ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಕ್ರಿಕೆಟ್ ಆಡುವವರಿಗಾಗಿ ಆಗಸ್ಟ್ 21 ರವಿವಾರದಂದು ಆಯೋಜಿಸಲಾದ ಇಂಡಿಪೆಂಡೆನ್ಸ್ ಡೇ ಕಪ್-2022 ಪ್ರಶಸ್ತಿಯನ್ನು ಸುಭಾಷ್ ಚಂದ್ರ ಭೋಸ್ ಆರ್ಮಿ ತಂಡ ಜಯಿಸಿದೆ.
ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಹುತಾತ್ಮ ಸ್ವಾತಂತ್ರ್ಯ ವೀರರಾದ ನೇತಾಜಿ ವಾರಿಯರ್ಸ್,
ಸುಖದೇವ್ ವಾರಿಯರ್ಸ್,ಭೋಸ್ ಆರ್ಮಿ,ರಾಯಣ್ಣ
ವಾರಿಯರ್ಸ್,ರಾಣಿ ಚೆನ್ನಮ್ಮ ವಾರಿಯರ್ಸ್,ಭಗತ್ ಸಿಂಗ್ ವಾರಿಯರ್ಸ್ ಹೆಸರಿನಲ್ಲಿ ಈ 6 ತಂಡಗಳ ನಡುವೆ ಪ್ರಬಲ ಸೆಣಸಾಟ ಸಾಗಿತ್ತು.
ಫೈನಲ್ ನಲ್ಲಿ ಭಗತ್ ಸಿಂಗ್ ವಾರಿಯರ್ಸ್ ತಂಡವನ್ನು ಸೋಲಿಸುವ ಮೂಲಕ ಸುಭಾಸ್ ಚಂದ್ರ ಭೋಸ್
ಆರ್ಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.
ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಕುಮಾರ್ ಮಯೂರ,ಬೆಸ್ಟ್ ಬ್ಯಾಟ್ಸ್‌ಮನ್ ಸನತ್ ಆಚಾರ್, ಬೆಸ್ಟ್ ಬೌಲರ್ ದಿನೇಶ್ ಮದ್ದುಗುಡ್ಡೆ,ಬೆಸ್ಟ್ ಫೀಲ್ಡರ್ ಪ್ರಸನ್ನ ಮಾಣಿ,ಬೆಸ್ಟ್ ವಿಕೆಟ್ ಕೀಪರ್ ಪ್ರದೀಪ್ ಮಂಗಲ್ಪಾಂಡೆ,
ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅನಿಲ್ ಖಾರ್ವಿ ಪಡೆದುಕೊಂಡರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಚಕ್ರವರ್ತಿ ಕುಂದಾಪುರ ತಂಡದ ಹಿರಿಯ ಆಟಗಾರರಾದ ಸತೀಶ್ ಕೋಟ್ಯಾನ್,ಮನೋಜ್ ನಾಯರ್,
ಕೆ.ಪಿ.ಸತೀಶ್,ರಾಘವೇಂದ್ರ ಚರಣ್ ನಾವಡ,ರಂಜಿತ್ ಶೆಟ್ಟಿ,ನಾಗೇಶ್ ನಾವಡ,ಸ್ಪೋರ್ಟ್ಸ್ ವರ್ಲ್ಡ್ ಸಮೀಯುಲ್ಲಾ,ಇರ್ಷಾದ್,ಪಂದ್ಯಾಟ ಆಯೋಜಕರಾದ ಸನತ್ ಆಚಾರ್,ಅಕ್ಷಯ್ ಆಚಾರ್ ಮತ್ತಯ ಕುಮಾರ್ ಮಯೂರ ಉಪಸ್ಥಿತರಿದ್ದರು.ನಿತೇಶ್ ಗೋಲ್ಡನ್ ಮಿಲ್ಲರ್ ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರು