ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್,ಈಗಾಗಲೇ 7 ತಾಲೂಕುಗಳಲ್ಲಿ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ಯಶಸ್ವಿಯಾಗಿ ನಿರ್ವಹಿಸಿದ್ದು,ಮುಂಬರುವ ನವೆಂಬರ್ 18,19 ಮತ್ತು 20 ರಂದು ಕುಂದಾಪುರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದಪಂದ್ಯಾಟ ನಡೆಸಲಾಗುವುದು ಎಂದು ಸೋಮವಾರ ಉಡುಪಿಯಲ್ಲಿ ನಡೆದ ಸಭೆಯಲ್ಲಿ ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್ ತಿಳಿಸಿದರು.
ಪ್ರತೀ ತಾಲೂಕಿನ 2 ತಂಡಗಳು (ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ತಂಡಗಳು),7 ತಾಲೂಕಿನ ಒಟ್ಟು 14 ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಲು ಅವಕಾಶವಿದ್ದು,ತಾಲೂಕು ಮಟ್ಟದ ತಂಡಗಳ ನಾಯಕರಿಗೆ ಈಗಾಗಲೇ ತಿಳಿಸಲಾಗಿದೆ.ಮುಂದಿನ ವಾರದಲ್ಲಿ ತಂಡದ ನಾಯಕರ ಸಭೆಯನ್ನು ಆಯೋಜಿಸಲಾಗಿದ್ದು,ಪಂದ್ಯಾಟದ ಬಗ್ಗೆ ಸವಿಸ್ತಾರ ಮಾಹಿತಿ ಲಭ್ಯವಾಗಲಿದೆ ಎಂದರು.
*ಟಿ.ಸಿ.ಎ ನೂತನ ಗೌರವಾಧ್ಯಕ್ಷರ ಆಯ್ಕೆ*
ಸೋಮವಾರ ಉಡುಪಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪ್ಯಾರಡೈಸ್ ಬನ್ನಂಜೆ ತಂಡದ ಹಿರಿಯ ಆಟಗಾರರಾದ ಯಾದವ್ ನಾಯಕ್ ಕೆಮ್ಮಣ್ಣು,ರಮೇಶ್ ಶೇರಿಗಾರ್ ಮತ್ತು ಬ್ಲೂಸ್ಟಾರ್ ಶಿರ್ವ ತಂಡದ ಸಂಸ್ಥಾಪಕ ನಾಯಕರಾದ ಸದಾನಂದ ಶಿರ್ವ ಇವರನ್ನು ಟಿ.ಸಿ.ಎ ಗೌರವಾಧ್ಯಕ್ಷರಾಗಿ ನೇಮಕ ಮಾಡಲಾಯಿತು.ಈ ಸಂದರ್ಭ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಟಿ.ಸಿ.ಎ ಮೀಡಿಯಾ ಪಾರ್ಟ್ನರ್ ಎಂದು ಅಧಿಕೃತವಾಗಿ ಘೋಷಿಸಲಾಯಿತು.
ಈ ಸಂದರ್ಭ ಟಿ.ಸಿ.ಎ ಅಧ್ಯಕ್ಷರಾದ ಗೌತಮ್ ಶೆಟ್ಟಿ ಟೊರ್ಪೆಡೋಸ್,ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ
ಪ್ಯಾರಡೈಸ್ ಬನ್ನಂಜೆ,ಶರತ್ ಶೆಟ್ಟಿ ಪಡುಬಿದ್ರಿ,ಪ್ರವೀಣ್ ಕುಮಾರ್ ಬೈಲೂರು,ಪ್ರವೀಣ್ ಪಿತ್ರೋಡಿ,ಟಿ.ಸಿ.ಎ ಪದಾಧಿಕಾರಿಗಳು ಉಪಸ್ಥಿತರಿದ್ದರು…