Categories
ಕ್ರಿಕೆಟ್ ಗ್ರಾಮೀಣ

ನಾಗಬನ ಚಾಲೆಂಜರ್ಸ್-ಕೋಟೇಶ್ವರ ಪ್ರೀಮಿಯರ್ ಲೀಗ್ ಚಾಂಪಿಯನ್ಸ್

75 ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಕೋಟೇಶ್ವರದಲ್ಲಿ 9 ನೇ ಬಾರಿಗೆ ನಡೆದ ಕೋಟೇಶ್ವರ ಪ್ರೀಮಿಯರ್ ಲೀಗ್-2021 ಪ್ರಶಸ್ತಿಯನ್ನು ನಾಗಬನ ಚಾಲೆಂಜರ್ಸ್ ತಂಡ ಜಯಿಸಿದೆ.ಫೈನಲ್ ನಲ್ಲಿ ಕೊಂಕಣ್ ಎಕ್ಸ್‌ಪ್ರೆಸ್‌ ತಂಡವನ್ನು ಸೋಲಿಸಿದ ನಾಗಬನ ಚಾಲೆಂಜರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಮಧುಕರ್,ಬೆಸ್ಟ್ ಬ್ಯಾಟ್ಸ್‌ಮನ್‌ ಶರತ್ ಉತ್ತಪ್ಪ,ಬೆಸ್ಟ್ ಬೌಲರ್
ಮಧುಕರ್,ಬೆಸ್ಟ್ ಫೀಲ್ಡರ್ ಪ್ರಸಾದ್ ಆಚಾರ್ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿಯನ್ನು ವಿಘ್ನೇಶ್ ಭಟ್ ಪಡೆದುಕೊಂಡರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಯೂಸುಫ್,ಶ್ರೀಧರ್ ನಾಯಕ್,ಇಸ್ಮೈಲ್,ರಂಜನ್ ಉಡುಪ ಹಾಗೂ ಶ್ರೀಧರ ಮೊಗವೀರ ಭಾಗವಹಿಸಿದ್ದರು.
Categories
ಕ್ರಿಕೆಟ್ ಗ್ರಾಮೀಣ

ಕ್ರೀಡಾ ಹಾಗೂ ಸಾಂಸ್ಕೃತಿಕ ಸೇವೆಗಾಗಿ ಹುಟ್ಟೂರ ಸನ್ಮಾನ-ಪ್ರಶಾಂತ್ ಅಂಬಲಪಾಡಿ.

ಕಳೆದ 20 ವರ್ಷಗಳಿಂದ ರಾಜ್ಯದಾದ್ಯಂತ ಟೆನ್ನಿಸ್ ಕ್ರಿಕೆಟ್ ನ ವೀಕ್ಷಕ ವಿವರಣೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಪ್ರಶಾಂತ್.ಕೆ.ಎಸ್.ಅಂಬಲಪಾಡಿಯವರನ್ನು ಬುಡೋಕಾನ್ ಕರಾಟೆ ಮತ್ತಿ ಸ್ಪೋರ್ಟ್ಸ್ ಅಸೋಸಿಯೇಷನ್ ಅಂಬಲಪಾಡಿ ಇವರ ವತಿಯಿಂದ ಜನಾರ್ಧನ ಬಯಲು ರಂಗ ಮಂಟಪದಲ್ಲಿ ನಡೆದ 1 ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ಶಿಪ್ “ಅಂಬಲಪಾಡಿ ಟ್ರೋಫಿ-2020” ಪಂದ್ಯಾಕೂಟದಲ್ಲಿ ಸನ್ಮಾನಿಸಲಾಯಿತು.

 

ಈ ಸಂದರ್ಭ ಶ್ರೀ ಜನಾರ್ಧನ ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ವಿಜಯ್ ಬಲ್ಲಾಳ್ ಹಾಗೂ ಗಣ್ಯರು ಉಪಸ್ಥಿತರಿದ್ದರು…

Categories
ಕ್ರಿಕೆಟ್ ಗ್ರಾಮೀಣ

ಫೆಬ್ರವರಿ 15,16 ರಂದು ಕುಂದಾಪುರದಲ್ಲಿ ಕೀಳೇಶ್ವರಿ ಟ್ರೋಫಿ-2020

ಕೀಳೇಶ್ವರಿ ಯೂತ್ ಕ್ಲಬ್(ರಿ)ವಿಠಲವಾಡಿ ಕುಂದಾಪುರ ಇದರ 32 ನೇ ವಾರ್ಷಿಕೋತ್ಸವದ ಸವಿನೆನಪಿಗಾಗಿ 40 ಗಜಗಳ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ “ಕೀಳೇಶ್ವರಿ ಟ್ರೋಫಿ-2020″ಫೆಬ್ರವರಿ 15,16 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ.

 

40 ಗಜಗಳ ಪಂದ್ಯಾಕೂಟದಲ್ಲೇ ಅತ್ಯಂತ ಗರಿಷ್ಠ ಬಹುಮಾನ 1.5 ಲಕ್ಷ ನಗದು ಪ್ರಥಮ ಸ್ಥಾನಿ ತಂಡಕ್ಕೆ ಹಾಗೂ ದ್ವಿತೀಯ ಸ್ಥಾನಿ ತಂಡ 75 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳು,ಸರಣಿ ಶ್ರೇಷ್ಠ ಪ್ರಶಸ್ತಿ ರೂಪದಲ್ಲಿ ಎಲ್‌.ಇ.ಡಿ ಟಿವಿ ಹಾಗೂ ಇನ್ನಿತರ ವೈಯಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತಿದೆ

.

M.Sports ನೇರ ಪ್ರಸಾರವನ್ನು ಬಿತ್ತರಿಸಿದರೆ, ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಲಿದೆ.

Categories
ಕ್ರಿಕೆಟ್ ಗ್ರಾಮೀಣ

ಈಗಲ್ಸ್ ಕುಂಭಾಶಿ ತಂಡಕ್ಕೆ  “ಫ್ರೆಂಡ್ಸ್ ಟ್ರೋಫಿ-2020”.

ಈಗಲ್ಸ್ ಕುಂಭಾಶಿ ತಂಡಕ್ಕೆ
“ಫ್ರೆಂಡ್ಸ್ ಟ್ರೋಫಿ-2020”.
ಗ್ರಾಮೀಣ ಮಟ್ಟದ ಯುವ ಪ್ರತಿಭೆಗಳ ಅನ್ವೇಷಣೆ,ವಲಯ ಮಟ್ಟದ ತಂಡಗಳ ಬಲವರ್ಧನೆ ಸದುದ್ದೇಶದಿಂದ,
ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಕೋಟೇಶ್ವರ ಆಯೋಜಿಸಿದ್ದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ “ಫ್ರೆಂಡ್ಸ್ ಟ್ರೋಫಿಯನ್ನು ಈಗಲ್ಸ್ ಕುಂಭಾಶಿ ತಂಡ ಗೆದ್ದುಕೊಂಡಿತು.
ಆಯಾಯ ವಲಯದ 36 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಲೀಗ್ ಹಂತದ ಹೋರಾಟದ ಬಳಿಕ
ಉಪಾಂತ್ಯ ಪಂದ್ಯಗಳಲ್ಲಿ
ನಾಗಬನ ಚಾಲೆಂಜರ್ಸ್ ಬೀಜಾಡಿ,
ಮಿತ್ರವೃಂದ ಗೋಪಾಡಿ
ತಂಡವನ್ನು ಹಾಗೂ ಈಗಲ್ಸ್ ,ಚಾಲೆಂಜ್ ಕುಂದಾಪುರವನ್ನು ಸೋಲಿಸಿ ಫೈನಲ್ ಗೆ ಭಡ್ತಿ ಪಡೆದಿದ್ದರು.
ಫೈನಲ್ ನಲ್ಲಿ ಈಗಲ್ಸ್ ತಂಡ ನಾಗಬನ ಚಾಲೆಂಜರ್ಸ್ ತಂಡವನ್ನು ಸೋಲಿಸಿದರು.
ವಿಜೇತ ಈಗಲ್ಸ್ ಕುಂಭಾಶಿ
30,030 ರೂ ನಗದು,ದ್ವಿತೀಯ ಸ್ಥಾನಿ ನಾಗಬನ ಚಾಲೆಂಜರ್ಸ್ 20,020 ರೂ ನಗದು ಜೊತೆಯಾಗಿ ಆಕರ್ಷಕ ಟ್ರೋಫಿಗಳನ್ನು ಪಡೆದರೆ.
ಟೂರ್ನಿಯ ಬೆಸ್ಟ್ ಬ್ಯಾಟ್ಸ್‌ಮನ್
ಗಣೇಶ್ ಬೀಜಾಡಿ,ಬೆಸ್ಟ್ ಬೌಲರ್ ಮಹೇಶ್ ಬೀಜಾಡಿ,ಬೆಸ್ಟ್ ಫೀಲ್ಡರ್ ರಿತೇಶ್ ಗೋಪಾಡಿ,ಬೆಸ್ಟ್ ಕೀಪರ್ ರಂಜನ್ ಉಡುಪ ಕೋಟೇಶ್ವರ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಈಗಲ್ಸ್ ನ ಸುಧಾಕರ್ ಕುಂಭಾಶಿ ಪಡೆದುಕೊಂಡರು.
ಶನಿವಾರ ನಡೆದಿದ್ದ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಮತಿ ಲಕ್ಷ್ಮೀ ಮಂಜು ಬಿಲ್ಲವ,ಶ್ರೀಲತಾ ಸುರೇಶ್ ಶೆಟ್ಟಿ, ಗ್ರಾ.ಪ.ಕೋಟೇಶ್ವರದ ಅಧ್ಯಕ್ಷರು ಶ್ರೀಮತಿ ಶಾಂತ ಗೋಪಾಲಕೃಷ್ಣ ,ಕ.ಪ.ಸ್ಕೂಲ್ ಕೋಟೇಶ್ವರದ ಶಿಕ್ಷಕಿ ಶ್ರೀಮತಿ ಲತಾ ಶೇಟ್,ರಘುರಾಮ್ ಉಡುಪ ಹಾಗೂ ಸ್ಪೋರ್ಟ್ಸ್ ಕನ್ನಡ ಸಂಚಾಲಕರು ಕೋಟ ರಾಮಕೃಷ್ಣ ಆಚಾರ್ಯ ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ
ಕೋಟೇಶ್ವರ ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಮಠದಬೆಟ್ಟು,ಸುಧಾಕರ್ ಪೈಂಟರ್,ರಾಕೇಶ್ ಮೂಡುಗೋಪಾಡಿ,ಟೂರ್ನಿಯ ಪ್ರಮುಖ ರೂವಾರಿಗಳಾದ ರಾಜೇಶ್ ಪ್ರಭು,ಪುರುಷೋತ್ತಮ ಕಾಮತ್,ನಯಾಝ್ ಸರ್ದಾರ್ ಹಾಗೂ ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
        ಆರ್.ಕೆ.ಆಚಾರ್ಯ ಕೋಟ…
Categories
ಕ್ರಿಕೆಟ್ ಗ್ರಾಮೀಣ

ಟಿ.ಎಂ.ಎ ಪೈ ಟ್ರೋಫಿ-2020

 

ಶ್ರೀದೇವಿ ಕ್ರಿಕೆಟ್ ಕ್ಲಬ್ ಗುಡ್ಡೆಯಂಗಡಿ, ಹಿರಿಯಡಕ*
ಇವರ ಆಶ್ರಯದಲ್ಲಿ ಮಣಿಪಾಲ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿ ಅನಾರೋಗ್ಯದಲ್ಲಿರುವ ಕಿರಣ್ ಆಚಾರ್ಯ ಸಹಾಯಾರ್ಥವಾಗಿ ನಡೆಸಿದ ಅಂತರ್ಕಾಲೇಜು ಹಾಗೂ 21ರ ವಯೋಮಿತಿಯ ಕ್ರಿಕೆಟ್ ಪಂದ್ಯಾಕೂಟ 🏆 ಟಿ.ಎಂ.ಎ. ಪೈ ಟ್ರೋಫಿ – 2020 🏆 ಮಣಿಪಾಲದ ಕ್ರೀಡಾಂಗಣದಲ್ಲಿ ದಿನಾಂಕ 26-01-2020 ರಂದು ಯಶಸ್ವಿಯಾಗಿ ನಡೆಯಿತು..

ಫೈನಲ್ ಪಂದ್ಯದಲ್ಲಿ ಬಾಯ್ಸ್ ಚಿಟ್ಪಾಡಿ ಯ ತಂಡ ಎಂ.ಐ.ಟಿ. ಕುಂದಾಪುರ ವನ್ನು ಸೋಲಿಸುವುದರ ಮೂಲಕವಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು..


ಅತ್ಯಂತ ಆಕರ್ಷಕವಾದ, ಅತೀ ಎತ್ತರದ ಟ್ರೋಫಿಗಳನ್ನು ಪಂದ್ಯಾಕೂಟದಲ್ಲಿ ನೀಡಿ ಗೌರವಿಸಲಾಯಿತು..
ಬಾಯ್ಸ್ ಚಿಟ್ಪಾಡಿ ತಂಡದ ಸುನಿಲ್ ಬಾಬು ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.
ಅದೇ ತಂಡದ ವಿನೋದ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು. ಎಂ.ಐ.ಟಿ. ಕುಂದಾಪುರದ ಶಶಿ ಉತ್ತಮ ದಾಂಡಿಗ ಪ್ರಶಸ್ತಿ ಪಡೆದರು.

ಸಾಯಿ ಕ್ರಿಕೆಟರ್ಸ್ ಕಾರ್ಕಳ ಶಿಸ್ತಿನ ತಂಡ ಪ್ರಶಸ್ತಿ ಪಡೆಯಿತು

 

ಸಮಾರೋಪ ಸಮಾರಂಭದಲ್ಲಿ ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಪ್ರಶಾಂತ್ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಅದೇ ಕಾಲೇಜಿನ ಆಟೋಮೊಬೈಲ್ ವಿಭಾಗದ ಮುಖ್ಯಸ್ಥ ರವೀಂದ್ರ ಶೆಣೈ, ಕಾಲೇಜಿನ ಗೌರವ ಉಪನ್ಯಾಸಕರಾದ ಕುಮಾರಸ್ವಾಮಿ , ಪಂದ್ಯಾವಳಿಯ ಪ್ರಮುಖ ದಾನಿಗಳಾದ ಸೌರಭ್ ಬಲ್ಲಾಳ್ , ಸಿರಾಜ್ ಶೇಖ್, ಪರೀಕ್ಷಿತ್ ಅಲೆವೂರು, ಸಿದ್ಧಾಂತ್ ಕದ್ರಿ, ಸುಶ್ಮಿತ್ ಪೂಂಜ ಭಾಗವಹಿಸಿದ್ದರು.

ಪಂದ್ಯದ ತೀರ್ಪುಗಾರರಾಗಿ ವಿಶ್ವನಾಥ್ ನಾಯಕ್ ಪೆಲತ್ತೂರು, ಸಂಪತ್ ಕಣಂಜಾರು, ಸ್ವಸ್ತಿಕ್ ಹಿರಿಯಡಕ, ಪ್ರಜೇಶ್ ಪೆರ್ಡೂರು ಸಹಕರಿಸಿದರು.

ವೀಕ್ಷಕ ವಿವರಣೆಗಾರರಾಗಿ ಪ್ರಕಾಶ್ ಗುಡ್ಡೆಯಂಗಡಿ, ಪ್ರತುಲ್ ಹಿರಿಯಡಕ ಸಹಕರಿಸಿದರು..

Categories
ಕ್ರಿಕೆಟ್ ಗ್ರಾಮೀಣ

ಇಂದು,ನಾಳೆ ಕೋಟೇಶ್ವರದಲ್ಲಿ ಫ್ರೆಂಡ್ಸ್ ಟ್ರೋಫಿ-2020 ಹೊನಲು ಬೆಳಕಿನ ಪಂದ್ಯಾವಳಿ

ಫ್ರೆಂಡ್ಸ್ ಟ್ರೋಫಿ-2020
ಹೊನಲು ಬೆಳಕಿನ ಪಂದ್ಯಾವಳಿ
ಇಂದು,ನಾಳೆ ಕೋಟೇಶ್ವರದಲ್ಲಿ.

ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಕೋಟೇಶ್ವರ ಇವರ ಆಶ್ರಯದಲ್ಲಿ
ತೃತೀಯ ಬಾರಿಗೆ ಕೋಟೇಶ್ವರದ ಸ.ಹಿ‌.ಪ್ರಾ ಶಾಲೆ(ಕರ್ನಾಟಕ ಪಬ್ಲಿಕ್ ಸ್ಕೂಲ್) ಮೈದಾನದಲ್ಲಿ ಫೆಬ್ರವರಿ 8,9 ರಂದು 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.

ಗ್ರಾಮೀಣ ಮಟ್ಟದ ತಂಡಗಳ ಬಲವರ್ಧನೆ,ಸ್ಥಳೀಯ ಪ್ರತಿಭೆಗಳ‌ ಅನ್ವೇಷಣೆಯ ಸದುದ್ದೇಶದಿಂದ,
ಆಯಾಯ ಏರಿಯಾಕ್ಕೆ ಸಂಬಂಧಿಸಿದ ಆಟಗಾರರನ್ನೊಳಗೊಂಡ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಈಗಾಗಲೇ 36 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ಕುತೂಹಲಕಾರಿ ಪಂದ್ಯಾಟಗಳು ಕೋಟೇಶ್ವರದ ಶಾಲಾ ಮೈದಾನದಲ್ಲಿ ನಡೆಯಲಿದೆ.

ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ರೂಪದಲ್ಲಿ 30,030 ರೂ ನಗದು,ದ್ವಿತೀಯ ಸ್ಥಾನಿ ತಂಡ 20,020 ರೂ ನಗದು ಜೊತೆಯಾಗಿ ಆಕರ್ಷಕ ಟ್ರೋಫಿಗಳು ಹಾಗೂ ಇನ್ನಿತರ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರಿಗೆ ಅರ್ಹ ಪುರಸ್ಕಾರಗಳನ್ನು ನೀಡಲಾಗುತ್ತಿದೆ.

ಇಂದು ಸಂಜೆ 6.30 ಕ್ಕೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು,
ನಾಳೆ ನಡೆಯುವ ಸಮಾರೋಪ ಸಮಾರಂಭದಲ್ಲೂ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಆರ್.ಕೆ.ಆಚಾರ್ಯ ಕೋಟ…

Categories
ಗ್ರಾಮೀಣ ಬ್ಯಾಡ್ಮಿಂಟನ್

ಜೀವನದಲ್ಲಿ ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅಗತ್ಯ : ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಜಿ ನಾಯಕ್

ಬೈಂದೂರು : ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ “ಪುರುಷರ ಡಬಲ್ಸ್ ಶಟಲ್ ಪಂದ್ಯಾಟ ಎಸ್.ಎಮ್.ಬಿ.ಸಿ ಟ್ರೋಫಿ – 2020” ಶನಿವಾರ ಸಂಜೆ ಬಂಕೇಶ್ವರ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ನಡೆಯಿತು.

ಬೈಂದೂರು ಆರಕ್ಷಕ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಜಿ ನಾಯಕ್ ಸಭಾ ಕಾರ್ಯಕ್ರಮ ಹಾಗೂ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟಗಳ ಯಶಸ್ಸಿಗೆ ಸಹಕರಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಒಂದು ಒಂದು ಕಲೆ ಅಡಗಿರುತ್ತದೆ. ಸಾಕಷ್ಟು ಜನ ಕ್ರೀಡಾಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಜೀವನದಲ್ಲಿ ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅಗತ್ಯ. ಎಲ್ಲಾ ವಯೋಮಾನದವರಿಗೂ ಕ್ರೀಡೆ ದೈಹಿಕ ಕ್ಷಮತೆಯನ್ನು ಕೊಡುತ್ತದೆ ಎಂದರು.

ಕ್ಲಬ್ ನ ಗೌರವಾಧ್ಯಕ್ಷ ಉದಯ್ ಎಸ್. ಕೆ.ಆರ್.ಸಿ.ಎಲ್ ಅವರು ಮಾತನಾಡಿ, ಕಳೆದ ವರ್ಷ ಸ್ಥಾಪಿಸಿದ ಹೆಮ್ಮೆಯಿದೆ. ಕಳೆದ ವರ್ಷ ಯಾವುದೇ ದೇಣಿಗೆಯನ್ನು ಪಡೆಯದೆ ನಮ್ಮೆಲ್ಲರ ಯುವಕ ಕೈಗೊಡಿಸಿಕೊಂಡು ಶಟಲ್ ಪಂದ್ಯಾಟ ನಡೆಸಿದ್ದೇವೆ. ಆ ಕಾರ್ಯಕ್ರಮವೂ ಕೂಡಾ ಬಹಳ ಯಶ್ವಸಿಯಾಗಿದೆ. ಅದಕ್ಕೆಲ್ಲಾ ನಮ್ಮ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ನ ಪ್ರತಿಯೊಬ್ಬ ಸದಸ್ಯರು ಸಾಕಷ್ಟು ಶ್ರಮ ವಹಿಸಿದ ಕಾರಣದಿಂದ ಇಂದು ಎರಡನೇ ವರ್ಷದ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ ಎಂದರು.

ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಎಚ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಥಳೀಯ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಆಕಾಶವಾಣಿ ಮತ್ತು ದೂರದರ್ಶನ ಗಾಯಕಿ ಗೀತಾ ಬಂಕೇಶ್ವರ ಸನ್ಮಾನಿಸಲಾಯಿತು.

ಮುಖ್ಯಅತಿಥಿಗಳಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಪ್ರಭಾಕರ ಎಸ್, ಬಂಕೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪಕ ಚಿತ್ರಾ, ಸ್ಥಳದಾನಿ ನಿವೃತ್ತ ಶಿಕ್ಷಕ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಲಬ್ ನ ಸದಸ್ಯ ಸುರೇಂದ್ರ ಪೂಜಾರಿ ಸ್ವಾಗತಿಸಿ/ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಯೋಗೀಶ್ ವಂದಿಸಿದರು.

Categories
ಕ್ರಿಕೆಟ್ ಗ್ರಾಮೀಣ

ಇಂದಿನಿಂದ 2 ದಿನಗಳ “ಕೋಡಿ ಕ್ರಿಕೆಟ್ ಫೆಸ್ಟ್-2020”

ಇಂದಿನಿಂದ 2 ದಿನಗಳ
“ಕೋಡಿ ಕ್ರಿಕೆಟ್ ಫೆಸ್ಟ್-2020”

ಲಕ್ಕಿ ಸ್ಟಾರ್ ಕ್ರಿಕೆಟ್ ಕ್ಲಬ್ ಕೋಡಿ ಕುಂದಾಪುರ ಇವರ ಆಶ್ರಯದಲ್ಲಿ
ಕೋಡಿ ಬ್ಯಾರೀಸ್ ಗ್ರೌಂಡ್ ನಲ್ಲಿ 60 ಗಜಗಳ‌ ಸೂಪರ್ ಸಿಕ್ಸ್ ಪಂದ್ಯಾವಳಿ ಫೆಬ್ರವರಿ 1 ಹಾಗೂ 2 ರಂದು ಎರಡು ದಿನಗಳ ಕಾಲ ಹಗಲಿನಲ್ಲಿ ನಡೆಯಲಿದೆ.

ಕೋಡಿ ಪರಿಸರದ 10 ಫ್ರಾಂಚೈಸಿಗಳು ಈ ಪಂದ್ಯಾವಳಿಯಲ್ಲಿ ಸೆಣಸಾಡಲಿದ್ದು ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
ಹುಬೈಶ್ ಹಂಟರ್ಸ್
ಟೂರ್ ಬೇ ಫ್ರೆಂಡ್ಸ್
ಲಕ್ಕಿ ಸ್ಟಾರ್ ಕೋಡಿ
ಎಮ್.ಕೆ.ಎಸ್ ಸ್ವಿಂಗಯ್ಸ್
ಉಝ್ಝಿ ಶಹೀಮ್ ವಾರಿಯರ್ಸ್
ಆರ್ವಿ ವಾರಿಯರ್ಸ್
ಫ್ರೆಂಡ್ಸ್ ಕೋಟೆ
ಮಿಲಿ ಇಲೆವೆನ್ ಕೋಡಿ
ಅರ್ಫಾನ್ ವಾರಿಯರ್ಸ್
ಮೈಟಿ ಕಾರ್ಸ್ ಕ್ರಿಕೆಟರ್ಸ್.

ಪ್ರಥಮ ಪ್ರಶಸ್ತಿ ವಿಜೇತ ತಂಡ 50 ಸಾವಿರ ಹಾಗು ರನ್ನರ್ಸ್ ತಂಡ 30 ಸಾವಿರ ನಗದು ಸಹಿತ ಶಾಶ್ವತ ಫಲಕಗಳನ್ನು ಪಡೆಯಲಿದ್ದಾರೆ.

ಇಂದು ಬೆಳಿಗ್ಗೆ ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಹಿಂದೂ-ಮುಸ್ಲಿಂ ಸೌಹಾರ್ದತೆಯ ಪ್ರತೀಕವಾಗಿ ಬೃಹತ್ ವಾಹನ ಜಾಥಾ ನಡೆಯಲಿದೆ.

ಪಂದ್ಯಾವಳಿಯ ನೇರ ಪ್ರಸಾರವನ್ನು
M9 ಸ್ಪೋರ್ಟ್ಸ್ ಬಿತ್ತರಿಸಲಿದ್ದು,
ಯುವ ವೀಕ್ಷಕ ವಿವರಣೆಕಾರರಾದ ಫಝಲ್ ಹೊನ್ನಾಳ ಹಾಗೂ ಪ್ರವೀಣ್ ಮಾರ್ಗೋಳಿ ಭಾಗವಹಿಸಲಿದ್ದಾರೆ.
ಆರ್.ಕೆ.ಆಚಾರ್ಯ ಕೋಟ.

Categories
ಕ್ರಿಕೆಟ್ ಗ್ರಾಮೀಣ

ಕಾಳಾವರದಲ್ಲಿ ಫೆಬ್ರವರಿ 1,2 ರಂದು ಷಷ್ಠಿ ಟ್ರೋಫಿ-2020

ಷಷ್ಠಿ ಟ್ರೋಫಿ-2020
ಕಾಳಾವರದಲ್ಲಿ ಫೆಬ್ರವರಿ 1,2 ರಂದು

ಸ್ಪಂದನಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಾಳಾವರ ಇವರ ಆಶ್ರಯದಲ್ಲಿ ಮಕ್ಕಳ ಯಕ್ಷಗಾನ,ಶಾಸ್ತ್ರೀಯ ಸಂಗೀತ,ನೃತ್ಯ ಸಹಾಯಾರ್ಥವಾಗಿ ಕಾಳಾವರದ ಶ್ರೀ ಮಹಾಲಿಂಗೇಶ್ವರ ಮತ್ತು ಕಾಳಿಂಗ
(ಸುಬ್ರಹ್ಮಣ್ಯ)ದೇವಸ್ಥಾನ ವಠಾರದಲ್ಲಿ 2 ದಿನಗಳ ಕಾಲ‌ 30 ಗಜಗಳ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.

ಗ್ರಾಮೀಣ ಮಟ್ಟದ ಕ್ರಿಕೆಟ್ ಪಂದ್ಯಾಕೂಟ ಇದಾಗಿದ್ದು,ಆಯಾಯ ಗ್ರಾಮದ ಆಟಗಾರರನ್ನೊಳಗೊಂಡ ತಂಡ ಭಾಗವಹಿಸಬಹುದಾಗಿದೆ.
ಪ್ರಥಮ ಪ್ರಶಸ್ತಿ ರೂಪದಲ್ಲಿ 9,999 ರೂ ನಗದು ಹಾಗೂ ದ್ವಿತೀಯ ಬಹುಮಾನವಾಗಿ 6,666 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ನೀಡಲಾಗುತ್ತಿದೆ.

ಭಾನುವಾರ 2 ರ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಯಕ್ಷಗಾನ ಕಾರ್ಯಕ್ರಮ ನಡೆಯಲಿದ್ದು,ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.

ಆಸಕ್ತ ತಂಡಗಳು 8088195719, 9482772571 ಈ ಮೊಬೈಲ್ ನಂಬರ್ ಗಳನ್ನು
ಸಂಪರ್ಕಿಸಬಹುದಾಗಿದೆ.
ಆರ್.ಕೆ.ಆಚಾರ್ಯ ಕೋಟ.

Categories
ಕ್ರಿಕೆಟ್ ಗ್ರಾಮೀಣ

ಸತತ 4 ಸಿಕ್ಸರ್ ಸಿಡಿಸಿದ ಸಚಿನ್ ಕೋಟೇಶ್ವರ-ಎಸ್‌.ಎಸ್.ಕಿಂಗ್ಸ್ ತಂಡಕ್ಕೆ K.P.L 2020 ಪ್ರಶಸ್ತಿ.

ಅಜೇಯ್ ಕ್ರಿಕೆಟ್ ಕ್ಲಬ್ ಕುಂಜಿಗುಡಿ
ಸಾಲಿಗ್ರಾಮ ತಂಡದ 35 ವಾರ್ಷಿಕೋತ್ಸವದ ಸವಿನೆನಪಿಗಾಗಿ,ನಾಗೇಶ್ ಪೂಜಾರಿ ಕಾರ್ಕಡ ಇವರ ದಕ್ಷ ಸಾರಥ್ಯದಲ್ಲಿ
ಸ್ಥಳೀಯ ಪ್ರತಿಭೆಗಳ ಅನ್ವೇಷಣೆಗಾಗಿ,ನ್ಯೂ ಕಾರ್ಕಡ ಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ಜರುಗಿದ್ದ
45 ಗಜಗಳ ಹೊನಲು ಬೆಳಕಿನ
KPL-2020 ಪ್ರಶಸ್ತಿಯನ್ನು ಶಶಿಕುಮಾರ್ ಬಿ.ಬಿ.ಸಿ,ಸಂದೀಪ್ ನಾಯರಿ ಸಾರಥ್ಯದ
ಎಸ್.ಎಸ್.ಕಿಂಗ್ಸ್ ಜಯಿಸಿದೆ.

ಸ್ಥಳೀಯ 8 ಫ್ರಾಂಚೈಸಿಗಳ ಲೀಗ್ ಹಂತದ ರೋಚಕ ಸೆಣಸಾಟಗಳ ಬಳಿಕ, ಎಮ್.ಪಿ.ಹಂಟರ್ಸ್,ಫ್ರೆಂಡ್ಸ್ ಕಾವಡಿ,ಜಿ.ಆರ್.ಎಸ್.ಟಿ ಕಾರ್ಕಡ ರಾಯಲ್ಸ್ ಹಾಗೂ ಎಸ್.ಎಸ್.ಕಿಂಗ್ಸ್ ಕ್ವಾಲಿಫೈಯರ್ ಸುತ್ತು ಪ್ರವೇಶಿಸಿದ್ದವು.ಅಂತಿಮವಾಗಿ


ಎಮ್.ಪಿ ಹಂಟರ್ಸ್ ಹಾಗೂ ಎಸ್.ಎಸ್.ಕಿಂಗ್ಸ್ ಫೈನಲ್ ಟಿಕೆಟ್ ಪಡೆದಿದ್ದರು.
ಫೈನಲ್ ನಲ್ಲಿ


ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಪಿ.ಹಂಟರ್ಸ್ ಎದುರಾಳಿಗೆ 44 ರನ್ ಗಳ ಗುರಿಯನ್ನು ನೀಡಿತ್ತು.ಚೇಸಿಂಗ್ ವೇಳೆ
ಮೊದಲ 4 ಓವರ್ ಗಳಲ್ಲಿ ರನ್ ಗಾಗಿ ಪರದಾಡಿದ ಎಸ್.ಎಸ್.ಕಿಂಗ್ಸ್
ಕೊನೆಯ ಓವರ್ ನಲ್ಲಿ 20 ರನ್ ಗಳ ಅವಶ್ಯಕತೆ ಬಿದ್ದಾಗ,
ಸಚಿನ್ ಕೋಟೇಶ್ವರ ಸತತ 4 ಎಸೆತಗಳಲ್ಲಿ ಬಿರುಸಿನ
4 ಸಿಕ್ಸ್ ಸಿಡಿಸಿ ತಂಡದ ಜಯಭೇರಿ ಬಾರಿಸಿದರು.

ಪ್ರಶಸ್ತಿ ವಿಜೇತ ಎಸ್.ಎಸ್.ಕಿಂಗ್ಸ್
50 ಸಾವಿರ ನಗದು ಹಾಗೂ ರನ್ನರ್ಸ್ ಎಮ್.ಪಿ.ಹಂಟರ್ಸ್ 30 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ವೈಯಕ್ತಿಕ ಪ್ರಶಸ್ತಿಗಳಾದ
ಬೆಸ್ಟ್ ಬೌಲರ್ ಭರತ್ ಗಿಳಿಯಾರು,


ಬೆಸ್ಟ್ ಬ್ಯಾಟ್ಸ್‌ಮನ್ ಶ್ರೀಧರ್ ಕಾರ್ಕಡ,ಬೆಸ್ಟ್ ಫೀಲ್ಡರ್ ರಾಜಾ ಗಂಗೊಳ್ಳಿ,ಬೆಸ್ಟ್ ಕೀಪರ್ ವಿನೋದ್ ಕಾರ್ಕಡ,ಟೂರ್ನಿಯುದ್ದಕ್ಕೂ ಶ್ರೇಷ್ಟ ಬ್ಯಾಟಿಂಗ್ ಪ್ರದರ್ಶಿಸಿದ ಗಿಳಿಯಾರು ನಾಗ ಸರಣಿಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

ಶನಿವಾರ ಸಂಜೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಸಾಲಿಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ರಾಜು ಪೂಜಾರಿ ಕಾರ್ಕಡ ಹಾಗೂ ಕಾರ್ಕಡ ಹೊಸ.ಹಿ.ಪ್ರಾ‌.ಶಾಲೆಯ ಮುಖ್ಯೋಪಾಧ್ಯಾಯರು ಪ್ರಭಾಕರ್ ಕಾಮತ್,ಪಟ್ಟಣ ಪಂಚಾಯತ್ ಸದಸ್ಯ ಸಂಜೀವ ಕಾರ್ಕಡ,ಬಿಲ್ಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಥ್ವೀರಾಜ್ ಶೆಟ್ಟಿ,ಜಾನ್ಸನ್ ಹಂಗಳೂರಿನ ರವಿ ಹೆಗ್ಡೆ,ವಸಂತ್ ಕಾಂಚನ್ ಗುಂಡ್ಮಿಇನ್ನಿತರರು
ಉಪಸ್ಥಿತರಿದ್ದರು.


ಈ ಸಂದರ್ಭ ಅಜೇಯ್ ಕ್ರಿಕೆಟ್ ಕ್ಲಬ್ ನ ಪರವಾಗಿ ಹಲವಾರು ವರ್ಷಗಳ ಸೇವೆ ಸಲ್ಲಿಸಿದ ಹಿರಿಯ ಆಟಗಾರರಾದ ಉದಯ ಪೂಜಾರಿ ಹಾಗೂ ಅಣ್ಣಪ್ಪ ಕುಂಜಿಗುಡಿ ಹಾಗೂ ಸನ್ಮಾನಿಸಲಾಯಿತು.ಜೊತೆಗೆ ತಂಡದ ಪರವಾಗಿ‌ ಯಶಸ್ವಿ ಪ್ರದರ್ಶನ ತೋರಿಸಿದ ಗಿಳಿಯಾರು ನಾಗ,ಸುಧಾಕರ್ ಕುಂಭಾಶಿ,ಸಚಿನ್ ಕೋಟೇಶ್ವರ,ಅಜಿತ್ ಪಾಂಡೇಶ್ವರ,ಚೇತು ಪಾಂಡೇಶ್ವರ,ಪ್ರದೀಪ್ ಶೆಟ್ಟಿ ಗಿಳಿಯಾರು, ನಿಖಿಲ್ ಸಾಸ್ತಾನ,ಸತೀಶ್ ಪಡುಕರೆ,ರಾಜಾ ಜೈಹಿಂದ್ ಹಾಗೂ ಆದರ್ಶ ಕಾವಡಿ ಯವರನ್ನು ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮುಜರಾಯಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಅಜೇಯ್ ಕ್ರಿಕೆಟ್ ಕ್ಲಬ್ ಕಳೆದ 35 ವರ್ಷಗಳಿಂದ ನಿರಂತರವಾಗಿ ಸಾಂಸ್ಕೃತಿಕ,ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮಾದರಿ ಸಂಸ್ಥೆಯಾಗಿದೆ ಎಂದು ವಿಜೇತರನ್ನು ಅಭಿನಂದಿಸಿದರು.
ಈ ಸಂದರ್ಭ ಅಜೇಯ್ ತಂಡದ ಗೌರವಾಧ್ಯಕ್ಷ ಮಂಜುನಾಥ್ ನಾಯರಿ,ಅಧ್ಯಕ್ಷ ಮಹೇಶ್ ನಾಯರಿ,ಉದ್ಯಮಿ ಕೆ.ಪಿ.ಶೇಖರ್,ಸಂಜೀವ ದೇವಾಡಿಗ,
ತಿಮ್ಮಪ್ಪ ಪೂಜಾರಿ ನಾಗರಮಠ,
ಅಜೇಯ್ ಕ್ರಿಕೆಟ್ ಕ್ಲಬ್ ನ ಮಾಲೀಕ್ ಹಾಗೂ ನಾಯಕ ನಾಗೇಶ್ ಪೂಜಾರಿ ಹಾಗೂ ಸ್ಪೋರ್ಟ್ಸ್ ಕನ್ನಡ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ ಉಪಸ್ಥಿತರಿದ್ದರು‌.

ಪಂದ್ಯಾವಳಿಯ ನೇರ ಪ್ರಸಾರವನ್ನು M.Sports ಯೂ ಟ್ಯೂಬ್ ಚಾನೆಲ್ ನ ಮೂಲಕ 2 ದಿನಗಳ ಕಾಲ 55,000 ಕ್ಕೂ ಮಿಕ್ಕಿದ ಕ್ರೀಡಾಭಿಮಾನಿಗಳು ವೀಕ್ಷಿಸಿದರು.

ಆರ್.ಕೆ.ಆಚಾರ್ಯ ಕೋಟ…