Categories
ಕ್ರಿಕೆಟ್ ತಾಲೂಕ

ಗಂಗೊಳ್ಳಿಯಲ್ಲಿ ಫೆಬ್ರವರಿ 28 – ಮಾರ್ಚ್1 ರ ತನಕ   ಬಬ್ಬು ಸ್ವಾಮಿ ಟ್ರೋಫಿ – 2020

ಜಗದೀಶ್ ಗಂಗೊಳ್ಳಿ ಸಾರಥ್ಯದಲ್ಲಿ, ಶ್ರೀ ಬಬ್ಬುಸ್ವಾಮಿ ಸ್ವಯಂ ಸೇವಾ ಸಂಘ(ರಿ) ಮೇಲ್ ಗಂಗೊಳ್ಳಿ,ಸಾಧನ ನಾಯಕವಾಡಿ ಹಾಗೂ ಡಾಲ್ಫಿನ್ ಬಾವಿಕಟ್ಟೆ ತಂಡ ಕಳೆದ ಹತ್ತು ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಗಳ ಜೊತೆಗೆ ಸಾಂಸ್ಕೃತಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ.

ಈ ಬಾರಿ ಫೆಬ್ರವರಿ 28 ರಿಂದ ಮಾರ್ಚ್ 1 ರ ತನಕ ಸ.ವಿ.ಪದವಿಪೂರ್ವ ಕಾಲೇಜು ಗಂಗೊಳ್ಳಿಯ ಮೈದಾನದಲ್ಲಿ ಮೂರು ದಿನಗಳ ಕಾಲ,ಪರಿಶಿಷ್ಟ ಜಾತಿ (ಎಸ್.ಸಿ) ಸಮಾಜ ಬಾಂಧವರಿಗಾಗಿ 2ನೇ ಬಾರಿಗೆ ಅಂತರ್ ರಾಜ್ಯ ಮಟ್ಟದ 90 ಗಜಗಳ ಹಗಲಿನ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸಿಂಚನ ಸೀಸನ್ 8 “ಶ್ರೀ ಬಬ್ಬು ಸ್ವಾಮಿ ಟ್ರೋಫಿ-2020” ಆಯೋಜಿಸಲಾಗಿದೆ.

ಪ್ರಥಮ ಪ್ರಶಸ್ತಿ ವಿಜೇತ ತಂಡ 60,060 ನಗದು ಹಾಗೂ ದ್ವಿತೀಯ ಸ್ಥಾನಿ 30,030 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ವೈಯಕ್ತಿಕ ಶ್ರೇಷ್ಠ ನಿರ್ವಹಣೆ ತೋರಿದ ಆಟಗಾರರಿಗೆ ನಗದು ಬಹುಮಾನ‌ ಸಹಿತ ಬ್ಯಾಟ್ ಉಡುಗೊರೆ ರೂಪದಲ್ಲಿ ನೀಡಲಾಗುತ್ತಿದೆ.

ಪಂದ್ಯಾವಳಿಯ ನೇರ ಪ್ರಸಾರ “ಕ್ರಿಕ್ ಸೇ” ಬಿತ್ತರಿಸಲಿದ್ದು, “ಸ್ಪೋರ್ಟ್ಸ್ ಕನ್ನಡ” ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.

ವಿ.ಸೂ :  ಆಸಕ್ತ ಪರಿಶಿಷ್ಟ ಜಾತಿ(ಎಸ್.ಸಿ) ಸಮಾಜ ಬಾಂಧವರ ತಂಡಗಳು, ಜಗದೀಶ್ ಗಂಗೊಳ್ಳಿ-9964812070 ಮೊಬೈಲ್ ನಂಬರನ್ನು ಸಂಪರ್ಕಿಸಬಹುದಾಗಿದೆ.

ಆರ್.ಕೆ.ಆಚಾರ್ಯ ಕೋಟ

Categories
ಕ್ರಿಕೆಟ್ ತಾಲೂಕ

ಡಿಸೆಂಬರ್ 21, 22 : ಬೈಂದೂರು ತಾಲೂಕು ಮಟ್ಟದ 60 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಬೈಂದೂರು ಚಾಂಪಿಯನ್ ಟ್ರೋಫಿ – 2019”

ಬೈಂದೂರು : ಇಲ್ಲಿನ ಶ್ರೀ ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ (ರಿ.) ಇವರ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಅಶಕ್ತರಿಗೆ ಸಹಾಯಧನ ಹುಟ್ಟೂರ ಸನ್ಮಾನ ಹಾಗೂ ಬೈಂದೂರು ತಾಲೂಕು ಮಟ್ಟದ 60 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಬೈಂದೂರು ಚಾಂಪಿಯನ್ ಟ್ರೋಫಿ – 2019” ಡಿಸೆಂಬರ್ 21, 22ನೇ ಶನಿವಾರ ಮತ್ತು ಭಾನುವಾರ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಲಿದೆ.

ಡಿಸೆಂಬರ್ 21ನೇ ಶನಿವಾರ ರಾತ್ರಿ 8.30ಕ್ಕೆ ಸಭಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಕರ್ನಾಟಕ ಸರಕಾರ ಧಾರ್ಮಿಕ ಮುಜುರಾಯಿ ಹಾಗೂ ಬಂದರು, ಮೀನುಗಾರರ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟನೆ ಮಾಡಲಿದ್ದಾರೆ. ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರದ ಸಂಸದರು ಬಿ.ವೈ, ರಾಘವೇಂದ್ರ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ನಿವೃತ್ತ ಐ.ಎಫ್.ಎಸ್ ಅಧಿಕಾರಿ ಬಿ. ಜಗನ್ನಾಥ ಶೆಟ್ಟಿ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ಟಿ. ಶಂಕರ ಪೂಜಾರಿ, ಕುಂದಾಪುರ ತಾಲೂಕು ಪಂಚಾಯತ್ ಸದಸ್ಯೆ ಮಾಲಿನಿ.ಕೆ, ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬು ದೇವಾಡಿಗ ಉಪಸ್ಥಿಲಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ : ಧಾರವಾಡ ಉದ್ಯಮಿ ಯು.ಬಿ. ಶೆಟ್ಟಿ, ಶ್ರೇಷ್ಠ ರಾಜ್ಯ ಸಹಕಾರ ಪ್ರಶಸ್ತಿ ಪುರಸ್ಕೃತ ಎಸ್. ರಾಜು ಪೂಜಾರಿ, ಸಮಾಜ ಸೇವೆಯಲ್ಲಿ ಗೋವಿಂದಬಾಬು ಪೂಜಾರಿ, ಜ್ಯೋತಿಷ್ಯ ಶಾಸ್ತ್ರದಲ್ಲಿ ಡಾ. ಮಹೇಂದ್ರ ಭಟ್, ಮೌಖಿಕ ಮತ್ತು ಮ್ಯಾಕ್ಸಿಲೊ ಮುಖದ ಶಸ್ತ್ರ ಚಿಕಿತ್ಸೆ ವೈದ್ಯಾಧಿಕಾರಿ. ಉದಯ್ ಎಮ್.ಡಿ.ಎಸ್. ಇವರೆಲ್ಲನ್ನೂ ಸನ್ಮಾನ ಮಾಡಲಿದ್ದಾರೆ. ಅದೃಷ್ಟ ವೀಕ್ಷಕರಿಗೆ ಆಕರ್ಷಕ ಬಹುಮಾನ.

ಸಾಂಸ್ಕೃತಿಕ ಕಾರ್ಯಕ್ರಮ : ದಿನಾಂಕ – 21ನೇ ಶನಿವಾರ ಸಂಜೆ. 6.30ಕ್ಕೆ ಬೈಂದೂರು ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಖ್ಯಾತ ಬಡಗು ಮತ್ತು ತೆಂಕು ಕಲಾವಿದರ ಸಮಾಗಮದಲ್ಲಿ ರಾಘವೇಂದ್ರ ಆಚಾರ್ಯ ಜನ್ಸಾಲೆ ಸಾರಿಥ್ಯದಲ್ಲಿ ಅದ್ದೂರಿ ಯಕ್ಷಗಾನ “ಗಾನ-ನಾಟ್ಯ-ವೈಭವ” ನಡೆಯಲಿದೆ.

ಡಿಸೆಂಬರ್ 22ನೇ ಭಾನುವಾರ ರಾತ್ರಿ. 7.30ಕ್ಕೆ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮ ವಿಶೇಷ ಆಹ್ವಾನಿತ ಉಪ್ಪುಂದ ಖ್ಯಾತ ಜಾದುಗಾರ ಓಂ ಗಣೇಶ್ ಉಪ್ಪುಂದ, ಸಭಾಧ್ಯಕ್ಷ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟವಾಡಿ, ಮುಖ್ಯಅತಿಥಿಗಳಾಗಿ ಕುಂದಾಪುರ ತಾಲೂಕು ಪಂಚಾಯತ್ ಸದಸ್ಯ ಪುಷ್ಪರಾಜ್ ಶೆಟ್ಟಿ, ಕುಂದಾಪುರ ಪ್ರಥಮದರ್ಜೆ ಗುತ್ತಿಗೆದಾರ ಮಹೇಶ್ ಪೂಜಾರಿ, ಯಡ್ತರೆ ಗ್ರಾಮ ಪಂಚಾಯತ್ ಸದಸ್ಯ ಬಿ. ನಾಗರಾಜ್ ಗಾಣಿಗ, ಕುಂದಾಪುರ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯ ಜೈಸನ್ ಎಂ.ಡಿ, ಬೈಂದೂರು ಅಂಬಿಕಾ ಇಂಟರ್ ನ್ಯಾಷನಲ್ ಆಡಳಿತ ನಿರ್ದೇಶಕ ಜಯಾನಂದ ಹೋಬಳಿದಾರ್, ಬೈಂದೂರು ಲಾವಣ್ಯ ರಿ ರಂಗಭೂಮಿ ಕಲಾವಿದ ಬಿ. ಗಣೇಶ್ ಕಾರಂತ್, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಯು. ಪ್ರಕಾಶ್ ಭಟ್, ಧೃತಿ ಸರ್ಜಿಕಲ್ ಸಲ್ಯೂಷನ್ಸ್ ಇಂಡಿಯಾ ಪ್ರೈ.ಲಿ ಬೆಳಕೆ – ಭಟ್ಕಳ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಶರತ್ ಕುಮಾರ್ ಶೆಟ್ಟಿ ಉಪ್ಪುಂದ, ಬೈಂದೂರು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸುರೇಶ್ ಜಿ. ನಾಯ್ಕ್ ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ : ತೀರ್ಥಹಳ್ಳಿ ಗೋಪಾಲ ಆಚಾರ್ಯ, ಕುಮಾರಿ ಧನ್ವಿ ಪೂಜಾರಿ, ಚಂದ್ರ ಪೂಜಾರಿ ದುರ್ಮಿ, ವಿಲ್ಸನ್ ಡಯಾಸ್, ರಿಯಾಜ್ ಇವರೆಲ್ಲನ್ನು ಸನ್ಮಾನ ಮಾಡಿಲಿದ್ದಾರೆ.

ಮಂಗಳೂರು ರೆಡ್.ಎಫ್.ಎಂ 93.5 ನಿರೂಪಕಿ ಆರ್.ಜೆ ನಯನಾ ಯರುಕೋಣೆ, ಅರುಣ್ ಕುಮಾರ್ ಶಿರೂರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಮಾಧ್ಯಮ ಪ್ರಚಾರ : ಸ್ಪೋರ್ಟ್ಸ್ ಕನ್ನಡ ಡಾಟ್ ಕಾಮ್, ಮೈಬೈಂದೂರು ಡಾಟ್ ಕಾಮ್

ಸರ್ವರಿಗೂ ಆದರದ ಸ್ವಾಗತ ಬಯಸುವ : ಗೌವಾಧ್ಯಕ್ಷರು, ಅಧ್ಯಕ್ಷರು, ಕಾರ್ಯದರ್ಶಿ, ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಶ್ರೀ ಸೇನೇಶ್ವರ ಕಲಾ ಮತ್ತು ಕ್ರೀಡಾ ಸಂಘ ರಿ ಬೈಂದೂರು

 

Categories
ತಾಲೂಕ ಸ್ಪೋರ್ಟ್ಸ್

ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕ ಪರಿಶ್ರಮ‌, ಆತ್ಮವಿಶ್ವಾಸವಿದ್ದರೆ ಯಶಸ್ಸು :  ಗೌತಮ್ ಶೆಟ್ಟಿ

ಕುಂದಾಪುರ : ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡೋತ್ಸವ ಇತ್ತೀಚಿಗಷ್ಟೇ ಸಂಸ್ಥೆಯ ಮೈದಾನದಲ್ಲಿ ನಡೆಯಿತು.

 

 

 

 

 

 

 

 

 

 

ಹಳೆಯಂಗಡಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥಾಪಕ ಗೌತಮ ಶೆಟ್ಟಿ ಕ್ರೀಡಾ ಜ್ಯೋತಿಯನ್ನು ಉದ್ಘಾಟಿಸಿ, ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕ ಪರಿಶ್ರಮಬೇಕು. ಕ್ರೀಡೆ ರಂಗದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಬಹುದು. ನಮ್ಮಲ್ಲಿ ಆತ್ಮ ವಿಶ್ವಾಸ ಇದ್ದಾಗ ಮಾತ್ರ ನಮ್ಮ ಯಶಸ್ಸನ್ನು ನೀಡುತ್ತದೆ. ಪಠ್ಯೇತರ ಚಟುವಟಿಕೆ ಜೊತೆಗೆ ಕ್ರೀಡಾ ಕ್ಷೇತ್ರಯಲ್ಲೂ ಸಾಕಷ್ಟು ಪರಿಶ್ರಮವನ್ನು ಮಾಡಬೇಕು. ಯಾವುದೇ ರಂಗದಲ್ಲಿ ಸೋಲು-ಗೆಲುವು ಇರುವುದೇ, ಆದರೆ ನಮ್ಮ ಜೀವನದಲ್ಲಿ ಸೋಲಿನಲ್ಲಿ ಸಾಕಷ್ಟು ಹೋರಾಟ ಮಾಡುವುದರಿಂದ ಒಂದೆಲ್ಲಾ ಒಂದು ಅದಕ್ಕೆ ಗೆಲವು ಖಚಿತವಾಗಿದೆ ಎಂದು ಕ್ರೀಡಾಳುಗಳಿಗೆ ಪ್ರೇರಣೆ ನೀಡಿದರು.

ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಕೆ. ಎಂ ಅಬ್ದುಲ್ ರೆಹಮಾನ್ ಕ್ರೀಡೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಕುಂದಾಪುರ ಪುರಸಭೆಯ ಸದಸ್ಯೆ ಕಮಲ, ಕೋಡಿ ಬ್ಯಾರಿ ಮೆಮೋರಿಯಲ್ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ರಫೀಕ್ ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ನಾಗರಾಜ್ ಕಾಂಚನ್, ಅಬ್ದುಲ್ ಕೋಡಿ, ಕೋಡಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಶಿಕ್ಷಕ-ರಕ್ಷಕ ಸಮಿತಿಯ ಮುಖ್ಯ ಸಲಹೆಗಾರ ಅಭಿಷೇಕ್, ಉಪಾಧ್ಯಕ್ಷರಾದ ಪ್ರಕಾಶ್, ಮುಸ್ತರಿನ್ ಇದ್ದರು.

ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಪ್ರೋ ಧೋಮ ಚಂದ್ರಶೇಖರ ಪ್ರಾಸ್ತಾವಿಕ ಮಾತನಾಡಿದರು, ಬ್ಯಾರೀಸ್ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಪೂರ್ಣಿಮಾ ಸ್ವಾಗತಿಸಿದರು. ಬ್ಯಾರೀಸ್ ಆಂಗ್ಲ ಮಾಧ್ಯಮ ಶಾಲೆಯ ಸಹ ಶಿಕ್ಷಕಿ ಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು, ಹಾಜಿ ಕೆ ಮೊಹಿದ್ದೀನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯ ದೈಹಿಕ ಶಿಕ್ಷಕ ಇಲಿಯಾಸ್ ವಂದಿಸಿದರು.

ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಬೋಧಕ, ಬೋಧಕೇತರ ಸಿಬ್ಬಂದಿಯವರು ಇದ್ದರು.

 

Categories
ತಾಲೂಕ ಸ್ಪೋರ್ಟ್ಸ್

ಕೊಲ್ಲೂರು : ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ, ಪ.ಪೂ.ಕಾಲೇಜು ವಾರ್ಷಿಕ ಕ್ರೀಡೋತ್ಸವ

ಕೊಲ್ಲೂರು : ಶ್ರೀ ಮೂಕಾಂಬಿಕಾ ದೇವಳದ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಇಲ್ಲಿನ 2019-20ನೇ ಸಾಲಿನ ವಾರ್ಷಿಕ ಕ್ರೀಡೋತ್ಸವವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಕೋಟೇಶ್ವರದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿ ಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಉಭಯ ಸಂಸ್ಥೆಗಳ ವತಿಯಿಂದ ಕರುಣಾಕರ ಶೆಟ್ಟಿ ಯವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೊಲ್ಲೂರು ದೇವಳದ ವ್ಯವಸ್ಥಾಪನ ಸಮಿತಿ ಸದಸ್ಯರಾದ ಕೆ ರಮೇಶ್ ಗಾಣಿಗ, ಜಯಂತಿ ವಿಜಯ ಕೃಷ್ಣ ಮತ್ತು ತಾಲೂಕು ಪಂಚಾಯತ್ ಸದಸ್ಯೆ ಗ್ರೀಷ್ಮಾ ಗಿರಿಧರ ಬಿಢೆ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷ ಎಸ್ ಕುಮಾರ್, ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪೂಜಾರಿ, ಉಡುಪಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ , ಬೈಂದೂರು ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾಜೀವ ಶೆಟ್ಟಿ, ಕೊಲ್ಲೂರು ಠಾಣೆಯ ಎ.ಎಸ್.ಐ. ವಿಜಯ ಅಮೀನ್ ,ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆಯ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ವಿ ಷಾಜಿ ಉಪಸ್ಥಿತರಿದ್ದರು.

ಪ್ರಾಂಶುಪಾಲ ಅರುಣ್ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು, ಮುಖ್ಯೋಪಾಧ್ಯಾಯ ನಾಗರಾಜ ಭಟ್ ವಂದಿಸಿದರು. ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Categories
ಕ್ರಿಕೆಟ್ ತಾಲೂಕ

73ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ 7 ಬಾರಿ ನ್ಯೂ ಫ್ರೆಂಡ್ಸ್ ಕೋಟೇಶ್ವರ ಆಯೋಜಿಸಿದ ಸೂಪರ್ ಸಿಕ್ಸ್ ಪಂದ್ಯಾಟ K.P.L-2019

ದಶಕಗಳಿಂದಲೂ ತನ್ನೂರಿನ ಆಟಗಾರರನ್ನೇ ನೆಚ್ಚಿಕೊಂಡು, ಜಿಲ್ಲಾ ರಾಜ್ಯ ಮಟ್ಟದ ಪಂದ್ಯಾಕೂಟಗಳಲ್ಲಿ ಭಾಗವಹಿಸಿ ಕೆಚ್ಚೆದೆಯ ಹೋರಾಟ ಪ್ರದರ್ಶಿಸಿ ಪ್ರಶಸ್ತಿ ಜಯಿಸುತ್ತಿದ್ದ ಕೋಟೇಶ್ವರ ತಂಡಗಳು ಸ್ವರ್ಣ ಇತಿಹಾಸದ ಹೊಸ್ತಿಲಿನಲ್ಲಿರುವ ಚೇತನಾ ಕಲಾ ಹಾಗೂ ಕ್ರೀಡಾರಂಗ,ಕಾಸ್ಮೊಪೊಲಿಟಿನ್, ಮಿತೃವೃಂದ,ಅಂಶು ಹಾಗೂ ವಿಜಯ ಕೋಟೇಶ್ವರ ತಂಡಗಳು.ಈ ತಂಡಗಳದ ಹೊರಹೊಮ್ಮಿದ ಆಟಗಾರರು ಇಂದು ರಾಜ್ಯ,ರಾಷ್ಟ್ರ,ಅಂತರಾಷ್ಟ್ರೀಯ ಮಟ್ಟದಲ್ಲೂ ಮಿಂಚುತ್ತಿದ್ದಾರೆ.

      

ಕಾರ್ಯನಿಮಿತ್ತ ದೂರದೂರಿಗೆ ತೆರಳುವ ಸಂದರ್ಭದಲ್ಲಿ ಹಾಗೂ ನಾನಾ ಕಾರಣಗಳಿಂದ ತಂಡಗಳ ಹೊಳಪು ಕಳೆದುಕೊಂಡರೂ ಕೋಟೇಶ್ವರದ “ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್” ಕಳೆದ 7 ವರ್ಷಗಳಿಂದ ಕೋಟೇಶ್ವರ ಪರಿಸರದ ಯುವ ಪ್ರತಿಭೆಗಳ ಅನ್ವೇಷಣೆಯಲ್ಲಿ ತೊಡಗಿದೆ.ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಮಾಜಿಕ ಸೇವೆ ಹಾಗೂ ಯುವ ಪ್ರತಿಭೆಗಳಿಗಾಗಿ ಮೀಸಲಿಡುವ ಈ ಸಂಸ್ಥೆ ಈ ಬಾರಿ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರದ ಅಂಗಣದಲ್ಲಿ 7ನೇ ಬಾರಿ K.P.L-2019 ಪಂದ್ಯಾಕೂಟವನ್ನು ಆಗಸ್ಟ್ 15 ಗುರುವಾರದಂದು ಆಯೋಜಿಸಿತ್ತು.

ಜಡಿ ಮಳೆಯನ್ನು ಲೆಕ್ಕಿಸದೆ ಕೋಟೇಶ್ವರ ಪರಿಸರ 10 ತಂಡಗಳು ಈ ಪಂದ್ಯಾಕೂಟದಲ್ಲಿ ಭಾಗವಹಿಸಿದ್ದು,ಲೀಗ್ ಹಂತದ ಸೆಣಸಾಟಗಳ ಬಳಿಕ‌ ಅಂತಿಮವಾಗಿ ಮುದ್ದೇರಕಟ್ಟೆ ಲಯನ್ಸ್ ಹಾಗೂ ಕೊಂಕಣ್ ಎಕ್ಸ್‌ಪ್ರೆಸ್‌ ತಂಡ ಫೈನಲ್ ಪ್ರವೇಶಿಸಿದ್ದವು.

ಮೊದಲು ಬ್ಯಾಟಿಂಗ್ ನಡೆಸಿದ ಮುದ್ದೇರಕಟ್ಟೆ ತಂಡ 5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 36 ರನ್ ನ ಪೈಪೋಟಿಯ ಗುರಿಯನ್ನು ನೀಡಿತ್ತು. ಎದುರಾಳಿ ತಂಡ ಮುದ್ದೇರಕಟ್ಟೆ ಲಯನ್ಸ್ ಬಿಗು ಬೌಲಿಂಗ್ ದಾಳಿ ಎದುರಿಸಲಸಲಾಗದೆ 5 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 27 ರನ್ ಗಳಿಸಲಷ್ಟೇ ಶಕ್ತವಾಯಿತು.

ಫೈನಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನಿರ್ವಹಿಸಿದ ರಂಜನ್ ಉಡುಪ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ,ವೈಯಕ್ತಿಕ ಪ್ರಶಸ್ತಿಗಳನ್ನು ಕ್ರಮವಾಗಿ ಸರಣಿ ಶ್ರೇಷ್ಠ ಶರತ್,ಬೆಸ್ಟ್ ಬ್ಯಾಟ್ಸ್‌ಮನ್ M.ವಿಘ್ನೇಶ್,ಬೆಸ್ಟ್ ಬೌಲರ್ ಸಂದೀಪ್,ಗರಿಷ್ಯ ಸಿಕ್ಸರ್ ಶರತ್ ಉತ್ತಪ್ಪ ಹಾಗೂ ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಲಕ್ಷ್ಮೇಶ್ ಮಂಜ ಪಡೆದುಕೊಂಡರು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಪ್ರೆಸಿಡೆಂಟ್ ಗ್ರೂಪ್ ನ ಬಹ್ರೈನ್ ಉದ್ಯಮಿ ಅಬ್ದುಲ್ ಸತ್ತಾರ್ ವಿಜೇತರನ್ನು ಅಭಿನಂದಿಸಿ,ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ಸ್ಥಳೀಯರಾದ ಶಶಿ ನಂಬಿಯಾರ್, ಶೇಖರ್,ಯೂಸುಫ್ ಸಾಹೇಬ್, ಬ್ರಿಜೇಶ್ ಶೆಟ್ಟಿ, ಮಾಜಿ ಆಟಗಾರ ಇರ್ಫಾನ್, ಶ್ರೀಧರ್ ನಾಯಕ್, ನಿತೇಶ್ ದೊಡ್ಡೋಣಿ, ವಿಜೇತ್ ಆಚಾರ್ಯ, ಕೋಟೇಶ್ವರದ ಕ್ರೀಡಾ ಪ್ರತಿನಿಧಿ ಪುರುಷೋತ್ತಮ ಕಾಮತ್,ವೇಗಿ ರಾಘು ಶೆಟ್ಟಿ,ಜೀವನ್ ಮಿತ್ಯಂತಾಯ, ರಾಜೇಶ್ ಪ್ರಭು ಉಪಸ್ಥಿತರಿದ್ದರು.

ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದ್ದರು.

ಆರ್.ಕೆ.ಆಚಾರ್ಯ ಕೋಟ

Categories
ಕಬಡ್ಡಿ ತಾಲೂಕ

ಬೈಂದೂರು : ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕೊಲ್ಲೂರು ದೇವಳ ಕಾಲೇಜಿನ ಬಾಲಕಿಯರು ಪ್ರಥಮ ಸ್ಥಾನ, ಜಿಲ್ಲಾ ಮಟ್ಟಕ್ಕೆ ಆಯ್ಕೆ

ಬೈಂದೂರು : ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಇವರ ಆಶ್ರಯದಲ್ಲಿ ಬೈಂದೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಗುರುವಾರ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು.

 

ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಕೊಲ್ಲೂರ ದೇವಳದ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಉಪನ್ಯಾಸಕಿ ಪೂರ್ಣಿಮಾ ಜೋಯಿಸ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಪೂಜಾರಿ, ಹಳೆಯ ವಿದ್ಯಾರ್ಥಿಗಳಾದ ಅವಿನಾಶ್ ಆಚಾರ್ಯ, ವಿನಾಯಕ ಆಚಾರ್ಯ ಕೊಲ್ಲೂರು ಪ್ರದೀಪ್ ಭಟ್ ವಿಜೇತ ವಿದ್ಯಾರ್ಥಿಗಳೊಂದಿಗೆ ಇದ್ದರು.

ವರದಿ : ಎಚ್.ಸುಶಾಂತ್ ಬೈಂದೂರು

Categories
ತಾಲೂಕ

ಮಂದಾರ್ತಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪಂದ್ಯಾಟ ಮತ್ತು ಕ್ರೀಡಾಕೂಟ

ಬ್ರಹ್ಮಾವರ : ಹಲುವಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಉಡುಪಿ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ವಲಯ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಲುವಳ್ಳಿ ಸಂಯುಕ್ತ ಆಶ್ರಯದಲ್ಲಿ ಮಂದಾರ್ತಿ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಪಂದ್ಯಾಟ ಮತ್ತು ಕ್ರೀಡಾಕೂಟ ನಡೆಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ ಕ್ರೀಡಾಕೂಟ ಉದ್ಘಾಟಿಸಿದರು. ಉಡುಪಿ ಶಾಸಕ ರಘುಪತಿ ಭಟ್, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ರಘುರಾಮ ಶೆಟ್ಟಿ ಕನ್ನಾರು, ಕರ್ಜೆ ಪ್ರೌಢಶಾಲೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಮೇಶ್ ಭಟ್, ನೀರಾವರಿ ಇಲಾಖೆಯ ನಿವೃತ್ತ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಧನಂಜಯ ಅಮೀನ್, ಚಂದ್ರಶೇಖರ ಶೆಟ್ಟಿ ಮೂಡೂರು, ಶಿವರಾಮ ಶೆಟ್ಟಿ ಕೋಟಂಬೈಲು, ದೈಹಿಕ ಶಿಕ್ಷಣಾಧಿಕಾರಿ ಭುಜಂಗ ಶೆಟ್ಟಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸುಜಾತಾ ಶೆಟ್ಟಿ, ಉದಯ್ ಎಚ್.ಟಿ., ಶೇಖರ್ ನಾಯ್ಕ್ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಸುಮತಿ ಸ್ವಾಗತಿಸಿದರು. ಶಿಕ್ಷಕ ಪ್ರಶಾಂತ ಶೆಟ್ಟಿ ಹಾವಂಜೆ ನಿರೂಪಿಸಿದರು. ಸಹ ಶಿಕ್ಷಕ ರೋಹಿತ್ ಶೆಟ್ಟಿ ಸಹಕರಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಸುಮನಾ ವಂದಿಸಿದರು.

ಮಳೆಯ ನಡುವೆಯೂ ಉತ್ಸಾಹ : ಬ್ರಹ್ಮಾವರ ಪರಿಸರದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಭಾರಿ ಮಳೆ ಸುರಿಯುತ್ತಿದ್ದರೂ ಮಳೆಯನ್ನು ಲೆಕ್ಕಿಸದೇ ಶಾಲಾ ವಿದ್ಯಾರ್ಥಿಗಳು ಉತ್ಸಾಹದಿಂದ ವಾಲಿಬಾಲ್, ಕೊಕ್ಕೊ, ಕಬಡ್ಡಿ, ಥ್ರೋಬಾಲ್ ಕ್ರೀಡೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

Categories
Action Replay ಕ್ರಿಕೆಟ್ ತಾಲೂಕ

ಕುಂದಾಪುರ : ಫ್ರೆಂಡ್ಸ್ ಬೆಂಗಳೂರು ಹಿರಿಯರ ಸಾಹಸಕ್ಕೆ ಒಲಿದ ಸ್ಪೋರ್ಟ್ಸ್ ಕನ್ನಡ ಟ್ರೋಫಿ

ಕುಂದಾಪುರ : ಹಲವು ದಶಕಗಳ ಬಳಿಕ ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿ ಐತಿಹಾಸಿಕ ಪಂದ್ಯಾಕೂಟವೊಂದು ದಾಖಲಾಯಿತು. ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಕಾರ್ಯಕ್ರಮದ ಪ್ರಯುಕ್ತ ಟೆನ್ನಿಸ್ ಕ್ರಿಕೆಟನ್ನು ಇನ್ನಿಲ್ಲದಂತೆ ಆಳಿ ಮೆರೆದ ದಂತಕಥೆಗಳ ನಡುವೆ ಹಣಾಹಣಿ ಕ್ರಿಕೆಟ್ ಕಾಶಿ ಕುಂದಾಪುರದ ಗಾಂಧಿಮೈದಾನದಲ್ಲಿ ಏರ್ಪಡಿಸಲಾಗಿತ್ತು.

ಬೆಂಗಳೂರಿನ ಹಿರಿಯ ತಂಡಗಳಾದ ಮನೋಹರ್ ನೇತೃತ್ವದ ಜೈ ಕರ್ನಾಟಕ,ರೇಣು ಗೌಡ ನೇತೃತ್ವದ ಫ್ರೆಂಡ್ಸ್ ಬೆಂಗಳೂರು,ಶ್ರೀಪಾದ ಉಪಾಧ್ಯ ಸಾರಥ್ಯದ ಚಕ್ರವರ್ತಿ ಕುಂದಾಪುರ ಹಾಗೂ ಸಫ್ದರ್ ಆಲಿ ನೇತೃತ್ವದ ಉಡುಪಿ ಕ್ರಿಕೆಟರ್ಸ್ ನಡುವೆ ನಡೆದ ರೋಚಕ ಹಣಾಹಣಿಯಲ್ಲಿ ಫ್ರೆಂಡ್ಸ್ ತಂಡ ಚಕ್ರವರ್ತಿ ತಂಡವನ್ನು, ಉಡುಪಿ ಕ್ರಿಕೆಟರ್ಸ್ ಜೈ ಕರ್ನಾಟಕ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.

ಫೈನಲ್ ಪಂದ್ಯಾಟದಲ್ಲಿ ಟಾಸ್ ಜಯಿಸಿ ಫೀಲ್ಡಿಂಗ್ ಆಯ್ದುಕೊಂಡ ಫ್ರೆಂಡ್ಸ್ ತಂಡ ಎದುರಾಳಿ ಉಡುಪಿ ತಂಡವನ್ನು 8 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 61 ರನ್ ಗಳಿಗೆ ನಿಯಂತ್ರಿಸಿತು‌.

ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಫ್ರೆಂಡ್ಸ್ ನ ಆರಂಭಿಕ ಹಿರಿಯ ಆಟಗಾರ ಶ್ರೀಕಾಂತ್ ಅಮೂಲ್ಯ 15 ರನ್ ಹಾಗೂ ಗಂಗಾ, ನಿತಿನ್ ಮೂಲ್ಕಿ ಎಸೆತದಲ್ಲಿ ಸಿಡಿದ ಭರ್ಜರಿ 3 ಸಿಕ್ಸರ್ ಸಹಿತ 7 ಎಸೆತಗಳಲ್ಲಿ 21 ರನ್ ಸಿಡಿಸಿ 7 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿದರು.

“ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನ ವರ್ಣರಂಜಿತ ಉದ್ಘಾಟನಾ ಸಮಾರಂಭದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಯಿತು.

ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗಂಗಾ,ಬೆಸ್ಟ್ ಬೌಲರ್ ನಿತಿನ್ ಮೂಲ್ಕಿ,ಬೆಸ್ಟ್ ಕೀಪರ್ ಕೆ.ಪಿ.ಸತೀಶ್ ,ಬೆಸ್ಟ್ ಕ್ಯಾಚ್ ಪ್ರೇಮೇಂದ್ರ ಶೆಟ್ಟಿ ,ಬೆಸ್ಟ್ ಬ್ಯಾಟ್ಸ್‌ಮನ್‌ ಫ್ರೆಂಡ್ಸ್ ನ ಶ್ರೀಕಾಂತ್ ಪಡೆದುಕೊಂಡರು.ಹಿರಿಯ ಕ್ರಿಕೆಟಿಗರನ್ನು ಹುರಿದುಂಬಿಸಲು ರಾಜ್ಯದ ಯುವ ಕ್ರಿಕೆಟಿಗರು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.ಹಿರಿಯ ಕ್ರಿಕೆಟಿಗರನ್ನು ಅತಿಥಿಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಬೆಳಗ್ಗಿನ ಪಂದ್ಯಾಕೂಟಕ್ಕಾಗಿ ಕರ್ನಾಟಕ ರಾಜ್ಯದ ಹಿರಿಯ ತಂಡಗಳಾದ ಬೆಂಗಳೂರಿನ ಜೈ ಕರ್ನಾಟಕದ ದಂತಕಥೆಗಳಾದ ಮನೋಹರ್, ಮ್ಯಾಜಿಕಲ್ ಸ್ಪಿನ್ನರ್ ಮೆರ್ವಿನ್,ನಂಬುಗೆಯ ದಾಂಡಿಗ ಕೀಪರ್ ನಾಗಿ,ಬಾಬು,ನಾಗೇಶ್ ಸಿಂಗ್,ಭಗವಾನ್ ಸಿಂಗ್,ಜಾನ್ಸನ್ ಶ್ರೀಧರ್,ಸಾಂಬಾಜಿ ಪ್ರತಿನಿಧಿಸಿದರೆ,
ಫ್ರೆಂಡ್ಸ್ ನ ರೇಣು ಗೌಡ, ಶ್ರೀಕಾಂತ್, ಸುನಿಲ್ ಬಿರಾದರ್,ಚಂದಿ,ಸೀನ,ಗಂಗಾ ಆಡಿದ್ದರೆ, ಉಡುಪಿ ಕ್ರಿಕೆಟರ್ಸ್ ನಿಂದ ನಾಯಕ ಸಪ್ಧರ್ ಆಲಿ,ನಿತಿನ್ ಮೂಲ್ಕಿ,ವಿನ್ಸೆಂಟ್, ಪ್ರವೀಣ್ ಪಿತ್ರೋಡಿ, ವಿಲ್ಫ್ರೆಡ್,ವಿಶ್ವನಾಥ್ ಹಾಗೂ ಚಕ್ರವರ್ತಿ ಕುಂದಾಪುರ ತಂಡ ನಾಯಕ ಶ್ರೀಪಾದ ಉಪಾಧ್ಯಾಯ ರ ಅನುಪಸ್ಥಿತಿಯಲ್ಲಿ ಸತೀಶ್ ಕೋಟ್ಯಾನ್ ರ ನಾಯಕತ್ವದಲ್ಲಿ ಮನೋಜ್ ನಾಯರ್,ಪ್ರದೀಪ್ ವಾಜ್,ಕೆ.ಪಿ.ಸತೀಶ್, ರಂಜಿತ್ ಶೆಟ್ಟಿ, ರಾಜಾ ಇನ್ನಿತರ ಹಿರಿಯ ದಂತಕಥೆಗಳು ದಶಕಗಳ ಬಳಿಕ ಮತ್ತೆ ಕಣಕ್ಕಿಳಿದಿದ್ದರು.

ಬೆಳಗ್ಗಿನ ಪಂದ್ಯಾಕೂಟ ಹಾಗೂ ಸಂಜೆಯ ವೆಬ್ಸೈಟ್ ಲೋಕಾರ್ಪಣಾ ಕಾರ್ಯಕ್ರಮದ ನೇರ ಪ್ರಸಾರವನ್ನು ಸಚಿನ್ ಮಹಾದೇವ್ ನೇತೃತ್ವದ M.SPORTS ವಿಶ್ವದಾದ್ಯಂತ ಪ್ರಸಾರ ಮಾಡಿದ್ದು,ಸಹಸ್ರಾರು ಮಂದಿ ವೀಕ್ಷಕರು ಅಪರೂಪದ ಸಮ್ಮಿಲನ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

                                                                                                                                         – ಆರ್.ಕೆ‌.ಆಚಾರ್ಯ ಕೋಟ