Categories
ಕ್ರಿಕೆಟ್ ಜಿಲ್ಲಾ ರಾಜ್ಯ

ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿಯ ವೀಕ್ಷಕ ವಿವರಣೆಕಾರ ಪ್ರಶಾಂತ್.ಕೆ‌.ಎಸ್ ಅಂಬಲಪಾಡಿ ಆಯ್ಕೆ

ಕ್ರೀಡಾ ನಿರೂಪಕರಾಗಿ ,ಟೆನಿಸ್ ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ಉಡುಪಿಯ ಪ್ರಶಾಂತ್.ಕೆ.ಎಸ್. ಅಂಬಲಪಾಡಿ ಇವರಿಗೆ ರಾಯಚೂರಿನ “ಕಲಾ ಸಂಕುಲ ಸಂಸ್ಥೆ” ವತಿಯಿಂದ ಕೊಡಲ್ಪಡುವ ಪ್ರತಿಷ್ಟಿತ “ಕಲ್ಯಾಣ ಕರ್ನಾಟಕ ರಾಜ್ಯೋತ್ಸವ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ‌.ದಿನಾಂಕ 28/11/2020 ರಂದು ರಾಯಚೂರು ನಗರದಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಉಡುಪಿ ಅಂಬಲಪಾಡಿಯ ಪ್ರಶಾಂತ್.ಕೆ‌‌.ಎಸ್ ಇವರು
ಪೊಡವಿಗೊಡೆಯ ಶ್ರೀ ಕೃಷ್ಣ ನ ನಾಡಾದ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿರುವ ಇವರು ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡು,
ರಾಷ್ಟ್ರ,ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಗಳ ವೀಕ್ಷಕ ವಿವರಣೆ ಜೊತೆ ನಾಟಕ,ಯಕ್ಷಗಾನ ಹಾಗೂ ನೃತ್ಯ ರಂಗದಲ್ಲಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.
2000 ನೇ ರಾಜ್ಯದ ಪ್ರತಿಷ್ಟಿತ ತಂಡ “ಪಡುಬಿದ್ರಿ ಫ್ರೆಂಡ್ಸ್”
ಸಂಘಟಿಸಿದ್ದ ರಾಜ್ಯಮಟ್ಟದ ಪಂದ್ಯಾಟದಿಂದ ವೀಕ್ಷಕ ವಿವರಣೆಯ ಇವರ ಪಯಣ ಇಂದು ರಾಜ್ಯದ ಅತಿ ಹೆಚ್ಚಿನ ಜಿಲ್ಲೆಗಳಲ್ಲಿ ಸಹಸ್ರಾರು ಕ್ರೀಡಾ ಪ್ರೇಮಿಗಳನ್ನು ತಲುಪಿ “ವಾಯ್ಸ್ ಆಫ್ ಕರ್ನಾಟಕ”ಎಂದೇ ಪ್ರಖ್ಯಾತರಾಗಿದ್ದಾರೆ‌.ಸುಮಾರು 600 ಕ್ಕೂ ಮಿಕ್ಕಿದ ಪಂದ್ಯಾಕೂಟಗಳಲ್ಲಿ ವೀಕ್ಷಕ ವಿವರಣೆ ನೀಡಿದ ಕೀರ್ತಿ ಇವರದ್ದು.ಪ್ರಸ್ತುತ ರಾಜ್ಯದ ಬಹು ಬೇಡಿಕೆಯ ವೀಕ್ಷಕ ವಿವರಣೆಕಾರರಲ್ಲಿ ಪ್ರಶಾಂತ್ ಗುರುತಿಸಿಕೊಳ್ಳುತ್ತಾರೆ.
ಇದಲ್ಲದೆ ನಾಟಕ ಕಲಾವಿದರಾಗಿ,ಸುಮಾರು 75 ಕ್ಕೂ ಹೆಚ್ಚಿನ ನಾಟಕದಲ್ಲಿ ಭಾಗವಹಿಸಿದ್ದು ಜೊತೆಗೆ ಯಕ್ಷಗಾನ ರಂಗದಲ್ಲೂ ನೈಪುಣ್ಯತೆಯನ್ನು ಸಾಧಿಸಿದವರು.
ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದ ತಾಳ ಮೇಳಕ್ಕೆ ತನ್ನ ಪ್ರತಿಭೆಯನ್ನು ಓರೆ ಹಚ್ಚಿರುವ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಕಲಾಮಂಡಳಿಯಂತಹ ಹವ್ಯಾಸಿ ಸಂಘಗಳ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗೆಜ್ಜೆ ಕಟ್ಟಿದವರು.ಜೊತೆಗೆ ನಾಟ್ಯ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ 2012_13 ನೇ ಸಾಲಿನಲ್ಲಿ ವಿಶ್ವ ಕ್ರೀಡಾಂಗಣ ಮತ್ತು ಸ್ಪೋರ್ಟ್ಸ್ ಫೌಂಡೇಶನ್ ಬೆಂಗಳೂರು ಇವರು ಜಂಟಿಯಾಗಿ ಕೊಡಮಾಡಿದ “ಕ್ರೀಡಾರತ್ನ” ಪ್ರಶಸ್ತಿಯನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಅನಿವಾಸಿ ಕನ್ನಡಿಗ ಅಬುಧಾಬಿಯ
ಉದ್ಯಮಿ ಡಾ.ಬಿ.ಆರ್.ಶೆಟ್ಟಿಯವರ ಮುಖಾಂತರ ಪಡೆದಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ.
ಇತ್ತೀಚೆಗಷ್ಟೇ ಅಂಬಲಪಾಡಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಹುಟ್ಟೂರ ಸನ್ಮಾನಕ್ಕೂ ಪಾತ್ರರಾಗಿದ್ದರು.
ಅಂಬಲಪಾಡಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದಲ್ಲದೇ,ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಈ ವರೆಗೆ 18 ಬಾರಿ ರಕ್ತದಾನ ನೀಡಿದ್ದಾರೆ.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬ್ಯಾಂಕ್ ನಲ್ಲಿ ಉದ್ಯೋಗ ಕೊಡಿಸಿದ್ದಾರೆ.ಇವರು ಸುಮಾರು 500 ಕ್ಕೂ ಮಿಕ್ಕಿರುವ ನೆನಪಿನ ಕಾಣಿಕೆಗಳು,ಸ್ಮರಣಿಕೆಗಳು,ಹಾರ ತುರಾಯಿಗಳು ಮನೆಯಲ್ಲಿ ಎಲ್ಲರನ್ನು ಆಕರ್ಷಿಸದಿರದು.
ಇತಿಹಾಸ ಸೃಷ್ಟಿಸಿದ್ದ ಧಾರಾವಾಹಿ “ಗುಡ್ಡದ ಭೂತ” ದಲ್ಲಿ ಪ್ರಕಾಶ್ ರೈ  ಅವರ ಜೊತೆಗೆ ಕಿರುಪಾತ್ರದಲ್ಲಿ ನಟಿಸಿರುವುದು ಹಾಗೂ ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದು ,ಇತ್ತೀಚೆಗೆ ಉಡುಪಿಯ ಸ್ಥಳೀಯ
ಟಿ.ವಿ ಚಾನೆಲ್ ಪ್ರೈಮ್ ಟಿ.ವಿ ಯ ಮನದ ಮಾತು ಕಾರ್ಯ ಕ್ರಮದಲ್ಲಿ ಸಂದರ್ಶಿಸಿರುವದು ಇವರ ಬಹುಮುಖ ಪ್ರತಿಭೆಗೆ ಸಂದ ಗೌರವ…
Categories
ಜಿಲ್ಲಾ ಸ್ಪೋರ್ಟ್ಸ್

ಅಕ್ಟೋಬರ್‌ 27ರದಂದು : ಟೊರ್ಪೆಡೋಸ್ ಸಂಸ್ಥೆಯಲ್ಲಿ ಬ್ಯಾಂಕರ್ಸ್ ಪ್ರೊಫೆಷನಲ್ಸ್ ಅಂತರ ಜಿಲ್ಲಾ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟ

ಕ್ರೀಡಾ ಕೃಷಿಯಲ್ಲಿ ಸದಾ ತೊಡಗಿರುವ ಸಂಸ್ಥೆ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ವಿದ್ಯಾರ್ಥಿಗಳಿಂದ ಪ್ರಾರಂಭವಾಗಿ ಎಲ್ಲಾ ವಯೋಮಾನದವರಿಗೂ, ಸರಕಾರಿ ಸೇವಾ ನಿರತರಿಗೂ, ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಸಂಘಟಿಸಿ ಯಶಸ್ಸು ಕಂಡಿದೆ ಈ ಸಂಸ್ಥೆ. ಇತ್ತೀಚೆಗಷ್ಟೇ ವೃತ್ತಿಪರ ಶಿಕ್ಷಕರು, ಇಂಜಿನಿಯರ್ಸ್,ವೈದ್ಯರಿಗಾಗಿ ಯಶಸ್ವಿ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಏರ್ಪಡಿಸಿತ್ತು.

ಟೊರ್ಪೆಡೋಸ್ ಸಂಸ್ಥೆ ಈ ಬಾರಿ ಬ್ಯಾಂಕ್ ನೌಕರರಿಗಾಗಿ ಅಂತರಜಿಲ್ಲಾ ಮಟ್ಟದ ಷಟಲ್ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಅಕ್ಟೋಬರ್‌ 27 ರವಿವಾರದಂದು ಹಳೆಯಂಗಡಿಯ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ನಡೆಸಲಾಗುವುದೆಂದು ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಪಂದ್ಯಾಕೂಟವು ಪುರುಷರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್, ಮಹಿಳೆಯರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ನಡೆಸಲಾಗುತ್ತಿದ್ದು ವಿಜೇತರು ಹಾಗೂ ರನ್ನರ್ಸ್ ಗಳನ್ನು ಆಕರ್ಷಕ ಬಹುಮಾನ ನೀಡಿ ಪುರಸ್ಕರಿಸಲಾಗುತ್ತಿದೆ.

ಈ ಪಂದ್ಯಾಕೂಟದ ನೇರ ಪ್ರಸಾರ “ಕ್ರಿಕ್ ಸೇ” ಯೂ ಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗಲಿದೆ.

Categories
Action Replay ಜಿಲ್ಲಾ

ಆಗಸ್ಟ್ 04ರಂದು ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಂತರ್ ಜಿಲ್ಲಾ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್

ಹಳೆಯಂಗಡಿ : ಇಲ್ಲಿನ ಟಾರ್ಪಡೋಸ್ ಸ್ಪೋರ್ಟ್ಸ್ ಕ್ಲಬ್ ಇವರ ಆಶ್ರಯದಲ್ಲಿ ಆಗಸ್ಟ್ 4 ರವಿವಾರದಂದು ಇಂಜಿನಿಯರ್ಸ್ ಗಾಗಿ ಅಂತರ್ ಜಿಲ್ಲಾ ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯಲಿದೆ.

ಪುರುಷರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್, ಮಹಿಳೆಯರಿಗಾಗಿ ಸಿಂಗಲ್ಸ್ ಹಾಗೂ ಡಬಲ್ಸ್ ಕಾದಾಟ ನಡೆಯಲಿದೆ. ವಿಜೇತರು ಪ್ರಥಮ,ದ್ವಿತೀಯ ಸ್ಥಾನಿಗಳು ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.

ಜುಲೈ 31 ಹೆಸರು ನೊಂದಾಯಿಸಲು ಕೊನೆಯ ದಿನಾಂಕವಾಗಿದ್ದು, ನಾಕ್ ಔಟ್ ರೂಲ್ಸ್ 30 ಪಾಯಿಂಟ್ಸ್ ಗಳ ಒಂದು ಸೆಟ್ ಗೇಮ್, ಹಾಗೂ ಪಂದ್ಯಾಕೂಟದ ಸ್ಥಳದಲ್ಲಿ ಹೆಸರು ನೊಂದಾಯಿಸಲು ಅವಕಾಶವಿರುವುದಿಲ್ಲ.

ಆಸಕ್ತರು ಮಾಹಿತಿಗಾಗಿ ಮೇಲ್ಕಾಣಿಸಿದ ನಂಬರ್ ಸಂಪರ್ಕಿಸಬಹುದಾಗಿದೆ ಎಂದು ಟಾರ್ಪಡೋಸ್ ಸ್ಪೋಟ್ರ್ಸ್ ಕ್ಲಬ್ ನ ಗೌತಮ್ ಶೆಟ್ಟಿ ತಿಳಿಸಿದ್ದಾರೆ.