Categories
ಕ್ರಿಕೆಟ್ ರಾಜ್ಯ

ಸಮಾಜರತ್ನ ಡಾ‌.ಗೋವಿಂದ ಬಾಬು ಪೂಜಾರಿ ಒಡೆತನದ ಉದ್ಯೋಗ ಸಂಸ್ಥೆಯಲ್ಲಿ ಕ್ರಿಕೆಟ್ ಹಬ್ಬ-ಶೆಫ್ ಟಾಕ್ ಪ್ರೀಮಿಯರ್ ಲೀಗ್

ಶೆಫ್ ಟಾಕ್ ಫುಡ್&ಹಾಸ್ಪಿಟಾಲಿಟಿ ಸರ್ವಿಸಸ್ಸ್ ಪ್ರೈ.ಲಿ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿ,ಹಲವು ರಾಜ್ಯಗಳಲ್ಲಿ ಅಂಗ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸಿ,ಸಮಾಜಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸಮಾಜರತ್ನ ಡಾ.ಗೋವಿಂದ ಬಾಬು ಪೂಜಾರಿ ಇವರು ತಮ್ಮ‌‌ ಸಂಸ್ಥೆಗಳಲ್ಲಿ ದಿನಂಪ್ರತಿ ದುಡಿಯುವ ನೌಕರರಿಗಾಗಿ 2 ನೇ ಬಾರಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದಾರೆ.
ಬೆಂಗಳೂರು ಕೂಡ್ಲುಗೇಟ್ ಸಮೀಪದ ಮೈದಾನದಲ್ಲಿ ಡಿಸೆಂಬರ್ 25 ರಂದು 60 ಗಜಗಳ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದ್ದು,ಗೋವಿಂದ ಬಾಬು ಪೂಜಾರಿ ಇವರ ಒಡೆತನದ 8 ಸಂಸ್ಥೆಗಳ‌ ಆಟಗಾರರು ಭಾಗವಹಿಸಲಿದ್ದು ಆ ತಂಡಗಳ ವಿವರ ಈ ಕೆಳಗಿನಂತಿದೆ.
1)ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ
2)ಮತ್ಸ್ಯ ಬಂಧನ ಪ್ರೈ.ಲಿಮಿಟೆಡ್
3)ಪ್ರಗ್ನ್ಯಾ ಸಾಗರ(ಹೋಟೆಲ್ಸ್&ರೆಸಾರ್ಟ್ಸ್)
4)ಶೆಫ್ ಟಾಕ್ ನ್ಯೂಟ್ರಿಫುಡ್‌ ಪ್ರೈ.ಲಿಮಿಟೆಡ್
5)ಶ್ರೀ ನಾರಾಯಣ ಗುರು ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್
6)ಮತ್ಸ್ಯ ಲೋಕ
7)ಫೆಲಿಜ್ ನ್(FELIZ N)
8)ಇಂದಿರಾ ಕ್ಯಾಂಟೀನ್
ವಿಶೇಷ ಆಕರ್ಷಣೆ ಎಂಬಂತೆ ರಾಜ್ಯದ ಪ್ರಸಿದ್ಧ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ
ನಿರ್ಣಾಯಕರಾಗಿ ಹಾಗೂ ವೀಕ್ಷಕ ವಿವರಣೆ ನೀಡಲಿದ್ದಾರೆ.
Categories
ಕ್ರಿಕೆಟ್ ರಾಜ್ಯ

ಶಿವಮೊಗ್ಗ- ಸಹನಾ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಮೂರು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಹಬ್ಬ

ಶಿವಮೊಗ್ಗ ಜಿಲ್ಲೆಯ ಗೋಪಾಳದ ಕೆ.ಹೆಚ್.ಬಿ ಕಾಲೋನಿಯ 80 ರ ದಶಕದ ಹಿರಿಯ ಸಂಸ್ಥೆ ಸಹನಾ ಕ್ರಿಕೆಟ್ ಕ್ಲಬ್ ಅಕ್ಟೋಬರ್ 8,9 ಮತ್ತು 10 ರಂದು ಮೂರು ದಿನಗಳ ಹಗಲಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟ “ಸಹನಾ ಟ್ರೋಫಿ-2021” ಆಯೋಜಿಸಿದ್ದಾರೆ.ಮೇ ಮೊದಲ ವಾರದಲ್ಲಿ ಹಮ್ಮಿಕೊಂಡಿದ್ದ ಈ ಪಂದ್ಯಾವಳಿ ಕೋವಿಡ್ ಕಾರಣದಿಂದಾಗಿ ಮುಂದೂಲ್ಪಟ್ಟಿತ್ತು.
ಶಿವಮೊಗ್ಗ ಜಿಲ್ಲೆಯ 8 ತಂಡಗಳು ಹಾಗೂ ರಾಜ್ಯದ ಬಲಿಷ್ಠ 8 ತಂಡಗಳ ಸಹಿತ ಒಟ್ಟು 16 ತಂಡಗಳು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು,ಶಿವಮೊಗ್ಗದ ಶ್ರೀ ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಗೋಪಾಳದ ಮೈದಾನದಲ್ಲಿ ಲೀಗ್ ಮಾದರಿಯಲ್ಲಿ ನಡೆಯಲಿದೆ.
ಪ್ರಥಮ‌ ಬಹುಮಾನ ರೂಪದಲ್ಲಿ 1.5 ಲಕ್ಷ ನಗದು ದ್ವಿತೀಯ ಬಹುಮಾನ ರೂಪದಲ್ಲಿ 75 ಸಾವಿರ ನಗದು ಸಹಿತ ವೈಯಕ್ತಿಕ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಈ ಪಂದ್ಯಾಟದ ನೇರ ಪ್ರಸಾರವನ್ನು ಯೂ ಟ್ಯೂಬ್ ಚಾನೆಲ್ ಮೂಲಕ ವೀಕ್ಷಿಸಲು ಆಯೋಜಕರು ಅವಕಾಶ ಕಲ್ಪಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಗಿರೀಶ್-8310685126,ರೋಹನ್-9448639629 ಹಾಗೂ ವೆಂಕಟೇಶ್-9844158684 ಇವರನ್ನು ಸಂಪರ್ಕಿಸಬಹುದು.
Categories
ಕ್ರಿಕೆಟ್ ರಾಜ್ಯ

ಶಿವಮೊಗ್ಗ-ಸಹನಾ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಮೂರು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಹಬ್ಬ

80 ರ ದಶಕದಲ್ಲಿ ಸ್ಥಾಪನೆಯಾಗಿದ್ದ ಶಿವಮೊಗ್ಗ ಜಿಲ್ಲೆಯ ಗೋಪಾಳದ ಕೆ.ಹೆಚ್.ಬಿ ಕಾಲೋನಿಯ ಹಿರಿಯ ಸಂಸ್ಥೆ ಸಹನಾ ಕ್ರಿಕೆಟ್ ಕ್ಲಬ್ ಏಪ್ರಿಲ್ 30 ಮೇ 1 ಮತ್ತು 2 ರಂದು ಮೂರು ದಿನಗಳ ಹಗಲಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಕೂಟ “ಸಹನಾ ಟ್ರೋಫಿ-2021” ಆಯೋಜಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ 8 ತಂಡಗಳು ಹಾಗೂ ರಾಜ್ಯದ ಬಲಿಷ್ಠ 8 ತಂಡಗಳ ಸಹಿತ ಒಟ್ಟು 16 ತಂಡಗಳು ಪ್ರಬಲ ಪೈಪೋಟಿಯ ಸ್ಪರ್ಧಾಕಣದಲ್ಲಿದ್ದು,
ಶಿವಮೊಗ್ಗದ ಶ್ರೀ ಶಾರದಾ ದೇವಿ ಅಂಧರ ವಿಕಾಸ ಕೇಂದ್ರ ಗೋಪಾಳದ ಮೈದಾನದಲ್ಲಿ ಲೀಗ್ ಮಾದರಿಯಲ್ಲಿ ನಡೆಯಲಿದೆ.
ಪ್ರಥಮ‌ ಬಹುಮಾನ ರೂಪದಲ್ಲಿ 1.5 ಲಕ್ಷ ನಗದು ದ್ವಿತೀಯ ಬಹುಮಾನ ರೂಪದಲ್ಲಿ 75 ಸಾವಿರ ನಗದು ಸಹಿತ ವೈಯಕ್ತಿಕ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಹೆಚ್ಚಿನ ವಿವರಗಳಿಗಾಗಿ ಗಿರೀಶ್-8310685126,ರೋಹನ್-9448639629 ಹಾಗೂ ವೆಂಕಟೇಶ್-8971075489 ಇವರನ್ನು ಸಂಪರ್ಕಿಸಬಹುದು.
Categories
ಕ್ರಿಕೆಟ್ ರಾಜ್ಯ

ಬೆಂಗಳೂರು-ಹುಳಿಮಾವು ಅರಕೆರೆ ವಾರ್ಡ್ ನಂ-193 ಸದಸ್ಯರಿಗಾಗಿ ನಡೆಯುತ್ತಿರುವ “ಶ್ರೀ ಸತೀಶ್ ರೆಡ್ಡಿ ಕಪ್ 2020”

ಬೆಂಗಳೂರು ಹುಳಿಮಾವು ಗ್ರಾಮದ ಅರಕೆರೆ ವಾರ್ಡ್ ನಂ-193 ನ ಸದಸ್ಯರು ಹಲವಾರು ವರ್ಷಗಳಿಂದ ಯಶಸ್ವಿ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟ ನಡೆಸಿಕೊಂಡು ಬಂದಿರುತ್ತಾರೆ.
ಅದೇ ರೀತಿ 2020 ಸಾಲಿನಲ್ಲಿ ಜನಪ್ರಿಯ ಶಾಸಕರಾದ ಶ್ರೀ‌.ಎಂ.ಸತೀಶ್ ರೆಡ್ಡಿಯವರ ಹುಟ್ಟು ಹಬ್ಬದ ಪ್ರಯುಕ್ತ ಮೂರು ದಿನಗಳ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
20 ತಂಡಗಳಿಗೆ ಅವಕಾಶ ಕಲ್ಪಿಸಲಾದ ಈ ಟೂರ್ನಮೆಂಟ್ ನಲ್ಲಿ 10 ತಂಡಗಳು ಅರಕೆರೆ ವಾರ್ಡ್ ಹಾಗೂ ಬೊಮ್ಮನಹಳ್ಳಿ ವಿಧಾನ‌ಸಭಾ ಕ್ಷೇತ್ರದ 10 ತಂಡಗಳು ಸ್ಪರ್ಧಿಸುತ್ತಿದೆ.ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ 1 ಲಕ್ಷ ,ದ್ವಿತೀಯ ಸ್ಥಾನಿ 50 ಸಾವಿರ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದು,
ಭಾಗವಹಿಸುವ ಎಲ್ಲಾ ತಂಡಗಳಿಗೂ 10 ಸಾವಿರ ನಗದು ಬಹುಮಾನ‌ ನೀಡಿ ಗೌರವಿಸಲಾಗುತ್ತಿದೆ.
ವಿಶೇಷವಾಗಿ ಡಿಸೆಂಬರ್-13 ರವಿವಾರದಂದು ಶಾಸಕರಾದ ಶ್ರೀ.ಎಂ.ಸತೀಶ್ ರೆಡ್ಡಿಯವರ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.
ಪಂದ್ಯಾಟದ ನೇರ ಪ್ರಸಾರ ಕ್ರಿಕ್ ಸೇ ಬಿತ್ತರಿಸುತ್ತಿದ್ದು,ವೀಕ್ಷಕ ವಿವರಣೆಯಲ್ಲಿ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಅಂಬಲಪಾಡಿ ಹಾಗೂ ರಾಘವೇಂದ್ರ ಮಟಪಾಡಿ ಸಹಕರಿಸುತ್ತಿದ್ದಾರೆ.
Categories
ಕ್ರಿಕೆಟ್ ರಾಜ್ಯ

H.C.L-2020: ಬೆಂಗಳೂರಿನಲ್ಲಿ ಇಂದಿನಿಂದ ಹೆಗ್ಡೆನಗರ ಚಾಂಪಿಯನ್ಸ್ ಲೀಗ್

ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾಟಗಳ ನೇರ ಪ್ರಸಾರವನ್ನು ಬಿತ್ತರಿಸುವ ಪ್ರಸಿದ್ಧ Y.Sports ಯೂ ಟ್ಯೂಬ್ ಚಾನೆಲ್ ನ ರೂವಾರಿ ಯಾಸೀನ್ ಇವರ ಸಾರಥ್ಯದಲ್ಲಿ ಬೆಂಗಳೂರಿನ ಶೋಭಾ ಸಿಟಿ ಬಳಿಯ ಆರ್.ಕೆ.ಹೆಗ್ಡೆನಗರದ ಎಜೆಬಿಜೆ ಮೈದಾನದಲ್ಲಿ ಎರಡು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ರಾಜ್ಯದ ಪ್ರತಿಷ್ಠಿತ 16 ತಂಡಗಳು ಸ್ಪರ್ಧಾಕಣದಲ್ಲಿದ್ದು,ಪ್ರಥಮ ಪ್ರಶಸ್ತಿ ವಿಜೇತ ತಂಡ 1ಲಕ್ಷ ಹಾಗೂ ದ್ವಿತೀಯ ಸ್ಥಾನಿ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡುವ ಆಟಗಾರರು ವಿಶೇಷ ಬಹುಮಾನಗಳನ್ನು ಪಡೆಯಲಿದ್ದಾರೆ.
ಪಂದ್ಯಾವಳಿಯ ನೇರ ಪ್ರಸಾರ Y.Sports ಬಿತ್ತರಿಸಲಿದೆ.
Categories
ಇತರೆ ಭರವಸೆಯ ಬೆಳಕು ಯಶೋಗಾಥೆ ರಾಜ್ಯ

ಕರಾವಳಿ ಕನ್ನಡಿಗ ಕೋಟ ರಾಮಕೃಷ್ಣ ಆಚಾರ್ಯರಿಗೆ ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಟೆನ್ನಿಸ್ ಬಾಲ್ ಕ್ರಿಕೆಟ್ ಗೆ ಆಟಗಾರರ ಮಧ್ಯೆ ಒಂದು ಸಂಕೋಲೆಯನ್ನು  ಸೃಷ್ಟಿಸಿದ ಕರ್ನಾಟಕದ ಮೊತ್ತ ಮೊದಲ ಕ್ರೀಡಾ ವೆಬ್ ಸೈಟ್ ಎಂಬ ಕೀರ್ತಿಗೆ ಪಾತ್ರವಾಗಿದೆ
ಈ sportskannada.com . ಕೋಟ ರಾಮಕೃಷ್ಣ ಆಚಾರ್ ರವರು ಸತತ 10 ವರ್ಷಗಳ ಅಧ್ಯಯನ ಮತ್ತು ಅವಿರತ ಶ್ರಮದಿಂದ ಕರ್ನಾಟಕದಲ್ಲಿರುವ 1970 ರಿಂದ 2020 ರ ಕಾಲಘಟ್ಟದ ಹಿರಿಯ ಹಾಗೂ ಕಿರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರರನ್ನು ಅವರಿದ್ದಲ್ಲೇ ಹೋಗಿ ಸಂದರ್ಶಿಸಿ ಅವರ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಹಿರಿಯ ಆಟಗಾರರ ಅನುಭವಗಳನ್ನು ನಮ್ಮ ಭವಿಷ್ಯದ ಪೀಳಿಗೆಗಳಿಗೆ ಹಂಚಿ ಟೆನ್ನಿಸ್ ಬಾಲ್ ಕ್ರಿಕೆಟ್ ಎಂಬ ಹಳೆಯ ಬೇರು ಹೊಸ ಚಿಗುರೊಡೆಯುದಕ್ಕೊಸ್ಕರ ನೀರೆರೆಯುವ ಪ್ರಯತ್ನವನ್ನ ಮಾಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಹಿರಿಯ ಮತ್ತು ಕಿರಿಯ ಆಟಗಾರರನ್ನು “ರಾಜ್ಯ ಟೆನ್ನಿಸ್ ಕ್ರಿಕೆಟ್” ಎಂಬ ಗ್ರೂಪ್ ಮೂಲಕ ಒಗ್ಗೂಡಿಸುವ ಸಫಲ ಪ್ರಯತ್ನವನ್ನು ಮಾಡಿರುವ ಆರ್.ಕೆ sportskannada.com ವೆಬ್ಸೈಟ್ ಗಾಗಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ವೆಬ್ಸೈಟ್ ಲಾಂಚಿಂಗ್  ಕಾರ್ಯಕ್ರಮದ ಯಶಸ್ಸಿಗೆ  ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಸ್ವಯಂ ಪ್ರೇರಿತರಾಗಿ ಸಹಾಯವನ್ನು ಮಾಡಿರುವರು ಎನ್ನುವುದಕ್ಕೆ ಸಂತಸ ಪಡಬೇಕು ಹಾಗೂ ಯಾವುದೇ ಸಹಾಯಕ್ಕಾಗಿ ಆರ್.ಕೆ ಯವರು ಎಂದಿಗೂ ಕೈ ಚಾಚಿಲ್ಲ ಎಂಬುವುದು ನಾವು ಗಮನಿಸಬೇಕಾದ ಮುಖ್ಯ ವಿಷಯ.
ಕೇವಲ ಮೂರು ವರ್ಷದಲ್ಲೇ ಊಹಿಸಲಸಾಧ್ಯವಾಗುವಷ್ಟು ಸಾಧನೆಗಳನ್ನು ಮಾಡಿದ್ದಾರೆ. ಸುಮಾರು 2000ಕ್ಕಿಂತಲೂ ಹೆಚ್ಚು ಕ್ರೀಡಾಪಟುಗಳನ್ನು ಸಂದರ್ಶನ ನಡೆಸಿ ಅವರ ಬಗೆಗೆನ ಲೇಖನ, ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಗೊಳಿಸಿದ್ದಾರೆ.  ಅಸಂಖ್ಯಾತ ಅಭಿಮಾನಿ ಓದುಗರನ್ನು ಹೊಂದಿದ್ದು ಇದರಲ್ಲಿ ಬರುವ ಕ್ರೀಡಾ ಸುದ್ಧಿಗಳು, ವಿಶೇಷ ವರದಿಗಳು, ಉತ್ತಮ ಅಂಕಣಗಳಿಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿನಿತ್ಯ ಈ ವೆಬ್ ಸೈಟ್ನಲ್ಲಿ ಬರುವ ಹೊಸ ವಿಷಯಗಳಿಗಾಗಿ ಕಾದು ಕುಳಿತುಕೊಳ್ಳುವ ಒಂದಷ್ಟು ಜನ ಸಮೂಹವೇ ಇದೆ ಎಂದರೆ ತಪ್ಪಾಗದು.
ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ಕಲಾ ಸಂಕುಲ ಸಂಸ್ಥೆ (ರಿ) ರಾಯಚೂರು ಇವರ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಆರ್ ಕೆ.ಯವರ ಮೇಲಿನ ಅಭಿಮಾನ ಇನ್ನಷ್ಟು ಇಮ್ಮಡಿಯಾಗಿದೆ. ಇದೇ ಬರುವ 28-11-2020ರಂದು ರಾಯಚೂರುನಲ್ಲಿ ನಡೆಯಲಿರುವ ಈ ಕಲ್ಯಾಣ ಕರ್ನಾಟಕ ಉತ್ಸವ್ದಲ್ಲಿ ವಿವಿಧ ಸಾಹಿತಿಗಳು,ಸಂಸದರು, ಶಾಸಕರು ಉಪಸ್ಥಿತರಿರುವ ವೇಧಿಕೆಯಲ್ಲಿ ಕ್ರೀಡ ಕ್ಷೇತ್ರಕ್ಕೆ ವಿಶಿಷ್ಟ ಸಾಧನೆಗೈದ ಸಾಮಾನ್ಯ ಯುವಕನೊಬ್ಬನು ಸನ್ಮಾನಿಸಲ್ಪಡುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಇಷ್ಟೊಂದು ಸಾಧಿಸಿದರೂ, ಕಳೆದ 2 ವರ್ಷಗಳಲ್ಲಿ ಪ್ರಶಸ್ತಿಗಳ ಸಾಲೇ ಹರಿದು ಬಂದರೂ ಕ್ರೀಡಾಲೋಕದ ಮೇಲಿರುವ ಆರ್.ಕೆ ಯ ಕನಸು ಬೆಟ್ಟದಷ್ಟಿದೆ. ಇದು ಕೇವಲ ಆರಂಭ,ತಲುಪಬೇಕಾದ ಹಾದಿ ಬಲುದೂರವಿದೆ.
ಯಾವುದೇ ಸರಕಾರದ ಅಕಾಡೆಮಿಗಳ ನೆರವುಗಳಿಲ್ಲದೆ ತನ್ನ ಸ್ವಂತ ಪ್ರಯತ್ನದಲ್ಲಿ ಕ್ರೀಡಾರಂಗಕ್ಕೋಸ್ಕರ, ಕ್ರೀಡಾಪಟುಗಳಿಗೋಸ್ಕರ, ಹಿರಿಯ ನಿವೃತ್ತ ಆಟಗಾರರಿಗೊಸ್ಕರ, ಮುಂದಿನ ಯುವ ಪೀಳಿಗೆಗೊಸ್ಕರ ದುಡಿಯುತ್ತಿರುವ ನಮ್ಮ ಆರ್.ಕೆ ಗೆ ನಮ್ಮೆಲ್ಲರ ಪ್ರೊತ್ಸಾಹದ ಅಗತ್ಯವಿದೆ. ಆಶೀರ್ವಾದದ ಅಗತ್ಯವಿದೆ. ಆರ್ ಕೆ. ಯವರ ಕನಸಿನಂತೆ ನಮ್ಮ ರಾಜ್ಯದಲ್ಲೊಂದು ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಸ್ಥಾಪನೆಗೊಳ್ಳಲಿ.  ಸಮಾಜದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕಿ ಅಸಾಮಾನ್ಯ ರೀತಿಯ ಸಾಧನೆಯನ್ನು ಮಾಡಿದ ನಮ್ಮ ಆರ್ ಕೆ ಯವರಿಗೆ ಸರಕಾರದ ವಿವಿಧ ಪ್ರಶಸ್ತಿಗಳು ದೊರಕಲಿ. ಅವರ ಕಾರ್ಯಕ್ಕೆ ಸರಕಾರದ ಬೆಂಬಲ ಸಿಗಲಿ. ಅದರಿಂದ ಅವರ ಈ ಒಂದು ವಿಭಿನ್ನ ಪ್ರಯತ್ನ ಇನ್ನಷ್ಟು ಉತ್ತುಂಘ ಶಿಖರವನ್ನೇರಲಿ. ಆರ್.ಕೆ ಯಂತವರ ಪ್ರಯತ್ನದಿಂದ ನಮ್ಮ ಊರಿನ ಮಕ್ಕಳು ಮುಂದೆ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ. ಆರ್.ಕೆ ಯ ಕನಸು ನನಸಾಗಲಿ ಎಂದು ನಾವೆಲ್ಲ ಹಾರೈಸೋಣ.
ದಿನೇಶ ಆಚಾರ್ಯ ಸಾಲಿಗ್ರಾಮ
Categories
ಕ್ರಿಕೆಟ್ ಜಿಲ್ಲಾ ರಾಜ್ಯ

ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿಯ ವೀಕ್ಷಕ ವಿವರಣೆಕಾರ ಪ್ರಶಾಂತ್.ಕೆ‌.ಎಸ್ ಅಂಬಲಪಾಡಿ ಆಯ್ಕೆ

ಕ್ರೀಡಾ ನಿರೂಪಕರಾಗಿ ,ಟೆನಿಸ್ ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ಉಡುಪಿಯ ಪ್ರಶಾಂತ್.ಕೆ.ಎಸ್. ಅಂಬಲಪಾಡಿ ಇವರಿಗೆ ರಾಯಚೂರಿನ “ಕಲಾ ಸಂಕುಲ ಸಂಸ್ಥೆ” ವತಿಯಿಂದ ಕೊಡಲ್ಪಡುವ ಪ್ರತಿಷ್ಟಿತ “ಕಲ್ಯಾಣ ಕರ್ನಾಟಕ ರಾಜ್ಯೋತ್ಸವ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ‌.ದಿನಾಂಕ 28/11/2020 ರಂದು ರಾಯಚೂರು ನಗರದಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಉಡುಪಿ ಅಂಬಲಪಾಡಿಯ ಪ್ರಶಾಂತ್.ಕೆ‌‌.ಎಸ್ ಇವರು
ಪೊಡವಿಗೊಡೆಯ ಶ್ರೀ ಕೃಷ್ಣ ನ ನಾಡಾದ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿರುವ ಇವರು ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡು,
ರಾಷ್ಟ್ರ,ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಗಳ ವೀಕ್ಷಕ ವಿವರಣೆ ಜೊತೆ ನಾಟಕ,ಯಕ್ಷಗಾನ ಹಾಗೂ ನೃತ್ಯ ರಂಗದಲ್ಲಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.
2000 ನೇ ರಾಜ್ಯದ ಪ್ರತಿಷ್ಟಿತ ತಂಡ “ಪಡುಬಿದ್ರಿ ಫ್ರೆಂಡ್ಸ್”
ಸಂಘಟಿಸಿದ್ದ ರಾಜ್ಯಮಟ್ಟದ ಪಂದ್ಯಾಟದಿಂದ ವೀಕ್ಷಕ ವಿವರಣೆಯ ಇವರ ಪಯಣ ಇಂದು ರಾಜ್ಯದ ಅತಿ ಹೆಚ್ಚಿನ ಜಿಲ್ಲೆಗಳಲ್ಲಿ ಸಹಸ್ರಾರು ಕ್ರೀಡಾ ಪ್ರೇಮಿಗಳನ್ನು ತಲುಪಿ “ವಾಯ್ಸ್ ಆಫ್ ಕರ್ನಾಟಕ”ಎಂದೇ ಪ್ರಖ್ಯಾತರಾಗಿದ್ದಾರೆ‌.ಸುಮಾರು 600 ಕ್ಕೂ ಮಿಕ್ಕಿದ ಪಂದ್ಯಾಕೂಟಗಳಲ್ಲಿ ವೀಕ್ಷಕ ವಿವರಣೆ ನೀಡಿದ ಕೀರ್ತಿ ಇವರದ್ದು.ಪ್ರಸ್ತುತ ರಾಜ್ಯದ ಬಹು ಬೇಡಿಕೆಯ ವೀಕ್ಷಕ ವಿವರಣೆಕಾರರಲ್ಲಿ ಪ್ರಶಾಂತ್ ಗುರುತಿಸಿಕೊಳ್ಳುತ್ತಾರೆ.
ಇದಲ್ಲದೆ ನಾಟಕ ಕಲಾವಿದರಾಗಿ,ಸುಮಾರು 75 ಕ್ಕೂ ಹೆಚ್ಚಿನ ನಾಟಕದಲ್ಲಿ ಭಾಗವಹಿಸಿದ್ದು ಜೊತೆಗೆ ಯಕ್ಷಗಾನ ರಂಗದಲ್ಲೂ ನೈಪುಣ್ಯತೆಯನ್ನು ಸಾಧಿಸಿದವರು.
ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದ ತಾಳ ಮೇಳಕ್ಕೆ ತನ್ನ ಪ್ರತಿಭೆಯನ್ನು ಓರೆ ಹಚ್ಚಿರುವ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಕಲಾಮಂಡಳಿಯಂತಹ ಹವ್ಯಾಸಿ ಸಂಘಗಳ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗೆಜ್ಜೆ ಕಟ್ಟಿದವರು.ಜೊತೆಗೆ ನಾಟ್ಯ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ 2012_13 ನೇ ಸಾಲಿನಲ್ಲಿ ವಿಶ್ವ ಕ್ರೀಡಾಂಗಣ ಮತ್ತು ಸ್ಪೋರ್ಟ್ಸ್ ಫೌಂಡೇಶನ್ ಬೆಂಗಳೂರು ಇವರು ಜಂಟಿಯಾಗಿ ಕೊಡಮಾಡಿದ “ಕ್ರೀಡಾರತ್ನ” ಪ್ರಶಸ್ತಿಯನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಅನಿವಾಸಿ ಕನ್ನಡಿಗ ಅಬುಧಾಬಿಯ
ಉದ್ಯಮಿ ಡಾ.ಬಿ.ಆರ್.ಶೆಟ್ಟಿಯವರ ಮುಖಾಂತರ ಪಡೆದಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ.
ಇತ್ತೀಚೆಗಷ್ಟೇ ಅಂಬಲಪಾಡಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಹುಟ್ಟೂರ ಸನ್ಮಾನಕ್ಕೂ ಪಾತ್ರರಾಗಿದ್ದರು.
ಅಂಬಲಪಾಡಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದಲ್ಲದೇ,ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಈ ವರೆಗೆ 18 ಬಾರಿ ರಕ್ತದಾನ ನೀಡಿದ್ದಾರೆ.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬ್ಯಾಂಕ್ ನಲ್ಲಿ ಉದ್ಯೋಗ ಕೊಡಿಸಿದ್ದಾರೆ.ಇವರು ಸುಮಾರು 500 ಕ್ಕೂ ಮಿಕ್ಕಿರುವ ನೆನಪಿನ ಕಾಣಿಕೆಗಳು,ಸ್ಮರಣಿಕೆಗಳು,ಹಾರ ತುರಾಯಿಗಳು ಮನೆಯಲ್ಲಿ ಎಲ್ಲರನ್ನು ಆಕರ್ಷಿಸದಿರದು.
ಇತಿಹಾಸ ಸೃಷ್ಟಿಸಿದ್ದ ಧಾರಾವಾಹಿ “ಗುಡ್ಡದ ಭೂತ” ದಲ್ಲಿ ಪ್ರಕಾಶ್ ರೈ  ಅವರ ಜೊತೆಗೆ ಕಿರುಪಾತ್ರದಲ್ಲಿ ನಟಿಸಿರುವುದು ಹಾಗೂ ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದು ,ಇತ್ತೀಚೆಗೆ ಉಡುಪಿಯ ಸ್ಥಳೀಯ
ಟಿ.ವಿ ಚಾನೆಲ್ ಪ್ರೈಮ್ ಟಿ.ವಿ ಯ ಮನದ ಮಾತು ಕಾರ್ಯ ಕ್ರಮದಲ್ಲಿ ಸಂದರ್ಶಿಸಿರುವದು ಇವರ ಬಹುಮುಖ ಪ್ರತಿಭೆಗೆ ಸಂದ ಗೌರವ…
Categories
ಕ್ರಿಕೆಟ್ ರಾಜ್ಯ

ನವೀನ್ “ಛೂ” ಬಿಟ್ಟ ನ್ಯಾಶ್-ತುಮಕೂರಿನಲ್ಲಿ” ನ್ಯಾಶ್” ಚಕ್ರವರ್ತಿ

 

ಚಕ್ರವರ್ತಿ ಗೆಳೆಯರ ಬಳಗದ ನಾಯಕ ಪ್ರಕಾಶ್.ಟಿ.ಸಿ ಸಾರಥ್ಯದಲ್ಲಿ,ಕೆ.ಪಿ.ಸಿ.ಸಿ ಸದಸ್ಯರು ಕೃಷ್ಣಮೂರ್ತಿ ಪಿ.ಎನ್,
ಕೆ. ಶ್ರೀಧರ್,ದನಿಯ ಕುಮಾರ್,ಚೇತನ್,ಪ್ರಸನ್ನ ಕುಮಾರ್,ಸೋಮಶೇಖರ್ ರವರ ಮಾರ್ಗದರ್ಶನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 1 ರ ತನಕ ಮೂರು ದಿನಗಳ ಕಾಲ ಸರಕಾರಿ ಜ್ಯೂನಿಯರ್ ಕಾಲೇಜು ಅಂಗಣದಲ್ಲಿ ನಡೆದ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ “ಚಕ್ರವರ್ತಿ ಟ್ರೋಫಿ-2020” ಯನ್ನು
ನ್ಯಾಶ್ ಬೆಂಗಳೂರು ತಂಡ ಗೆದ್ದುಕೊಂಡಿತು.

 

ರಾಜ್ಯದ 20 ತಂಡಗಳು ಭಾಗವಹಿಸಿದ ಪ್ರತಿಷ್ಟಿತ ಪಂದ್ಯಾವಳಿಯಲ್ಲಿ,
ಲೀಗ್ ಹಂತದ ಹೋರಾಟದ ಬಳಿಕ
ಉಪಾಂತ್ಯ ಪಂದ್ಯಗಳಲ್ಲಿ ನ್ಯಾಶ್ ತಂಡ ಫ್ರೆಂಡ್ಸ್ ಬೆಂಗಳೂರನ್ನು ಹಾಗೂ ಮೈಟಿ, ಜೈ ಕರ್ನಾಟಕ ತಂಡವನ್ನು ಸೋಲಿಸಿ ಫೈನಲ್ ಗೆ ನೆಗೆದೇರಿತ್ತು.

ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮೈಟಿ ಬೆಂಗಳೂರು 6 ಓವರ್ ಗಳಲ್ಲಿ 54 ರನ್ ಗಳಿಸಿ ಸವಾಲಿನ ಗುರಿಯನ್ನು ನೀಡಿತ್ತು.
ಚೇಸಿಂಗ್ ವೇಳೆ ನ್ಯಾಶ್ ಮಂದಗತಿಯ ಆರಂಭ ಪಡೆದಿತ್ತು.
4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 27 ರನ್ ಗಳಿಸಲಷ್ಟೇ ಶಕ್ತವಾಗಿತ್ತು.

ನವೀನ್ ಚೂ ಪ್ರಹಾರ
ಅಂತಿಮ 2 ಓವರ್ ಗಳಲ್ಲಿ 28 ರನ್ ಗಳ ಅವಶ್ಯಕತೆಯ ಸಂದರ್ಭದಲ್ಲಿ,
ಇನ್ನಿಂಗ್ಸ್ ಆಧರಿಸಿದ ನವೀನ್ ಚೂ
ಮೈಟಿಯ ಮಂಜು ಒಂದೇ ಓವರ್ ನಲ್ಲಿ 2 ಭರ್ಜರಿ ರಿವರ್ಸ್ ಸಿಕ್ಸ್ ಹಾಗೂ 1 ಬೌಂಡರಿ ನೆರವಿನಿಂದ 23 ರನ್ ಸಿಡಿಸಿ ನ್ಯಾಶ್ ತಂಡಕ್ಕೆ ವಿಜಯದ ಸನಿಹ ತಂದಿತ್ತರು.
ಅಂತಿಮ ಓವರ್ ನ ಪ್ರಥಮ‌ ಎಸೆತದಲ್ಲಿ ನಿರಂಜನ್ ಬೌಂಡರಿ ದಾಖಲಿಸುವುದರ ಮೂಲಕ ನ್ಯಾಶ್ ಚಕ್ರವರ್ತಿ ಟ್ರೋಫಿ-2020 ಮಿರುಗುವ ಟ್ರೋಫಿ ಸಹಿತ
2.5 ಲಕ್ಷ ನಗದು ತನ್ನದಾಗಿಸಿಕೊಂಡಿತು.
ಹಾಗೂ ರನ್ನರ್ಸ್ ಮೈಟಿ ತಂಡ 1.5 ಲಕ್ಷ ನಗದು ಸಹಿತ ಮಿರುಗುವ ಟ್ರೋಫಿಗಳನ್ನು ಪಡೆಯಿತು.

ದೊಡ್ಡ ಗಣೇಶ್-ಪಿ.ಎನ್.ಕೆ ಅಂಪಾಯರಿಂಗ್

ಫೈನಲ್ ನಲ್ಲಿ ವಿಶೇಷ ಆಕರ್ಷಣೆಯಾಗಿ
ಕೆ.ಪಿ.ಸಿ.ಸಿ ಸದಸ್ಯರು,ಮಾರ್ಗದರ್ಶಕರಾದ ಪಿ.ಎನ್.ಕೃಷ್ಣಮೂರ್ತಿ ಹಾಗೂ ಮಾಜಿ ಅಂತರಾಷ್ಟ್ರೀಯ ಕ್ರಿಕೆಟಿಗ,ಪ್ರಸ್ತುತ ಗೋವಾ ರಣಜಿ ಕೋಚ್ ದೊಡ್ಡ ಗಣೇಶ್ ಫೈನಲ್ ಪಂದ್ಯದಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದರು.

ಪಂದ್ಯಾವಳಿಯ ನೇರ ಪ್ರಸಾರ M.Sports ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ, ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಕೋಟ ಶಿವನಾರಾಯಣ ಐತಾಳ್ ಭಾಗವಹಿಸಿದ್ದರು.

 

Categories
ಕ್ರಿಕೆಟ್ ರಾಜ್ಯ

ಕಲ್ಲಮುಂಡ್ಕೂರು ವಾರಿಯರ್ಸ್ ತಂಡಕ್ಕೆ ಕಿನ್ನಿಗೋಳಿ ಪ್ರೀಮಿಯರ್‌ ಲೀಗ್-2020 ಪ್ರಶಸ್ತಿ

 

ಗ್ರಾಮೀಣ ಮಟ್ಟದ ಪ್ರತಿಭೆಗಳ ಅನಾವರಣ ಹಾಗೂ ಸ್ಥಳೀಯ ತಂಡಗಳ ಬಲವರ್ಧನೆ ಯ ಸದುದ್ದೇಶದಿಂದ
ಕಿನ್ನಿಗೋಳಿ ಫ್ರೆಂಡ್ಸ್ ಕ್ರಿಕೆಟರ್ಸ್ ತಂಡ ದಿನಾಂಕ 7,8.15 ರಂದು ಕಟೀಲು ಸಿತ್ಲ ಮೈದಾನದಲ್ಲಿ ಆಯೋಜಿಸಿದ್ದ ಕಿನ್ನಿಗೋಳಿ ಪ್ರೀಮಿಯರ್ ಲೀಗ್ (KPL) ಪಂದ್ಯಾವಳಿಯ ಪ್ರಶಸ್ತಿಯನ್ನು ಕಲ್ಲಮುಂಡ್ಕೂರು ತಂಡ ಜಯಿಸಿದೆ.

ಪಂದ್ಯಾಕೂಟದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ದಿನಾಂಕ 15/03/2020 ಮಧ್ಯಾಹ್ನ ಸಿತ್ಲ ಮೈಧಾನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುಗಪುರುಷ ಸಂಪಾದಕರಾದ ಶ್ರೀಭುವನಾಭಿರಾಮ ಉಡುಪ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀ ಶರತ್ ಶೆಟ್ಟಿ, ಅಧ್ಯಕ್ಷರು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್, ಶ್ರೀ ಗೌತಮ್ ಶೆಟ್ಟಿ, ಅಧ್ಯಕ್ಷರು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್, ಶ್ರೀ ಗಿರೀಶ್ ಶೆಟ್ಟಿ ಶ್ರೀ ಡೆವೆಲಪರ್ ಕಟೀಲು, ಕಟೀಲು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಗೀತಾ ಪೂಜಾರಿ, ಉಪಾಧ್ಯಕ್ಷರಾದ ಶ್ರೀ ಕಿರಣ್ ಕುಮಾರ್ ಶೆಟ್ಟಿ ಕಟೀಲು, ಎ.ಪಿ.ಎಮ್.ಸಿ.ಸದಸ್ಯರಾದ ಶ್ರೀ ಪ್ರಮೋದ್ ಕುಮಾರ್ ಕಿನ್ನಿಗೋಳಿ ಹಾಗೂ ಕೆ ಎಫ್ ಸಿ ಸಂಘಟನೆಯ ಸಧಸ್ಯರು ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದಲ್ಲಿ ರಾಜ್ಯ ಟೆನ್ನಿಸ್ ಕ್ರಿಕೆಟ್ ಇತಿಹಾಸದ ಪ್ರತಿಷ್ಟಿತ ಪಡುಬಿದ್ರಿ ತಂಡದ ಆದರ್ಶ ಕಪ್ತಾನರು ಹಾಗೂ ರಾಜ್ಯ ಟೆನ್ನಿಸ್ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ವಲಯಾಧ್ಯಕ್ಷರಾದ ಶ್ರೀ ಶರತ್ ಶೆಟ್ಟಿ ಪಡುಬಿದ್ರಿ ಹಾಗೂ ಕ್ರೀಡಾಲೋಕದಲ್ಲಿ ತೂಫಾನಿ ಮೈಲಿಗಲ್ಲನ್ನು ಸ್ಥಾಪಿಸಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಹಳೆಯಂಗಡಿಯ ಸಂಸ್ಥಾಪಕಾಧ್ಯಕ್ಷರಾದ ಶ್ರೀ ಗೌತಮ್ ಶೆಟ್ಟಿ ಕುಂದಾಪುರ ಹಾಗೂ ಪಡುಬಿದ್ರಿ ಫ್ರೆಂಡ್ಸ್ ನ ಪರವಾಗಿ ಸಾಕಷ್ಟು ಪಂದ್ಯಗಳನ್ನಾಡಿ ಯು.ಎ.ಇ ಪರವಾಗಿ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವಾಡಿದ, ಕೆ‌.ಪಿ.ಎಲ್,ಎಮ್.ಪಿ.ಎಲ್ ನಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿ ಇದೀಗ ಲೆದರ್ ಬಾಲ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಶಿಸ್ತಿನ ಕ್ರಿಕೆಟಿಗರಾದ ನಿತಿನ್ ಮೂಲ್ಕಿ ಯವರನ್ನು ಸನ್ಮಾನಿಸಲಾಯಿತು.

ಪ್ರಶಸ್ತಿ ವಿಜೇತರ ವಿವರ.

ಪ್ರಥಮ ಪ್ರಶಸ್ತಿ : ಕಲ್ಲಮುಂಡ್ಕುರು ವಾರಿಯರ್ಸ್ ( ಸುಕುಮಾರ್ ಅಮೀನ್ ಮಾಲಕತ್ವದ ತಂಡ )
ದ್ವಿತೀಯ ಪ್ರಶಸ್ತಿ : ಐಕಳ ಇಂಡಿಯನ್ಸ್ ( ಪ್ರದೀಪ್ ಅವರ ಮಾಲಕತ್ವದ ತಂಡ )
ಫೇರ್ ಪ್ಲೇ ಪ್ರಶಸ್ತಿ : ಕಿಂಗ್ಸ್ ಇಲೆವೆನ್, ಕಿನ್ನಿಗೋಳಿ ( ದಿವಾಕರ್ ಚೌಟ ಮಾಲಕತ್ವದ ತಂಡ )
ಸರಣಿ ಶ್ರೇಷ್ಠ : ಸುದರ್ಶನ್ ( ಕಟೀಲ್ ಕಮೊಂಡೋಸ್ )
ಪಂದ್ಯ ಶ್ರೇಷ್ಠ :ಜೊಯೆಲ್ (ಕಲ್ಲಮುಂಡ್ಕುರು ವಾರಿಯರ್ಸ್ )
ಬೆಸ್ಟ್ ಬ್ಯಾಟ್ಸಮನ್ : ಸಂದೀಪ್ ಕೃಷ್ಣ (ಕಲ್ಲಮುಂಡ್ಕುರು ವಾರಿಯರ್ಸ್ )
ಬೆಸ್ಟ್ ಬೌಲರ್ : ಪ್ರಕಾಶ್ (ಐಕಳ ಇಂಡಿಯನ್ಸ್ ).

ಶರತ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Categories
ಕ್ರಿಕೆಟ್ ರಾಜ್ಯ

“ಚಕ್ರವರ್ತಿ ಟ್ರೋಫಿ-2020” ಅನಾವರಣ ಸಮಾರಂಭ

ತುಮಕೂರು: ಚನ್ನಿಗಪ್ಪ ನನ್ನ ರಾಜಕೀಯ ಗುರು ಎಂದರು ಕೃಷ್ಣಮೂರ್ತಿ. ಸ್ವತಃ ಕ್ರೀಡಾಪಟು ಕೂಡಾ ಆಗಿರುವ ಅವರು ಕಾರ್ಯಕ್ರಮಗಳನ್ನು ಏರ್ಪಡಿಸುವುದರಲ್ಲಿ ‘ಧೂಮ್ ಧಾಮ್’. ಈಗ ಚಕ್ರವರ್ತಿ ಗೆಳೆಯರ ಬಳಗದ ಅಡಿಯಲ್ಲಿ ಮತ್ತೊಮ್ಮೆ ಫೆಬ್ರವರಿ ೨೮ ರಿಂದ ಮಾರ್ಚ್ ೧ ರ ವರೆಗೆ ರಾಜ್ಯಮಟ್ಟದ ಹೊನಲು ಬೆಳಕಿನ ಟೆನಿಸ್ ಬಾಲ ಕ್ರಿಕೆಟ್ ಟೂರ್ನಮೆಂಟ್ ಏರ್ಪಡಿಸಿ ಮತ್ತೆ ಪಿಚ್ ಗೆ ಬಂದಿದ್ದಾರೆ.

 

ಸುಮಾರು ೨೪ ತಂಡಗಳು ಪಾಲ್ಗೊಳ್ಳುತ್ತಿರುವ ಈ ಟೂರ್ನಿ ಹೆಸರಾಂತ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಅಂದ ಹಾಗೆ ಉದ್ಘಾಟನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿ ಅವರ ಸುಪುತ್ರ ಬಿ ವೈ ವಿಜಯೇಂದ್ರ ಬರಲಿದ್ದಾರೆ.

ಖ್ಯಾತ ಕ್ರಿಕೆಟ್ ಪಟು ಭಾರತದ ಮಾಜಿ ನಾಯಕ ಮೊಹಮದ್ ಅಝರುದ್ದೀನ್ ಕೂಡಾ ಆಗಮಿಸಲಿದ್ದಾರೆ. ಅಂದ ಹಾಗೆ ದೊಡ್ದಗಣೇಶ್ ಮತ್ತು ಕೃಷ್ಣಮೂರ್ತಿ ಜತೆ ಜತೆಯಲ್ಲೇ ಬೆಂಗಳೂರಿನ ಪೀಣ್ಯದಲ್ಲಿ ಕ್ರಿಕೆಟ್ ಆಡಿ ಬೆಳೆದವರು.

ಅವರು ಬಂದೇ ಬರುತ್ತಾರೆ. ನಗರ ಶಾಸಕ ಜ್ಯೋತಿಗಣೆಶ್ ಅವರಿಂದ ಹಿಡಿದು ಸಚಿವ ಜೆ ಸಿ ಮಾಧುಸ್ವಾಮಿ ಸೇರಿದಂತೆ ಉದ್ಯಮಿ ಎನ್ ಎಸ್ ಜಯಕುಮಾರ್ ಕೂಡಾ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಮೂರ್ತಿ. ಪಕ್ಷಾತೀತ ಜಾತ್ಯತೀತವಾಗಿ ಜನರನ್ನು ಸಂಭಾಳಿಸುವ ಕಲೆ ಕರಗತ ಮಾಡಿಕೊಂಡಿರುವ ಅವರಿಗೆ ಧನಿಯಾ ಕುಮಾರ್, ಚಕ್ರವರ್ತಿ ಪ್ರಕಾಶ್, ಪಚ್ಚಿ, ಪಾಚಿ, ಶಿವಪ್ರಸಾದ್, ಚೇತನ್ ಸೇರಿದಂತೆ ಅವರೆಲ್ಲರ ಸ್ಫೂರ್ತಿಯ ಸೆಲೆ ನೇತಾಜಿ ಶ್ರೀಧರ್ ಅವರೂ ಕೂಡಾ ಸಾಥ್ ನೀಡಿದ್ದಾರೆ.

 

ಟೂರ್ನಿ ಚಾಂಪಿಯನ್ಷಿಪ್ ಬರೋಬರಿ ೨.೫ ಲಕ್ಷ ರೂಪಾಯಿ ರನ್ನರ್ ಅಪ್ ತಂಡಕ್ಕೆ ೧.೫ ಲಕ್ಷ ರೂಪಾಯಿ. ಹೊರ ಊರಿನಿಂದ ಬಂದ ಆಟಗಾರರಿಗೆ ಉಳಿದುಕೊಳ್ಳಲು ವಿಜ್ಞೇಶ್ವರ ಕಂಫರ್ಟ್ಸ್ ಮಾಲೀಕ ಚಂದ್ರಮೌಳಿ ಸಹಕರಿಸಲಿದ್ದಾರಂತೆ.

ಸುಮಾರು ಹದಿನೈದು ವರ್ಷದ ಹಿಂದೆ ಕೋಳಾಲ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದ ಪಿ ಎನ್ ಕೃಷ್ಣಮೂರ್ತಿ ಯಾನೆ ಪಿ ಎನ್ ಕೆ ಮಾಜಿ ಸಚಿವ ದಿವಂಗತ ಸಿ ಚನ್ನಿಗಪ್ಪ ಗರಡಿಯಲ್ಲಿ ಪಳಗಿದ ಕೈ.ಹಾಗಾಗಿ ವೇದಿಕೆಗೆ ಚನ್ನಿಗಪ್ಪ ಅವರ ಹೆಸರನ್ನೇ ಇಡಲಾಗುವುದಂತೆ. ಅಂದ ಹಾಗೆ ಮಾಜಿ ಸಚಿವ ಡಿ ಕೆ ಶಿವಕುಮಾರ ಅವರ ಕಟ್ಟಾ ಅಭಿಮಾನಿ. ಅವರು ಕೆ ಪಿ ಸಿ ಸಿ ಅಧ್ಯಕ್ಷ ಆಗುವುದು ಖಚಿತ ಎನ್ನುತ್ತಾರೆ.