ಕುಂದಾಪುರ-T.C.A ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನವೆಂಬರ್ 19 ಮತ್ತು 20 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ಪಂದ್ಯಾಟ ನಡೆಸಲಾಗುವುದೆಂದು ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯ 7 ತಾಲೂಕು ಮಟ್ಟದ ಪಂದ್ಯಾಟ ಯಶಸ್ವಿಯಾಗಿ ಮುಕ್ತಾಯ ಕಂಡಿದ್ದು,ಇದೀಗ 7 ತಾಲೂಕಿನ ಪ್ರಥಮ ಹಾಗೂ ದ್ವಿತೀಯ ಸ್ಥಾನಿ ಒಟ್ಟು 14 ತಂಡಗಳಾದ ಅಂಶು ಕೋಟೇಶ್ವರ, ಚೇತನಾ ಉಡುಪಿ,
ಅಗಸ್ತ್ಯ ಮದಗ,ಟೊರ್ಪೆಡೋಸ್ ಕುಂದಾಪುರ,8 ಸ್ಟಾರ್ ಉಪ್ಪುಂದ,ಆರ್.ಕೆ.ಕಾರ್ಕಳ,ದಾವೂದ್ ಶಿರ್ವ,ಇಲೆವೆನ್ ಅಪ್ ಕೋಟ,ಕಲಾಕಿರಣ,ಹೊಳೆಬಾಗಿಲು,ಫ್ರೆಂಡ್ ಸ್ ಉದ್ಯಾವರ,ಪಾರಂಪಳ್ಳಿ,ಹೆಬ್ರಿ ಹಾಕ್ಸ್,ಇಲೆವೆನ್ ಬೆಳ್ಮಣ್ ತಂಡಗಳು ಜಿಲ್ಲಾಮಟ್ಟದ ಪಂದ್ಯದಲ್ಲಿ ಭಾಗವಹಿಸಲಿದೆ.
ಪಂದ್ಯಾಟದ ಉದ್ಘಾಟನಾ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಹಾಗೂ ಮಾಜಿ ಆಟಗಾರರು ಆಗಮಿಸಲಿದ್ದಾರೆ.