ಕ್ರೀಡೆಯಿಂದ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ-ಕುಸುಮಾಕರ ಶೆಟ್ಟಿ

ಕ್ರೀಡೆಯಿಂದ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ-ಕುಸುಮಾಕರ ಶೆಟ್ಟಿ
ಕುಂದಾಪುರ-“ಸೋಲೇ ಗೆಲುವಿನ ಮೂಲ,ಸೋಲನ್ನು ಪ್ರೀತಿಯಿಂದ ಸ್ವೀಕರಿಸಿ,ಕ್ರೀಡೆ ನಮ್ಮ ಬದುಕಿಗೆ ಪೂರಕ ಹಾಗೂ ಮನುಷ್ಯನ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ”
ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖಾಧಿಕಾರಿ ಕುಸುಮಾಕರ್ ಶೆಟ್ಟಿ ಹೇಳಿದರು.
ಇವರು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ TCA ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.
ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ಮಾತನಾಡಿ “ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ,ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ” ಎಂದರು.
ಈ ಸಂದರ್ಭ ಟಿ.ಸಿ.ಎ ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,ಯಾದವ್ ನಾಯಕ್ ಕೆಮ್ಮಣ್ಣು,
ಗಿರೀಶ್ ಬೈಂದೂರು,ದಿನೇಶ್ ಗಾಣಿಗ ಬೈಂದೂರು,ಸತೀಶ್ ಕೋಟ್ಯಾನ್,ನಾರಾಯಣ ಶೆಟ್ಟಿ ಮಾರ್ಕೋಡು,ಉದಯ್ ಕುಮಾರ್ ಕಿನ್ನಿಮೂಲ್ಕಿ,ಉಪಾಧ್ಯಕ್ಷ ಮನೋಜ್ ನಾಯರ್,ಸುಧೀರ್ ಶೆಟ್ಟಿ ಮಾರ್ಕೋಡು,ಕರುಣಾಕರ್
ಬೈಲೂರು,ಪ್ರವೀಣ್ ಪಿತ್ರೋಡಿ,ಕೋಟ ರಾಮಕೃಷ್ಣ ಆಚಾರ್,ಭಾಸ್ಕರ್ ಆಚಾರ್,ವಿಷ್ಣುಮೂರ್ತಿ ಉರಾಳ,
ಪ್ರಶಾಂತ್ ಅಂಬಲಪಾಡಿ ಉಪಸ್ಥಿತರಿದ್ದರು.
ಟಿ.ಸಿ.ಎ ಉಪಾಧ್ಯಕ್ಷ ಮನೋಜ್ ನಾಯರ್ ನಿರೂಪಣೆ ಮತ್ತು ಕೆ‌.ಪಿ. ಸತೀಶ್ ಧನ್ಯವಾದ ಸಮರ್ಪಿಸಿದರು.

Leave a Reply

Your email address will not be published. Required fields are marked *