ಕುಂದಾಪುರ:ಇಲ್ಲಿನ ಕೊರವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಬಡ್ಡಿ ತಂಡಕ್ಕೆ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ 12 ಜೊತೆ ಶೂ ವಿತರಿಸಿದರು.



ಕುಂದಾಪುರ:ಇಲ್ಲಿನ ಕೊರವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಬಡ್ಡಿ ತಂಡಕ್ಕೆ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್ ಉಪಾಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ 12 ಜೊತೆ ಶೂ ವಿತರಿಸಿದರು.
ಮಂಗಳೂರು:ಉತ್ತಮ ಕಲಿಕೆಗೆ ವಿದ್ಯಾರ್ಥಿಗಳು ಆರೋಗ್ಯವಂತರಾಗಿರಬೇಕು. ವಿದ್ಯಾರ್ಥಿಗಳು ಓದಿಗಷ್ಟೇ ಸೀಮಿತವಾದರೆ ಮಾನಸಿಕ ಒತ್ತಡ ಹೆಚ್ಚುತ್ತದೆ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಒತ್ತಡ ನಿವಾರಣೆಯಾಗಿ ಸ್ಪರ್ಧಾ ಮನೋಭಾವ ಮೂಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಯಬೇಕು ಎಂದು ದೈಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಾಲ್ಟರ್ ನಂದಳಿಕೆ ಅಭಿಪ್ರಾಯಪಟ್ಟರು.
ಮಂಗಳೂರು-ಮಣೇಲ್ ಶ್ರೀನಿವಾಸ್ ನಾಯಕ್ ಸ್ಮಾರಕ ಅಂತರ್ ಕಾಲೇಜು ಪದವಿ ಮಟ್ಟದ ಪುರುಷ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾವಳಿ ಇದೇ ಜನವರಿ 19 ಹಾಗೂ 20 ರಂದು ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೊಂದೇಲ್, ಮಂಗಳೂರಿನಲ್ಲಿ ಆಯೋಜಿಸಲಾಗಿದೆ.
ಪ್ರವೇಶ ಶುಲ್ಕವಿಲ್ಲದೆ ನಡೆಯುವ ಈ ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ಚತುರ್ಥ ಸ್ಥಾನ ಪಡೆಯುವ ತಂಡಗಳಿಗೆ ಎಂ.ಎಸ್.ಎನ್.ಐ ಎಮ್ ಟ್ರೋಫಿ ಹಾಗೂ ನಗದು ಬಹುಮಾನವೂ ದೊರೆಯಲಿದೆ.ಕ್ವಾರ್ಟರ್ ಫೈನಲ್ ಅರ್ಹತಾ ತಂಡಕ್ಕೆ ನಗದು ಬಹುಮಾನವನ್ನು ನೀಡಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿ ಸಂಯೋಜಕರಾದ ವಿಕ್ರಾಂತ್ -9035945366 , ಪ್ರೀತಿಶ್ ಪೈ – 9008738758 ಇವರನ್ನು ಸಂಪರ್ಕಿಸಬಹುದಾಗಿದೆ.
ಉಡುಪಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ). ಉಡುಪಿ, ವತಿಯಿಂದ ಜರುಗಿದ ಜೂನಿಯರ್ 70 ಕೆಜಿ ತೂಕದ ಬಾಲಕರ ಕಬಡ್ಡಿ ತಂಡದ ಆಯ್ಕೆ ಯಲ್ಲಿ ಭಾಗವಹಿಸಿದ ಶಿರ್ವ ಮುಲ್ಕಿ ಸುಂದರ ರಾಮ್ ಶೆಟ್ಟಿ ಕಾಲೇಜಿನ ಪ್ರಜ್ವಲ್ ಕುಮಾರ್ ಶೆಟ್ಟಿ ಉಡುಪಿ ತಂಡಕ್ಕೆ ಆಯ್ಕೆ ಆಗಿರುತ್ತಾರೆ.
ಅಕಾಲಿಕವಾಗಿ ಅಗಲಿದ ಚೇತನಗಳಾದ ಭರತ್ ಮತ್ತು ಯತೀಶ್ ಸ್ಮರಣಾರ್ಥ.
“ಸಂಗಮ್ ಫ್ರೆಂಡ್ಸ್ ಸಂಗಮ್” ವತಿಯಿಂದ ಸ್ಪಂದನ ಸೇವಾ ಸಮಿತಿ ಕೋಟ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಉಡುಪಿ ಜಿಲ್ಲೆ ಮತ್ತು ಬ್ರಹ್ಮಾವರ ತಾಲೂಕು ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ದಿ. ಭರತ್ ಮತ್ತು ದಿ. ಯತೀಶ್ ಸ್ಮರಣಾರ್ಥ ಹೊನಲು ಬೆಳಕಿನ 70 ಕೆ. ಜಿ. ವಿಭಾಗದ ಮ್ಯಾಟ್ ಮಾದರಿಯ ಮುಕ್ತ “ಪ್ರೊ ಕಬಡ್ಡಿ ಪಂದ್ಯಾಟ 2020 ” ಇದೇ ಮಾರ್ಚ್ ತಿಂಗಳ 28 ರಂದು ಶಾಂಭವಿ ಶಾಲೆ ಮೈದಾನ ಕೋಟ ಇಲ್ಲಿ ಸಾಯಂಕಾಲ 6 ಗಂಟೆಯಿಂದ ನಡೆಯಲಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳು ಸಂಜೆ 6 ಗಂಟೆಯ ಒಳಗೆ ಕಡ್ಡಾಯವಾಗಿ ಹಾಜರಾಗುವಂತೆ ಕೋರಲಾಗಿದೆ. ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ನಿಯಮಗಳನ್ನು ಆಟಗಾರರು ಪಾಲಿಸಬೇಕು. ಯಾವುದೇ ಚರ್ಚೆಗೆ ಅವಕಾಶ ಇಲ್ಲದೆ ತೀರ್ಪುಗಾರರ ತೀರ್ಪು ಅಂತಿಮವಾಗಿದೆ ಎಂದು ತಿಳಿಸಲಾಗಿದೆ . ಅಶಿಸ್ತು ತೋರಿದ ತಂಡವನ್ನು ಪಂದ್ಯದಿಂದ ಕೈ ಬಿಡಲಾಗುವುದು ಎಂದು ತಿಳಿಸಿದ್ದಾರೆ.
ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ. 33333
ದ್ವಿತೀಯ ಬಹುಮಾನ ರೂ. 22222
ತೃತೀಯ ಬಹುಮಾನ ರೂ 8888 ಮತ್ತು
ಚತುರ್ಥ ಬಹುಮಾನ ರೂ 8888, ಅಲ್ಲದೆ ಅತ್ಯುತ್ತಮ ದಾಳಿಗಾರ, ಅತ್ಯುತ್ತಮ ಹಿಡಿತಗಾರ, ಮತ್ತು ಅತ್ಯುತ್ತಮ ಸವ್ಯಸಾಚಿ ವಿಶೇಷ ಬಹುಮಾನ ಇದೆ.
“ಬದುಕು ಕತ್ತಲೆಗೆ ಮಿಣುಗು ದೀಪ ಆಗೋಣ ”
ಅನ್ನುವ ಆಶಯದೊಂದಿಗೆ ನಿಮ್ಮ ನೆರವನ್ನು ನೀಡಿ ಸಹಕರಿಸಬೇಕು ಎಂದು ಕೋರಿ ಕೊಳ್ಳುವ,
ಸ್ಪಂದನ ಸೇವಾ ಸಮಿತಿ
ಕರ್ನಾಟಕ ಬ್ಯಾಂಕ್ ಲಿಮಿಟೆಡ್
Ac no :412250010446601
IFSC :KAR0000412
ಕೆ ರಾಮಕೃಷ್ಣ ಆಚಾರ್ಯ
ಸ್ಪೋರ್ಟ್ಸ್ ಕನ್ನಡ ಜಾಲತಾಣ, ಉಡುಪಿ
ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಪೂರ್ಣಪ್ರಜ್ಞ ಕಾಲೇಜ್ ಹಾಗೂ ಸ್ನಾತಕೋತ್ತರ ಪದವಿ ಕೇಂದ್ರ ಉಡುಪಿಯ ವಜ್ರಮಹೋತ್ಸವದ ಪ್ರಯುಕ್ತ ಉಡುಪಿಯ ಪಿ.ಪಿ.ಸಿ ಕಾಲೇಜು ಅಂಗಣದಲ್ಲಿ
ರಾಷ್ಟ್ರೀಯ ಮಟ್ಟದ ಅಂತರ್ ಯೂನಿವರ್ಸಿಟಿ ಕಬಡ್ಡಿ ಚಾಂಪಿಯನ್ ಶಿಪ್-2019-20, ಡಿಸೆಂಬರ್ 18 ರಿಂದ 21 ರ ತನಕ 4 ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆಯಲಿದೆ.
ವಿಶೇಷ ಆಕರ್ಷಣೆಯಾಗಿ ಪ್ರೊಕಬಡ್ಡಿ ಯ ಖ್ಯಾತನಾಮ ಆಟಗಾರರಾದ ಮಣಿಂದರ್ ಸಿಂಗ್,ಸುಕೇಶ್ ಹೆಗ್ಡೆ,ರಿಶಾಂಕ್ ದೇವಾಡಿಗ,ಪ್ರಶಾಂತ್ ಕುಮಾರ್ ರೈ,ಸಚಿನ್ ಸುವರ್ಣ ಹಾಗೂ ಇನ್ನಿತರ ಪ್ರಸಿದ್ಧ ಆಟಗಾರರು ಭಾಗವಹಿಸಲಿದ್ದಾರೆ.
ಟೀಮ್ ಥಂಡರ್ಸ್ ಕೆ.ಆರ್.ಪುರಂ ಬೆಂಗಳೂರು ಇವರ ಆಶ್ರಯದಲ್ಲಿ ಕೆ.ಆರ್.ಪುರಂ ನ ಸರಕಾರಿ ಕಾಲೇಜು ಅಂಗಣದಲ್ಲಿ 2 ದಿನಗಳ ಕಾಲ ಹಗಲಿನಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಕೂಟವನ್ನು ಎಂ.ಬಿ.ಸಿ.ಸಿ ಬೆಂಗಳೂರು ಜಯಿಸಿದೆ.
24 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ಸೆಮಿಫೈನಲ್ ಹಂತದಲ್ಲಿ ನಾಗಾ ಇಲೆವೆನ್ (ನ್ಯಾಶ್), ಥಂಡರ್ಸ್ ಕೆ.ಆರ್.ಪುರಂ ತಂಡವನ್ನು ಸೋಲಿಸಿ ಹಾಗೂ ಎಂ.ಬಿ.ಸಿ.ಸಿ ತಂಡ ಮೈಟಿ ಬೆಂಗಳೂರನ್ನು ಸೋಲಿಸಿ ಫೈನಲ್ ಗೆ ನೆಗೆದೇರಿದ್ದವು.
ಫೈನಲ್ ನಲ್ಲಿ ಎಂ.ಬಿ.ಸಿ.ಸಿ, ನಾಗಾ ಇಲೆವೆನ್ (ನ್ಯಾಶ್)ತಂಡವನ್ನು ಸೋಲಿಸಿ ಪ್ರಥಮ ಬಹುಮಾನವಾಗಿ 50000 ನಗದು ಸಹಿತ ಆಕರ್ಷಕ ಟ್ರೋಫಿ ಪಡೆದು ಕೊಂಡಿತು. ಹಾಗೂ ರನ್ನರ್ಸ್ ಅಪ್ ನಾಗಾ ಇಲೆವೆನ್ (ನ್ಯಾಶ್) ತಂಡ 25000 ನಗದು ಸಹಿತ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.
ಟೂರ್ನಿಯುದ್ದಕ್ಕೂ ಸರ್ವಾಂಗೀಣ ಪ್ರದರ್ಶನ ತೋರಿದ ಸ್ವಸ್ತಿಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರೆ, ಕ್ರಮವಾಗಿ ಅಕ್ಷಯ್ ಸಿ.ಕೆ ಹಾಗೂ ರಕ್ಷಿತ್ ಶೆಟ್ಟಿ, ಬೆಸ್ಟ್ ಬ್ಯಾಟ್ಸ್ಮನ್ ಹಾಗೂ ಬೆಸ್ಟ್ ಬೌಲರ್ ಗೌರವಕ್ಕೆ ಪಾತ್ರರಾದರು.
Y Sports ಈ ಪಂದ್ಯಾಕೂಟದ ನೇರಪ್ರಸಾರವನ್ನು ಬಿತ್ತರಿಸಿತ್ತು.
ಆರ್.ಕೆ.ಆಚಾರ್ಯ ಕೋಟ
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಚುನಾವಣೆ ದಿನಾಂಕವು ಗುರುವಾರ ಘೋಷಣೆಯಾದ ಕೂಡಲೇ ಪದಾಧಿಕಾರಿಗಳ ಸ್ಥಾನದ ಆಕಾಂಕ್ಷಿಗಳ ವಲಯದಲ್ಲಿ ತುರುಸಿನ ಚಟುವಟಿಕೆ ಗರಿಗೆದರಿದೆ.
ಪ್ರಮುಖ ಸ್ಥಾನಗಳಿಗೆ ಕೆಲವು ಹೆಸರುಗಳು ಕೇಳಿ ಬರುತ್ತಿವೆ. ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
‘1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿ ಬಿನ್ನಿ ಇದ್ದರು. ಕರ್ನಾಟಕದ ಕ್ರಿಕೆಟ್ಗೂ ಅವರು ಉತ್ತಮ ಕಾಣಿಕೆ ನೀಡಿದ್ದಾರೆ. ಆದ್ದರಿಂದ ಅವರನ್ನೇ ಕಣಕ್ಕಿಳಿಸಲಾಗುವುದು’ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಕಾರ್ಯದರ್ಶಿ ಸ್ಥಾನಕ್ಕೆ ಸುಂದರ್ ರಾಜ್ ಅವರು ಕಣಕ್ಕಿಳಿಯಲಿದ್ದಾರೆನ್ನಲಾಗಿದೆ. ಅವರು ಪ್ರಸ್ತುತ ಕರ್ನಾಟಕ ರಾಜ್ಯ ಲಾನ್ಟೆನಿಸ್ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ಬಿಸಿಸಿಐ ನಿಯಮಾವಳಿಯ ಪ್ರಕಾರ ಒಬ್ಬ ವ್ಯಕ್ತಿಯು ಎರಡು ಹುದ್ದೆಗಳನ್ನು ಹೊಂದುವಂತಿಲ್ಲ. ಆದ್ದರಿಂದ ಅವರು ಕೆಎಸ್ಎಲ್ಟಿಎ ಹುದ್ದೆಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಹಿರಿಯ ಆಟಗಾರ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸದ್ಯ ಆಯ್ಕೆ ಸಮಿತಿಯ ಸದಸ್ಯರಾಗಿರುವ ಜೆ.ಅಭಿರಾಮ್ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ್ ಮೆನನ್ ಅವರು ಸ್ಪರ್ಧಿಸುವ ಸಂಭವ ಇದೆ ಎಂದೂ ಮೂಲಗಳು ಹೇಳಿವೆ.
ಲೋಧಾ ಸಮಿತಿಯ ಶಿಫಾರಸುಗಳ ಪ್ರಕಾರ ಬಿಸಿಸಿಐಗೆ ಹೊಸ ನಿಯಮಾವಳಿ ರಚನೆಗೆ 2017ರಲ್ಲಿ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಅದರ ಪ್ರಕಾರ 70 ವರ್ಷ ವಯಸ್ಸು ದಾಟಿದವರು ಮತ್ತು ಒಂಬತ್ತು ವರ್ಷಗಳಿಗೂ ಹೆಚ್ಚು ಕಾಲ ಪದಾಧಿಕಾರಿಯಾದವರು ಮುಂದುವರಿಯುವಂತಿಲ್ಲ ಎಂದು ಆದೇಶ ನೀಡಲಾಗಿತ್ತು. ಆಗ ಅಧಿಕಾರದಲ್ಲಿದ್ದ ಆಡಳಿತ ಸಮಿತಿಯನ್ನು ರದ್ದು ಮಾಡಲಾಗಿತ್ತು. ಹಂಗಾಮಿ ಸಮಿತಿಯನ್ನು ನೇಮಕ ಮಾಡಲಾಗಿತ್ತು. ಆದ್ದರಿಂದ ಇಲ್ಲಿಯವರೆಗೆ ಸಂಜಯ್ ದೇಸಾಯಿ ಮತ್ತು ಸುಧಾಕರ್ ರಾವ್ ಅವರು ಕ್ರಮವಾಗಿ ಹಂಗಾಮಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು.ಹೋದ ತಿಂಗಳು ಚುನಾವಣೆ ದಿನಾಂಕವನ್ನು ಘೋಷಿಸಿದ್ದ ಕ್ರಿಕೆಟ್ ಆಡಳಿತ ಸಮಿತಿ (ಸಿಒಎ) ಸೆ. 28ರೊಳಗೆ ರಾಜ್ಯ ಸಂಸ್ಥೆಗಳ ಚುನಾವಣೆ ಮುಗಿಸಲು ಸೂಚಿಸಿತ್ತು.
ಬೈಂದೂರು : ಉಡುಪಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಇವರ ಆಶ್ರಯದಲ್ಲಿ ಬೈಂದೂರು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ಗುರುವಾರ ಬೈಂದೂರು ಗಾಂಧಿ ಮೈದಾನದಲ್ಲಿ ನಡೆಯಿತು.
ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕಬಡ್ಡಿ ಪಂದ್ಯಾಟದಲ್ಲಿ ಕೊಲ್ಲೂರ ದೇವಳದ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಉಡುಪಿ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಸುಕೇಶ್ ಶೆಟ್ಟಿ ಹೊಸಮಠ, ದೈಹಿಕ ಶಿಕ್ಷಣ ಶಿಕ್ಷಕ ಸಚಿನ್ ಕುಮಾರ್ ಶೆಟ್ಟಿ ಹುಂಚನಿ, ಉಪನ್ಯಾಸಕಿ ಪೂರ್ಣಿಮಾ ಜೋಯಿಸ್ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಪೂಜಾರಿ, ಹಳೆಯ ವಿದ್ಯಾರ್ಥಿಗಳಾದ ಅವಿನಾಶ್ ಆಚಾರ್ಯ, ವಿನಾಯಕ ಆಚಾರ್ಯ ಕೊಲ್ಲೂರು ಪ್ರದೀಪ್ ಭಟ್ ವಿಜೇತ ವಿದ್ಯಾರ್ಥಿಗಳೊಂದಿಗೆ ಇದ್ದರು.
ವರದಿ : ಎಚ್.ಸುಶಾಂತ್ ಬೈಂದೂರು