Categories
ಕ್ರಿಕೆಟ್ ಫುಟ್ಬಾಲ್ ಸ್ಪೋರ್ಟ್ಸ್

ಫುಟ್ಬಾಲ್ ವಿಶ್ವಕಪ್‌ನಲ್ಲಿ ಅದ್ಭುತ ಗೋಲು ಗಳಿಸಿದ ಕ್ರಿಕೆಟ್ ದಂತಕಥೆ ಎಲ್ಲಿಸ್ ಪೆರ್ರಿ

ಎಲ್ಲಿಸ್ ಪೆರ್ರಿ ಕ್ರೀಡಾ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು. ಅವರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದಲ್ಲಿ ಆಡಿ ಅನೇಕ ವಿಶ್ವಕಪ್‌ಗಳನ್ನು ಗೆದ್ದಿದ್ದಾರೆ. ಅಲ್ಲದೆ, ಮಹಿಳಾ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ತಲಾ ನೂರಕ್ಕೂ ಹೆಚ್ಚು ರನ್ ಗಳಿಸಿದ ಅಪರೂಪದ ಸಾಧನೆಯನ್ನೂ ಮಾಡಿದ್ದಾರೆ. ಮಹಿಳಾ ಕ್ರಿಕೆಟ್‌ಗೆ ಅವರ ಕೊಡುಗೆ ಈಗಾಗಲೇ ಅಪಾರವಾಗಿದೆ .
ಕ್ರಿಕೆಟ್ ಮೈದಾನದಲ್ಲಿ ಎಲ್ಲಿಸ್ ಪೆರಿಯ ಯಶಸ್ಸಿನ ಬಗ್ಗೆ ಅನೇಕ ಕ್ರಿಕೆಟ್ ಅಭಿಮಾನಿಗಳಿಗೆ ತಿಳಿದಿದ್ದರೂ,  ಅವರು ಫಿಫಾ ಮಹಿಳಾ ವಿಶ್ವಕಪ್‌ನಲ್ಲಿ ತನ್ನ ರಾಷ್ಟ್ರವನ್ನು ಪ್ರತಿನಿಧಿಸಿದ್ದಾರೆ ಎಂಬ ಕಲ್ಪನೆಯನ್ನು ಯಾರೂ ಮಾಡಿರಲಿಕ್ಕಿಲ್ಲ.  ಅವರು 2011 ರಲ್ಲಿ ಫುಟ್‌ಬಾಲ್‌ನ ಮೆಗಾ ಈವೆಂಟ್‌ನಲ್ಲಿ ಆಸ್ಟ್ರೇಲಿಯಾಕ್ಕಾಗಿ ಗೋಲು ಗಳಿಸಿದವರು. 32 ವರ್ಷ ವಯಸ್ಸಿನ ಎಲ್ಲಿಸ್ ಪೆರ್ರಿ ಆಸ್ಟ್ರೇಲಿಯನ್ ಫುಟ್ಬಾಲ್ ಮತ್ತು ಕ್ರಿಕೆಟ್ ಎರಡರಲ್ಲೂ ತನ್ನ ದೇಶವನ್ನು ಗಣ್ಯ ಮಟ್ಟದಲ್ಲಿ ಪ್ರತಿನಿಧಿಸುವ ಮೂಲಕ  ಆಲ್ ರೌಂಡರ್ ಆಗಿದ್ದಾರೆ. ಎಲ್ಲಿಸ್ ಪೆರ್ರಿ ತನ್ನನ್ನು ತಾನು ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬಳಾಗಿ ಸ್ಥಾಪಿಸಿಕೊಂಡಿದ್ದಾಳೆ.
ಅವರು 2007 ರಲ್ಲಿ 16 ವರ್ಷಕ್ಕೆ ಕಾಲಿಟ್ಟ ಸ್ವಲ್ಪ ಸಮಯದ ನಂತರ, ಅವರು ಎರಡು ವಾರಗಳ ಅಂತರದಲ್ಲಿ ಫುಟ್ಬಾಲ್ ಮತ್ತು ಕ್ರಿಕೆಟ್ ಎರಡೂ ಕ್ರೀಡೆಗಳನ್ನು  ವಹಿಸಿಕೊಂಡರು.
2023 ರ ಫಿಫಾ ಮಹಿಳಾ ವಿಶ್ವಕಪ್ ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ಪ್ರಾರಂಭವಾಯಿತು. ಮೆಗಾ ಈವೆಂಟ್‌ನ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಆಗುತ್ತಿದ್ದಂತೆ, ಅಭಿಮಾನಿಯೊಬ್ಬ ಸ್ವೀಡನ್ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಗೋಲು ಹೊಡೆದ ಎಲ್ಲೀಸ್ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಆ ಪಂದ್ಯವನ್ನು ಆಸ್ಟ್ರೇಲಿಯಾ 1-3 ರಿಂದ ಸೋತರೂ, ಪೆರ್ರಿ FIFA ಮಹಿಳಾ ವಿಶ್ವಕಪ್ ನಾಕೌಟ್ ಸುತ್ತಿನಲ್ಲಿ ಗೋಲು ಗಳಿಸಿದ ಅಪರೂಪದ ಸಾಧನೆಯನ್ನು ಸಾಧಿಸಿದರು ಮತ್ತು ನಂತರ ಯಶಸ್ವಿ ಕ್ರಿಕೆಟಿಗರಾದರು. ಮೇಲೆ ತಿಳಿಸಿದ ವೀಡಿಯೊದಲ್ಲಿ ಪೆರ್ರಿ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕವನ್ನು ಪೂರ್ಣಗೊಳಿಸಿದ ಮತ್ತು ಏಳು ವಿಕೆಟ್‌ಗಳನ್ನು ಪಡೆದ ಕ್ಷಣಗಳನ್ನು ಸಹ ಒಳಗೊಂಡಿದೆ.
ಫುಟ್‌ಬಾಲ್ ವಿಶ್ವಕಪ್‌ನಲ್ಲಿ ಉತ್ತಮ ಗೋಲು ಗಳಿಸುವುದು, ಟೆಸ್ಟ್ ದ್ವಿಶತಕವನ್ನು ಮಾಡುವುದು ಅಥವಾ 7 ವಿಕೆಟ್ ಕಬಳಿಸುವುದು ಎಲ್ಲಿಸ್ ಪೆರ್ರಿ ಅವರ ವೃತ್ತಿಜೀವನವನ್ನು ವ್ಯಾಖ್ಯಾನಿಸುತ್ತದೆ… ಹೆಚ್ಚಿನ  ಕ್ರೀಡಾಪಟುಗಳಿಗೆ ಇದು ದೂರದ ಕನಸು! ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ ಈ ಮೂರನ್ನೂ ಮಾಡಿದ್ದಾರೆ.
2011 ರ ವಿಶ್ವಕಪ್ ಕ್ವಾರ್ಟರ್-ಫೈನಲ್‌ನಲ್ಲಿ ಸ್ಕೋರ್ ಮಾಡುವುದರಿಂದ ಹಿಡಿದು ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸುವವರೆಗೆ ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಕೆಲವು ಮರೆಯಲಾಗದ ಕ್ಷಣಗಳನ್ನು ಆನಂದಿಸಿದ್ದಾರೆ . ತನ್ನ ಶಾಲಾ ವರ್ಷಗಳಲ್ಲಿ, ಉದಯೋನ್ಮುಖ ಅಥ್ಲೀಟ್ ಹಲವಾರು ಕ್ರೀಡೆಗಳನ್ನು ಆಡಿದರು: ಗಾಲ್ಫ್, ಫುಟ್ಬಾಲ್ ಮತ್ತು ಕ್ರಿಕೆಟ್ ಹಾಗೂ ಅಥ್ಲೆಟಿಕ್ಸ್.
ಎಲ್ಲಿಸ್ ಪೆರ್ರಿ ಅವರು ಆಸ್ಟ್ರೇಲಿಯಾದ ಕ್ರಿಕೆಟಿಗ ಮತ್ತು ಫುಟ್ಬಾಲ್ ಆಟಗಾರರಾಗಿದ್ದಾರೆ,  ಈಗಾಗಲೇ ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳು ಮತ್ತು ಆಟಗಾರರಲ್ಲಿ ಒಬ್ಬರು ಎಂದು ಕರೆಯಲ್ಪಡುವ ಪೆರ್ರಿ ಅಲ್ಲಿಂದೀಚೆಗೆ  ಐದು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಯಶಸ್ವಿಯಾದರು, ಆರು T20 ವಿಶ್ವಕಪ್ ಪ್ರಶಸ್ತಿಗಳನ್ನು ಮತ್ತು ಎರಡು ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
Categories
ಫುಟ್ಬಾಲ್

ಭಾರತದ ಫುಟ್ಬಾಲ್ ದಂತಕಥೆ – ಸುನೀಲ್ ಚೆಟ್ರಿ.

ಗೋಲು ಗಳಿಕೆಯಲ್ಲಿ ವಿಶ್ವದಲ್ಲಿಯೇ ಮೂರನೇ ಸ್ಥಾನ ಪಡೆದ ಆಟಗಾರ. ರೊನಾಲ್ಡೋ ಮತ್ತು ಮೆಸ್ಸಿ ಮಾತ್ರ ಆತನಿಗಿಂತ ಮುಂದೆ!
———————————–
ಕ್ರಿಕೆಟ್ ಅಂದರೆ ಧರ್ಮ, ಕ್ರಿಕೆಟಿಗರು ಅಂದರೆ ದೇವರು ಎಂದು ಪೂಜಿಸಲ್ಪಡುವ ಭಾರತದಲ್ಲಿ ಒಬ್ಬ ಫುಟ್ಬಾಲ್ ಆಟಗಾರ 21 ವರ್ಷಗಳಿಂದ ದೇಶಕ್ಕಾಗಿ  ಆಡುತ್ತಾನೆ ಅಂದರೆ ನಂಬಲು ಕಷ್ಟ ಆಗಬಹುದು. ಫುಟ್ಬಾಲಿಗೆ ಕೆಲವು ಶ್ರೀಮಂತ ಕ್ಲಬ್ ಬಿಟ್ಟರೆ ಬೇರೆ ಯಾವ ಸಪೋರ್ಟ್ ಕೂಡ ಇಲ್ಲದ ಸನ್ನಿವೇಶದಲ್ಲಿ ಕೂಡ ಈ ದೈತ್ಯ ಪ್ರತಿಭೆಯ ಆಟಗಾರ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಾನೆ ಅಂದರೆ ಅದು ನಿಜವಾಗಿಯೂ ಅದ್ಭುತ! ಭಾರತೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಆಗಿ ಭಾರತದಲ್ಲಿ ಫುಟ್ಬಾಲ್ ಕ್ರೇಜನ್ನು ಜೀವಂತವಾಗಿ  ಉಳಿಸಿದ್ದಾನೆ ಅಂದರೆ ಆತ ಖಂಡಿತವಾಗಿಯೂ ಲೆಜೆಂಡ್ ಆಗಿರಬೇಕು.
ಆತನೇ ಭಾರತದ ಫುಟ್ಬಾಲ್ ತಂಡದ ಕ್ಯಾಪ್ಟನ್, ಮಿಂಚು ಹರಿಸುವ ಫಾರ್ವರ್ಡ್ ಆಟಗಾರ ಸುನೀಲ್ ಚೆಟ್ರಿ.
38ರ ಹರೆಯದಲ್ಲಿಯೂ ಅದೇ ವೇಗ, ಅದೇ ಕಸುವು, ಅದೇ ಗೆಲುವಿನ ಹಸಿವು. 
——————————
ಮೊನ್ನೆ ನಡೆದ SAFF ಪಂದ್ಯಕೂಟದ ಸ್ಪರ್ಧಾತ್ಮಕ ಪಂದ್ಯಗಳನ್ನು ನೋಡಿದವರಿಗೆ ಸುನೀಲ್ ಆಟದ ತಾಂತ್ರಿಕತೆ ಥಟ್ಟನೆ ಸೆಳೆಯುತ್ತದೆ. ಆತ ಗ್ರೌಂಡಿನಲ್ಲಿ ಇದ್ದಾನೆ ಅಂದರೆ ಬೇರೆ ಯಾವ ಆಟಗಾರನೂ ಕಾಣುವುದಿಲ್ಲ ಅನ್ನೋದು ನೂರಕ್ಕೆ ನೂರು ನಿಜ. ಇಡೀ ಗ್ರೌಂಡ್ ಆವರಿಸಿಕೊಂಡು ಆಡುವ ಆಟ ಆತನದ್ದು. ಬಾಲನ್ನು ಡ್ರಿಬಲ್ ಮಾಡಿಕೊಂಡು ಮೈದಾನದ ಒಂದು ಮೂಲೆಯಿಂದ ಇನ್ನೊಂದು ಮೂಲೆಯವರೆಗೆ ತೆಗೆದುಕೊಂಡು ಹೋಗುವ ಸ್ಕಿಲ್ ಅದು ಅದ್ಭುತ. ಆತನ ಕಾಲುಗಳಿಗೆ ಬಾಲ್ ದೊರೆಯಿತು ಅಂದರೆ ಅದು ಗೋಲ್ ಆಗದೆ ವಿರಮಿಸುವುದಿಲ್ಲ! ಸುನೀಲ್ ಗ್ರೌಂಡಿನಲ್ಲಿ ಇರುವಷ್ಟು ಹೊತ್ತು ಅವನ ತಂಡವನ್ನು ಸೋಲಲು ಬಿಡುವುದಿಲ್ಲ ಎನ್ನುವುದು ನೂರಾರು ಬಾರಿ ಸಾಬೀತಾಗಿದೆ. ಮೊನ್ನೆಯ SAAF ಕೂಟದಲ್ಲಿ ಮೂರನೇ ಬಾರಿಗೆ ಟಾಪ್ ಗೋಲು ಸ್ಕೋರರ್ ಆದದ್ದು, ನಾಲ್ಕನೇ ಬಾರಿಗೆ ಪ್ಲೇಯರ್ ಆಫ್ ದ ಟೂರ್ನಮೆಂಟ್ ಆದದ್ದು, ಭಾರತಕ್ಕೆ ಹೊಳೆಯುವ SAAF ಟ್ರೋಫಿಯನ್ನು ನಾಲ್ಕನೇ ಬಾರಿಗೆ ಗೆಲ್ಲಿಸಿಕೊಟ್ಟದ್ದು ಯಾವುದೂ ಸಣ್ಣ ಸಾಧನೆ ಅಲ್ಲ. ಸುನೀಲ್ ಚೆಟ್ರಿಗೆ 38 ವರ್ಷ ಆಯ್ತು ಅಂದರೆ ನಂಬೋರು ಯಾರು?
ಸುನೀಲ್ ಚೇಟ್ರಿ ಒಬ್ಬ ಸೈನಿಕನ ಮಗ. 
———————————–
1984 ಆಗಸ್ಟ್ 3ರಂದು ಸಿಕಂದರಾಬಾದನಲ್ಲಿ ಹುಟ್ಟಿದ ಸುನೀಲ್ ತಂದೆ ಒಬ್ಬ ಸೈನಿಕ ಆಗಿದ್ದರು ಮತ್ತು ಭಾರತದ ಆರ್ಮಿ ಫುಟ್ಬಾಲ್ ಟೀಮನಲ್ಲಿ ಆಡಿದ್ದರು. ಅದರಿಂದಾಗಿ ಫುಟ್ಬಾಲ್ ಆಸಕ್ತಿ ಹುಡುಗನಿಗೆ ರಕ್ತದಲ್ಲಿಯೇ ಬಂದಿತ್ತು ಎನ್ನಬಹುದು. ತನ್ನ
18ನೆಯ ವರ್ಷದಲ್ಲಿ ವೃತ್ತಿಪರ ಫುಟ್ಬಾಲ್ ಆಟಗಾರನಾಗಿ ಆಡಲು ಆರಂಭ ಮಾಡಿದ್ದ ಸುನೀಲ್ ಹೆಚ್ಚು ಕಡಿಮೆ ಭಾರತದ ಎಲ್ಲ ಕ್ಲಬ್ಬುಗಳ ಪರವಾಗಿ ಆಡಿದ್ದಾರೆ. ಮೋಹನ್ ಬಗಾನ್, ಜೆಸಿಟಿ, ಬಂಗಾಳ ತಂಡಗಳ ಆಟಗಾರನಾಗಿ ಮಿಂಚು ಹರಿಸಿದ್ದಾರೆ. 2015ರಿಂದ ಇಂದಿನವರೆಗೆ ಬೆಂಗಳೂರು ತಂಡದ ಪರವಾಗಿ ಆಡುತ್ತ ಬಂದಿದ್ದಾರೆ. ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಫುಟ್ಬಾಲ್ ಆಟಗಾರ ಎಂದರೆ ಅದು ಸುನೀಲ್ ಅನ್ನೋದು ನಿಜಕ್ಕೂ ಗ್ರೇಟ್. ಕ್ಲಬಗಳ ಪರವಾಗಿ ಇದುವರೆಗೆ ಆಡಿದ 452 ಪಂದ್ಯಗಳಲ್ಲಿ 217 ಗೋಲ್ ಗಳಿಸಿದ ರಾಷ್ಟ್ರೀಯ ದಾಖಲೆ ಆತನ ಹೆಸರಿನಲ್ಲಿ ಇದೆ! ಮೂರು ಖಂಡಗಳಲ್ಲಿ ಫುಟ್ಬಾಲ್ ಆಡಿದ ಭಾರತದ ಆಟಗಾರ ಕೂಡ ಅವರೊಬ್ಬರೇ!
ಜಾಗತಿಕ ಮಟ್ಟದಲ್ಲಿ ಭಾರತದ ಧ್ವಜಧಾರಿ. 
———————————–
ನಮಗೆಲ್ಲ ತಿಳಿದಿರುವಂತೆ ಜಗತ್ತಿನ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಆಟ ಅಂದರೆ ಫುಟ್ಬಾಲ್!  ಆದರೆ ಭಾರತದ ಫುಟ್ಬಾಲ್ ಸಾಧನೆ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಆದರೂ ಸುನೀಲ್ ಅಂಡರ್ 20, ಅಂಡರ್ 23 ವಿಶ್ವಮಟ್ಟದ  ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 2002ರಿಂದ ಇಂದಿನವರೆಗೆ ಭಾರತ ಆಡಿದ ಎಲ್ಲ ಏಷಿಯಾ ಮತ್ತು ವಿಶ್ವಮಟ್ಟದ ಟೂರ್ನಮೆಂಟಗಳಲ್ಲಿ ಭಾರತದ ಪರವಾಗಿ ಆಡಿದ್ದಾರೆ. ಸತತ ಏಳು ಬಾರಿ ಏಷಿಯಾ ಮಟ್ಟದ ಪ್ಲೇಯರ್ ಆಫ್ ದ ಇಯರ್ ಪ್ರಶಸ್ತಿ ಪಡೆದಿದ್ದಾರೆ. FPAI ಪ್ಲೇಯರ್ ಆಫ್ ದ ಇಯರ್ ಪ್ರಶಸ್ತಿಯನ್ನು ಮೂರು ಬಾರಿ ಪಡೆದಿದ್ದಾರೆ. 2018ರಲ್ಲಿ ಇಂಡಿಯನ್ ಸೂಪರ್ ಕಪ್ ಕೂಟದಲ್ಲಿ ಗೋಲ್ಡನ್ ಬೂಟ್ ಪ್ರಶಸ್ತಿ ಗೆದ್ದಿದ್ದಾರೆ. ತಾನು ಆಡಿದ ಪ್ರತೀ ಪಂದ್ಯಗಳಲ್ಲೂ ಸೆಂಟರ್ ಫಾರ್ವರ್ಡ್ ಆಟಗಾರನಾಗಿ ಮಿಂಚಿದ್ದಾರೆ. ಅವರ ಆಕ್ರಮಣಕಾರಿ ಆಟ, ಚುರುಕಾದ ಪಾದಗಳ ಚಲನೆ, ದೇಹದ ಮೇಲಿನ ನಿಯಂತ್ರಣ, ಎರಡೂ ಕಾಲುಗಳಿಂದ ಬಾಲ್ ಡ್ರಿಬಲ್ ಮಾಡುವ ಸಾಮರ್ಥ್ಯ, ದಣಿವು ಅರಿಯದ ದೇಹದ ತ್ರಾಣ, ಪಂದ್ಯದ  ಕೊನೆಯ ಕ್ಷಣದವರೆಗೂ ಕ್ವಿಟ್ ಮಾಡದ ಮನೋ ಸಾಮರ್ಥ್ಯ ಅವರನ್ನು ಚಾಂಪಿಯನ್ ಆಟಗಾರನಾಗಿ ರೂಪಿಸಿವೆ.
ಗೋಲು ಗಳಿಕೆಯಲ್ಲಿ ವಿಶ್ವದಲ್ಲಿಯೇ ನಂಬರ್ 3! 
———————————–
ಅಂತಾರಾಷ್ಟ್ರೀಯ ಗೋಲು ಗಳಿಕೆಯಲ್ಲಿ ಈಗ ಸುನೀಲ್ ಚೆಟ್ರಿ ಕೇವಲ ಮೂರನೇ ಸ್ಥಾನದಲ್ಲಿ ಇದ್ದಾರೆ! ಅವರು 142 ಪಂದ್ಯಗಳಲ್ಲಿ 92 ಗೋಲು ಹೊಡೆದಿದ್ದಾರೆ. ಅದರಲ್ಲಿ ನಾಲ್ಕು ಹ್ಯಾಟ್ರಿಕ್ ಇವೆ. ಅವರಿಗಿಂತ ಮುಂದೆ ಇರುವ ಫುಟ್ಬಾಲ್ ಲೆಜೆಂಡ್ಸ್ ಅಂದರೆ ರೊನಾಲ್ಡೋ ( 123 ಗೋಲುಗಳು) ಮತ್ತು ಲಿಯೋನೆಲ್ ಮೆಸ್ಸಿ( 103 ಗೋಲುಗಳು) ಮಾತ್ರ! ಭಾರತಕ್ಕೆ ದೊರೆಯುತ್ತಿರುವ ಸೀಮಿತ ಅವಕಾಶಗಳಲ್ಲಿ ಸುನೀಲ್ ಈ ಸಾಧನೆ ಮಾಡಿದ್ದು ನನಗೆ ನಿಜಕ್ಕೂ ಗ್ರೇಟ್ ಅಂತ ಅನ್ನಿಸುತ್ತದೆ.
ಇನ್ನೊಂದು ಹೋಲಿಕೆ ಕೊಡಬೇಕೆಂದರೆ ಭಾರತದಲ್ಲಿ ಎರಡನೆಯ ಅತೀ ದೊಡ್ಡ ಗೋಲು ಗಳಿಕೆ ಮಾಡಿದವರೆಂದರೆ ಭೈಚುಂಗ್ ಭಾಟಿಯಾ. ಅವರು ಹೊಡೆದ ಜಾಗತಿಕ ಮಟ್ಟದ ಗೋಲುಗಳ ಸಂಖ್ಯೆ ಕೇವಲ 27! ಫುಟ್ಬಾಲಿನಲ್ಲಿ ಸುನೀಲ್ ಚೆಟ್ರಿ ಮಾಡಿದ ದಾಖಲೆಗಳನ್ನು ಸದ್ಯಕ್ಕೆ ಯಾವ ಭಾರತೀಯ ಆಟಗಾರನೂ ಮುರಿಯುವ ಸಾಧ್ಯತೆ ಇಲ್ಲವೇ ಇಲ್ಲ!
ಪ್ರಶಸ್ತಿಗಳು ಸುನೀಲಿಗೆ ಹೊಸದಲ್ಲ.
———————————-
ಒಬ್ಬ ಕ್ರೀಡಾಪಟುವಿಗೆ ದೊರೆಯುವ ಅತ್ಯುನ್ನತ ಪ್ರಶಸ್ತಿ ಖೇಲ್ ರತ್ನ ಪ್ರಶಸ್ತಿ, ಭಾರತ ಸರಕಾರ ಕೊಡಮಾಡುವ ಪದ್ಮಶ್ರೀ, 2011ರ ಅರ್ಜುನ ಪ್ರಶಸ್ತಿ ಅವರಿಗೆ ಈಗಾಗಲೇ ದೊರೆತಿವೆ. ಭಾಗವಹಿಸಿದ ಎಲ್ಲ ಜಾಗತಿಕ ಕೂಟಗಳಲ್ಲಿ ಒಂದಲ್ಲ ಒಂದು ಪ್ರಶಸ್ತಿ ಗೆಲ್ಲದೇ ಸುನೀಲ್ ಹಿಂದೆ ಬಂದ ಒಂದು ಉದಾಹರಣೆ ಕೂಡ ದೊರೆಯುವುದಿಲ್ಲ. ಸುನೀಲ್ ಕಾರಣಕ್ಕೆ ಭಾರತದಲ್ಲಿ ಫುಟ್ಬಾಲ್ ಆಕರ್ಷಣೆ ಹೆಚ್ಚಿತು ಮತ್ತು ಹೆಚ್ಚು ಯುವಜನತೆ ಫುಟ್ಬಾಲ್ ಆಡಲು ಸುರು ಮಾಡಿದರು ಅನ್ನುವ ಮಾತಿನಲ್ಲಿ ಉತ್ಪ್ರೇಕ್ಷೆ ಇಲ್ಲ! ಸದ್ಯಕ್ಕೆ ನಿವೃತ್ತಿ ಆಗುವ ಯಾವ ಸಾಧ್ಯತೆಯೂ ಇಲ್ಲ ಎಂದು ಹೇಳಿರುವ ಸುನೀಲ್ ಚೆಟ್ರಿ ಭಾರತೀಯ ಫುಟ್ಬಾಲ್ ಲೋಕದ  ಲೆಜೆಂಡ್ ಆಟಗಾರ ಎಂದು ನೀವು ಖಂಡಿತವಾಗಿಯೂ ಒಪ್ಪುತ್ತೀರಿ. ಅಲ್ಲವೇ?
Categories
ಫುಟ್ಬಾಲ್

SAFF ಚಾಂಪಿಯನ್‌ಶಿಪ್ ಫೈನಲ್: ಭಾರತ ಮತ್ತು ಕುವೈತ್ ನಡುವಿನ ಅಂತಿಮ ಘರ್ಷಣೆ

ಭಾರತ vs ಕುವೈತ್ SAFF ಚಾಂಪಿಯನ್‌ಶಿಪ್ 2023 ಫೈನಲ್:  ಪೆನಾಲ್ಟಿ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಲೆಬನಾನ್ ಅನ್ನು ಸೋಲಿಸುವ ಮೂಲಕ ಭಾರತೀಯ ಫುಟ್‌ಬಾಲ್ ತಂಡವು SAFF ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಪ್ರವೇಶಿಸಿದೆ.
ಇದೀಗ ಅಂತಿಮ ಪಂದ್ಯವನ್ನು ಗೆದ್ದು ಪ್ರಶಸ್ತಿ ವಶಪಡಿಸಿಕೊಳ್ಳುವುದು ಭಾರತದ ಪ್ರಯತ್ನವಾಗಿದೆ. ಈ ಟೂರ್ನಿಯಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಫೈನಲ್‌ನಲ್ಲಿಯೂ ಗೆಲುವಿನ ಓಟವನ್ನು ಕಾಯ್ದುಕೊಳ್ಳಲು ಬಯಸಿದ್ದಾರೆ.
ಭಾರತ ಎಂಟು ಬಾರಿ ಚಾಂಪಿಯನ್:  ಭಾರತ ಇದುವರೆಗೆ 8 ಬಾರಿ ಸ್ಯಾಫ್ ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈಗ ಒಂಬತ್ತನೇ ಬಾರಿಗೆ ಈ ಪ್ರಶಸ್ತಿಯನ್ನು ವಶಪಡಿಸಿಕೊಳ್ಳುವುದು ತಂಡದ ಕಣ್ಣು. ಸುನಿಲ್ ಛೆಟ್ರಿ ನಾಯಕತ್ವದಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡಿದೆ. ನಾಯಕತ್ವದ ಜೊತೆಗೆ ಸುನಿಲ್ ಛೆಟ್ರಿ ಕೂಡ ತಮ್ಮ ಬಲಿಷ್ಠ ಆಟದಿಂದ ಎಲ್ಲರ ಮನಗೆದ್ದಿದ್ದಾರೆ.
ಭಾರತ ಮತ್ತು ಕುವೈತ್ ನಡುವಿನ ಸ್ಯಾಫ್ ಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯವು ಮಂಗಳವಾರ ಸಂಜೆ 7:30 ರಿಂದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂತಿಮ ಪಂದ್ಯದ ನೇರ ಪ್ರಸಾರ ಡಿಡಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನಡೆಯಲಿದೆ.
Categories
ಫುಟ್ಬಾಲ್

SAFF ಚಾಂಪಿಯನ್‌ಶಿಪ್: ಟೈ ಬ್ರೇಕರ್‌ನಲ್ಲಿ ಭಾರತ 4-2 ಗೋಲುಗಳಿಂದ ಲೆಬನಾನ್ ಅನ್ನು ಸೋಲಿಸಿ ಫೈನಲ್‌ಗೆ ಪ್ರವೇಶ

SAFF ಚಾಂಪಿಯನ್‌ಶಿಪ್‌ನಲ್ಲಿ, ಭಾರತ ತಂಡವು ಲೆಬನಾನ್ ಅನ್ನು ಟೈ-ಬ್ರೇಕರ್‌ನಲ್ಲಿ ಸೋಲಿಸಿತು. ಸೆಮಿಫೈನಲ್‌ನಲ್ಲಿ ಪುನರಾವರ್ತಿತ ಹೆಚ್ಚುವರಿ ಸಮಯದ ನಂತರವೂ ಎರಡೂ ಕಡೆಯಿಂದ ಯಾವುದೇ ಗೋಲು ದಾಖಲಾಗಲಿಲ್ಲ. ಅಂತಿಮವಾಗಿ ಭಾರತ ತಂಡ ಶೂಟೌಟ್‌ನಲ್ಲಿ ಜಯ ಸಾಧಿಸಿತು.
ಮೊದಲಾರ್ಧದಲ್ಲಿ, ಭಾರತ ತಂಡವು ಆಕ್ರಮಣಕ್ಕೆ ಅತ್ಯುತ್ತಮವಾಗಿ ಪ್ರಯತ್ನಿಸಿತು ಆದರೆ ಲೆಬನಾನ್ ಕೌಂಟರ್ ಅಷ್ಟೇ ಪ್ರಬಲವಾಗಿತ್ತು. ಲೆಬನಾನಿನ ಕಡೆಯಿಂದಲೂ ಪ್ರಯತ್ನಗಳನ್ನು ಮಾಡಲಾಯಿತು ಆದರೆ ಯಶಸ್ವಿಯಾಗಲಿಲ್ಲ.
105 ನಿಮಿಷಗಳ ನಂತರವೂ ಯಾವುದೇ ಗೋಲು ಬಾರದೆ ಪಂದ್ಯದ ಫಲಿತಾಂಶ ತಿಳಿಯಲಿಲ್ಲ. ಪಂದ್ಯದಲ್ಲಿ ಮತ್ತೊಮ್ಮೆ ಹೆಚ್ಚುವರಿ ಸಮಯ ನೀಡಲಾಯಿತಾದರೂ ಅಲ್ಲಿಯೂ ಉಭಯ ತಂಡಗಳ ಆಟ ಸಮಬಲಗೊಂಡಿದ್ದರಿಂದ ಪಂದ್ಯ ಟೈ ಬ್ರೇಕರ್‌ಗೆ ಹೋಯಿತು. ಟೈ ಬ್ರೇಕರ್‌ನಲ್ಲಿ ಭಾರತ ತಂಡ 4-2 ಅಂತರದಲ್ಲಿ ಜಯ ಸಾಧಿಸಿತು.
ಟೈ ಬ್ರೇಕರ್‌ನಲ್ಲಿ ಭಾರತ ತಂಡದ ಪರ ಮಹೇಶ್, ಉದಾಂತ, ಅನ್ವರ್ ಮತ್ತು ಸುನಿಲ್ ಛೆಟ್ರಿ ಗೋಲು ಗಳಿಸಿದರು. ಟೀಂ ಇಂಡಿಯಾ ಈಗ ಅಂತಿಮ ಪಂದ್ಯದಲ್ಲಿ ಕುವೈತ್ ವಿರುದ್ಧ ಆಡಬೇಕಿದೆ. ಲೀಗ್ ಹಂತದಲ್ಲಿ ಭಾರತ ಮತ್ತು ಕುವೈತ್ ನಡುವೆ ಪಂದ್ಯವೂ ನಡೆದಿತ್ತು. ಇಬ್ಬರ ನಡುವಿನ ಆ ಪಂದ್ಯ 1-1 ಡ್ರಾದಲ್ಲಿ ಅಂತ್ಯಗೊಂಡಿತ್ತು.
*ಸುರೇಶ್ ಭಟ್ ಮುಲ್ಕಿ*
*ಸ್ಪೋರ್ಟ್ಸ್ ಕನ್ನಡ*
Categories
ಫುಟ್ಬಾಲ್

ಮೆಸ್ಸಿ ಮೆಸ್ಸಿ ಮೆಸ್ಸಿ ಜಗದಗಲ ಮೆಸ್ಸಿ!

ಇನ್ನು ಫುಟ್ಬಾಲ್ ದೇವರು ಆಡುವುದಿಲ್ಲ!
ನಮಗೆಲ್ಲ ತಿಳಿದಿರುವ ಹಾಗೆ ಫುಟ್ಬಾಲ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ. ಶ್ರೀಮಂತ ಕ್ರೀಡೆ ಕೂಡ! ಅದಕ್ಕೆ ಕಾರಣ ದೇವ ಮಾನವರ ಹಾಗೆ ಇರುವ ಫುಟ್ಬಾಲ್ ಆಟಗಾರರು! ಪೀಲೆ, ಮರಡೋನಾ, ಜಿದಾನೆ ಮೊದಲಾದವರೆಲ್ಲ ಫುಟ್ಬಾಲ್ ಪ್ರೇಮಿಗಳ ಆರಾಧ್ಯ ದೇವರೇ ಆಗಿದ್ದವರು. ಕೋಟಿ ಕೋಟಿ ಬೆಲೆಬಾಳುವವರು.
ವರ್ತಮಾನದ ಫುಟ್ಬಾಲ್ ಜಗತ್ತಿನ ದೇವರು ಲಿಯೋನೆಲ್ ಮೆಸ್ಸಿ ತನ್ನ ಜೀವಮಾನದ ಕೊನೆಯ ಪಂದ್ಯವನ್ನು ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಡುತ್ತಾರೆ ಎಂದರೆ ಅವರ ಲಕ್ಷಾಂತರ ಅಭಿಮಾನಿಗಳಿಗೆ ಕರುಳು ಹಿಂಡುವ ಅನುಭವ! ಅದು ರೋಮಾಂಚನದ ಪರಾಕಾಷ್ಠೆ!  ಅದು ಸಹಜ ಕೂಡ.
ಮೆಸ್ಸಿ ಮಾಡಿದೆಲ್ಲವೂ ದಾಖಲೆಗಳೇ! 
———————————–
1987 ಜೂನ್ 24ರಂದು ಜನಿಸಿದ ಮೆಸ್ಸಿ ತನ್ನ ಐದನೇ ವಯಸ್ಸಿಗೆ ಫುಟ್ಬಾಲ್ ಆಡಲು ಆರಂಭ ಮಾಡಿದ್ದರು. 13ನೆ ವಯಸ್ಸಿಗೆ ಕ್ಲಬ್ ಮಟ್ಟದಲ್ಲಿ ಆಡುತ್ತ ವೃತ್ತಿಪರ ಫುಟ್ಬಾಲ್ ಆಟಕ್ಕೆ ಪದಾರ್ಪಣ! ಆರಂಭದಲ್ಲಿ ಆಡಿದ್ದು ನ್ಯುವೆಲ್ ಕ್ಲಬ್ ಮೂಲಕ. ನಾಲ್ಕು ವರ್ಷಗಳ ಅವಧಿಯಲ್ಲಿ ಮೆಸ್ಸಿ ಸೋತದ್ದು ಒಂದೇ ಗೇಮ್!
ಎಡಗಾಲಿಂದ ಬಾಲ್ ಡ್ರಿಬಲ್ ಮಾಡುತ್ತ ಆತನು ಫುಟ್ಬಾಲ್ ಮೈದಾನದಲ್ಲಿ ಚಲಿಸುತ್ತಿದ್ದರೆ ಕಣ್ಣು ರೆಪ್ಪೆ ಮಡಚದೆ  ಅಭಿಮಾನಿಗಳು ಮೆಸ್ಸಿ ಮೆಸ್ಸಿ ಎಂದು ಕೂಗುತ್ತ ಸಪೋರ್ಟ್ ಮಾಡುತ್ತಾರೆ. ಆಟ ಮುಗಿಯುವ ತನಕ ಆ ಉದ್ಗೋಷ ನಿಲ್ಲುವುದೇ ಇಲ್ಲ! ಅವನ ನಿಯಂತ್ರಣಕ್ಕೆ ಬಾಲ್ ಬಂತು ಅಂದರೆ ಅದು ಗೋಲ್ ಆಗದೆ ಮೋಕ್ಷ ಕಾಣುವುದಿಲ್ಲ ಎಂಬಲ್ಲಿಗೆ ಮೆಸ್ಸಿ ವಿಶ್ವ ವಿಜಯಿ! ಫುಟ್ಬಾಲ್ಲಿನ ಲೆಜೆಂಡ್!
17 ನೆ ವಯಸ್ಸಿಗೆ ಬಾರ್ಸಿಲೋನಾ ಕ್ಲಬ್ ಪ್ರವೇಶ! 
———————————-
ಅತ್ಯಂತ ಸಣ್ಣ ವಯಸ್ಸಿಗೇ ತನ್ನ ಡ್ರೀಮ್ ಕ್ಲಬ್ ಆದ ಬಾರ್ಸಿಲೋನಾ ಪ್ರವೇಶ ಮಾಡಿದ ಈ ಅದ್ಭುತ ಫಾರ್ವರ್ಡ್ ಆಟಗಾರ ಮಾಡಿದ್ದೆಲ್ಲ ಮಿರಾಕಲಗಳೇ! ಆ ಕ್ಲಬ್ ಮೂಲಕ ಆರು ಬಾರಿ ಗೋಲ್ಡನ್ ಬೂಟ್ ಪಡೆದ ಪರಿಪೂರ್ಣ ಆಟಗಾರ ಆತ!  ಬಾರ್ಸಿಲೋನಾ ಪರವಾಗಿ 672 ಗೋಲ್ ಹೊಡೆದ ವಿಶ್ವದಾಖಲೆಯು ಆತನ ಹೆಸರಲ್ಲಿ ಇದೆ! ಅದರಲ್ಲಿ 36 ಹ್ಯಾಟ್ರಿಕ್ ಗೋಲಗಳು! ಆತನು ಒಳಗೊಂಡ ಬಾರ್ಸಿಲೋನಾ ಕ್ಲಬ್ ಒಟ್ಟು 35 ಜಾಗತಿಕ ಮಟ್ಟದ ಟ್ರೋಫಿಗಳನ್ನು ಪಡೆದು
ವಿಜೃಂಭಿಸಿತ್ತು! ವಿಶ್ವದ ಶ್ರೇಷ್ಟ ಫುಟ್ಬಾಲ್ ಕ್ಲಬ್ ಎಂದು ಕರೆಸಿಕೊಂಡಿತ್ತು!
ನನ್ನ ಉತ್ತರಾಧಿಕಾರಿ ಎಂದರು ಮರಡೋನಾ!
——————————
ಮೆಸ್ಸಿ ಅರ್ಜೆಂಟೀನಾ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಲು ಯಾವ ತೊಂದರೆ ಕೂಡ ಆಗಲಿಲ್ಲ! ಆಗಾಗ ಕಾಡುತ್ತಿದ್ದ ಹಾರ್ಮೋನ್ ಕೊರತೆಯ ಆರೋಗ್ಯ ಸಮಸ್ಯೆಯನ್ನು ತನ್ನ ಪ್ರಬಲ ಇಚ್ಛಾ ಶಕ್ತಿಯ ಮೂಲಕ ಗೆದ್ದವರು ಮೆಸ್ಸಿ! 2006 ಫೆಬ್ರುವರಿ ತಿಂಗಳಲ್ಲಿ ಅದೇ ಅರ್ಜೆಂಟೀನಾದ ಫುಟ್ಬಾಲ್ ಗಾಡ್  ಮರಡೋನಾ ಅವರು ಮೆಸ್ಸಿಯನ್ನು ತನ್ನ ಉತ್ತರಾಧಿಕಾರಿ ಎಂದು ಘೋಷಣೆ ಮಾಡಿದ್ದರು! ಅವರಿಬ್ಬರ ಆಟದಲ್ಲಿ ತುಂಬಾ ಹೋಲಿಕೆ ಇದೆ. ಇಬ್ಬರ ಎತ್ತರ ಆಲ್ಮೋಸ್ಟ್ ಒಂದೇ ಇದೆ. ಇಬ್ಬರೂ ಎಡಗಾಲು ಫಾರ್ವರ್ಡ್ ಆಟಗಾರರು! ಅದರ ಜೊತೆಗೆ ಆಕ್ರಮಣಕ್ಕೆ ಹೆಸರಾದವರು. ರಕ್ಷಣಾತ್ಮಕ ಆಟ ಅವರಿಬ್ಬರಿಗೂ ಒಗ್ಗುವುದೇ ಇಲ್ಲ!
ಅರ್ಜೆಂಟೀನಾ ಪರವಾಗಿ ಮೆಸ್ಸಿ ದಾಖಲೆ!
———————————-
ಅರ್ಜೆಂಟೀನಾ ರಾಷ್ಟ್ರೀಯ ತಂಡದ ಪರವಾಗಿ ಮೆಸ್ಸಿ ಆಡಲು ಆರಂಭ ಮಾಡಿ ದಶಕಗಳೇ ಸಂದಿದೆ. ಜ್ಯೂನಿಯರ್ ವಿಶ್ವಕಪ್ ಸೇರಿ ಐದು ವಿಶ್ವಕಪ್ ಕೂಟಗಳಲ್ಲಿ ಆತ ಅರ್ಜೆಂಟೀನಾ ಪರವಾಗಿ ಆಡಿ  ದಾಖಲೆ ಬರೆದಾಗಿದೆ. ಪೀಲೆ ಮಾಡಿದ 762 ಗೋಲ್ ವಿಶ್ವ ದಾಖಲೆ ಐವತ್ತು ವರ್ಷ ಅಭಾಧಿತ ಆಗಿತ್ತು! ಅದನ್ನು ಮುರಿಯುವ ಸಾಧ್ಯತೆಯ ಹತ್ತಿರ ಮೆಸ್ಸಿ ಇದ್ದಾರೆ.  ಬಾರ್ಸಿಲೋನಾ ಮತ್ತು ಅರ್ಜೆಂಟೀನಾ ಪರವಾಗಿ ಒಟ್ಟು 957 ಪಂದ್ಯಗಳನ್ನು ಆಡಿರುವ ಮೆಸ್ಸಿ ಇದುವರೆಗೆ ಬಾರಿಸಿದ ಒಟ್ಟು ಗೋಲಗಳ ಸಂಖ್ಯೆ 759 ಅಂದರೆ ನಂಬುವುದು ಕಷ್ಟ! ಐದು ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ದಾಖಲೆ ಅದು ಅದ್ಭುತ. ಒಟ್ಟು 25 ವಿಶ್ವಕಪ್ ಪಂದ್ಯಗಳಲ್ಲಿ ಆಡಿದ ದಾಖಲೆ ಅದು ಮೆಸ್ಸಿ ಹೆಸರಲ್ಲಿ ಇದೆ. ಅದರಲ್ಲಿ 18 ಬಾರಿ ಆತ ಅರ್ಜೆಂಟೀನಾ ತಂಡದ ಕ್ಯಾಪ್ಟನ್ ಆಗಿ ಆಡಿದ್ದಾರೆ. ಒಟ್ಟು ಹನ್ನೊಂದು ವಿಶ್ವಕಪ್ ಗೋಲಗಳು ಅದೂ ದಾಖಲೆಯೇ ಆಗಿದೆ! ಅದರ ಜೊತೆಗೆ ಒಲಿಂಪಿಕ್ ಚಿನ್ನದ ಪದಕ ಕೂಡ ಆತನ ಶೋಕೇಸಲ್ಲಿ ಇದೆ!
ಮೆಸ್ಸಿ – ರೆನಾಲ್ಡೋ ಹೋಲಿಕೆ ನಿಲ್ಲುವುದೇ ಇಲ್ಲ!
———————————-
ವರ್ತಮಾನದ ಫುಟ್ಬಾಲ್ ಜಗತ್ತಿನಲ್ಲಿ ಮೆಸ್ಸಿ ಮತ್ತು ಪೋರ್ಚುಗಲ್ ಆಟಗಾರ
ರೆನಾಲ್ಡೋ ಇಬ್ಬರೂ ದಂತಕಥೆಗಳು. ಇಬ್ಬರಿಗೂ ಬಹುದೊಡ್ಡ ಫ್ಯಾನ್ ಫಾಲೋವರ್ಸ್ ಇದೆ. ಪೋರ್ಚುಗಲ್ ಮತ್ತು ಅರ್ಜೆಂಟೀನಾ ಮುಖಾಮುಖಿ ಆದರೆ ಅವರಿಬ್ಬರ ಅಭಿಮಾನಿಗಳು ಮುಗಿಬಿದ್ದು ಮ್ಯಾಚ್ ನೋಡುತ್ತಾರೆ. ಗೋಲ್ ಗಳಿಕೆಯಲ್ಲಿ ರೆನಾಲ್ಡೋ ಅವರು ಮೆಸ್ಸಿಗಿಂತ  ಸ್ವಲ್ಪ ಮುಂದೆ ಇದ್ದಾರೆ. ಆದರೆ ಜನಪ್ರಿಯತೆಯಲ್ಲಿ, ಗೋಲ್ಡನ್ ಬೂಟ್ ಗಳಿಕೆಯಲ್ಲಿ, ಮ್ಯಾಚ್ ಗೆಲ್ಲಿಸಿಕೊಡುವ ಶಕ್ತಿಯಲ್ಲಿ, ಶ್ರೀಮಂತಿಕೆಯಲ್ಲಿ, ಆಕ್ರಮಣಕಾರಿ ಆಟದಲ್ಲಿ ಮೆಸ್ಸಿ ಬಹಳ ಮುಂದಿದ್ದಾರೆ. ಈ ಬಾರಿಯ ಕತಾರ್ ವಿಶ್ವಕಪ್ ಸಾಧನೆಯನ್ನು ಪರಿಗಣಿಸಿದಾಗ ಮೆಸ್ಸಿ ರೊನಾಲ್ಡೋ ಅವರಿಗಿಂತ ಗಾವುದ ದೂರ ಇದ್ದಾರೆ ಎಂದೇ ಹೇಳಬಹುದು!
ಈ ಬಾರಿಯ ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ಮೆಸ್ಸಿ! 
——————————
35 ವರ್ಷ ಪ್ರಾಯದ ಆತನ ಜನಪ್ರಿಯತೆ ಮತ್ತು ಆಟದ ಕಸುವು ಒಂದಿಂಚೂ ಮಾಸಿಲ್ಲ ಅನ್ನುವುದೇ ಭರತವಾಕ್ಯ. ಪ್ರತೀ ಪಂದ್ಯದಲ್ಲೂ ಆತ ಗೋಲ್ ಬಾರಿಸಿದ್ದಾರೆ ಅಥವ ಗೋಲ್ ಗಳಿಕೆಗೆ ಸಹಾಯ ಮಾಡಿದ್ದಾರೆ. ಆತ ಇದ್ದರೆ ತಂಡದ ಆಟಗಾರರಿಗೆ ಬೇರೆ ಪ್ರೇರಣೆ ಬೇಕಾಗುವುದಿಲ್ಲ! ಮೈದಾನದಲ್ಲಿ ಮೆಸ್ಸಿ ಮೆಸ್ಸಿ ಮೆಸ್ಸಿ ಕೂಗು……..ಸಮುದ್ರದ ಅಲೆಗಳ ಹಾಗೆ ಅನುರಣನ ಆಗುವಾಗ ಯಾರಿಗಾದರೂ ರೋಮಾಂಚನ ಆಗುತ್ತದೆ. ಕತಾರ್ ವಿಶ್ವಕಪನಲ್ಲಿ ಈಗಾಗಲೇ ಐದು ಗೋಲ್ ಹೊಡೆದಿರುವ ಮೆಸ್ಸಿ ಮತ್ತೊಂದು ಗೋಲ್ಡನ್ ಬೂಟ್ ರೇಸಲ್ಲಿ ಇದ್ದಾರೆ. ಫೈನಲ್ ಪಂದ್ಯದ ಎದುರಾಳಿ ಫ್ರಾನ್ಸ್ ತಂಡದ ನವೋದಿತ ತಾರೆ ಕೈಲಿನ್ ಎಂಬಪ್ಪೆ ಕೂಡ ಐದು ಗೋಲ್ ಹೊಡೆದಿದ್ದಾರೆ ಎಂಬಲ್ಲಿಗೆ ಫೈನಲ್ ಪಂದ್ಯ ಕ್ರೀಡಾಂಗಣದಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಬಹುದು! ಅದು ತನ್ನ ಕೊನೆಯ ಪಂದ್ಯ ಎಂದು ಮೆಸ್ಸಿ ಘೋಷಣೆ ಮಾಡಿ ಆಗಿದೆ.
ಮೆಸ್ಸಿ ಅರ್ಜೆಂಟೀನಾ ತಂಡವನ್ನು ಗೆಲ್ಲಿಸಿ ಮರಡೋನಾ ಮಾಡಿದ ಸಾಧನೆ ರಿಪೀಟ್ ಮಾಡುತ್ತಾರಾ? ಅತೀ ಹೆಚ್ಚು ಗೋಲ್ ಹೊಡೆದು ಚಿನ್ನದ ಬೂಟ್ ಒಲಿಸಿಕೊಳ್ಳುತ್ತಾರಾ? ಅರ್ಜೆಂಟೀನಾ ರಾಷ್ಟ್ರ ಅವರಿಗೆ ಗೆಲುವಿನ ವಿದಾಯವನ್ನು ಕೋರುತ್ತದೆಯಾ?…..ಇವೆಲ್ಲವೂ ಈ ರವಿವಾರದ ರಾತ್ರಿಯ ಫೈನಲ್ ಪಂದ್ಯದ ಕುತೂಹಲಗಳು.
ಓವರ್ ಟು ಕತಾರ್! 
Categories
ಫುಟ್ಬಾಲ್

ಫಿಫಾ ವಿಶ್ವಕಪ್ ಫುಟ್ಬಾಲ್ 2022!

ಇನ್ನು 29 ದಿನ ಫುಟ್ಬಾಲ್ ಅಭಿಮಾನಿಗಳು ಮಲಗುವುದಿಲ್ಲ! 
———————————–
ಬಿಸಿಲ ದೇಶ ಕತಾರಿನಲ್ಲಿ  ನವೆಂಬರ್ 20ರಂದು ಆರಂಭವಾಗಿ  ಮುಂದಿನ 29 ದಿನ ಜಗತ್ತಿನ ಅತೀ ದೊಡ್ಡ ಕ್ರೀಡಾಹಬ್ಬ ವೇದಿಕೆ ಏರಲಿದೆ. ಅದು ಫಿಫಾ ವಿಶ್ವಕಪ್ ಫುಟ್ಬಾಲ್! ಕತಾರನ 5 ನಗರಗಳ 8 ಕ್ರೀಡಾಂಗಣಗಳಲ್ಲಿ ಲಕ್ಷ ಲಕ್ಷ ಫುಟ್ಬಾಲ್ ಅಭಿಮಾನಿಗಳು ಸೇರಿ ಕುಣಿದು ಕುಪ್ಪಳಿಸುತ್ತಾರೆ. ಈ ವಿಶ್ವಕಪ್ ಫುಟ್ಬಾಲ್ ಒಂದು ಜಾಗತಿಕ ಆಕರ್ಷಣೆಯೇ ಸರಿ! ಒಂದು ಅದ್ಭುತ ಸೆಲೆಬ್ರೇಶನ್! ಒಂದು ಅದ್ಭುತ ವೈಬ್ರೇಶನ್! ಒಂದು ಅದ್ಭುತ ದೃಶ್ಯ ಕಾವ್ಯ!
ಫುಟ್ಬಾಲ್ ಜಗತ್ತಿನ ನಂಬರ್ ಒನ್ ಕ್ರೀಡೆ! ಅದಕ್ಕೆ ಹೋಲಿಕೆ ಇಲ್ಲ! 
——————————
1930ರಲ್ಲಿ ಫುಟ್ಬಾಲ್ ವಿಶ್ವಕಪ್ ಮೊದಲ ಬಾರಿಗೆ ನಡೆದಾಗ ಕೇವಲ 13 ತಂಡಗಳು ಭಾಗವಹಿಸಿದ್ದವು. ನಡೆದ ಪಂದ್ಯಗಳು ಕೇವಲ 18. ಒಟ್ಟು ಗೋಲಗಳ ಸಂಖ್ಯೆ 70 ಅಂದರೆ ನಿಮಗೆ ಆಶ್ಚರ್ಯ ಆಗಬಹುದು! ಆಗ ಪ್ರಾಥಮಿಕ  ಹಂತದ ಪಂದ್ಯಗಳು ನಡೆದೇ ಇರಲಿಲ್ಲ! ಆದರೆ ಇಂದು ವಿಶ್ವದಲ್ಲಿ ಇನ್ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಫುಟ್ಬಾಲ್ ಪ್ರಧಾನ ಕ್ರೀಡೆಯೇ ಆಗಿದೆ. ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಖಂಡಗಳಲ್ಲಿ ಜನರಿಗೆ ಫುಟ್ಬಾಲ್ ಆಟ ಇದ್ದರೆ ಊಟ, ತಿಂಡಿ, ನಿದ್ರೆ ಯಾವುದೂ ಬೇಡ!
ಏಷಿಯಾದ ಯಾವ ರಾಷ್ಟ್ರವೂ ಈವರೆಗೆ ವಿಶ್ವಕಪ್ ಅಂತಿಮ ಘಟ್ಟಕ್ಕೆ ತಲುಪಿಲ್ಲ ಅಂದರೆ ನೀವು ನಂಬಲೇ ಬೇಕು! ನಾಲ್ಕು ವರ್ಷಗಳ ಅವಧಿಗೆ ನಡೆಯುವ ಈ ಜಿದ್ದಾಜಿದ್ದಿ ಕೂಟದಲ್ಲಿ ಗೆಲ್ಲಲು ಎಲ್ಲ ರಾಷ್ಟ್ರಗಳು ಅತ್ಯಂತ ಕುತೂಹಲದಿಂದ ಕಾಯುತ್ತವೆ. ತರಬೇತಿಗಾಗಿ ಕೋಟಿ ಕೋಟಿ ಡಾಲರ್ ಖರ್ಚು ಮಾಡುತ್ತವೆ. ಇಡೀ ನಾಲ್ಕು ವರ್ಷ ನಿರಂತರ ತರಬೇತು, ಆಯ್ಕೆ ಸುತ್ತಿನ ಪಂದ್ಯಗಳು  ನಡೆಯುತ್ತವೆ. ಎಲ್ಲ ರಾಷ್ಟ್ರಗಳಿಗೂ ಇದು ಪ್ರತಿಷ್ಠೆಯ ಪ್ರಶ್ನೆ. ಟಿವಿ ಲೈವ್ ಮೂಲಕ ಜಗತ್ತಿನ ಹೆಚ್ಚು ಕಡಿಮೆ ಎಲ್ಲ ರಾಷ್ಟ್ರಗಳು ಫುಟ್ಬಾಲ್ ಪಂದ್ಯಗಳನ್ನು ವೀಕ್ಷಣೆ ಮಾಡುತ್ತವೆ. ಜಗತ್ತಿನಲ್ಲಿ ಈ 92 ವರ್ಷಗಳಲ್ಲಿ ಏನೇನೋ ಆಗಿಹೋಗಿದೆ. ಆದರೆ ಫುಟ್ಬಾಲ್ ಜನಪ್ರಿಯತೆಯು ಒಂದಿಂಚು ಕಡಿಮೆ ಆಗುವುದಿಲ್ಲ!
ಟಿವಿ ಲೈವ್ ಕಾರ್ಯಕ್ರಮದ ಮೂಲಕ ವಿಶ್ವಕಪ್ ಫುಟ್ಬಾಲ್ ಪಂದ್ಯಗಳನ್ನು ವೀಕ್ಷಣೆ ಮಾಡುವವರು ಅಂದಾಜು ಸಂಖ್ಯೆ ಈ ಬಾರಿ 370 ಕೋಟಿ ದಾಟುವ ಎಲ್ಲ ಸಾಧ್ಯತೆಯೂ ಇದೆ. ಅದಕ್ಕೆ ಕಾರಣ ಫುಟ್ಬಾಲಿನ ಕ್ರೇಜ್ ಇರುವ ನಿಮ್ಮಂತಹ, ನಮ್ಮಂತಹ ಕ್ರೀಡಾಭಿಮಾನೀಗಳು.
ಫುಟ್ಬಾಲ್ ಅಂಗಳದಲ್ಲಿ ಮಿಂಚಿರುವ ಶತಮಾನದ ಲೆಜೆಂಡಗಳು! 
———————————-
ಬ್ಯುನಸ್ ಐರಿಸನ ಕೊಳೆಗೇರಿಯಲ್ಲಿ ಹುಟ್ಟಿ, ಬಾಲ್ಯದುದ್ದಕ್ಕೂ ಹಸಿವನ್ನು ಉಂಡು ಬೆಳೆದ ಮುಂದೆ ಫುಟ್ಬಾಲ್ ವಿಶ್ವವನ್ನು ದಂಗುಪಡಿಸಿದ ಡಿಗೋ ಮರಡೋನಾ ಫುಟ್ಬಾಲಿನ ಅತೀ ದೊಡ್ಡ ತಾರೆಯಾಗಿ ಬೆಳೆದದ್ದು ನಿಜವಾಗಿಯೂ ಗ್ರೇಟ್! ಆತ ಡಿಗೊ ಮರದೋನಾ. ಫುಟ್ಬಾಲ್ ಜಗತ್ತಿನ ಮೇಲೆ ಆತನು ಬೀರಿದ ಪ್ರಭಾವ ಅದ್ಭುತ ಆದದ್ದು! ಆತನಿಗಿಂತ ತುಂಬಾ ಮೊದಲು ಬ್ರೆಜಿಲ್ ಗಲ್ಲಿ ಗಲ್ಲಿಗಳಲ್ಲಿ ಫುಟ್ಬಾಲ್ ಒದ್ದು ಬೆಳೆದ ಪೀಲೆ ಮುಂದೆ ಜಗತ್ತನ್ನು ದಂಗು ಬಡಿಸಿದ್ದು ತನ್ನ ಅಪ್ರತಿಮ ಫುಟ್ಬಾಲ್ ಕೌಶಲಗಳಿಂದ! ಇತ್ತೀಚಿನ ವರ್ಷಗಳ ಅವಧಿಯಲ್ಲಿ ಲಿಯೊನೆಲ್ ಮೆಸ್ಸಿ, ಕ್ರಿಶ್ಚಿಯನ್ ರೆನಾಲ್ಡೋ, ನೆಮರ್, ರಿವಾಲ್ಡೋ, ರೋಮಾರಿಯೊ ಮೊದಲಾದ ವಿಶ್ವಮಟ್ಟದ ತಾರೆಯರು ಇದ್ದಾರೆ. ಪ್ರತೀ ವರ್ಷವೂ ಹೊಸ ಹೊಸ ದಾಖಲೆಗಳು ಅರಳುತ್ತವೆ. ಫುಟ್ಬಾಲನ ಪರಿಭಾಷೆಗಳು ಬದಲಾಗುತ್ತಿವೆ.
ಇದುವರೆಗೆ ವಿಶ್ವಕಪ್ ಗೆದ್ದದ್ದು ಕೇವಲ ಎಂಟೆ ರಾಷ್ಟ್ರಗಳು!
——————————
ಇದುವರೆಗೆ ನಡೆದ 21 ವಿಶ್ವಕಪ್ ಕೂಟಗಳಲ್ಲಿ ಗೆದ್ದಿದ್ದು ಕೇವಲ ಎಂಟು ರಾಷ್ಟ್ರಗಳು ಅಂದರೆ ನಂಬುವುದು ಕಷ್ಟ ಆಗಬಹುದು. ಅದು ಕೂಡ ಯುರೋಪ್ ಮತ್ತು ದಕ್ಷಿಣ ಅಮೇರಿಕ ಖಂಡಗಳ ರಾಷ್ಟ್ರಗಳು! ಪ್ರತೀ ವಿಶ್ವಕಪ್ ಕೂಟದಲ್ಲಿ ಭಾಗವಹಿಸಿದ ಬ್ರೆಜಿಲ್ ಐದು ಬಾರಿ ವಿಶ್ವಕಪ್ ಗೆದ್ದಿದೆ! ನಾಲ್ಕು ಬಾರಿ ಗೆದ್ದು ದಾಖಲೆ ಮಾಡಿದ ರಾಷ್ಟ್ರಗಳು ಇಟೆಲಿ ಹಾಗೂ ಜರ್ಮನಿಗಳು! ಉರುಗ್ವೆ, ಅರ್ಜೆಂಟೀನಾ ಮತ್ತು ಸ್ಪೇನ್ ತಲಾ ಎರಡು ಬಾರಿ ವಿಶ್ವಕಪ್ ಗೆದ್ದು ಸಾಧನೆ ಮಾಡಿವೆ. ಇಂಗ್ಲೆಂಡ್ ಮತ್ತು ಫ್ರಾನ್ಸ್ ಒಂದು ಬಾರಿ ವಿಶ್ವಕಪ್ ಗೆದ್ದಿವೆ.
ಈ ಬಾರಿ ಫಿಫಾ ಕಪ್ ಯಾರಿಗೆ?
———————————-
ಕ್ರಿಕೆಟಿನ ಹಾಗೆ ಫುಟ್ಬಾಲ್ ತೀರಾ ಅನಿಶ್ಚಿತತೆಯ ಕ್ರೀಡೆ. ಕುತೂಹಲದ ಪರಾಕಾಷ್ಠೆ. ಬ್ರೆಜಿಲನಂತಹ ಚಾಂಪಿಯನ್ ತಂಡವನ್ನು ಸಾಮಾನ್ಯ ತಂಡವಾದ ಮೊರಾಕೊ ಅಡ್ಡ ನೀಟ ಮಲಗಿಸಬಲ್ಲದು!
ಏನಿದ್ದರೂ ಬ್ರೆಜಿಲ್, ಸ್ಪೇನ್, ಇಟೆಲಿ, ಅರ್ಜೆಂಟೀನಾ,ಫ್ರಾನ್ಸ್, ಪೋರ್ಚುಗಲ್ ತಂಡಗಳು ಸೆಮಿ ಹಂತಕ್ಕೆ ಬರುವ ಶಕ್ತಿ ಹೊಂದಿವೆ. ಆದರೆ ಭಾಗವಹಿಸುವ 32 ತಂಡಗಳಲ್ಲಿ ಯಾವ ತಂಡವೂ ಕಪ್ ಗೆಲ್ಲುವ ಛಾತಿ ಹೊಂದಿದೆ.
ಬನ್ನಿ! ನವೆಂಬರ್  20ರಿಂದ ಆರಂಭವಾಗುವ ವಿಶ್ವದ ಮಹೋನ್ನತ ಕೂಟದ ಪ್ರತೀ ಕ್ಷಣ ಆಸ್ವಾದನೆ ಮಾಡೋಣ! ಕ್ರೀಡೆಯನ್ನು ಗೆಲ್ಲಿಸೋಣ! ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಜನಪ್ರಿಯ ಕ್ರೀಡೆ ವಿಶ್ವವನ್ನು ಒಂದು ಮಾಡಲಿ. ಕೊರೋನಾ ಕಾಲದ ಮನೋಕ್ಲೇಶಗಳಿಗೆ ಪೂರ್ಣ ವಿರಾಮ ಕೊಡಲಿ.
Categories
ಫುಟ್ಬಾಲ್

ಭಾರತೀಯ ಫುಟ್ಬಾಲ್ ದಂತಕತೆ – ಸುನೀಲ್ ಛೇಟ್ರಿ. ಲೆಜೆಂಡ್ ಆಟಗಾರನಿಗೆ ತಡವಾಗಿ ಆದರೂ ಒಲಿದ ಫಿಫಾ ಗೌರವ!

ಸಾಮಾನ್ಯವಾಗಿ ವಿಶ್ವಮಟ್ಟದ ಫುಟ್ಬಾಲ್ ಆಟಗಾರರು 35 ವರ್ಷ ಆಗುವ ಹೊತ್ತಿಗೆ ನಿವೃತ್ತಿ ಘೋಷಣೆ ಮಾಡುತ್ತಾರೆ. ಯಾಕೆಂದರೆ ಫುಟ್ಬಾಲ್ ಅತೀ ಹೆಚ್ಚು ದೈಹಿಕ ದೃಢತೆ ಮತ್ತು ಕ್ಷಮತೆಗಳನ್ನು ಬೇಡುವ ಆಟ ಆಗಿದೆ.
ಆದರೆ ಈ ಭಾರತೀಯ ಫುಟ್ಬಾಲ್ ಆಟಗಾರನ ಸಾಧನೆಯ ಹಸಿವು ಸದ್ಯಕ್ಕಂತೂ  ತಣಿಯುವ ಯಾವ ಸೂಚನೆಯು ಇಲ್ಲ ಎಂದೆನಿಸುತ್ತದೆ! ವರ್ಷ ಮೂವತ್ತೆಂಟು  ದಾಟಿದರೂ ಆತನ ಚರಿಷ್ಮಾ ಒಂದಿಷ್ಟೂ ಕುಸಿದಿಲ್ಲ! ವೇಗ, ನಿಖರತೆ, ಆಕ್ರಮಣ, ಪಾದಗಳ ಚಲನೆಯ ವೇಗ, ಸ್ಟೆಮಿನಾ ಯಾವುದೂ ಕಡಿಮೆ ಆಗಿಲ್ಲ.
ಆತನೇ ಭಾರತೀಯ ಫುಟ್ಬಾಲ್ ತಂಡದ ಕ್ಯಾಪ್ಟನ್ ಸುನಿಲ್ ಛೇಟ್ರಿ!
ಅವರ ಇಡೀ ಕುಟುಂಬವೇ ಫುಟ್ಬಾಲಿಗೆ ಸಮರ್ಪಿತ!
————————————————–
ಸುನೀಲ್ ಛೇಟ್ರಿ ಇಡೀ ಕುಟುಂಬವೇ ಫುಟ್ಬಾಲ್ ಕ್ರೀಡೆಗೆ ಸಮರ್ಪಿತ ಆಗಿರುವುದು ವಿಶೇಷ. ಆತನ ತಂದೆ ಕೂಡ  ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಅವರು ಸೇನಾ ತಂಡದ ಪರವಾಗಿ ಆಡಿದ್ದರು. ಅವರ ಅಕ್ಕಂದಿರು, ತಾಯಿ, ಪ್ರೀತಿ ಮಾಡಿ ಕೈ ಹಿಡಿದ ಹೆಂಡತಿ, ಮಾವ ಎಲ್ಲರೂ ಫುಟ್ಬಾಲ್ ಆಟಗಾರರೇ ಆಗಿದ್ದಾರೆ!
ಅದರಿಂದಾಗಿ ಸುನೀಲ್ ಛೇಟ್ರೀ ಫುಟ್ಬಾಲೀನ  ಪ್ರತಿಭೆಯು ಅಮೇಜಾನ್ ನದಿಯ ವೇಗವನ್ನು ಪಡೆಯಿತು. ಅತೀ ಸಣ್ಣ ವಯಸ್ಸಿಗೇ ಫುಟ್ಬಾಲ್ ಆಡಲು ಆರಂಭ ಮಾಡಿದ ಆತ ಇಂದು ಜಾಗತಿಕ ಮಟ್ಟದಲ್ಲಿ ಭಾರತದ ಫುಟ್ಬಾಲ್ ಆಟದ  ಧ್ವಜವನ್ನು ಬಹಳ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದಾರೆ!
ಸುನೀಲ್ ಪ್ರಯಾಣ ಆರಂಭ ಆದದ್ದು ಹೀಗೆ!
——————————————-
2002ರಲ್ಲಿ ಮೋಹನ್ ಬಗಾನ್ ಕ್ಲಬ್  ಪರ ಆಡುವುದರ ಮೂಲಕ ಸುನೀಲ್ ಪ್ರತಿಭೆಯು ಮೊದಲು ಪ್ರಕಾಶನಕ್ಕೆ ಬಂದಿತು. ಇದುವರೆಗೆ ಒಟ್ಟು 13 ಕ್ಲಬ್ ಮಟ್ಟದ ತಂಡಗಳ ಪರವಾಗಿ ಅವರು ಆಡಿದ್ದು ಯಾರೂ ಮುರಿಯಲು ಸಾಧ್ಯವೆ ಆಗದ ದಾಖಲೆಯನ್ನು ಹೊಂದಿದ್ದಾರೆ! ಸುನೀಲ್ ತಂಡದಲ್ಲಿ  ಇದ್ದರೆ ಗೆಲುವು ಖಚಿತ ಎನ್ನುವ ನಂಬಿಕೆಯು ಈವರೆಗೆ ಎಲ್ಲಿಯೂ ಸೋತಿರುವ ಉದಾಹರಣೆ ಇಲ್ಲ.
ಭಾರತ ಫುಟ್ಬಾಲ್ ತಂಡವು ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ತೀರಾ ಕಳಪೆ ಸಾಧನೆ ಮಾಡುತ್ತಾ ಬಂದಿದ್ದರೂ ಸುನೀಲ್ ಛೇಟ್ರಿ ಅವರ ಅಂತಾರಾಷ್ಟ್ರೀಯ ದಾಖಲೆಗಳು ಇಂದಿಗೂ ಪ್ರಕಾಶಮಾನ ಆಗಿವೆ. ಆದಕ್ಕೆ ಕಾರಣ ಆತನ ಶ್ರೇಷ್ಟವಾದ ಪ್ರತಿಭೆ, ಬೆವರು ಸುರಿಸುವ ಸಾಧನೆ ಮತ್ತು ಕಠಿಣ ಪರಿಶ್ರಮ ಎಂದರೆ ಖಂಡಿತ ತಪ್ಪಿಲ್ಲ. ಆತನ ಆಟದಲ್ಲಿ ತೀವ್ರ ಆಕ್ರಮಣ ಇದೆ. ಆದರೆ ಆತ ಮೈದಾನದಲ್ಲಿ ಈವರೆಗೆ ತಾಳ್ಮೆ ತಪ್ಪಿದ್ದೇ ಇಲ್ಲ!
ಜಾಗತಿಕ ಮಟ್ಟದಲ್ಲಿ ಸುನೀಲ್ ಈಗ ನಂಬರ್ 3!
———————————————–
ಸುನೀಲ್ ಈವರೆಗೆ 131 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಹೊಡೆದ ಗೋಲುಗಳ ಸಂಖ್ಯೆ 84! ಕ್ರಿಶ್ಚಿಯನ್ ರೆನಾಲ್ದೋ ಮತ್ತು ಲಿಯೋನೆಲ್ ಮೆಸ್ಸಿ ಬಿಟ್ಟರೆ ಮೂರನೇ ಸ್ಥಾನದಲ್ಲಿ ಈಗ ಇರುವುದು ಸುನೀಲ್ ಛೇಟ್ರೀ ಮಾತ್ರ!
ಅವರಿಬ್ಬರಿಗೂ ಸಿಕ್ಕಿದ ಫೋಕಸ್ ಮತ್ತು ಅವಕಾಶಗಳು ನಮ್ಮ ಸುನೀಲ್ ಅವರಿಗೆ ಸಿಕ್ಕಿದ್ದರೆ ಅವರು ಖಂಡಿತವಾಗಿ ಜಾಗತಿಕ ದಾಖಲೆಗಳನ್ನು ಮಾಡುವ ಸಾಧ್ಯತೆ ಇತ್ತು. ಆದರೆ ದುರದೃಷ್ಟ ಎಂದರೆ ಆತನಿಗೆ ಈವರೆಗೆ ಫಿಫಾ ವಿಶ್ವಕಪ್ ಪಂದ್ಯಗಳಲ್ಲಿ ಆಡುವ ಅವಕಾಶವು ದೊರೆತಿಲ್ಲ ಅನ್ನುವುದು!
ಕ್ರಿಕೆಟ್ ಆಟ  ಭಾರತದ ನಾಡಿ ಮಿಡಿತವೇ ಆಗಿರುವುದರಿಂದ  ಬೇರೆ ಎಲ್ಲ ಆಟಗಳು ಮಸುಕು ಆಗಿರುವುದು ನಿಜವಾದ ದುರಂತ.
ಆದರೆ ಸುನೀಲ್ ಛೇಟ್ರಿ ಸಾಧನೆಗೆ ಎಣೆಯೇ ಇಲ್ಲ!
———————————————–
ಭಾರತದ ‘ದ ಬೆಸ್ಟ್  ಫಾರ್ವರ್ಡ್’  ಆಟಗಾರ ಆಗಿರುವ ಸುನೀಲ್ ಗೋಲ್ ಬಾರಿಸುವ ಯಾವ ಅವಕಾಶವನ್ನೂ ಈವರೆಗೆ ಕೈ ಚೆಲ್ಲಿದ ಪ್ರಸಂಗ ಇಲ್ಲ. ಮೂರು ಖಂಡಗಳಲ್ಲಿ ಆಡಿರುವ ಏಕೈಕ ಭಾರತೀಯ ಆಟಗಾರ ಅವರು.
AIFF (ಭಾರತೀಯ ಫುಟ್ಬಾಲ್ ಫೆಡರೇಷನ್) ನೀಡುವ ವರ್ಷದ ಫುಟ್ಬಾಲ್ ಆಟಗಾರ ಪ್ರಶಸ್ತಿಯನ್ನು ಏಳು ಬಾರಿ ಪಡೆದಿರುವ ಏಕೈಕ ಆಟಗಾರ ಅವರು! ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿಗಳನ್ನು  ಈಗಾಗಲೇ ಅವರು ಗೆದ್ದಾಗಿದೆ! ಎಲ್ಲಕಿಂತ ಹೆಚ್ಚಾಗಿ ದೇಶದ ಶ್ರೇಷ್ಠ ಕ್ರೀಡಾ ಪ್ರಶಸ್ತಿಯಾದ
‘ಖೇಲ್ ರತ್ನ ‘ ಪ್ರಶಸ್ತಿಯನ್ನು  ಪಡೆದಿರುವ ಮೊತ್ತಮೊದಲ ಫುಟ್ಬಾಲ್ ಆಟಗಾರ ಅವರು! ಏಷಿಯನ್ ಫುಟ್ಬಾಲ್ ಒಕ್ಕೂಟ ಅವರಿಗೆ ‘ಏಷಿಯಾದ ಫುಟ್ಬಾಲ್ ಐಕಾನ್’ ಪ್ರಶಸ್ತಿ ನೀಡಿ ಗೌರವಿಸಿದೆ.
ಸುನೀಲ್ ಛೇಟ್ರಿ ಭಾರತದ ಬಹುಮೂಲ್ಯ ಆಟಗಾರ.
—————————————————
ಈಗಲೂ ಸುನೀಲ್ ಭಾರತದ  ಅತ್ಯಂತ ಬಹುಮೂಲ್ಯವಾದ  ಆಟಗಾರ ಎಂದು ಗುರುತಿಸಿಕೊಂಡಿದ್ದಾರೆ. 38ರ ಇಳಿ ಹರೆಯದಲ್ಲಿ ಕೂಡ ಅವರನ್ನು ಖರೀದಿ ಮಾಡಲು ದೇಶದ ಶ್ರೀಮಂತ ಕ್ಲಬಗಳು ತುದಿಗಾಲಲ್ಲಿ ನಿಂತಿವೆ ಅನ್ನೋದು ಅವರ ಪವರ್ ! ಈಗ ಬೆಂಗಳೂರು ಕ್ಲಬ್ ಪರವಾಗಿ ಅವರು ಆಡುತ್ತಿದ್ದಾರೆ.
ತಡವಾಗಿ ದೊರೆಯಿತು ಅಂತಾರಾಷ್ಟ್ರೀಯ ಮಾನ್ಯತೆ!
————————————————-
ಇಷ್ಟೆಲ್ಲ ಸಾಧನೆಯನ್ನು  ಮಾಡಿದ್ದರೂ ಅಂತಾರಾಷ್ಟ್ರೀಯ ಫುಟ್ಬಾಲ್ ಸಂಸ್ಥೆ ಫಿಫಾ ಅವರನ್ನು ಗುರುತಿಸಿಲ್ಲ ಎನ್ನುವ ನೋವು ಪ್ರತಿಯೊಬ್ಬ ಭಾರತೀಯನಿಗೂ ಇತ್ತು. ಸುನೀಲ್ ಕೂಡ ಇದರ ಬಗ್ಗೆ ಬಹಳ ದುಃಖ ವ್ಯಕ್ತ ಪಡಿಸಿದ್ದರು. ಆದರೆ ಈಗ ಆ ನೋವಿಗೆ ಒಂದು ಉಪಶಮನ ದೊರೆತಿದೆ.
ಫಿಫಾ ಈಗ ಸುನೀಲ್ ಛೇಟ್ರಿ ಅವರ ಬಗ್ಗೆ ಒಂದು ಸುಂದರ  ಸಾಕ್ಷ್ಯಚಿತ್ರವನ್ನು ಸಿದ್ಧಮಾಡಿ ಅದನ್ನು ತನ್ನ ಅಧಿಕೃತ ವೆಬ್ ತಾಣದಲ್ಲಿ ಅಪ್ಲೋಡ್ ಮಾಡಿದೆ! ಅದು ಮೂರು ಸಂಚಿಕೆ  ಹೊಂದಿದ್ದು ಅದರಲ್ಲಿ ಜಗತ್ತಿನ ಮಹಾ ಮಹಾ ಫುಟ್ಬಾಲ್ ಆಟಗಾರರು ಸುನೀಲ್ ಛೇಟ್ರಿ ಬಗ್ಗೆ ಅಭಿಮಾನದ ಮಾತು ಹೇಳಿದ್ದಾರೆ. ಮೆಸ್ಸಿ, ರೊನಾಲ್ಡೋ ಇಬ್ಬರೂ ಸುನೀಲ್ ಬಗ್ಗೆ ಪ್ರೀತಿಯಿಂದ ಮಾತಾಡಿದ್ದಾರೆ. ಈ ಗೌರವ ಪಡೆದಿರುವ ಮೊದಲ ಏಷಿಯಾದ ಫುಟ್ಬಾಲ್ ಆಟಗಾರ ಸುನೀಲ್ !
ಫಿಫಾ ಆ ವೀಡಿಯೋದ ಕೊನೆಗೆ ಸುನೀಲ್ ಅವರನ್ನು ‘ಭಾರತದ ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ‘ ಎಂದು ಶ್ಲಾಘಿಸಿದೆ. ಇನ್ನು ಒಂದೇ ತಿಂಗಳಲ್ಲಿ ಫಿಫಾ ವಿಶ್ವಕಪ್ ಆರಂಭವಾಗುವ ಸಂದರ್ಭದಲ್ಲಿ ಭಾರತೀಯ ಆಟಗಾರನಿಗೆ ಸಿಕ್ಕಿದ ಈ ಮಾನ್ಯತೆಯಿಂದ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತೆ ಆಗಿದೆ!
ಇಪ್ಪತ್ತು ವರ್ಷಗಳಿಂದ ಜಾಗತಿಕ ಫುಟ್ಬಾಲನ್ನು ಆಡುತ್ತ ಬಂದಿರುವ ಸುನೀಲ್ ಛೇಟ್ರಿ ಅವರ ಸುವರ್ಣ ಸಾಧನೆಯ ಶಿಖರಬಿಂದು ಈ ಗೌರವ!
Categories
ಫುಟ್ಬಾಲ್

ಸ್ಪೇನ್‌ನ ವೆಲೆನ್ಸಿಯಾದಲ್ಲಿ ನಡೆದ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಉತ್ತಮ ಪ್ರದರ್ಶನ ಮೆಚ್ಚುಗೆ

ನವದೆಹಲಿ : ಸ್ಪೇನ್‌ನ ವೆಲೆನ್ಸಿಯಾದಲ್ಲಿ ಇತ್ತೀಚೆಗೆ ನಡೆದಿದ್ದ ‘ಕೋಟಿಫ್‌ ಕಪ್‌’ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ಉತ್ತಮ ಪ್ರದರ್ಶನ ಮೆಚ್ಚುಗೆ ಪಡೆದಿದೆ.ಈ ಸಾಧನೆಯಿಂದ ಖುಷಿಗೊಂಡ ಟೂರ್ನಿಯ ಅಧ್ಯಕ್ಷರು, ಸಮಾರೋಪ ಸಮಾರಂಭದಲ್ಲಿ ಮೂರನೇ ಸ್ಥಾನ ಪಡೆದ ಭಾರತ ತಂಡಕ್ಕೆ ವಿಶೇಷ ಟ್ರೋಫಿಯೊಂದನ್ನು ನೀಡಿದರು.

ಭಾರತದ ವನಿತೆಯರು ಟೂರ್ನಿಯಲ್ಲಿ ನಾಲ್ಕು ಪಂದ್ಯಗಳನ್ನಾಡಿದ್ದು, ಎರಡರಲ್ಲಿ (ಮೌರಿಟಾನಿಯಾ ವಿರುದ್ಧ 3–1 ಗೆಲುವು, ಬೊಲಿವಿಯಾ ವಿರುದ್ಧ 7–0 ಗೆಲುವು) ಜಯಗಳಿಸಿತ್ತು. ಎರಡು ಪಂದ್ಯಗಳಲ್ಲಿ (0–2 ರಿಂದ ವಿಲ್ಲಾರಿಯಲ್‌ ವಿರುದ್ಧ, ಇದೇ ಅಂತರದಿಂದ ಸ್ಪೇನ್‌ ವಿರುದ್ಧ) ಸೋತಿತ್ತು. ಭಾರತ ಈ ಸಾಧನೆಯಿಂದ 3ನೇ ಸ್ಥಾನ ಪಡೆದಿತ್ತು.

‘ಇದು ಭಾರತದ ಇದುವರೆಗಿನ ಉತ್ತಮ ಸಾಧನೆ. ಶಿಸ್ತುಬದ್ಧ ಆಟವಾಡಿದ ತಂಡವೆಂಬ ಗೌರವವೂ ಭಾರತ ನಾರಿಯರದ್ದಾಗಿತ್ತು’ ಎಂದು ತಂಡದ ಮುಖ್ಯ ಕೋಚ್‌ ಮೆಮೋಲ್‌ ರಾಕಿ ತಿಳಿಸಿದರು.

Categories
Action Replay ಫುಟ್ಬಾಲ್

ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಡ್ರಾ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ

ಕೋಲ್ಕತ್ತ : ಬೆಂಗಳೂರು ಎಫ್‌ಸಿ ತಂಡದ ಹೊಸ ಆಟಗಾರ ಸುರೇಶ್‌ ವಾಂಗ್ಜಾಮ್‌ 81ನೇ ನಿಮಿಷ ‘ಪೆನಾಲ್ಟಿ’ ಅವಕಾಶವನ್ನು ಗೋಲಾಗಿ ಪರಿವರ್ತಿಸಿ, ತಮ್ಮ ತಂಡ ಡ್ಯುರಾಂಡ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಲೀಗ್‌ ಪಂದ್ಯದಲ್ಲಿ ಆರ್ಮಿ ರೆಡ್‌ ವಿರುದ್ಧದ ಪಂದ್ಯವನ್ನು 1–1 ಗೋಲುಗಳಿಂದ ‘ಡ್ರಾ’ ಮಾಡಿಕೊಳ್ಳಲು ನೆರವಾದರು.

‌ಸೋಮವಾರ ಧಗೆಯ ವಾತಾವರಣವಿದ್ದು, ಸೂಪರ್‌ ಲೀಗ್‌ ಚಾಂಪಿಯನ್ನರಾದ ಬೆಂಗಳೂರು ಎಫ್‌ಸಿ ಇದಕ್ಕೆ ಹೊಂದಿಕೊಳ್ಳಲು ಪರದಾಡಿತು.

ಆರ್ಮಿ ತಂಡದ ಫಾರ್ವರ್ಡ್‌ ಆಟಗಾರ ಲಿಟೊನ್‌ ಶಿಲ್‌, ವಿರಾಮಕ್ಕೆ ಕೆಲವೇ ಸೆಕೆಂಡುಗಳಿರುವಾಗ ತಮ್ಮ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು. ಆದರೆ ಉತ್ತಮ ಪಾಸ್‌ಗಳನ್ನು ಕಂಡ ಮೊದಲಾರ್ಧದ ಹೆಚ್ಚಿನ ಅವಧಿಯಲ್ಲಿ ಬೆಂಗಳೂರು ಎಫ್‌ಸಿ ಮೇಲುಗೈ ಸಾಧಿಸಿತ್ತು.

ಪಂದ್ಯ ಮುಗಿಯಲು 9 ನಿಮಿಷಗಳಿರುವಂತೆ, ರಕ್ಷಣೆ ಆಟಗಾರ ನಾಮ್‌ಗ್ಯಾಲ್‌ ಅವರನ್ನು ಎದುರಾಳಿ ತಂಡದ ಬದಲಿ ಆಟಗಾರ ಆಲ್ವಿನ್‌ ಇ. ಅವರು ಗೋಲಿನ ಹತ್ತಿರ ಕೆಡವಿ ಬೀಳಿಸಿದ ಪರಿಣಾಮ ಬೆಂಗಳೂರು ಎಫ್‌ಸಿಗೆ ‘ಪೆನಾಲ್ಟಿ’ ಅವಕಾಶ ದೊರೆಯಿತು. ಬೆಂಗಳೂರು ತಂಡಕ್ಕೆ ಮೊದಲ ಬಾರಿ ಆಡಿದ ಸುರೇಶ್‌, ಸಂಯಮದಿಂದ ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದರು.

ಈ ‘ಡ್ರಾ’ದಿಂದ ಒಂದು ಪಾಯಿಂಟ್‌ ಪಡೆದ ಬೆಂಗಳೂರು ಎಫ್‌ಸಿ ತಂಡ ಈಗ ‘ಎ’ ಗುಂಪಿನಲ್ಲಿ ಎರಡನೇ
ಸ್ಥಾನದಲ್ಲಿದೆ.