Categories
#covid19

ಸಮಾಜಸೇವೆಯೇ ಜೀವನ-ನಾಗಾರ್ಜುನ

ನಾಗಾರ್ಜುನ್.ಡಿ.ಪೂಜಾರಿಯವರು ದಿನೇಶ್. ಪೂಜಾರಿ ಹಾಗೂ ಜಯ. ಡಿ. ಪೂಜಾರಿ. ರವರ ಪುತ್ರನಾಗಿದ್ದು, ಉಡುಪಿಯ ಗುಂಡಿಬೈಲಿನಲ್ಲಿ ನೆಲೆಸಿದ್ದಾರೆ. ಉಡುಪಿ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಸತತವಾಗಿ 405 ಕೋರೋನಾ ಸೋಂಕಿತ ಮೃತದೇಹವನ್ನು ದಹನ ಮಾಡುವ ಕಾರ್ಯದಲ್ಲಿ,ಸ್ನೇಹಿತರಾದ ಮನೋಹರ್ ಹಾಗೂ ಸುಮಂತ್ ಈರ್ವರಿಗೂ ಸಾರಥಿಯಂತೆ ಇದ್ದು ಅವರಿಗೂ ಧೈರ್ಯ ನೀಡುತ್ತ ಮಾನವೀಯತೆಯಿಂದ ನಿಸ್ವಾರ್ಥವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಇಂತಹ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ.
*ಕ್ರಿಕೆಟ್ ಲೋಕದ ಅತ್ಯದ್ಭುತ ಪ್ರತಿಭೆ ಕೂಡಾ ಹೌದು ನಾಗಾರ್ಜುನ್*
ತನ್ನ ಹದಿಮೂರನೆಯ ವಯಸ್ಸಿಗೇ ದೊಡ್ಡಣಗುಡ್ಡೆ ಫ್ರೆಂಡ್ಸ್ ತಂಡದ ಮೂಲಕವಾಗಿ ಟೆನಿಸ್ ಕ್ರಿಕೆಟ್ ಗೆ ಪರಿಚಯ ಕಂಡು ನಂತರ ಗುರುಶ್ರೀ ಗುಂಡಿಬೈಲು ಹಾಗೂ ವಿಷ್ಣುಮೂರ್ತಿ ದೊಡ್ಡಣಗುಡ್ಡೆ, ಸಾಟರ್ಡೇ ಪ್ಯಾಂಥರ್ಸ್ ಇಂದ್ರಾಳಿ ಹಾಗೂ ಲೋಕಲ್ ಬಾಯ್ಸ್ ಉಡುಪಿ ತಂಡದ ಪರವಾಗಿ ಬಹಳಷ್ಟು ಪಂದ್ಯಾಟವನ್ನು ಗೆಲ್ಲಿಸಿಕೊಟ್ಟ ಕ್ರಿಕೆಟಿಗ.
*ಜಿಲ್ಲೆ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಆಲ್-ರೌಂಡರ್ ಆಟಗಾರನಾಗಿ ಗುರುತಿಸಿಕೊಂಡರು*. ಟೆನಿಸ್ ಕ್ರಿಕೆಟ್‌ನ ಜನಪ್ರಿಯ ತಂಡಗಳಾದ ಉಡುಪಿಯ ಎ.ಕೆ. ಸ್ಪೋರ್ಟ್ಸ್, ಉಡುಪಿ ಫ್ರೆಂಡ್ಸ್, ಬಿಬಿಸಿ ಅಗ್ರಹಾರ, ಸೈಮಂಡ್ಸ್ ಕಡಿಯಾಳಿ, ರಿಯಲ್ ಫೈಟರ್ಸ್ ನಂತಹ ತಂಡಗಳನ್ನು ಪ್ರತಿನಿಧಿಸಿ ಅಪಾರ ಯಶಸ್ಸನ್ನು ಕೂಡಾ ತನ್ನದಾಗಿಸಿಕೊಂಡಿದ್ದಾರೆ.
ಕರಾವಳಿಯ ಭಾಗದಲ್ಲಿ ಜನಪ್ರಿಯತೆಯನ್ನು ಪಡೆದಿರುವ 40 ಗಜಗಳ ಮಾದರಿಯ ಪಂದ್ಯಾಕೂಟಗಳಲ್ಲಿ ಆ ಪಂದ್ಯಾಕೂಟಗಳ ಶ್ರೇಷ್ಠ ತಂಡಗಳೆನಿಸಿಕೊಂಡ ನಿಸರ್ಗ ಕಿದಿಯೂರು,ಬಗ್ಗಾ ಫ್ರೆಂಡ್ಸ್ ಕುರ್ಕಲ್,ಜಾನ್ಸನ್ ಕುಂದಾಪುರ, ಚಾಲೆಂಜ್ ಕುಂದಾಪುರ , ಈಗಲ್ಸ್ ಕುಂಭಾಶಿಯ ಪರವಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ.
2011 ರಿಂದ ಈಚೆಗೆ ತನ್ನನ್ನು ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಇಲ್ಲಿಯವರೆಗೆ ತನ್ನ ಸಾಧನೆಗಾಗಿ 350 +ಕ್ಕೂ ಮಿಗಿಲಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ, 170ಕ್ಕೂ ಹೆಚ್ಚು ಉತ್ತಮ ದಾಂಡಿಗ ಹಾಗೂ ಉತ್ತಮ ಬೌಲರ್ ಪ್ರಶಸ್ತಿ ಮತ್ತು 45 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಇವರ ಮುಡಿಗೇರಿದೆ.
ಉಡುಪಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ತಂಡಕ್ಕೆ ಸತತ ಮೂರು ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್ ತರಬೇತಿ ನೀಡಿ ಒಟ್ಟು ನಾಲ್ಕು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ ತನ್ನ ಉತ್ತಮ ರೀತಿಯ ದಾಂಡಿಗ ಹಾಗೂ ನಿಖರವಾಗಿ ಚೆಂಡನ್ನು ತಿರುಗಿಸಬಲ್ಲ ಚಾಣಾಕ್ಷ ಎಸೆತಗಾರನಾಗಿ ತನ್ನನ್ನು ಗುರುತಿಸಿಕೊಂಡು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿಕೊಂಡಿದ್ದಾರೆ.
“ಕೋರೋನಾ ಪ್ರಾರಂಭವಾದಾಗ ಪಾಸಿಟಿವ್ ಬಂದ ಪ್ರಕರಣದ ಶವವನ್ನು ಬೀಡಿನಗುಡ್ಡೆಯಲ್ಲಿ ಸುಡಲಾಗಿತ್ತು . ಇದು ಅಲ್ಲಿಗೆ ಬರುವ ಸಾರ್ವಜನಿಕರಿಗೆ ಆತಂಕ ಹುಟ್ಟಿಸಿತ್ತು. ಆದ್ದರಿಂದ ಇಂದ್ರಾಳಿಯಲ್ಲಿರುವ ಶವಾಗಾರವನ್ನು ಸ್ವಚ್ಛ ಗೊಳಿಸಿ ಅಲ್ಲಿ ಸುಡುವ ಕೆಲಸ ಆರಂಭಿಸಿದ್ದೆ. ಐವತ್ತು ಶವಗಳನ್ನ ಸಂಸ್ಕಾರ ಮಾಡುವವರೆಗೆ ಮನೆಯವರಿಗೂ ಗೊತ್ತಿರಲಿಲ್ಲ. ಇಲ್ಲಿ ಎರಡು ಹೆಣ ಸುಡುವ ಪೆಟ್ಟಿಗೆ ಇದೆ. ಈ ಹಿಂದೆ ಕೋವಿಡ್ ನಿಂದ ಮರಣ ಹೊಂದಿದವರನ್ನು ಹೂಳಲಾಗ್ತಾ ಇತ್ತು.
ಆದರೆ ಅದು ಹಿಂದುಗಳ ಕ್ರಮವಲ್ಲ. ಸತ್ತ ಮೇಲೆ ಮನೆಯವರು ಬೂದಿಯೂ ಸಿಕ್ಕಿಲ್ಲ ಎಂಬ ಪಶ್ಚಾತ್ತಾಪ ಪಡಬಾರದಲ್ಲ. ಪಿಪಿಇ ಕಿಟ್ ಬಳಸಿದ ಮೇಲೆ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿ, ಮನೆಯ ಒಳಗೆ ಹೋಗುವ ಮೊದಲು ನನ್ನ ಮತ್ತು ಮನೆಯವರ ಆರೋಗ್ಯದ ದೃಷ್ಟಿಯಿಂದ ಸ್ವಚ್ಚತೆಯನ್ನು ಮಾಡಿಕೊಳ್ಳುವುದನ್ನು ಮರೆಯುವುದಿಲ್ಲ”.
“ಒಂದು ಹೆಣ ಸುಡಲು 350 ರಿಂದ 400 ಕೆಜೆ , ಅಂದರೆ ರೂ 1200 ಕಟ್ಟಿಗೆ ಬೇಕಾಗುತ್ತದೆ. ಕೆಲವರು ಶವ ಸಂಸ್ಕಾರಕ್ಕೆ ಹಣ ಕೊಡುತ್ತಾರೆ. ಇನ್ನು ಬಡವರು ಅಷ್ಟು ಶಕ್ತರಾಗಿರುವುದಿಲ್ಲ. ಆಗ ನಾವೇ ಮುಂದೆ ನಿಂತು ನಿಭಾಯಿಸುತ್ತೇವೆ. ಈ ಎಲ್ಲಾ ಕೆಲಸಕ್ಕೆ ನಗರಸಭೆಯ ಅಧಿಕಾರಿಗಳ ಸಂಪೂರ್ಣ ಬೆಂಬಲ ಇದೆ. ಕೊರೊನ ಸಂಕಷ್ಟ ಸಮಯದಲ್ಲಿ ಇದು ಒಂದು ಸಣ್ಣ ಸೇವೆ ಎಂದು ಕೆಲಸ ಮುಂದುವರಿಸಿದ್ದೇನೆ”, ಎನ್ನುತ್ತಾರೆ ನಾಗಾರ್ಜುನ್.
ಲಾಕ್ ಡೌನ್ ಶುರುವಾದಾಗಿನಿಂದ ಒಂದು ರಜೆಯ ನ್ನೂ ತೆಗೆದುಕೊಂಡಿಲ್ಲವಂತೆ ನಾಗಾರ್ಜುನ್. ಆಗಲೂ ಸ್ಯಾನಿಟೈಸೇಶನ್, ನಿರಾಶ್ರಿತರಿಗೆ ಊಟ ಕೊಡುವುದು ನಡೆದೇ ಇತ್ತು. ಅಲ್ಲದೇ ಪ್ರತಿ ದಿನ 10-30 ಮನೆಗಳಿಗೆ ಹೋಗಿ ಕೊರೋನಾ ಜಾಗ್ರತಿ ಮೂಡಿಸುವ ಕೆಲಸ ಕೂಡ ಮಾಡ್ತ ಇದ್ದಾರೆ.
ಇನ್ನು ನಿತ್ಯದ ಸೇವೆ ಹೊರತು ಪಡಿಸಿ ಕ್ರಿಕೆಟ್ ಆಡುವುದು ಇವರ ಆಸಕ್ತಿ. ಈಗ ಕೆಲಸದ ಒತ್ತಡದಿಂದ ಆಡಲು ಆಗುತ್ತಿಲ್ಲ. ಆದರೂ ಸ್ಥಳೀಯ ಕಡೆ ಕ್ರಿಕೆಟ್ ಪಂದ್ಯಾಟವಿದ್ದರೆ ಇವರು ಹಾಜರ್. ಇಷ್ಟು ಕೆಲಸ ನಿರಂತರ ಮಾಡುತ್ತಿದ್ದರೂ ಎಲೆ ಮರೆ ಕಾಯಿಯಂತೆ ತಮ್ಮ ಸೇವೆಯನ್ನು ಮಾಡುತ್ತಿದ್ದಾರೆ.

ಕೊರೋನಾ ವಾರಿಯರ್ಸ್‌ ಪಟ್ಟಿಯಲ್ಲಿ ಅಗ್ರಪಂಕ್ತಿಯಲ್ಲಿ ಕಾಣಿಸಿಕೊಳ್ಳುವ ನಾಗಾರ್ಜುನ ಇವರ ಸಮಾಜ ಸೇವೆಯನ್ನು ಮನಗಂಡು ಇತ್ತೀಚೆಗಷ್ಟೇ ಉಡುಪಿ ಶ್ರೀ ಕೃಷ್ಣ ಮಠದ ಸಪ್ತೋತ್ಸವ ಕಾರ್ಯಕ್ರಮದಲ್ಲಿ ರಾಜಾಂಗಣದ ನರಿಹರಿತೀರ್ಥ ವೇದಿಕೆಯಲ್ಲಿ,
ಗ್ರಾಮೀಣಾಭಿವೃದ್ಧಿ ಸಚಿವರಾದ ಈಶ್ವರಪ್ಪ ಹಾಗೂ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ “ಕೃಷ್ಣಾನುಗ್ರಹ” ಪ್ರಶಸ್ತಿ ನೀಡಿ ಗೌರವಿಸಿದೆ.ಏಪ್ರಿಲ್ 3 ರಂದು ಕುಂದಾಪುರದಲ್ಲಿ ನಡೆದ ಸ್ಪೋರ್ಟ್ಸ್ ಕನ್ನಡ “ಯುಗಾಂತರ” ಕಾರ್ಯಕ್ರಮದಲ್ಲಿ ರಾಜ್ಯದ ಹಿರಿಯ ಆಟಗಾರರ ಸಮ್ಮುಖದಲ್ಲಿ ಸನ್ಮಾನ ಕಾರ್ಯಕ್ರಮ ನಡೆದಿದೆ.ಈ ವರೆಗೆ ಜಿಲ್ಲೆಯಾದ್ಯಂತ 20 ಕ್ಕೂ ಹೆಚ್ಚಿನ ಸಂಘ ಸಂಸ್ಥೆಗಳು ನಾಗಾರ್ಜುನ ಇವರನ್ನು ಗುರುತಿಸಿ ಗೌರವಿಸಿದೆ.
Categories
#covid19

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನಿಂದ ಕೊರೋನಾ ವಾರಿಯರ್ಸ್ ಯವರಿಗೆ ದಿನಸಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಬೈಂದೂರು : ಇಲ್ಲಿನ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೈಂದೂರು ಭಾಗದ ಆಶಾ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ನೌಕರರು ಹಾಗೂ ಪೌರಕಾರ್ಮಿಕರಿಗೆ ದಿನಸಿ ಸಾಮಾಗ್ರಿಗಳು, ಸ್ಯಾನಿಟೈಸರ್ ಹಾಗೂ ಮಾಸ್ಕ್ ವಿತರಿಸಲಾಯಿತು.
ಭಾನುವಾರು ಬೈಂದೂರು ರೋಟರಿ ಕ್ಲಬ್’ನಲ್ಲಿ ಕಿಟ್ ವಿತರಿಸಿ  ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ದಿನಸಿ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿ ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಸ್ಪಂದಿಸುತ್ತಿರುವುದು ಬಹುದೊಡ್ಡ ಕಾರ್ಯ. ಟ್ರಸ್ಟ್ ಮೂಲಕ ಮನೆ ನಿರ್ಮಾಣ, ಆರ್ಥಿಕ ಸಹಕಾರವನ್ನು ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯವಾದುದು. ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಕೋವಿಡ್ ನಿಯಂತ್ರಣದಲ್ಲಿ ಶ್ರಮಿಸುತ್ತಿದ್ದಾರೆ.
ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅವರು ಮಾತನಾಡಿ ಟ್ರಸ್ಟ್ ಮೂಲಕ ಹತ್ತಾರು ಸೇವಾ ಕಾರ್ಯಗಳನ್ನು ಮಾಡಿಕೊಂಡು ಬರಲಾಗುತ್ತಿದೆ. ಕೋವಿಡ್ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದ್ದು ಇಂದಿನಿಂದ ಕೆಲವು ದಿನಗಳ ಕಾಲ ಪ್ರತಿ ಗ್ರಾಮದಲ್ಲಿಯೂ ದಿನಸಿ ಕಿಟ್ ವಿತರಿಸಲಿದ್ದೇವೆ ಎಂದರು.
100ಕ್ಕೂ ಅಧಿಕ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಬೈಂದೂರು ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್., ಬೈಂದೂರು ಎಸ್ಐ ಸಂಗೀತಾ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ನವೀನ್, ಗುರುರಾಜ ಪಂಜು ಪೂಜಾರಿ ಮೊದಲಾದವರು ಇದ್ದರು.
Categories
#covid19

ಉಡುಪಿ-ಖ್ಯಾತ ಕರಾಟೆ ಪಟು,ತೋನ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ನಿಧನ.

ಉಡುಪಿ ಬಿಲ್ಲವ ಸಮುದಾಯದ ಯುವ ಮುಂದಾಳು,ಕರಾಟೆ ಸಂಘದ ರಾಜ್ಯಾಧ್ಯಕ್ಷ,ಕಾಂಗ್ರೆಸ್ ಮುಖಂಡ,ತೋನ್ಸೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಅವರು ನಿಧನ ಹೊಂದಿದರು.ಅವರು ಕೆಲವು ದಿನಗಳ ಹಿಂದೆ ಕೋವಿಡ್-19 ಸೋಂಕಿಗೆ ತುತ್ತಾಗಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ತಡರಾತ್ರಿ ವಿಧಿವಶರಾಗಿದ್ದಾರೆ.
ಈ ಹಿಂದೆ ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದ ಇವರು ಗ್ರಾಮದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರೂ ಪಕ್ಷಭೇದವನ್ನು ದೂರವಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ತೋನ್ಸೆ ಪಂಚಾಯತ್ ನ ಸರ್ವಸದಸ್ಯರು ಅಭಿವೃದ್ಧಿ ಕಾರ್ಯದಲ್ಲಿ ಒಂದಾಗುವಂತೆ ಮಾಡಿದ್ದರು.
ಅವಿವಾಹಿತರಾಗಿದ್ದ ನಿತ್ಯಾನಂದ ಇವರು ಓರ್ವ ಉತ್ತಮ ಕರಾಟೆಪಟು.ಉಡುಪಿಯ ಒಳಕಾಡು ಶಾಲೆಯಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದರು.
ಕ್ರೀಡಾಸೇವೆಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಗೌರವಕ್ಕೆ ಕೂಡ ಪಾತ್ರರಾಗಿದ್ದರು.ಮೃತರು ತಂದೆ,ತಾಯಿ,ಸಹೋದರಿ,ಇಬ್ಬರು ಸಹೋದರರನ್ನು ಅಗಲಿದ್ದಾರೆ.
Categories
#covid19

ಕುಳಾಯಿ ಫೌಂಡೇಶನ್ ವತಿಯಿಂದ ಬಡವರಿಗೆ 100 ಆಹಾರ ಕಿಟ್ ವಿತರಣೆ

ಕುಳಾಯಿ ಫೌಂಡೇಶನ್ ವತಿಯಿಂದ ಬಡವರಿಗೆ 100 ಆಹಾರ ಕಿಟ್ ವಿತರಿಸಲಾಯಿತು.
ಈ ಸಂದರ್ಭ ಫೌಂಡೇಶನ್ ಅಧ್ಯಕ್ಷೆ ಪ್ರತಿಭಾ ಕುಳಾಯಿ,ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಕುಳಾಯಿ,ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಜೇಶ್ ಕುಳಾಯಿ,ಸುರತ್ಕಲ್ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜೈಸನ್,ಫೌಂಡೇಶನ್ ಕೋಶಾಧಿಕಾರಿ ವಿಜಯ ಆಚಾರ್ಯ ಹೊಸಬೆಟ್ಟು ಮೊದಲಾದವರು ಉಪಸ್ಥಿತರಿದ್ದರು…
Categories
#covid19

ಮತ್ತೋರ್ವ ಮಹಿಳಾ ಕ್ರಿಕೆಟರ್ ತಾಯಿ ಕೊರೋನಾಗೆ ಬಲಿ…!

ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿರುವ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ 24 ವರ್ಷದ ಪ್ರಿಯಾ ಪೂನಿಯಾ ಅವರ ತಾಯಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಭಾರತೀಯ  ( ಕರ್ನಾಟಕದವರು ) ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ಅವರು ಕೊರೋನಾ ಸೋಂಕಿಗೆ ಒಳಗಾಗಿದ್ದ ತಾಯಿ ಮತ್ತು ಅಕ್ಕನನ್ನು ಕಳೆದುಕೊಂಡಿದ್ದರು.
 ಪ್ರಿಯಾ ಪೂನಿಯಾ ಅಮ್ಮನ ಅಗಲಿಕೆಯ ನೋವನ್ನು  ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳು ಮತ್ತು ಸ್ನೇಹಿತರ ಜೊತೆ ಹಂಚಿಕೊಂಡಿದ್ದಾರೆ. ಅಮ್ಮ ಬಲಿಷ್ಠವಾಗಿರು ಎಂದು ನೀನು ಯಾಕೆ ಯಾವಾಗಲೂ ನನಗೆ ಹೇಳುತ್ತಿದ್ದೆ ಎಂಬುದರ ಸತ್ಯ ನಿನ್ನನ್ನು ಕಳೆದು ಕೊಂಡ ಕ್ಷಣವೇ ನನಗೆ ಅರ್ಥವಾಗಿದೆ. ಒಂದು ದಿನ ನಿನ್ನ ಅಗಲುವಿಕೆಯ ನೋವನ್ನು ಸಹಿಸಿಕೊಳ್ಳಲು ನಾನು ಶಕ್ತಳಾಗಿರಬೇಕೆಂದು ನಿನಗೆ ಗೊತ್ತಿತ್ತು. ಅಮ್ಮ ನಾನು ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿರುವೆ. ನೀನು ಯಾವಾಗಲೂ ನನ್ನ ಬೆನ್ನಿಗಿರುವೆ ಎಂಬುದು ನನಗೆ ಗೊತ್ತಿದೆ.ನಾನು ಈ ಹಂತಕ್ಕೆ ಬರಲು ನಿನು ಕೊಟ್ಟ ಧೈರ್ಯ ಮಾರ್ಗದರ್ಶನ, ಪ್ರೀತಿ ಅಮ್ಮ… ನಿನ್ನನ್ನು ನಾನು ಕ್ಷಣ ಕ್ಷಣವೂ ಪ್ರೀತಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ…..
ಪ್ರಿಯಾ ಅವರ ಅಮ್ಮನ ಆತ್ಮಕ್ಕೆ ಚಿರಶಾಂತಿ ಸಿಗಲಿ.
ಬರುವ ದಿನಗಳಲ್ಲಿ ಪ್ರಿಯಾ ಪೂನಿಯಾ ಭಾರತೀಯ ಮಹಿಳಾ ಕ್ರಿಕೆಟ್ ನ ಬಲಿಷ್ಠ ಆಟಗಾರ್ತಿಯಾಗಿ ಅಮ್ಮನ ಆಸೆ ಈಡೇರಿಸುವಂತಾಗಲಿ
Categories
#covid19 ಕ್ರಿಕೆಟ್

ಟೆನ್ನಿಸ್ಬಾಲ್ ಕ್ರಿಕೆಟ್ ಅಂಗಣದಲ್ಲಿ ಮಿಂಚಿದ ಉಡುಪಿಯ ನಾಗಾರ್ಜುನ ಈಗ ಕೋವಿಡ್ ವೀರ

ಉಡುಪಿ ನಗರಸಭೆಯಲ್ಲಿ 5 ವರೆ ವರ್ಷಗಳಿಂದ  ಸ್ಯಾನಿಟರಿ ಸೂಪರ್ವೈಸರ್ ಆಗಿ ಕೆಲಸ ಮಾಡುತ್ತಿರುವ ನಾಗಾರ್ಜುನ್.ಡಿ.ಪೂಜಾರಿಯವರು ದಿನೇಶ್. ಪೂಜಾರಿ ಹಾಗೂ ಜಯ. ಡಿ.  ಪೂಜಾರಿ. ರವರ ಪುತ್ರನಾಗಿದ್ದು. ಇವರು  ಕೋರೋನಾ ಕೋವಿಡ್- 19 ಈ ಭೀಕರ ವೈರಸ್ ಎಲ್ಲಾ ವರ್ಗದ ಜನರ ಮೇಲೆ ಪರಿಣಾಮ ಭೀರಿ ಜನಜೀವನವನ್ನೆ ಸತತ 6 ತಿಂಗಳಿಂದ ಅಸ್ತವ್ಯಸ್ತತೆ ಮಾಡಿದೆ.
ಕೋರೋನಾ ಸೋಂಕಿಗೆ ಉಡುಪಿ ಜಿಲ್ಲೆಯಲ್ಲಿ ಸುಮಾರು ನನಗೆ ತಿಳಿದಂತೆ 70+ ಸಾವನ್ನಪ್ಪಿದ್ದರೆ ಅದರಲ್ಲಿ 57 ಜನರ ಅಂತ್ಯಕ್ರಿಯೆ ಕ್ರಮಬದ್ಧವಾಗಿ ನಡೆಸಿ ಮನೆಯವರಿಗೆ ಬೂದಿ ಓಪ್ಪಿಸುವ ತನಕ ಕಾರ್ಯಮಾಡುತ್ತಿರುವ ಆತ್ಮಿಯಾ ಗೆಳೆಯ ನಾಗಾರ್ಜುನ್ ರವರ ಸಾಹಸ ಕಥೆ ಅಂದರೇ ತಪ್ಪಗಲಾರದು.
ಉಡುಪಿ ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರು ಸತತ ಮೂರು ತಿಂಗಳಿಂದ ಕೋರೋನಾ ಸೋಂಕಿತ ಮೃತದೇಹವನ್ನು ದಹನ ಮಾಡುವ ಕಾರ್ಯದಲ್ಲಿ ತನ್ನ ನಾಲ್ಕು ಜನ ಒಳಗೊಂಡ ತಂಡಕ್ಕೆ ಸಾರಥಿಯಂತೆ ಇದ್ದು ಅವರಿಗೂ ಧೈರ್ಯ ನೀಡುತ್ತ ಮಾನವೀಯತೆಯಿಂದ ನಿಸ್ವಾರ್ಥವಾಗಿ ಯಾವುದೇ ಅಪೇಕ್ಷೆ ಇಲ್ಲದೆ ಇಂತಹ ಕಾರ್ಯದಲ್ಲಿ ತೊಡಗಿರುವ ಗೆಳಯನಿಗೆ ಧನ್ಯವಾದಗಳು.
ಗಾಂಧಿ ಆಸ್ಪತ್ರೆ ಪಂಚಲಹರಿ ಫೌಂಡೇಷನ್ ಪಂಚಮಿ ಟ್ರಸ್ಟ್ ವತಿಯಿಂದ ಗೌರವ ಅರ್ಪಣೆ ಮಾಡುವ ಮೂಲಕ ನಾಗಾರ್ಜುನ ಕಾರ್ಯವನ್ನು ಶ್ಲಾಘಿಸಿದರು.
ಇಡೀ ವಿಶ್ವವನ್ನೇ ಆವರಿಸಿರುವ ಕೊರೊನಾ ಎಂಬ ಹೆಮ್ಮಾರಿಗೆ ತುತ್ತಾದವರು ಕೋಟ್ಯಾಂತರ ಜನ.. ಲಕ್ಷಾಂತರ ಮಂದಿ ಪ್ರಾಣ ಕಳೆದುಕೊಂಡರು.. ನಮ್ಮ ಉಡುಪಿ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ.. ಕೊರೋನಾ ಬಹಳ ಬೇಗನೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸೋಂಕು ಆಗಿರುವುದರಿಂದ ಸತ್ತವರ ಅಂತ್ಯಕ್ರಿಯೆ ಕೂಡಾ ಸರಕಾರವೇ ( ಸ್ವಯಂಸೇವಕರ ಸಹಾಯದಿಂದ) ನೆರವೇರಿಸುತ್ತದೆ.. ಉಡುಪಿ ಜಿಲ್ಲೆಯಲ್ಲಿ ಈ ಕಾಯಕದಲ್ಲಿ ನಿಸ್ವಾರ್ಥವಾಗಿ ತನ್ನನ್ನು ತೊಡಗಿಸಿಕೊಂಡವರು ಇದೇ ನಾಗಾರ್ಜುನ್ ಪೂಜಾರಿ..
ಕ್ರಿಕೆಟ್ ಲೋಕದ ಅತ್ಯದ್ಭುತ ಪ್ರತಿಭೆ ಕೂಡಾ ಹೌದು ನಾಗಾರ್ಜುನ್.
ತನ್ನ ಹದಿಮೂರನೆಯ ವಯಸ್ಸಿಗೇ ದೊಡ್ಡಣಗುಡ್ಡೆ ಫ್ರೆಂಡ್ಸ್ ತಂಡದ ಮೂಲಕವಾಗಿ ಟೆನಿಸ್ ಕ್ರಿಕೆಟ್ ಗೆ ಪರಿಚಯ ಕಂಡು ನಂತರ ಗುರುಶ್ರೀ ಗುಂಡಿಬೈಲು ಹಾಗೂ ವಿಷ್ಣುಮೂರ್ತಿ ದೊಡ್ಡಣಗುಡ್ಡೆ, ಸಾಟರ್ಡೇ ಪ್ಯಾಂಥರ್ಸ್ ಇಂದ್ರಾಳಿ ಹಾಗೂ  ಲೋಕಲ್ ಬಾಯ್ಸ್ ಉಡುಪಿ ತಂಡದ ಪರವಾಗಿ ಬಹಳಷ್ಟು ಪಂದ್ಯಾಟವನ್ನು ಗೆಲ್ಲಿಸಿಕೊಟ್ಟ ಕ್ರಿಕೆಟಿಗ..
ಜಿಲ್ಲೆ ಹಾಗೂ ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಆಲ್-ರೌಂಡರ್ ಆಟಗಾರನಾಗಿ ಗುರುತಿಸಿಕೊಂಡರು..  ಟೆನಿಸ್ ಕ್ರಿಕೆಟ್‌ನ ಜನಪ್ರಿಯ ತಂಡಗಳಾದ ಉಡುಪಿಯ ಎ.ಕೆ. ಸ್ಪೋರ್ಟ್ಸ್, ಉಡುಪಿ ಫ್ರೆಂಡ್ಸ್, ಬಿಬಿಸಿ ಅಗ್ರಹಾರ, ಸೈಮಂಡ್ಸ್ ಕಡಿಯಾಳಿ, ರಿಯಲ್ ಫೈಟರ್ಸ್ ನಂತಹ ತಂಡಗಳನ್ನು ಪ್ರತಿನಿಧಿಸಿ ಅಪಾರ ಯಶಸ್ಸನ್ನು ಕೂಡಾ ತನ್ನದಾಗಿಸಿಕೊಂಡಿದ್ದಾರೆ..
ಕರಾವಳಿಯ ಭಾಗದಲ್ಲಿ ಜನಪ್ರಿಯತೆಯನ್ನು ಪಡೆದಿರುವ  40 ಗಜಗಳ ಮಾದರಿಯ ಪಂದ್ಯಾಕೂಟಗಳಲ್ಲಿ ಆ ಪಂದ್ಯಾಕೂಟಗಳ ಶ್ರೇಷ್ಠ ತಂಡಗಳೆನಿಸಿಕೊಂಡ ಜಾನ್ಸನ್ ಕುಂದಾಪುರ, ಚಾಲೆಂಜ್ ಕುಂದಾಪುರ , ಈಗಲ್ಸ್ ಕುಂಭಾಶಿಯ ಪರವಾಗಿ ಉತ್ತಮ ನಿರ್ವಹಣೆ ನೀಡಿದ್ದಾರೆ..
2011 ರಿಂದ ಈಚೆಗೆ ತನ್ನನ್ನು ಸಂಪೂರ್ಣವಾಗಿ ಕ್ರಿಕೆಟ್‌ನಲ್ಲಿ ತೊಡಗಿಸಿಕೊಂಡು ಇಲ್ಲಿಯವರೆಗೆ ತನ್ನ ಸಾಧನೆಗಾಗಿ 350 +ಕ್ಕೂ ಮಿಗಿಲಾಗಿ ಪಂದ್ಯಶ್ರೇಷ್ಠ ಪ್ರಶಸ್ತಿ, 170 ಕ್ಕೂ ಹೆಚ್ಚು ಉತ್ತಮ ದಾಂಡಿಗ ಹಾಗೂ ಉತ್ತಮ ಬೌಲರ್ ಪ್ರಶಸ್ತಿ ಮತ್ತು 45 ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಇವರ ಮುಡಿಗೇರಿದೆ..
ಉಡುಪಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ತಂಡಕ್ಕೆ ಸತತ ಮೂರು ವರ್ಷಗಳ ಕಾಲ ಉಚಿತವಾಗಿ ಕ್ರಿಕೆಟ್ ತರಬೇತಿ ನೀಡಿ ಒಟ್ಟು ನಾಲ್ಕು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು..
ಕನಸಿನ ಟೂರ್ನಮೆಂಟ್:-
   ಬಹುತೇಕ ಎಲ್ಲಾ ಬಿಲ್ಲವ ಸಮಾಜ ಬಾಂಧವರು ತಮ್ಮ ಕ್ರೀಡಾಪ್ರತಿಭೆಯ ಪ್ರದರ್ಶನಕ್ಕಾಗಿ ಕಾಯುತ್ತಿದ್ದರು.. ಮೂಲ್ಕಿ ವಿಜಯ ಕಾಲೇಜಿನ ಮೈದಾನದಲ್ಲಿ ಸಾಗಿದ ಅಂತರಾಜ್ಯ ಮಟ್ಟದ ಬಿಲ್ಲವ ಸಮಾಜ ಬಾಂಧವರ ಎರಡು ಲಕ್ಷ ರೂಪಾಯಿಗಳ ಬಹುಮಾನ ಮೊತ್ತದ ಪ್ರತಿಷ್ಠಿತ ಪಂದ್ಯಾಕೂಟ..
ಆ ಪಂದ್ಯಾವಳಿಯಲ್ಲಿ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ , ಉತ್ತಮ ಬೌಲರ್ ಹಾಗೂ ಸರಣಿಶ್ರೇಷ್ಠ ಪ್ರಶಸ್ತಿಗಳೆಲ್ಲವೂ ನಾಗಾರ್ಜುನ್ ಪಾಲಾಗಿದ್ದವು ಎನ್ನುವುದು ಅವರ ಸಮಾರೋಪಾದಿ ಯಶಸ್ಸಿನ ನಾಗಾಲೋಟಕ್ಕೆ ಸಾಕ್ಷಿ..
ಒಟ್ಟಾರೆಯಾಗಿ ಉಡುಪಿ ಜಿಲ್ಲೆಯಲ್ಲಿ ತನ್ನ ಉತ್ತಮ ರೀತಿಯ ದಾಂಡಿಗತನ ಹಾಗೂ ನಿಖರವಾಗಿ ಚೆಂಡನ್ನು ತಿರುಗಿಸಬಲ್ಲ ಚಾಣಾಕ್ಷ ಎಸೆತಗಾರನಾಗಿ ತನ್ನನ್ನು ಗುರುತಿಸಿಕೊಂಡು ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿಕೊಂಡಿದ್ದಾರೆ..
Categories
#covid19

ಯು ಆರ್ ಸ್ಪೋರ್ಟ್ಸ್ ವತಿಯಿಂದ ಕೊರೋನ ವಾರಿಯರ್ಸ್ ತಂಡದವರಿಗೆ ಸನ್ಮಾನ

ಯು ಆರ್ ಸ್ಪೋರ್ಟ್ಸ್ ಮಣಿಪಾಲ ಇವರ ವತಿಯಿಂದ ಕೊರೋನ ವಿರುದ್ಧ ಹೋರಾಟ ನಡೆಸುತ್ತಿರುವ ಕೊರೋನ ವಾರಿಯರ್ಸ್ ಇವರಿಗೆ ಅಭಿನಂದನಾ ಸಮಾರಂಭವು ಮಣಿಪಾಲದ ಯು. ಆರ್. ಸ್ಪೋರ್ಟ್ಸ್ ನಲ್ಲಿ ದಿನಾಂಕ 7 – 8-2020 ರಂದು ನಡೆಯಿತು.
ಮಣಿಪಾಲ ಆರಕ್ಷಕ ಠಾಣಾಧಿಕಾರಿಯಾಗಿರುವ ಶ್ರೀ ಮಂಜುನಾಥ ಗೌಡ, ಫೋಟೋ ಪ್ಯಾಲೇಸ್ ನ ಶ್ರೀ ರವಿರಾಜ್ ಕಿದಿಯೂರು, ಪಡುಬಿದ್ರಿ ಫ್ರೆಂಡ್ಸು ಕ್ರಿಕೆಟರ್ಸ್ ನ ಶ್ರೀ ಶರತ್ ಶೆಟ್ಟಿ, ಪಡುಬಿದ್ರಿ  ಐಟೋನ್ ಆಪ್ಟಿಕಲ್ಸ್ ನ ಶ್ರೀ ಚಂದನ್ ರವರು ಹಾಗೂ ಸಂಸ್ಥೆಯ ಶ್ರೀ ದೇವರಾಜ್ ಸುವರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನರ್ಸಿಂಗ್ ಕ್ಷೇತ್ರದಲ್ಲಿ ಕೋವಿದ್ ರೋಗಿಗಳನ್ನು ಚಿಕಿತ್ಸೆ ಮಾಡಿದ ಗೌತಮ್ ಕುಮಾರ್ ಪರ್ಕಳ ಹಾಗೂ ಪೋಲಿಸ್ ಸಿಬ್ಬಂದಿಯಾಗಿರುವ ಪ್ರಶಾಂತ್ ಕೋಟ ಇವರುಗಳನ್ನು ಅತಿಥಿಗಳು ಸನ್ಮಾನಿಸಿದರು. ಹಾಗೂ ಯು ಆರ್ ಸ್ಪೋರ್ಟ್ಸ್ ಸಂಸ್ಥೆಯನ್ನು ಸ್ಥಾಪಿಸಿದ ಶ್ರೀ ರವಿರಾಜ್ ಕಿದಿಯೂರು ಇವರಿಗೆ ಗೌರವಾರ್ಪಣೆ ನೀಡಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಠಾಣಾಧಿಕಾರಿಯವರು ಕೋವಿದ್ ಬಗ್ಗೆ ಶ್ರಮಿಸಿದವರಿಗೆ ಅಭಿನಂದಿಸಿದರೆ ಅವರ ಜವಾಬ್ದಾರಿ ಹೆಚ್ಚಾಗಿ ಇನ್ನುಳಿದವರಿಗೂ ಸ್ಪೂರ್ತಿಯಾಗುವುದು ಎಂದು ತಿಳಿಸಿದರು ಅಲ್ಲದೆ ಸಂಸ್ಥೆಯ ಈ ಅಭಿನಂದನಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉಳಿದ ಗಣ್ಯರು ಕಾರ್ಯಕ್ರಮದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದರು. ಸಂಸ್ಥೆಯ ವತಿಯಿಂದ ನಡೆಸಲ್ಪಟ್ಟ ಸ್ಪೋರ್ಟ್ಸ್ ಫೋಟೋ ಸ್ಪರ್ಧೆಯಲ್ಲಿ ವಿಜೇತರಾದ ವಸಂತ ಮುನಿಯಾಲು (1), ಯತೀಶ್ ಅಲೆವೂರು (2), ಕಿರಣ್ ಕಾರ್ಕಳ (3), ಸಚಿನ್ ಕೋಟೇಶ್ವರ (4) ಇವರಿಗೆ ಟ್ರೋಫಿ ಗಳನ್ನು ವಿತರಿಸಲಾಯಿತು. ಸಂಗೀತದಲ್ಲಿ ಅತೀ ಕಿರಿಯ ವಯಸ್ಸಿನಲ್ಲೇ ಮಹತ್ತರ ಸಾಧನೆ ಮಾಡಿದ ಮಾ. ಲಿಖಿತ್ ಕರ್ಕೇರ ಇವರನ್ನು ಅಭಿನಂದಿಸಲಾಯಿತು. ವಿನಯ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
Categories
#covid19

ಡೆಲ್ಲಿ ಪಬ್ಲಿಕ್ ಸ್ಕೂಲ್ (ಎಂ.ಆರ್.ಪಿ.ಎಲ್) ವತಿಯಿಂದ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಆರ್ಥಿಕ ಸಹಾಯ

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಕಂಗಾಲಾದ ಜನ ಸಮುದಾಯಕ್ಕೆ ಪರಿಹಾರ ನೀಡಲು ಸಹಾಯ ಆಗಬೇಕು ಅನ್ನುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಮಂಗಳೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್(ಎಂ.ಆರ್.ಪಿ.ಎಲ್) ನ ಶಿಕ್ಷಕರು ಮತ್ತು ನಿರ್ವಹಣಾ ಅಧಿಕಾರಿಗಳು ಸೇರಿ  ಸಂಗ್ರಹಿಸಿದ ಸುಮಾರು ಒಂದು ಲಕ್ಷದ ತೊಂಬತ್ತನಾಲ್ಕು ಸಾವಿರದ ಐನೂರು ರೂಪಾಯಿ (1,94,500) ಯನ್ನು ಶಾಲೆಯ ನೂತನ ಪ್ರಿನ್ಸಿಪಾಲ್ ಶ್ರೀ ಗೌತಮ್ ಶೆಟ್ಟಿ ಇವರು ಮಂಗಳೂರು ಜಿಲ್ಲಾ ಆಯುಕ್ತರಾದ ಜಿ. ಸಿಂಧು ರೂಪೇಶ್ ಇವರಿಗೆ ಹಸ್ತಾಂತರ ಮಾಡಿದರು.

Categories
#covid19

ರಿಯಾಯಿತಿ ದರದಲ್ಲಿ ಅತ್ಯಾಕರ್ಷಕ ಡಿಡೋಸ್ ಬ್ರಾಂಡ್ ನ ಮಾಸ್ಕ್ ಮಾರುಕಟ್ಟೆಯಲ್ಲಿ ಲಭ್ಯ.

ರಿಯಾಯಿತಿ ದರದಲ್ಲಿ ಅತ್ಯಾಕರ್ಷಕ ಡಿಡೋಸ್ ಬ್ರಾಂಡ್ ನ ಮಾಸ್ಕ್ ಮಾರುಕಟ್ಟೆಯಲ್ಲಿ ಲಭ್ಯ.
ಕ್ಷೇತ್ರದಲ್ಲಿ ಗೆಲುವು ಸಾಧಿಸುವವರೆಗೆ ಹೋರಾಟ, ಏಕೆಂದರೆ ಡಿಡೋಸ್ ಇಲ್ಲದೆ ಆಟವಿಲ್ಲ.
ಕ್ರೀಡಾ ಕ್ಷೇತ್ರದ ಪರಿಕರಗಳಾದ ಟೀ ಶರ್ಟ್, ಕ್ಯಾಪ್, ಬ್ಯಾಕ್ ಪ್ಯಾಕ್, ಶಾಲಾ ಸಮವಸ್ತ್ರಗಳು, ಕ್ರೀಡಾ ಉಡುಪುಗಳು, ಹೀಗೆ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ವಸ್ತುಗಳನ್ನು ಅನೇಕ ಶಿಕ್ಷಣ ಸಂಸ್ಥೆ ಹಾಗೂ ಇತರ ಕಡೆಗಳಿಗೆ ಒದಗಿಸುತ್ತಾ ಉತ್ತಮ ಗುಣಮಟ್ಟದ ಕ್ರೀಡಾ  ವಸ್ತುಗಳನ್ನು ಪರಿಚಯಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಭಾರತೀಯ ಬ್ರಾಂಡ್ ಹೊಂದಿರುವ ಒಂದು ಉದಯೋನ್ಮುಖ ಸಂಸ್ಥೆ ಅದು ಡಿಡೋಸ್ ಅಂದರೆ ತಪ್ಪಾಗಲಾರದು.
ಅತ್ಯಲ್ಪ ಅವಧಿಯಲ್ಲಿ ಡಿಡೋಸ್ ಬೆಳಕಿಗೆ ಬಂದ ಈ ಸಂಸ್ಥೆ 2010 ರಲ್ಲಿ ನಡೆದ ಟಿ 20 ಕ್ರಿಕೆಟ್ ಪಂದ್ಯದಲ್ಲಿ ಕೆ ಪಿ ಎಲ್ ನ ಎರಡು ಫ್ರಾಂಚೈಸಿಗಳಿಗೆ ಸಹಿ ಹಾಕಿರುವುದಲ್ಲದೆ ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಕ್ರೀಡಾ ಪಂದ್ಯಗಳಿಂದ, ಕ್ರೀಡಾ ವಾಹಿನಿಗಳಿಂದ, ಕ್ರೀಡಾ ಅಕಾಡೆಮಿಗಳಿಂಧ ಒಂದು ಅತ್ಯುತ್ತಮ ಸಂಸ್ಥೆ ಎಂದು ಗುರುತಿಸಿಕೊಂಡಿರುವುದಲ್ಲದೆ ಅನೇಕ ಕಾರ್ಪೊರೇಟ್ ಹೌಸ್, ಶಾಲೆಗಳು, ರಾಜ್ಯ ಮಟ್ಟದ ಅಸೋಸಿಯೇಷನ್ ಗಳು, ಶಿಕ್ಷಣ ಸಂಸ್ಥೆಗಳು, ಕ್ಲಬ್ ಗಳಿಗೆ ಗುಣಮಟ್ಟದ ಉಡುಪುಗಳನ್ನು ನೀಡುವ ಮೂಲಕ ಶಾಶ್ವತ ಮಾರಾಟಗಾರರಾಗಿ ಹೊರ ಹೊಮ್ಮಿದ್ದಾರೆ.
ಕ್ರೀಡೆಗೆ ಬಳಸುವ ಉಡುಪುಗಳಿಗೆ ವಿಶೇಷ ಗಮನ ಹರಿಸಿ ಅದಕ್ಕೆ ತಕ್ಕಂತೆ ಬೇಕಾದ ಎಲ್ಲ ರೀತಿಯ ಬಟ್ಟೆಗಳನ್ನು ಭಾರತ ಮತ್ತು ಹೊರ ದೇಶಗಳ ಪರಿಣತ ಕಂಪೆನಿ ಯಿಂದ ತರಿಸಿ ಶೇಷ ರೀತಿಯಲ್ಲಿ ಬೆವರು ಹೀರಿಕೊಂಡು, ಜಿಗುಟು ರಹಿತವಾಗಿ ಆರಾಮವಾಗಿ ಹಾಕಿ ಕೊಳ್ಳುವ ರೀತಿಯಲ್ಲಿ ತಯಾರಿಸಲಾಗುತ್ತದೆ.
ಡಿಡೋಸ್ ಕಂಪೆನಿಯಿಂದ ತಯಾರಾದ ವಸ್ತುಗಳಿಗೆ ಮಾನ್ಯತೆ ಸಿಗುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ದಕ್ಷಿಣ ಭಾರತದಲ್ಲಿ ಪ್ರತಿನಿಧಿಯಾಗಿ ಕೆಲಸ ಮಾಡಲು ನಿರ್ಧರಿಸಲಾಗಿದ್ದು ಇನ್ನು 2-3 ವರ್ಷಗಳಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವ ನಿಲುವನ್ನು ಹೊಂದಿದೆ.
2010 ರಲ್ಲಿ ಬೆಂಗಳೂರಿನ ಕರ್ನಾಟಕ ಕ್ರಿಕೆಟ್ ಅಂಪೈರ್ ಅಸೋಸಿಯೇಶನ್ ನ ಎಲ್ಲ 250 ಅಂಪೈರ್ ಗಳು ಡಿಡೋಸ್ ಬ್ರಾಂಡ್ ನ ಟೀ ಶರ್ಟ್ ಹಾಕುವ ಮೂಲಕ ಗಮನ ಸೆಳೆದದ್ದು ಡಿಡೋಸ್ ಕಂಪೆನಿ ಯ ಮುಕುಟಕ್ಕೆ ಇನ್ನೊಂದು ಗರಿ ಸಿಕ್ಕಿದ ಹಾಗಾಗಿದೆ.
ಡಿಡೋಸ್  ಇನ್ನೊಂದು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಅದು ಡಿಡೋ ಸ್ಪೋರ್ಟ್ಸ್ ಮತ್ತು ಕಾರ್ಯಕ್ರಮ ನಿರ್ವಹಣೆಯ ಜವಾಬ್ದಾರಿ ನಡೆಸುತ್ತಿದೆ. ಕ್ರಿಕೆಟ್ ಕ್ಷೇತ್ರಕ್ಕೆ ಅನೇಕ ರಾಯಭಾರಿಗಳನ್ನು ನೀಡಿರುವ ಈ ಸಂಸ್ಥೆ ತನ್ನದೇ ಆದ “ಮಣಿಪಾಲ ಹರಿಕೇನ್ಸ್” ಅನ್ನುವ ತಂಡವನ್ನು ಹೊಂದಿದ್ದು 2010 ರಲ್ಲಿ ಹದಿನಾರು ವರ್ಷದ ಕೆಳಗಿನ ಮಕ್ಕಳಿಗೆ ನಡೆದ ಪಂದ್ಯದಲ್ಲಿ ಈ ತಂಡ ಭಾರತ, ಅಬುದಾಬಿ, ಬಹ್ರೇನ್, ದುಬೈ ತಂಡವನ್ನು ಮಣಿಸಿ ಗೆಲುವಿನ ಪತಾಕೆ ಹಾರಿಸಿದ್ದು ಸ್ಮರಣೀಯ. ಈ ತಂಡ ಮೊದಲ ಆವೃತ್ತಿಯ ಎಮ್‌.ಪಿ.ಎಲ್ ನಲ್ಲೂ ಭಾಗವಹಿಸಿ ಶ್ರೇಷ್ಠ ಪ್ರದರ್ಶನ ನೀಡಿದೆ.
ಅನೇಕ ಉತ್ತಮ ಗುಣಮಟ್ಟದ ಹವಾಮಾನಗಳಿಗೆ ಸರಿಯಾಗಿ ಹೊಂದುವ ದಿರಿಸುಗಳನ್ನು ಜೊತೆಗೆ ಇನ್ನೂ ಉತ್ತಮ ಗುಣಮಟ್ಟದ ಕ್ರೀಡಾ ಪರಿಕರಗಳನ್ನು ಹೊಸತನದೊಂದಿಗೆ ಗ್ರಾಹಕರಿಗೆ ತಲುಪಿಸುವ ಯೋಜನೆ ಈ ಸಂಸ್ಥೆಗೆ ಇದೆ.
ಇದೀಗ ಕೊರೊನದಿಂದ ಇಡೀ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸುವ ಮೂಲಕ ಕೊರೊನ ವೈರಸ್ ನಿಂದ ಸುರಕ್ಷಿತವಾಗಿದ್ದು, ಇದನ್ನು ಆದಷ್ಟು ಬೇಗ ದೂರ ಮಾಡಬಹುದು.
ಈ ಸಂದರ್ಭದಲ್ಲಿ “ಡಿಡೋಸ್” ಇವರು ವಿಶೇಷ ಪರಿಕಲ್ಪನೆಯೊಂದಿಗೆ ಹೊಸ ರೀತಿಯ, ಮತ್ತೆ ಮತ್ತೆ ಬಳಸುವ ರೀತಿಯ, ದೀರ್ಘ ಕಾಲ ಬಾಳಿಕೆ ಬರುವ ಮಾಸ್ಕ್ ನ್ನು ಐದು ಬಣ್ಣಗಳಲ್ಲಿ ಹೊರ ತಂದಿದ್ದಾರೆ.
ಹೊರಗೆ ಹೋಗುವ ಸಂದರ್ಭದಲ್ಲಿ, ಇನ್ನೊಬ್ಬರ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಇಂತಹ ಮಾಸ್ಕ್ ಧರಿಸಿದರೆ ಖಂಡಿತವಾಗಿಯೂ ನಾವು ಈ ವೈರಸ್ ಹರಡುವಿಕೆಯನ್ನು ತಡೆ ಹಿಡಿಯಲು ಸಾಧ್ಯ.
ನಾವು ಕ್ಷೇಮವಾಗಿರಬೇಕಾದರೆ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸುವುದು ಅನಿವಾರ್ಯ.
ಡಿಡೋಸ್ ಮಾಸ್ಕ್ ಬಳಸಿ ನಿಮ್ಮನ್ನು ಹಾಗೂ ಇತರರನ್ನು ಕೊರೋನ ವೈರಸ್ ನಿಂದ ರಕ್ಷಿಸಿ.
ಡಿಡೋಸ್ ಮಾಸ್ಕ್ ಗಳಿಗಾಗಿ ಸಂಪರ್ಕಿಸಿ.
ಸ್ಪೋರ್ಟ್ಸ್ ಕನ್ನಡ ಪ್ರಧಾನ ಕಚೇರಿ ಉಡುಪಿ ಹಾಗೂ ಕೋಟ ಚಿತ್ರಪಾಡಿ
ಸಂಪರ್ಕಿಸಿ – ಮೊಬೈಲ್ ನಂ-6363022576
ಡಿಡೋಸ್ ಒಂದು ಅತ್ಯುನ್ನತ ಬ್ರಾಂಡ್.ಈ ಹೆಸರು ಪ್ರಪಂಚದ ಮೂಲೆ ಮೂಲೆಯಲ್ಲಿ ಮೂಡಿಬರಲಿ ಇದು ಸ್ಪೋರ್ಟ್ಸ್ ಕನ್ನಡ ಜಾಲತಾಣದ ವತಿಯಿಂದ ಹಾರೈಕೆ.
Categories
#covid19

ಮಾರುತಿ ಯುವಕ ಮಂಡಲ ವತಿಯಿಂದ ಕೊರೋನಾ ಲಾಕ್ಡೌನ್ ಸಂತ್ರಸ್ತರಿಗೆ ನೆರವು

ಮೊಟ್ಟ ಮೊದಲ ಮಹಿಳಾಮಣಿ ವೀರರಾಣಿ ಅಬ್ಬಕ್ಕಳ ಕರ್ಮಭೂಮಿ ಸುಂದರ ನೆಲ ಉಳ್ಳಾಲ ಇಲ್ಲಿನ ಮಾರುತಿ ಯುವಕ ಮಂಡಲ(ರಿ) ಇದೀಗ ಕೊರೋನ ವೈರಸ್ ನ ಲಾಕ್ ಡೌನ್ ನ ಈ ಸಂದರ್ಭದಲ್ಲಿ ಕೆಲಸ ಇಲ್ಲದೆ ಪರದಾಡುವ ಕಾರ್ಮಿಕ ವರ್ಗ, ಕೂಲಿಯನ್ನೇ ಅವಲಂಬಿಸಿದ್ದ ಕೂಲಿ ಕಾರ್ಮಿಕರು, ಕುಶಲಕರ್ಮಿಗಳು, ಉದ್ಯೋಗರಹಿತರು, ಅಶಕ್ತರಿಗೆ ತಮ್ಮ ತಂಡದ ವತಿಯಿಂದ ಸೇವೆ ಸಲ್ಲಿಸುತ್ತಿರುವ ಇವರು ಈ ವರೆಗೆ ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿಗಳನ್ನು ಉಳ್ಳಾಲ ವಲಯದ ಎಲ್ಲಾ ಧರ್ಮದ ಸುಮಾರು 800 ಕುಟುಂಬಗಳಿಗೆ ಮಾರುತಿ ಮಹಿಳಾ ಮಂಡಳಿಯ ಸಹಯೋಗದೊಂದಿಗೆ ನೀಡಿ ಸಹಕರಿಸಿದ್ದಾರೆ.
1985 ರಲ್ಲಿ ಶ್ರೀ ವೀರ ಮಾರುತಿ ಗೇಮ್ಸ್ ಟೀಮ್ ಎಂಬ ಹೆಸರಿನಿಂದ ಆರಂಭಗೊಂಡ ಈ ತಂಡ ಕಾಲಕ್ರಮೇಣ ತನ್ನ ಕಾರ್ಯ ಕ್ಷೇತ್ರವನ್ನು ವಿಸ್ತರಿಸುವ ಯೋಜನೆಯಡಿ ಮಾರುತಿ ಯುವಕ ಮಂಡಲ (ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ) ಎಂಬ ಹೆಸರಿನಿಂದ ಮುಂದುವರಿದಿದೆ.
ಕ್ರೀಡೆ, ಸಮಾಜ ಸೇವೆ, ಕಲೆ ಸಾಹಿತ್ಯ ಶಿಕ್ಷಣ ಆರೋಗ್ಯ ಕ್ಷೇತ್ರ ಹೀಗೆ ಹತ್ತು ಹಲವು ಯೋಜನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಾ ಇದೆ.
ಸರಕಾರದ ಮನ್ನಣೆ ಸಹಕಾರ ಲಭಿಸಬೇಕಾದರೆ ಯುವಕ ಮಂಡಲ ಎಂಬ ಹೆಸರು ಅನಿವಾರ್ಯ ಎಂದು ಮನಗಂಡು “ಮಾರುತಿ ಯುವಕ ಮಂಡಲ” ಎಂದು ಹೆಸರು ಪಡೆದಿದೆ.
ಧಾರ್ಮಿಕ ಸೇವೆ, ಸಾಂಸ್ಕೃತಿಕ ಕ್ರೀಡೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣನೀಯರಿಗೆ ಸನ್ಮಾನ.
ಮಾನಸಿಕ ಅಸ್ವಸ್ಥರಿಗೆ, ಅನಾರೋಗ್ಯ ಪೀಡಿತರಿಗೆ, ವಿಕಲಚೇತನರಿಗೆ, ಆಸ್ಪತ್ರೆಯಲ್ಲಿ ದಾಖಲಾಗಿರುವ ಬಡರೋಗಿಗಳ ವೈದ್ಯಕೀಯ ವೆಚ್ಚವನ್ನು ಭರಿಸುವ ಮೂಲಕ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ.
ಕಡಲ್ಕೊರೆತದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಮನೆ ನಿರ್ಮಾಣ
ಬಡ ಹೆಣ್ಣು ಮಕ್ಕಳ ಮದುವೆ
ಪ್ರಕೃತಿ ವಿಕೋಪದಿಂದ ಬಳಲಿದವರಿಗೆ ಸಹಾಯ
ಉಚಿತ ಟ್ಯೂಷನ್, ಕಂಪ್ಯೂಟರ್,   ಆರೋಗ್ಯ ಶಿಬಿರ
ಉಳ್ಳಾಲ ಆಸುಪಾಸಿನ ವಿವಿಧ ಶಾಲೆಗಳಿಗೆ ನೆರವು
ರಕ್ತದಾನ ಶಿಬಿರ ಇಂತಹ ಹಲವು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ.
ಅಷ್ಟೇ ಅಲ್ಲದೆ ಇದು ಕ್ರಿಕೆಟ್ ನ ಬಲಿಷ್ಠ ತಂಡ ಹೊಂದಿದ್ದು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಅನೇಕ ಕ್ರೀಡಾಪಟುಗಳನ್ನು ಕೊಟ್ಟ ಹಿರಿಮೆ.
ಸಂಸ್ಥೆಯ ಅನೇಕ ಸದಸ್ಯರು ಫುಟ್ಬಾಲ್ ಆಟಗಾರಾಗಿದ್ದು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಆಡಿದ ಕೀರ್ತಿ ಇವರಿಗೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವತಿಯಿಂದ ನಡೆಸಲಾದ ಹಾರ್ಡ್ ಬಾಲ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ ಹಿರಿಮೆ ಈ ತಂಡಕ್ಕೆ. ತಂಡವನ್ನು ಮುನ್ನಡೆಸುವ ಹೆಮ್ಮೆಯ ರೂವಾರಿಗಳಾಗಿ ಸುಧೀರ್ ಉಳ್ಳಾಲ, ಅಶ್ವಥ್, ದಿನೇಶ್ ಕರ್ಕೇರ, ವರದರಾಜ್, ಚರಣ್, ಕಿರಣ್, ವಾಸುದೇವ್, ಪ್ರಕಾಶ್, ಅಮರನಾಥ್, ಹರೀಶ್, ಸಂದೀಪ್,  ಇವರುಗಳು.
ಇಷ್ಟೆಲ್ಲಾ ಸಾಧನೆ ಮಾಡಿದ ಇದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ತಂಡ ಅನ್ನುವ ಹಿರಿಮೆ ಕೂಡ ಇದೆ.
ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡುವ ಉದ್ದೇಶ ಹೊಂದಿರುವ ಈ ತಂಡದ ಕೆಲವು ಯೋಜನೆಗಳು :
ಕ್ಯಾನ್ಸರ್, ಹೃದ್ರೋಗ ಸಂಬಂಧಿ ಕಾಯಿಲೆಯವರಿಗೆ ಸಹಕಾರ
ನೇತ್ರದಾನವನ್ನು ಹೆಚ್ಚು ಪ್ರಚಾರ ಮಾಡುವುದು
ಚಾರಿಟೇಬಲ್ ಟ್ರಸ್ಟ್ ಮಾಡಿ ಸೇವಾ ಕಾರ್ಯಗಳನ್ನು ಕ್ರಮಬದ್ಧವಾಗಿ ಮಾಡುವುದು
ಸಹಕಾರಿ ಸಂಘ ಸ್ಥಾಪಿಸಿ ಯುವ ಮನಸ್ಸುಗಳನ್ನು ಒಗ್ಗೂಡಿಸಿ ಬಲಿಷ್ಠ ತಂಡ ಮಾಡುವುದು.
ಇಷ್ಟೆಲ್ಲಾ ಸಾಧನೆ ಮಾಡಿದ ಈ ಯುವಕ ಮಂಡಲ ಎಲ್ಲಾ ರೀತಿಯ ಸಹಕಾರದಿಂದ ಇನ್ನಷ್ಟು ಸಮಾಜಮುಖಿ ಚಿಂತನೆಗಳೊಂದಿಗೆ ಕೆಲಸ ಮಾಡಿ ಇನ್ನೂ ಹೆಚ್ಚಿನ ಹೆಸರು ಪಡೆಯಲಿ ಇದು ನಮ್ಮ ಹಾರೈಕೆ.
ಕೋಟ ರಾಮಕೃಷ್ಣ ಆಚಾರ್ಯ