Categories
ಇತರೆ

ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್(ರಿ) -ಪತಂಜಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರ ಪ್ರಾರಂಭ

ಉದ್ಯಾವರ-ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಸಂಸ್ಥೆ ಪಿತ್ರೋಡಿ ಇವರ ವತಿಯಿಂದ ಹತ್ತು ದಿನದ ಪತಂಜಲಿ ಯೋಗ ಮತ್ತು ಪ್ರಾಣಾಯಾಮ ಶಿಬಿರವು ಇಂದು ಪ್ರಾರಂಭಗೊಂಡಿತು.
ಮಂಡಲ ಪ್ರಭಾರಿ ಶ್ರೀ ರಾಘವೇಂದ್ರ ರಾವ್ ಯೋಗ ತರಬೇತಿ ನಡೆಸಿಕೊಟ್ಟರು. ಸಂಸ್ಥೆಯ ಅಧ್ಯಕ್ಷರಾದ  ನವೀನ್ ಸಾಲ್ಯಾನ್,ಉಪಾಧ್ಯಕ್ಷರಾದ ವಿಜಯ್ ಕೋಟ್ಯಾನ್, ಭಜನಾ ಮಂಡಳಿಯ ಅಧ್ಯಕ್ಷರಾದ  ಗಂಗಾಧರ್ ಕರ್ಕೇರ,
ಮಹಿಳಾ ಮಂಡಳಿಯ ಅಧ್ಯಕ್ಷರಾದ ಭಾರತಿ, ಮಾಜಿ ಅಧ್ಯಕ್ಷರಾದ ಮಲ್ಲೇಶ್ ಕುಮಾರ್, ಉಮೇಶ್ ಕರ್ಕೇರ, ಪ್ರಕಾಶ್ ಶೆಟ್ಟಿ,ಸಂದೀಪ್ ಕುಮಾರ್,ಉಮಾನಾಥ್ ಕರ್ಕೇರ  ಸಹಿತ ಮೂವತ್ತು ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡರು.
Categories
ಇತರೆ

ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್(ರಿ) ನೇತೃತ್ವದಲ್ಲಿ ಉಚಿತ ಯೋಗ ಮತ್ತು ಪ್ರಾಣಾಯಾಮ‌ ತರಬೇತಿ

ಉದ್ಯಾವರ-ಶ್ರೀ ವೆಂಕಟರಮಣ ಭಜನಾ ಮಂದಿರ ರಿ.ಪಿತ್ರೋಡಿ ಇದರ ಅಂಗಸಂಸ್ಥೆ,ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ಯದ ಶಿಸ್ತುಬದ್ಧ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್ & ಕಲ್ಚರಲ್ ಕ್ಲಬ್ (ರಿ)ನೇತೃತ್ವದಲ್ಲಿ ಪತಂಜಲಿ ಯೋಗ ಪೀಠ,ಹರಿದ್ವಾರ,
ಪತಂಜಲಿ ಯೋಗ ಸಮಿತಿ ಉಡುಪಿ ಇದರ ನುರಿತ ಯೋಗ ಶಿಕ್ಷಕರಿಂದ ಉಚಿತ ಯೋಗ ಮತ್ತು ಪ್ರಾಣಾಯಾಮ ತರಬೇತಿ ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 15 ರಿಂದ 24 ರ ವರೆಗೆ ಈ ಕಾರ್ಯಕ್ರಮ ಪಿತ್ರೋಡಿ ಶ್ರೀ ವೆಂಕಟರಮಣ ಭಜನಾ ಮಂದಿರದಲ್ಲಿ ಬೆಳಿಗ್ಗೆ 5.30 ರಿಂದ 7 ರವರೆಗೆ ನಡೆಯಲಿದೆ.ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬಹುದು.
Categories
ಇತರೆ

ನವಕಿರಣ್ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಇವರಿಂದ 28 ನೇ ವರ್ಷದ ಮುದ್ದುಕೃಷ್ಣ ಸ್ಪರ್ಧೆ ಸುಸಂಪನ್ನ

ಬ್ರಹ್ಮಾವರ- ನವಕಿರಣ್ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆ ಹಾಗೂ ನವತಾರೆ ಸೇವಾ ವೇದಿಕೆ ಬ್ರಹ್ಮಾವರ ಇವರ ಆಶ್ರಯದಲ್ಲಿ ನಡೆದ 28 ನೇ ವರ್ಷದ ರಾಜ್ಯ ಮಟ್ಟದ ಮುದ್ದು ಕೃಷ್ಣ ಸ್ಪರ್ಧೆ ಯು ಬ್ರಹ್ಮಾವರ ಬಂಟರ ಭವನದಲ್ಲಿ ಜರುಗಿತು.
ಇದರ ಉದ್ಘಾಟನೆಯನ್ನು ಶ್ರೀ ಸಾಯಿ ಮಂದಿರ ದ ಪರಮಪೂಜ್ಯ ಗುರುಗಳಾದ ಶ್ರೀ ಸಾಯಿ ಈಶ್ವರ ಸ್ವಾಮಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ರಾಜೇಶ್ ಶೆಟ್ಟಿ ಬಿರ್ತಿ,ಬ್ರಹ್ಮಾವರ ವಲಯದ ರಾಷ್ಟ್ರೀಯ ಪಕ್ಷದ ಉಸ್ತುವಾರಿ ಪ್ರಖ್ಯಾತ ಶೆಟ್ಟಿ ಮತ್ತು ಶ್ರೀಮತಿ ಸವಿತಾ ಶೆಣೈ ಉಪಸ್ಥಿತರಿದ್ದರು.ನವಕಿರಣ್ ವೇದಿಕೆ ಅಧ್ಯಕ್ಷ ರಾದ ಗಿರೀಶ್,ನವತಾರೆ ವೇದಿಕೆಯ ಅಧ್ಯಕ್ಷೆ ಅನುರಾಧ ವಿಘ್ನೇಶ್, ಕಾರ್ಯದರ್ಶಿ ಗಳಾದ ಉಮೇಶ ಪೂಜಾರಿ,ನವತಾರೆ ಯ ಕಾರ್ಯದರ್ಶಿ ಹೇಮಲತಾ ನಾಯಕ್ ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮ ದಲ್ಲಿ ಸರ್ವ ಧರ್ಮೀಯರು ಭಾಗವಹಿಸಿ ಕಾರ್ಯಕ್ರಮ ಕ್ಕೆ ಮೆರಗು ತಂದರು.
ಸುಮಾರು 331 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, ಎಲ್ಲಾ ಮಕ್ಕಳಿಗೂ ಬಹುಮಾನ ಹಾಗೂ ಪ್ರಶಸ್ತಿ ಪತ್ರ ಪ್ರದಾನ ಮಾಡಲಾಯಿತು.
Categories
ಇತರೆ

ಮಂಡ್ಯ-ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥ ಅಖಿಲ ಭಾರತ ವೃತ್ತಿಪರ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿ

*ಸ್ಪೋರ್ಟ್ಸ್ ಕನ್ನಡ ವರದಿ-*
ಭಾರತೀಯ ಖೋ-ಖೋ ಫೆಡರೇಷನ್,ಕರ್ನಾಟಕ ರಾಜ್ಯ ಖೋ-ಖೋ ಅಸೋಸಿಯೇಷನ್, ಮಂಡ್ಯ ಜಿಲ್ಲಾ ಖೋ-ಖೋ ಸಂಸ್ಥೆ, ಕ್ಯಾತನಹಳ್ಳಿ ಕ್ರೀಡಾ ಒಕ್ಕೂಟ(ರಿ).
ಕ್ಯಾತನಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹಸಿರು ನಕ್ಷತ್ರ-ಕ್ರೀಡಾಪೋಷಕ ದಿ.ಕೆ.ಎಸ್.ಪುಟ್ಟಣ್ಣಯ್ಯನವರ ಸ್ಮರಣಾರ್ಥ,ದರ್ಶನ್ ಪುಟ್ಟಣ್ಣಯ್ಯನವರ ಸಾರಥ್ಯದಲ್ಲಿ,
ಕ್ರೀಡಾ ಗ್ರಾಮ‌ ಕ್ಯಾತನಹಳ್ಳಿಯಲ್ಲಿ ಅಖಿಲ ಭಾರತ ಆಹ್ವಾನಿತ ವೃತ್ತಿಪರ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿ ಆಯೋಜಿಸಲಾಗಿದೆ.
ದಿನಾಂಕ  ಜೂನ್ 2,3,4 ಮತ್ತು 5 ರಂದು  ಕ್ಯಾತನಹಳ್ಳಿ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಈ ಪಂದ್ಯಾಟ ಆಯೋಜಿಸಲಾಗಿದೆ.ಮ್ಯಾಟ್ ಅಂಕಣದಲ್ಲಿ ವಿಶೇಷವಾಗಿ ನಡೆಯಲಿರುವ ಈ ಪಂದ್ಯಾವಳಿ ರೋಚಕವಾಗಿ ಸಾಗಲಿದ್ದು,ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಗುತ್ತಿದೆ.
*ಭಾಗವಹಿಸುವ ಪ್ರತಿಷ್ಠಿತ ತಂಡಗಳ ವಿವರ ಈ ಕೆಳಗಿನಂತಿದೆ*
KSKKA(ಕರ್ನಾಟಕ), ಪಶ್ಚಿಮ ರೈಲ್ವೇ -ಮುಂಬೈ,ಕೇಂದ್ರ ರೈಲ್ವೇ-ಮುಂಬೈ,ದಕ್ಷಿಣ ಮಧ್ಯ ರೈಲ್ವೇ-ಸಿಕಂದರಾಬಾದ್,
ದಕ್ಷಿಣ ಪೂರ್ವ ಮಧ್ಯ ರೈಲ್ವೇ-ಛತ್ತೀಸ್ ಗಢ,ಮಹಾರಾಷ್ಟ್ರ ರಾಜ್ಯ ಪೋಲಿಸ್, ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿ,ಮಹಾನಗರ ಪಾಲಿಕೆ-ಗ್ರೇಟರ್ ಮುಂಬೈ,
ಮಹಾನಗರ ಪಾಲಿಕೆ-ನವ ಮುಂಬಯಿ,ಪ್ರೆಸಿಡೆಂಟ್-12
ಹೆಚ್ಚಿನ ಮಾಹಿತಿಗಾಗಿ 9611233944,9481442615 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
Categories
ಇತರೆ

ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿ ಎಚ್. ಸುಶಾಂತ್ ಆಚಾರ್ ಬೈಂದೂರು ನೇಮಕ

ವಿಶ್ವದ ವಿವಿಧ ಕ್ರೀಡಾಸುದ್ದಿಗಳ ಜೊತೆಗೆ ಕರ್ನಾಟಕ ಟೆನ್ನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲಿಯೇ ಸುಧಾರಣೆಯ ಕ್ರಾಂತಿ ಮೂಡಿಸಿ,ಕರ್ನಾಟಕ ರಾಜ್ಯ ಟೆನ್ನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯ ಕನಸು
ಹೊತ್ತು,ರಾಜ್ಯದ ಎಲ್ಲಾ ಜಿಲ್ಲೆಗಳ ಹಿರಿಯ ಆಟಗಾರರನ್ನು ಸಂಪರ್ಕಿಸಿ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಹಾಗೂ ರಾಜ್ಯ ಟೆನ್ನಿಸ್ ಕ್ರಿಕೆಟ್ ಗ್ರೂಪನ್ನು ಸೃಷ್ಟಿಸಿ ಹಿರಿಯ-ಕಿರಿಯ ಆಟಗಾರರ ನಡುವೆ ಸಂಪರ್ಕ ಸೇತುವೆ ಸ್ಥಾಪಿಸಿದ ಕೋಟ ರಾಮಕೃಷ್ಣ ಆಚಾರ್ ಇವರ ಸಂಪಾದಕತ್ವದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಜಾಹೀರಾತು ವಿಭಾಗದ ಮುಖ್ಯಸ್ಥರಾಗಿ ಯುವ ಪತ್ರಕರ್ತರಾದ ಎಚ್ ಸುಶಾಂತ್ ಆಚಾರ್ ಬೈಂದೂರು ನೇಮಕಗೊಂಡಿದ್ದಾರೆ.
ಎಚ್ ಸುಶಾಂತ್ ಆಚಾರ್ ಬೈಂದೂರು ಇವರು ಜೇಸಿಐ ಬೈಂದೂರು ಸಿಟಿಯ ಇದರ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಶ್ರೀ ವಿಶ್ವಕರ್ಮ ಯುವಕ ಸಂಘ ರಿ ಬೈಂದೂರು ಇದರ ಪ್ರಧಾನ ಕಾರ್ಯದರ್ಶಿಯಾಗಿಯೂ, ವಾಗ್ಯ್ಜೋತಿ ಶ್ರವಣದೋಷವುಳ್ಳವರ ಬೈಂದೂರು ಇದರ ಸಂಚಾಲಕರಾಗಿ, ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ 2019 ರ ಕ್ಷನ್ ರೀಪ್ಲೇ ಮತ್ತು ,2021ರ ಯುಗಾಂತರ ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರಸ್ತುತ ಕನ್ನಡ ಏಶ್ಯಾನೆಟ್ ನ ಕನ್ನಡಪ್ರಭ ಕನ್ನಡ ದಿನ ಪತ್ರಿಕೆಯ ಬೈಂದೂರು ತಾಲೂಕು ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಕರ್ನಾಟಕ ರಾಜ್ಯ ಮಾತ್ರವಲ್ಲದೇ ದೇಶ,ವಿದೇಶಗಳಲ್ಲೂ ಜನಪ್ರಿಯತೆ ಗಳಿಸಿದ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನಲ್ಲಿ ಜಾಹೀರಾತು ನೀಡಲಿಚ್ಚಿಸುವವರು ಎಚ್.ಸುಶಾಂತ್ ಬೈಂದೂರು ಇವರ ಮೊಬೈಲ್ ನಂಬರ್-9986176968 ಸಂಪರ್ಕಿಸಬಹುದು.
Categories
ಇತರೆ

ಬಹು ನಿರೀಕ್ಷೆಯ ಬಿಗ್ ಬಾಸ್ ಸ್ಪರ್ಧೆಗೆ ಗ್ರ್ಯಾಂಡ್ ಎಂಟ್ರಿ‌ ಕೊಟ್ಟ ಸಿ.ಸಿ.ಎಲ್ ಸ್ಟಾರ್- ರಾಜೀವ್ ಹನು.

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಕನ್ನಡದ ಬಿಗ್ ಬಾಸ್ 8ನೇ ಆವೃತ್ತಿಯು ಭರ್ಜರಿಯಾಗಿ ಆರಂಭಗೊಂಡಿದೆ. ಬಿಗ್ ಬಾಸ್ ತಂಡ ಈಗಾಗಲೇ ಪ್ರಕಟಿಸಿರುವಂತೆ ಈ ಆವೃತ್ತಿಯಲ್ಲಿ ಸೆಲೆಬ್ರಿಟಿಗಳೇ ಇದ್ದಾರೆ‌.
ಈ ಬಾರಿಯ ಬಿಗ್ ಬಾಸ್ ಸಮಸ್ತ ಕನ್ನಡಿಗರ ಕುತೂಹಲ ಕೆರಳಿಸಿರುವ ವಿಚಾರವೆಂದರೆ 16 ನೇ ನಂಬರ್ ಸ್ಪರ್ಧಿಯ ರೂಪದಲ್ಲಿ
ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ಚಲನ ಚಿತ್ರ ನಟ,
ಸಿ.ಸಿ.ಎಲ್ ಸ್ಟಾರ್ ಪ್ಲೇಯರ್ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ ತಂಡದಲ್ಲಿ ಸಾಕಷ್ಟು ಮಿಂಚಿದ ಆಟಗಾರ  ರಾಜೀವ್ ಹನು.

ಚಲನಚಿತ್ರ ರಂಗದ ಜೊತೆ ಸಿ.ಸಿ.ಎಲ್ ಹಾಗೂ ಕೆ.ಪಿ.ಎಲ್ ನಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ಹಾಗೂ ಟೆನ್ನಿಸ್ಬಾಲ್ ಕ್ರಿಕೆಟ್ ಫ್ರೆಂಡ್ಸ್ ಬೆಂಗಳೂರು ತಂಡದ ಪರವಾಗಿ ಮಿಂಚಿದ ಕ್ರಿಕೆಟಿಗ ರಾಜೀವ್ ಹನು.
ಮೂಲತಃ ಆಡುಗೋಡಿ ತಂಡದ ಮೂಲಕ ಕ್ರಿಕೆಟ್ ಜೀವನ ಪ್ರಾರಂಭಿಸಿದ ರಾಜೀವ್ ಇವರ ಪ್ರತಿಭೆಗೆ ರಾಜ್ಯ ಮಟ್ಟದ ವೇದಿಕೆಯನ್ನು ಸೃಷ್ಟಿಸಿದ ತಂಡ ಫ್ರೆಂಡ್ಸ್ ಬೆಂಗಳೂರಿನ ರೇಣು ಗೌಡರು.2004 ರಲ್ಲಿ ಪಡುಬಿದ್ರಿ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್ ಅಂಗಣಕ್ಕೆ ಪಾದಾರ್ಪಣೆಗೈದ ರಾಜೀವ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.ಎಡಗೈ ದಾಂಡಿಗ ಇಮ್ರಾನ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ರಾಜೀವ್ ಬಿರುಸಿನ ಹೊಡೆತಗಳ ಮೂಲಕ ಕ್ಷಿಪ್ರಗತಿಯಲ್ಲಿ ರನ್ ಸರಾಸರಿ ಏರಿಸಿ,ರಾಜ್ಯದ ಅತ್ಯಂತ ಯಶಸ್ವೀ ಆರಂಭಿಕ ಜೋಡಿ ಖ್ಯಾತಿಗೆ ಪಾತ್ರರಾಗಿದ್ದು ಜೊತೆಗೆ ಫ್ರೆಂಡ್ಸ್ ಬೆಂಗಳೂರು ತಂಡ ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳನ್ನು ಜಯಿಸುವಲ್ಲಿ ರಾಜೀವ್ ಪಾತ್ರ ಮಹತ್ತರವಾದದ್ದು.
ಸಿ.ಸಿ.ಬಿ ಯಲ್ಲಿ ಸೇವೆಯ ನಡುವೆ ಚಿತ್ರರಂಗದತ್ತ ವಿಪರೀತ ಒಲವಿನ ಕಾರಣ ಚಲನಚಿತ್ರ ರಂಗಕ್ಕೆ ಪಾದಾರ್ಪಣೆಗೈದ ರಾಜೀವ್,ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಹಾಗೂ ಆರ್.ಎಕ್ಸ್‌‌.ಸೂರಿ,ಬೆಂಗಳೂರು-56,ಉಸಿರೇ ಉಸಿರೇ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು,ಮುಂದಿನ ದಿನಗಳಲ್ಲಿ ಬಹು ನಿರೀಕ್ಷೆಯ ಚಲನಚಿತ್ರಗಳು ಸೆಟ್ಟೇರಲಿದೆ.
ಸಿನಿಮಾ ರಂಗದ ಮೂಲಕ ಕಿಚ್ಚ ಸುದೀಪ್ ನೆಚ್ಚಿನ ಆಟಗಾರರೆನಿಸಿಕೊಂಡು,ಕರ್ನಾಟಕ ಬುಲ್ಡೋಜರ್ ನ ಪರವಾಗಿ ವೇಗದ ಶತಕ ಸಹಿತ,ಅನೇಕ ಗೆಲುವಿನ ಇನ್ನಿಂಗ್ಸ್ ಕಟ್ಟಿ,ಸಿ‌.ಸಿ.ಎಲ್ ನ ಕ್ರಿಸ್ ಗೇಲ್ ಖ್ಯಾತಿಗೆ ಪಾತ್ರರಾಗಿದ್ದಾರೆ.
ಕೆ.ಪಿ.ಎಲ್ ನಲ್ಲೂ ಅತ್ಯುತ್ತಮ ನಿರ್ವಹಣೆ ನೀಡಿದ್ದಾರೆ.
 ಫ್ರೆಂಡ್ಸ್ ಬೆಂಗಳೂರು ತಂಡದಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಾಜೀವ್ ಹನು ಇವರು ರೇಣುಗೌಡರ ಮನೆಯ ಸದಸ್ಯರಂತೆ ಕಷ್ಟ,ಸುಖಗಳಲ್ಲಿ ಭಾಗಿಯಾಗುತ್ತಾರೆ.
ತನ್ನ ಒಡನಾಡಿಗಳನ್ನು,ಹಿರಿಯ ಕ್ರಿಕೆಟಿಗರನ್ನು ಗೌರವಿಸುವ ಪರಿಪಾಠವನ್ನು ಮೈಗೂಡಿಸಿಕೊಂಡಿದ್ದು,
ಸಮಾಜಮುಖಿಯಾಗಿ ಬದುಕನ್ನು ಸಾಗಿಸುತ್ತಿರುವ ಸರಳ ಸಜ್ಜನಿಕೆಯ ವ್ಯಕ್ತಿತ್ವದ ರಾಜೀವ್ ಹನು ಇವರು ಚಲನಚಿತ್ರ ರಂಗ,ಸಿ.ಸಿ.ಎಲ್ ಹಾಗೂ ಕರ್ನಾಟಕ ಟೆನ್ನಿಸ್ಬಾಲ್ ಕ್ರಿಕೆಟ್ ನ ಗೌರವದ ಪ್ರತೀಕ.
ಬಿಗ್ ಬಾಸ್ ಮನೆಯಲ್ಲಿ ನಿಮ್ಮೆಲ್ಲಾ ಪ್ರತಿಭೆಗಳ ಅನಾವರಣಗೊಳ್ಳಲಿ
ಬಿಗ್ ಬಾಸ್ ನಿಮಗೆ ಮತ್ತಷ್ಟು ಯಶಸ್ಸನ್ನು ತಂದುಕೊಡಲಿ.ಸಿ.ಸಿ.ಎಲ್ ಹಾಗೂ ಟೆನ್ನಿಸ್ಬಾಲ್ ಕ್ರಿಕೆಟ್ ರಂಗದಲ್ಲಿ ನಿಮ್ಮ‌ ಸೇವೆಯ ಮೂಲಕ ಕರ್ನಾಟಕ ರಾಜ್ಯವಲ್ಲದೇ ದೇಶ,ವಿದೇಶದೆಲ್ಲೆಡೆ ಅಪಾರ ಅಪಾರ ಅಭಿಮಾನಿ ಬಳಗ ಸಂಪಾದಿಸಿದ ನೀವು ಬಿಗ್ ಬಾಸ್ ನಲ್ಲಿ ಗೆದ್ದುಬನ್ನಿ,ಕನ್ನಡಿಗರ ಹೃದಯ ತುಂಬಿದ ಹಾರೈಕೆ ನಿಮ್ಮೊಂದಿಗಿದೆ.ನಿಮಗೆ ರಾಜ್ಯ ಟೆನ್ನಿಸ್ ಕ್ರಿಕೆಟ್ ಹಾಗೂ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಶುಭ ಹಾರೈಕೆಗಳು….
Categories
ಇತರೆ

ಬೈಂದೂರು ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ (ರಿ.) ಇದರ ನೂತನ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ ಆಯ್ಕೆ

ಬೈಂದೂರು ಜ.24 : ಇಲ್ಲಿನ ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ (ರಿ.) ಇದರ 2021-2022 ನೇ ನೂತನ ಅಧ್ಯಕ್ಷರಾಗಿ ಸಂತೋಷ್ ಪೂಜಾರಿ ದುರ್ಮಿ (ಜೆ.ಡಿ) ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿ ಗೌರೀಶ್ ಹುದಾರ‍್ಮ ಗಿರೀಶ್ ಯೋಜನಾನಗರ, ಸಂದೀಪ್, ಸಂಘದ ಪ್ರದಾನ ಕಾರ್ಯದರ್ಶಿಯಾಗಿ ಸುಕುಮಾರ್ ಶೆಟ್ಟಿ ಸೂರ್ಕುಂದ, ಜೊತೆ ಕಾರ್ಯದರ್ಶಿಯಾಗಿ ವೆಂಕಟೇಶ್ ಪೂಜಾರಿಮ ಸುಧೀರ ರೋಡ್ರಿಗಾಸ್, ಜಗದೀಶ್ ದೇವಾಡಿಗ, ಸುರೇಶ್ ಯರುಕೋಣೆ, ಸುರೇಶ್ ಡಿ. ಉಪ್ಪಿನಕೋಟೆ, ಬಾಬು ರಾವ್, ಸಂಘದ ಗೌರವಾಧ್ಯಕ್ಷರಾಗಿ ಸುಧಾಕರ ಶೆಟ್ಟಿ ನೆಲ್ಯಾಡಿ, ಗೌರವ ಸಲಹೆಗಾರರು ರಾಮಕೃಷ್ಣ ದೇವಾಡಿಗ, ವಿಜಯ್ ಶಂಕರ ಭಟ್, ಪ್ರಶಾಂತ್ ಪೂಜಾರಿ, ಮಂಜುನಾಥ ರಾವ್, ಸುರೇಂದ್ರ ಡಿ. ರಾವ್, ಕೋಶಾಧಿಕಾರಿ ಗೌರೀಶ್ ಹುದಾರ್, ಅಮರ ದೇವಾಡಿಗ, ಕ್ರೀಡಾ ಕಾರ್ಯದರ್ಶಿಯಾಗಿ ಅಶೋಕ್ ಪೂಜಾರಿ ದುರ್ಮಿ, ಪ್ರೀತಂ, ಅಶೋಕ್ ಯಡ್ತರೆ, ಅಯುಬ್, ಜಗದೀಶ್ ದೇವಾಡಿಗ, ವೆಂಕಟೇಶ್ ಪೂಜಾರಿ
ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತ್ಯಾನಂದ ಮೊಗವೀರ, ಸೀತಾರಾಮ ಶ್ರೀಯಾನ್, ನಾಗೇಶ್ ಕಳವಾಡಿ, ನಟೇಶ್ ದೇವಾಡಿಗ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಕಾಶ ದೇವಾಡಿಗ, ಚಂದ್ರ ಪೂಜಾರಿ, ಭಾಸ್ಕರ್ ಶಿರೂರು.
50ಕ್ಕೂ ಅಧಿಕ ಮಂದಿ ಸದಸ್ಯರು ಹೊಂದಿದ್ದಾರೆ ಎಂದು ಸಂಘದ ಅಧ್ಯಕ್ಷ ಸಂತೋಷ್ ಪೂಜಾರಿ ತಿಳಿಸಿದ್ದಾರೆ.
Categories
ಇತರೆ

ಪಡುಬಿದ್ರಿ-ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕ-ಅತೀ ಶೀಘ್ರದಲ್ಲೇ ದಾಖಲೆಯ ಷಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್-2021

2019 ರಲ್ಲಿ ನಿರೀಕ್ಷೆಗೂ ಮೀರಿದ ಯಶಸ್ವಿಯೊಂದಿಗೆ ಸ್ವರ್ಣಾಕ್ಷರದಲ್ಲಿ  ದಾಖಲಿಸಲ್ಪಟ್ಟ ಟೀಮ್ ಕಂಚಿನಡ್ಕದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾಟವು ಕಳೆದ 2020 ರ  ಋತುವಿನಲ್ಲಿ ಲೋಕಕಂಟಕವಾದ ಕೋವಿಡ್ – 19 ದುಷ್ಪರಿಣಾಮದಿಂದಾಗಿ ಪಂದ್ಯಾಟವು ಸ್ಥಗಿತಗೊಂಡಿತ್ತು.
ಆದರೆ 2021 ಸಾಲಿನ ಈ ಋತುವಿನಲ್ಲಿ ಬ್ಯಾಡ್ಮಿಂಟನ್ ಹೊರಾಂಗಣ ಪಂದ್ಯಾಟದ ಇತಿಹಾಸದಲ್ಲಿ ಅಧಿಕ ನಗದು ಪುರಸ್ಕಾರದೊಂದಿಗೆ ವೈಶಿಷ್ಟ್ಯತೆ ಮತ್ತು ಅದ್ಧೂರಿಯಾಗಿ ಪಂದ್ಯಾಟ ವನ್ನು ಪರಿಚಯಿಸುವ ನಿಟ್ಟಿನಲ್ಲಿ ಸರ್ವ ರೀತಿಯ ಪೂರ್ವಸಿದ್ಧತೆಗಳು ಭರದಿಂದ ಸಾಗಿಬರುತ್ತಿದೆ.
ನಮ್ಮಿ ಪಂದ್ಯಾಟದ ದಿನಾಂಕ ಮತ್ತು ಆಟಗಾರ ಆಯ್ಕೆಯ ಕುರಿತು ಶೀಘ್ರದಲ್ಲೇ ದಿನ ನಿಗದಿ ಪಡಿಸಲಾಗುತ್ತಿದೆ.
ಈಗಾಗಲೇ ಪಂದ್ಯಾಟವು ವೈವಿಧ್ಯತೆಯ ಯೋಜನೆಗಳನ್ನು  ಕೂಡಿದ್ದು,ಈ ಬಾರಿ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳ ಪೈಕಿ ವಿಜೇತ ಮತ್ತು ರನ್ನರ್ ಆಫ್ ತಂಡದ ಮಾಲಕರಿಗೂ ವಿಶೇಷ ಮತ್ತು ದೊಡ್ಡ ಮೊತ್ತದ ಬಹುಮಾನವನ್ನು ಪ್ರಯೋಜಿಸಲಾಗಿದೆ.
ವಿಶೇಷವಾಗಿ ವಿಜೇತ ತಂಡಕ್ಕೆ ಬರೊಬ್ಬರಿ ರೂ.1,11,111 ನಗದು ಬಹುಮಾನ ಮತ್ತು ಆ ತಂಡದ ಮಾಲಕರಿಗೆ ರೂ.50,000 ನೀಡಿ ಪುರಸ್ಕಾರಿಸಲಾಗುವುದು.
ಅದೇ ರೀತಿ ರನ್ನರ್ ಆಫ್ ತಂಡಕ್ಕೆ ರೂ,55,555 ಮತ್ತು ತಂಡದ ಮಾಲಕನಿಗೆ ರೂ.30000 ನೀಡಿ ಗೌರವಿಸಲಾಗುವುದು.
 ಆದ್ದರಿಂದ ಪಂದ್ಯಾಟದಲ್ಲಿ ಭಾಗವಹಿಸಲು ಆಸಕ್ತ ತಂಡಗಳ ಮಾಲಕತ್ವ ಬಯಸುವವರು ಶೀಘ್ರವಾಗಿ ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕದೊಂದಿಗೆ ತಮ್ಮ ಹೆಸರನ್ನು ಖಾತರಿಪಡಿಸಬೇಕಾಗಿದೆ‌.
ಈ ಬಾರಿಯ ಪಂದ್ಯಾಟದಲ್ಲಿ ತಂಡಗಳ ಮಾಲಕತ್ವ ಬಯಸುವವರು ಮತ್ತು ಪಂದ್ಯಾಟ ನಿಯಮಗಳ ಬಗ್ಗೆ ಮಾಹಿತಿಗಾಗಿ ಇವರನ್ನು ಸಂಪರ್ಕಿಸಿ.
ಶಂಕರ್-79751 04553
ಶಿವಾನಂದ- 78998 18218
ಪದ್ಮನಾಭ- 9845679845
ಕೃಷ್ಣ ಬಂಗೇರ-82173 07601.
Categories
ಇತರೆ

ಉಡುಪಿ ಜಿಲ್ಲೆಯ ಕ್ರೀಡಾಪಟುಗಳಿಗೆ ಸಿಹಿ ಸುದ್ದಿ-ಕೋಟೇಶ್ವರ ಸ್ಪೋರ್ಟ್ಸ್ ಶಾಪ್ ಇಂದು(ಡಿಸೆಂಬರ್-28) ಉದ್ಘಾಟನೆ

ಉಡುಪಿ-ಕುಂದಾಪುರ ಪರಿಸರದ
ಉದಯೋನ್ಮುಖ ಕ್ರಿಕೆಟಿಗ,ಪ್ರಸ್ತುತ ಬೆಂಗಳೂರಿನ “ಅವಿಘ್ನ ಸೃಷ್ಟಿ” ತಂಡದ ಪರವಾಗಿ ರಾಜ್ಯಮಟ್ಟದಲ್ಲಿ ಮಿಂಚುತ್ತಿರುವ ಸಚಿನ್ ಕೋಟೇಶ್ವರ ಮಾಲೀಕತ್ವದ “ಕೋಟೇಶ್ವರ ಸ್ಪೋರ್ಟ್ಸ್”ಶಾಪ್
ಇಂದಿನಿಂದ(ಡಿಸೆಂಬರ್28 ಸೋಮವಾರ) ಕ್ರೀಡಾಪಟುಗಳ ಸೇವೆಗೆ ಲಭ್ಯವಾಗಲಿದೆ.
ಕುಂಭಾಶಿಯ ವೇಣುಗೋಪಾಲಕೃಷ್ಣ ಸಂಕೀರ್ಣದಲ್ಲಿ ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಳ್ಳಿರುವ ಕೋಟೇಶ್ವರ ಸ್ಪೋರ್ಟ್ಸ್ ನಲ್ಲಿ ವಿವಿಧ ಕ್ರೀಡೆಗಳ ಪರಿಕರಗಳು ಅತ್ಯಂತ ರಿಯಾಯಿತಿ  ದರದಲ್ಲಿ ಗ್ರಾಹಕರ ಸೇವೆಗೆ ಲಭ್ಯವಾಗಲಿದೆ.
ಸಚಿನ್ ಕೋಟೇಶ್ವರ ಇವರ ಮಾಲೀಕತ್ವದ  “ಕೋಟೇಶ್ವರ ಸ್ಪೋರ್ಟ್ಸ್” ಸಂಸ್ಥೆಗೆ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಶುಭಾಶಯಗಳು…
Categories
ಅಥ್ಲೆಟಿಕ್ಸ್ ಇತರೆ

ಉಡುಪಿಯಲ್ಲಿ ಇಂದು ಸಂಧ್ಯೋದಯ ಸಂಸ್ಥೆ ಪಿತ್ರೋಡಿ ವತಿಯಿಂದ “ಕಲಾ ಸ್ಫೂರ್ತಿ-2020”

5 ವಿಶ್ವದಾಖಲೆಗಳನ್ನು ಸ್ಥಾಪಿಸಿದ ಯೋಗರತ್ನ,ಗೋಲ್ಡನ್ ಗರ್ಲ್ ಖ್ಯಾತಿಯ ಕುಮಾರಿ ತನುಶ್ರೀ ಪಿತ್ರೋಡಿ ಇವರಿಗೆ ಇತ್ತೀಚೆಗಷ್ಟೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುತ್ತದೆ.ಇದರ ಸಂಭ್ರಮಾಚರಣೆಯ ಅಂಗವಾಗಿ ತನುಶ್ರೀ ಪೋಷಕರ ಸಂಧ್ಯೋದಯ ಪಿತ್ರೋಡಿ ಸಂಸ್ಥೆ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದಾರೆ.
ಪಂಜಿಮಾರು ಶಿರ್ವದ ಅಪರೂಪದ ವಿಶೇಷ ಚೇತನರು ಒಂದೇ ಮನೆಯ ಸೋದರ,ಸೋದರಿಯರಾದ ಗಣೇಶ್ ಮತ್ತು ಸುಮಂಗಳಾ ಇವರ ವಿಶೇಷ ಕಲಾಕೃತಿಗಳ ಪ್ರದರ್ಶನ
6-12-2020 ಇಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಉಡುಪಿ ಬ್ರಹ್ಮಗಿರಿಯ ಸೈಂಟ್ ಸಿಸಿಲೀಸ್ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಈ ಸಂದರ್ಭ ವಿವಿಧ ಕ್ಷೇತ್ರಗಳ ವಿಶೇಷ ಸಾಧಕರಿಗೆ ಸನ್ಮಾನ‌ ಕಾರ್ಯಕ್ರಮ ನಡೆಯಲಿದ್ದು,
ತನುಶ್ರೀ&ರಿತುಶ್ರೀ ಇವರಿಂದ “ಕೃಷ್ಣ ಕೇಳಿ” ಎಂಬ ಯಕ್ಷಗಾನ ನೃತ್ಯ ರೂಪಕ ನಡೆಯಲಿದೆ.