Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಟಿ.ಸಿ.ಎ ಉಡುಪಿ ಕಾರ್ಯವೈಖರಿ ಶ್ಲಾಘನೀಯ-ರಾಜ್ಯಮಟ್ಟದಲ್ಲೂ ಟೆನಿಸ್ಬಾಲ್ ಅಸೋಸಿಯೇಷನ್ ಅತ್ಯಗತ್ಯ-ಆರ್.ಮನೋಹರ್ ಜೈಕರ್ನಾಟಕ

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿಯವರ ಸಾರಥ್ಯದಲ್ಲಿ ಯಶಸ್ವಿಯಾಗಿ ತಾಲೂಕು ಮಟ್ಟದ ಪಂದ್ಯಗಳನ್ನು ಸಂಪೂರ್ಣಗೊಳಿಸಿದೆ‌.10-12 ಓವರ್ ಗಳ ಪೂರ್ಣ ಪ್ರಮಾಣದ ಕ್ರಿಕೆಟ್ ನಿಂದ ಮಾತ್ರ ಟೆನಿಸ್ಬಾಲ್ ಕ್ರಿಕೆಟ್ ಪ್ರತಿಭೆಗಳ ಅನಾವರಣಗೊಳ್ಳುತ್ತದೆ‌.ಈ ನಿಟ್ಟಿನಲ್ಲಿ T.C.A ಕಾರ್ಯವೈಖರಿ ಅತ್ಯಂತ ಶ್ಲಾಘನೀಯ ಎಂದು ರಾಜ್ಯದ ಹಿರಿಯ ತಂಡ ಜೈ ಕರ್ನಾಟಕ ಬೆಂಗಳೂರು ತಂಡದ ದಂತಕಥೆ,ಸವ್ಯಸಾಚಿ ಆಟಗಾರರಾದ ಆರ್.ಮನೋಹರ್ ರವರು ಸ್ಪೋರ್ಟ್ಸ್ ಕನ್ನಡದೊಂದಿಗೆ ತಿಳಿಸಿದ್ದಾರೆ.
ಈ ಸಂದರ್ಭ ಮಾತನಾಡಿದ ಮನೋಹರ್ ರವರು ಜೈ ಕರ್ನಾಟಕ 90 ರ ದಶಕದಲ್ಲಿ ಹಾಸನದಲ್ಲಿ ನಡೆದ ಪಂದ್ಯಾಟದಲ್ಲಿ ಕೇವಲ 11 ಜನರ ಸಂಯೋಜಿತ ತಂಡ ಭಗವಾನ್ ಸಿಂಗ್ ರವರ ಅತ್ಯುತ್ತಮ ಬ್ಯಾಟಿಂಗ್ ಮತ್ತು ತಮ್ಮ ತಂಡದ ಆಟಗಾರರ ಸಂಯೋಜಿತ ಪ್ರದರ್ಶನದ ಮೂಲಕ ಚಾಂಪಿಯನ್ಸ್ ತಂಡವಾಗಿ ಹೊರಹೊಮ್ಮಿ ಆ ದಿನಗಳಲ್ಲಿ 4 ಸಾವಿರ ನಗದು ಬಹುಮಾನ‌ ಪಡೆದಿದ್ದನ್ನು ಮೆಲುಕು ಹಾಕಿದರು.ಜೊತೆಗೆ ಮನೀಷ್ ಮುಲ್ಕಿ ಆಯೋಜಿಸಿದ್ದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಚಕ್ರವರ್ತಿಯ ಪ್ರದೀಪ್ ವಾಜ್, ಮನೋಹರ್ ರವರ ಬೌಲಿಂಗ್ ಪ್ರಶಂಸಿಸಿದ್ದನ್ನು ನೆನಪಿಸಿದರು‌‌.ಆ ದಿನಗಳಲ್ಲಿ 4 ಸಾವಿರ ಗೆದ್ದ ಖುಷಿ ಇಂದು 4,5 ಲಕ್ಷ ಜಯಿಸಿದರೂ ಆ ದಿನಗಳ ಖುಷಿ ಇಲ್ಲ ಏಕೆಂದರೆ ಈ ದಿನಗಳಲ್ಲಿ ಪೂರ್ಣಪ್ರಮಾಣದ ಕ್ರಿಕೆಟ್ ಆಯೋಜಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಅಸೋಸಿಯೇಷನ್ ಉಡುಪಿ ಜಿಲ್ಲೆಯ ಹಿರಿಯ ಆಟಗಾರರ ಸಮಾಗಮದಿಂದ ಸ್ಥಾಪನೆಯಾದ ಟಿ.ಸಿ.ಎ ,7 ತಾಲೂಕುಗಳಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ 10 ಓವರ್ ಮಾದರಿಯಲ್ಲಿ ಸಂಘಟಿಸಿ ಗತಕಾಲದ ವೈಭವವನ್ನು ಮತ್ತೆ ಮರುಕಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಸಂಘಟಿಸಲಿದ್ದಾರೆ.90  ದಶಕದಲ್ಲಿ ತಮ್ಮೊಂದಿಗೆ ಆಡಿದ ಉಡುಪಿ ಜಿಲ್ಲೆಯ ಆಟಗಾರರ ಟೆನಿಸ್ಬಾಲ್ ಕ್ರಿಕೆಟ್ ಬಗೆಗಿನ ಕಾಳಜಿ ಪ್ರಶಂಸನೀಯ.ಮುಂದಿನ ನಾಲ್ಕೈದು ವರ್ಷಗಳಲ್ಲಿ ಕರ್ನಾಟಕ ರಾಜ್ಯ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಸ್ಥಾಪನೆಯಾಗಲಿದೆ ಈ ದಿಸೆಯಲ್ಲಿ ತಮ್ಮೆಲ್ಲಾ ಹಿರಿಯ ಆಟಗಾರರ ಪ್ರೋತ್ಸಾಹವಿದೆ ಎಂದು ತಿಳಿಸಿದರು..
ಆರ್.ಮನೋಹರ್ ರವರು ಪ್ರಸ್ತುತ H.A.L ನ ಜನರಲ್ ಸೆಕ್ರೆಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು,ಅಲ್ಲಿಯೂ ಕೂಡ ಕ್ರೀಡಾವಿಭಾಗದ ಮುಖ್ಯಸ್ಥರಾಗಿ ಕ್ರಿಕೆಟ್,ಫುಟ್ಬಾಲ್,ಟೆನಿಸ್ ಹೀಗೆ ವಿವಿಧ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ನೀಡಿ,ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

five × three =