008437068 ಮತ್ತು  8147 394606 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

T.C.A ಉಡುಪಿ ಜಿಲ್ಲೆ ಇವರ ಆಯೋಜನೆಯಲ್ಲಿ ಪ್ರಥಮ ಬಾರಿಗೆ- ತಾಲೂಕು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ 2021-2022

ಅಳಿವಿನಂಚಿನಲ್ಲಿರುವ ಟೆನ್ನಿಸ್ಬಾಲ್ ಕ್ರಿಕೆಟ್ ಶ್ರೇಯೋಭಿವೃದ್ಧಿಗಾಗಿ ಟೊಂಕ ಕಟ್ಟಿ ನಿಂತಿರುವ ಉಡುಪಿ ಜಿಲ್ಲೆಯ ಹಿರಿಯ ಆಟಗಾರರ ಸಮಾಗಮದಲ್ಲಿ ಇತ್ತೀಚೆಗಷ್ಟೇ ಉದ್ಘಾಟನೆಯಾದ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಜಿಲ್ಲೆ ಇವರ ಆಯೋಜನೆಯಲ್ಲಿ ಪ್ರಥಮ ಬಾರಿಗೆ “ತಾಲೂಕು ಮಟ್ಟದ ಕ್ರಿಕೆಟ್ ಟೂರ್ನಮೆಂಟ್ 2021-22” ನಡೆಯಲಿದೆ.
ತಾಲ್ಲೂಕು ಮಟ್ಟದಿಂದ ಪ್ರಾರಂಭಗೊಂಡು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲೂ ಕ್ರಾಂತಿಕಾರಿ ಸಂಚಲನ ಮೂಡಿಸಲಿರುವ ಟೆನ್ನಿಸ್ಬಾಲ್ ಕ್ರಿಕೆಟ್ ಉಡುಪಿ ಜಿಲ್ಲಾ ಅಸೋಸಿಯೇಷನ್ ಆಯೋಜಿಸುವ
ಪಂದ್ಯಾಕೂಟದ ವಿವರ ಈ ಕೆಳಗಿನಂತಿದೆ.
1)ಪಂದ್ಯಾಕೂಟವು ಬೈಂದೂರು,ಕುಂದಾಪುರ, ಬ್ರಹ್ಮಾವರ,ಉಡುಪಿ,ಕಾಪು,ಹೆಬ್ರಿ,
ಕಾರ್ಕಳ ಹೀಗೆ  7 ತಾಲೂಕುಗಳ ವಿಭಾಗಗಳಾಗಿರುತ್ತದೆ.
2)7 ತಾಲೂಕುಗಳಲ್ಲಿ 7 ಟೂರ್ನಮೆಂಟ್ ಗಳು ನಡೆಯುತ್ತದೆ.
3)ತಾಲ್ಲೂಕು ಮತ್ತು ಜಿಲ್ಲಾ ಮಟ್ಟ ಹಾಗೂ ರಾಜ್ಯಮಟ್ಟದ ಪಂದ್ಯಾಟಗಳನ್ನು ಅಸೋಸಿಯೇಷನ್ ಮೂಲಕವೇ ನಡೆಸಲಾಗುವುದು.
4)ಹೆಸರು ನೋಂದಣಿ ಮಾಡಿದ ಆಟಗಾರರ ಸಾಮರ್ಥ್ಯಕ್ಕನುಗುಣವಾಗಿ ತಂಡವನ್ನು ಅಸೋಸಿಯೇಷನ್ ಮೂಲಕವೇ ತಂಡ ರಚಿಸಲಾಗುವುದು.
5)ಹೆಸರು ನೋಂದಾವಣೆಗೆ ಯಾವುದೇ ಶುಲ್ಕ ಇರುವುದಿಲ್ಲ.
6)ತಾಲೂಕು ತಂಡಗಳ ಆಟಗಾರರ ಉತ್ತಮ ಪ್ರದರ್ಶನಗಳನ್ನು ನೋಡಿ ಜಿಲ್ಲಾಮಟ್ಟದ ಪಂದ್ಯಾಟಕ್ಕೆ ತಂಡ ರಚಿಸಲಾಗುವುದು.
7)ಆಟಗಾರರು ಒಂದು ಫೋಟೋ ವಾಟ್ಸಪ್ ಮೂಲಕ ಕಳುಹಿಸಬೇಕು.ಆಟಗಾರರು ತಮ್ಮ ಹೆಸರು ನೋಂದಣಿಗೆ 30-09-2021 ಕೊನೆಯ ದಿನಾಂಕವಾಗಿರುತ್ತದೆ.
8)ಟೂರ್ನಮೆಂಟ್ ನ ದಿನಾಂಕ ಮತ್ತು ಸ್ಥಳದ ವಿವರ ಅತಿ ಶೀಘ್ರದಲ್ಲಿ ತಿಳಿಸಲಾಗುತ್ತದೆ.ಆಟಗಾರರಿಗೆ ಪಂದ್ಯಾಟದ ದಿನ ಮಧ್ಯಾಹ್ನದ ಊಟ ಮತ್ತು ಜೆರ್ಸಿಯನ್ನು ನೀಡಲಾಗುತ್ತದೆ.
9)ಆಟಗಾರರು ಈ ಮೊದಲು ಆಡಿದ ತಂಡದ ಹೆಸರು
ನಮೂದಿಸಬೇಕು.
10)ಪಂದ್ಯಾಕೂಟದ ಎಲ್ಲಾ ಪಂದ್ಯಗಳು 10 ಓವರ್ ಗಳದ್ದಾಗಿರುತ್ತದೆ.
11)ವಿಜೇತ ತಂಡಗಳಿಗೆ ಆಕರ್ಷಕ ನಗದು ಬಹುಮಾನದೊಂದಿಗೆ ಶಾಶ್ವತ ಫಲಕಗಳನ್ನು ನೀಡಿ ಗೌರವಿಸಲಾಗುತ್ತದೆ.
ಆಡಲಿಚ್ಚಿಸುವವರು 7483431596  ಈ ವಾಟ್ಸಪ್ ನಂಬರ್ ಸಂಪರ್ಕಿಸಬಹುದು.
Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಉದ್ಘಾಟನೆ

ಉಡುಪಿ ಜಿಲ್ಲೆಯ ಹಿರಿಯ-ಕಿರಿಯ ಆಟಗಾರರ ಸಮ್ಮುಖದಲ್ಲಿ ಮಂಗಳವಾರ ಸಂಜೆ T.C.A (ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್)
ಉದ್ಘಾಟನಾ ಸಮಾರಂಭ ಉಡುಪಿಯ ಮಿಶನ್ ಕಂಪೌಂಡ್ ನ ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಜರುಗಿತು.ಹಿರಿಯ ರಣಜಿ ಆಟಗಾರರಾದ ದಯಾನಂದ ಬಂಗೇರ ಇವರು ದೀಪ ಬೆಳಗಿಸುವುದರ ಮೂಲಕ ಇತರ ಎಲ್ಲಾ ಅತಿಥಿ ಗಣ್ಯರೊಂದಿಗೆ ಉದ್ಘಾಟನೆ ಮಾಡಲಾಯಿತು.
ಉದ್ಘಾಟನೆ ಬಳಿಕ ಮಾತನಾಡಿದ T.C.A ಅಧ್ಯಕ್ಷರಾದ ಟೊರ್ಪೆಡೋಸ್ ಗೌತಮ್ ಶೆಟ್ಟಿ
“ಉಡುಪಿ ಜಿಲ್ಲೆಯಲ್ಲಿ ನಡೆಯುವ ಟೆನ್ನಿಸ್ಬಾಲ್ ಕ್ರಿಕೆಟ್ ಪಂದ್ಯಾಟಗಳಲ್ಲಿ ಶಿಸ್ತು,ವೃತ್ತಿಪರತೆ,ಆಟಗಾರರಿಗೆ ಅಗತ್ಯವಿರುವ ಸೌಲಭ್ಯ,ಗ್ರಾಮೀಣ ಪ್ರದೇಶದ ತಂಡಗಳಿಗೆ ಪ್ರಾಯೋಜಕತ್ವ,ಕಿಟ್ ಒದಗಿಸುವುದು,ಮೂಲಭೂತ ಸೌಕರ್ಯ ಕಲ್ಪಿಸುವುದು,ಜಿಲ್ಲೆಯ ತಂಡಗಳನ್ನು ಒಂದೇ ವೇದಿಕೆಯಡಿ ತಂದು ಟೂರ್ನಿಗಳನ್ನು ನಡೆಸಲು ನೆರವಾಗುವುದು,ಟೆನ್ನಿಸ್ಬಾಲ್ ಕ್ರಿಕೆಟ್ ನಲ್ಲಿ ಪಳಗಿದ ಯುವ ಪ್ರತಿಭೆಗಳಿಗೆ ಲೆದರ್ ಬಾಲ್ ಕ್ರಿಕೆಟ್ನಲ್ಲೂ ಅವಕಾಶ ಸಿಗುವ ಬಗ್ಗೆ ವಿವಿಧ ಕ್ಲಬ್ ಗಳ ಜೊತೆ ಸಂಪರ್ಕ ಕಲ್ಪಿಸುವುದು ಹೀಗೆ ಹತ್ತು ಹಲವಾರು ಸದುದ್ದೇಶಗಳನ್ನಿಟ್ಟುಕೊಂಡು ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಗೆ ಪುನರ್ಜೀವ ಕಲ್ಪಿಸಲಾಗಿದೆ ಹಾಗೂ ಟೆನ್ನಿಸ್ಬಾಲ್ ಕ್ರಿಕೆಟ್ ಸಮಾಜದಲ್ಲಿ ನಮಗೆ ಗುರುತು ನೀಡಿದೆ,ಬದುಕಲು ಕಲಿಸಿದೆ,ಯಶಸ್ಸಿನ ಹಾದಿ ಸುಗಮವಾಗಿಸಿದೆ‌.ಆದ್ದರಿಂದ ಟೆನ್ನಿಸ್ಬಾಲ್ ಕ್ರಿಕೆಟ್ ಉಳಿಸಿ-ಬೆಳೆಸುವುದು ಪ್ರತಿಯೊಬ್ಬ ಆಟಗಾರರ ಜವಾಬ್ದಾರಿಯಾಗಿದೆ” ಎಂದರು.ಕಾರ್ಯಕ್ರಮದಲ್ಲಿ ಆಸೀನರಾದ ಸಂಸ್ಥೆಯ ಪದಾಧಿಕಾರಿಗಳು ಶುಭಹಾರೈಸಿದರು.
ಈ ಸಂದರ್ಭ ಸಭೆಯಲ್ಲಿ ಭಾಗವಹಿಸಿದ ಸದಸ್ಯರ ಕೆಲವು ಗೊಂದಲಗಳನ್ನು ಅಧ್ಯಕ್ಷರೊಂದಿಗೆ ಸಂವಾದ ಮಾಡುವುದರ ಮೂಲಕ ಬಗೆಹರಿಸಿಕೊಂಡು ಎಲ್ಲರೂ ಉತ್ತಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಗೌರವಾಧ್ಯಕ್ಷರಾದ ಶರತ್ ಶೆಟ್ಟಿ ಪಡುಬಿದ್ರಿ,ದಯಾನಂದ ಬಂಗೇರ,ಶ್ರೀಧರ ಶೆಟ್ಟಿ,ಉದಯ್ ಕುಮಾರ್ ಕಟಪಾಡಿ,ಡಾ.ವಿನೋದ್ ನಾಯಕ್,ಪ್ರಭಾಕರ್ ಶೆಟ್ಟಿ,ಯಾದವ್ ನಾಯಕ್, ಜಾನ್ ಪ್ರೇಮ್ ಕುಮಾರ್,ನಾರಾಯಣ ಶೆಟ್ಟಿ,ಪ್ರವೀಣ್ ಕುಮಾರ್,ಪ್ರವೀಣ್ ಪಿತ್ರೋಡಿ,ಚೇತನ್ ಕುಮಾರ್ ಇನ್ನಿತರ ಹಿರಿಯ ಆಟಗಾರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರವೀಣ್ ಕುಮಾರ್ ಬೈಲೂರು ಸಂಯೋಜಿಸಿದರು ಹಾಗೂ
ಶಿವನಾರಾಯಣ ಐತಾಳ್ ಕೋಟ ಕಾರ್ಯಕ್ರಮ ನಿರೂಪಣೆ ಮಾಡಿದರು.