ಕೋಟ-ಜೈಹಿಂದ್ ಕ್ರಿಕೆಟರ್ಸ್ ಮಣೂರು ಪಡುಕರೆ ಆಶ್ರಯದಲ್ಲಿ,ಕ್ರೀಡೆಯೊಂದಿಗೆ ಸಮಾಜಸೇವೆಯಲ್ಲೂ ಗುರುತಿಸಿಕೊಂಡ ರಾಜ್ಯದ ಪ್ರಸಿದ್ಧ ವೇಗಿ ಪ್ರಶಾಂತ್ ಪಡುಕರೆ ಇವರ ಸಾರಥ್ಯದಲ್ಲಿ ನವೆಂಬರ್ 11,12 ಮತ್ತು 13 ರಂದು ಸನ್ನಿಧಿ ಟ್ರೋಫಿ-2022 ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ,ಮಣೂರು ಪಡುಕರೆಯ ಲಕ್ಷ್ಮೀ ಸೋಮ ಬಂಗೇರ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ.

ರಾಜ್ಯದ ಪ್ರತಿಷ್ಠಿತ 12 ತಂಡಗಳು ಮತ್ತು 12 ಫ್ರಾಂಚೈಸಿಗಳ ನಡುವೆ ನಡೆಯುವ ಈ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 1.50 ಲಕ್ಷ,ದ್ವಿತೀಯ ಸ್ಥಾನಿ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.



*ನೇತ್ರದಾನ ಮತ್ತು ಅಂಗಾಂಗ ದಾನ ವಾಗ್ದಾನ ಕಾರ್ಯಕ್ರಮ*
ಈ ಪಂದ್ಯಾಟ ವಿಶೇಷವಾಗಿ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೈದಾನದಲ್ಲಿ ನೇತ್ರದಾನ ಮತ್ತು ಅಂಗಾಂಗ ದಾನ ವಾಗ್ದಾನ ಕಾರ್ಯಕ್ರಮ ರವಿವಾರ ನಡೆಯಲಿದೆ.
*ಕೋಸ್ಟಲ್ ಕರ್ನಾಟಕ ಮತ್ತು ರೆಸ್ಟ್ ಆಫ್ ಕರ್ನಾಟಕ ಪ್ರದರ್ಶನ ಪಂದ್ಯಾಟ*
ಶನಿವಾರ ಸಂಜೆ 7 ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ನಡೆಯಲಿದ್ದು ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.ತದ ನಂತರ ಸಂಪತ್ ಬೈಲಾಕೆರೆ ನಾಯಕತ್ವದ ಕೋಸ್ಟಲ್ ಕರ್ನಾಟಕ ಮತ್ತು ಸಚಿನ್ ಮಹಾದೇವ್ ನಾಯಕತ್ವದ ರೆಸ್ಟ್ ಆಫ್ ಕರ್ನಾಟಕ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದ್ದು,ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.ರವಿವಾರ ರಾತ್ರಿ 12 ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ನಡೆಯಲಿದೆ.


M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದ್ದು,
ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲಿದೆ.