Categories
Action Replay ಸ್ಪೋರ್ಟ್ಸ್

ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಗೌತಮ್ ಶೆಟ್ಟಿಯವರಿಗೆ ಸಮಾಜರತ್ನ ಪ್ರಶಸ್ತಿ

ಬಾಲ್ಯದಿಂದಲೇ ಕ್ರೀಡಾ ಕ್ಷೇತ್ರದಲ್ಲಿ ಉತ್ತುಂಗ ಸಾಧನೆಯ ಉತ್ಕಟ ಬಯಕೆಯ ನಡುವೆ ತಾನೆದುರಿಸಿದ ಅಗತ್ಯ ಪೂರೈಕೆಗಳ ಕೊರತೆ,ಅಡೆ ತಡೆಗಳನ್ನು ಮೀರಿ ಕ್ರೀಡಾ ಜೀವನದಲ್ಲಿ ಉನ್ನತ ಸಾಧನೆಗೈದು, ಜೀವನದುದ್ದಕ್ಕೂ ಕ್ರೀಡಾ ಸ್ಪೂರ್ತಿ‌‌ ಮೆರೆದು,ಮುಂದಿನ ಯುವ ಪೀಳಿಗೆ ಅಡೆತಡೆಗಳಿಲ್ಲದೆ ಕ್ರೀಡಾಲೋಕದಲ್ಲಿ ನಕ್ಷತ್ರಗಳಂತೆ ಮಿನುಗಬೇಕೆಂಬ ಉದ್ದೇಶದಿಂದ ಮಂಗಳೂರಿನ ಹಳೆಯಂಗಡಿಯಲ್ಲಿ ಕಟ್ಟಿದ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್”ನ ಸಾಧನೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಪ್ರತಿಷ್ಟಿತ ಬಂಟರತ್ನ ಪ್ರಶಸ್ತಿ ಸಹಿತ ಅರ್ಧ ಸಹಸ್ರಕ್ಕೂ ಮೀರಿದ ಸನ್ಮಾನಗಳಿಂದ ಪುರಸ್ಕೃತರಾದ ಸಂಸ್ಥಾಪಕಾಧ್ಯಕ್ಷ ಗೌತಮ್‌ ಶೆಟ್ಟಿಯವರಿಗೆ ಇದೀಗ MPMLA s ನ್ಯೂಸ್ 11ನೇ ಸೌಹಾರ್ದ ಸಂಗಮ ಕೊಡಮಾಡುವ “ಸಮಾಜರತ್ನ” ಪ್ರಶಸ್ತಿ ಒಲಿದಿದೆ.

ಜನವರಿ 7 ರ ಸಂಜೆ ಮಂಗಳೂರಿನ ಪುರಭವನದಲ್ಲಿ ನಡೆದ MPMLA’s ನ್ಯೂಸ್ 11 ರ ಸೌಹಾರ್ದ ಸಂಗಮದ ವರ್ಣರಂಜಿತ ಸಮಾರಂಭದಲ್ಲಿ, “ಸಮಾಜರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭ ಉಳ್ಳಾಲ ಜುಮ್ಮಾ ಮಸೀದಿ ಮತ್ತು ಸೈಯ್ಯದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್,ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಇತರ ಗಣ್ಯರು ಉಪಸ್ಥಿತರಿದ್ದರು.

ಸಮಾಜರತ್ನ ಗೌತಮ್ ಶೆಟ್ಟಿಯವರ ಜೊತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ವರ್ಷದ ವ್ಯಕ್ತಿ,ಸುಧೀರ್ ಶೆಟ್ಟಿ ಕಣ್ಣೂರು ಉತ್ತಮ‌ ಜನಪ್ರತಿನಿಧಿ ಪ್ರಶಸ್ತಿ, ಡಾ. ಗೋಪಾಲಕೃಷ್ಣ ಆಚಾರ್ಯ ಸಮಾಜರತ್ನ, ಡಾ.ಡಿ.ಶಿವಾನಂದ ಪೈ, ಸದಾನಂದ ಪೂಜಾರಿ ಯವರಿಗೆ ಉತ್ತಮ ವೈದ್ಯ,ಪಿ.ಜಯರಾಮ್ ರೈ  ಉತ್ತಮ ವಕೀಲ, ಜಗನ್ನಾಥ್ ಶೆಟ್ಟಿ ಬಾಳ ಅವರಿಗೆ ಮೀಡಿಯಾ ಅವಾರ್ಡ್ ಸಹಿತ 45 ವಿವಿಧ ಕ್ಷೇತ್ರಗಳ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಗೌತಮ್ ಶೆಟ್ಟಿಯವರ ಬಾಲ್ಯ : ಕುಂದಾಪುರ ದಿ|ಸುಧಾಕರ್ ಶೆಟ್ಟಿ ಹಾಗೂ ದಿ|ಕುಸುಮಾ ಶೆಟ್ಟಿ ದಂಪತಿಯ ಪುತ್ರರಾಗಿ ಜನಿಸಿದ ಗೌತಮ್ ಶೆಟ್ಟಿಯವರುಬಾಲ್ಯದಿಂದಲೇ ಕ್ರೀಡೆಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದರು. ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್ ,ವಾಲಿಬಾಲ್,ಕಬಡ್ಡಿ,ಲಾನ್ ಟೆನ್ನಿಸ್ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಬಹಳಷ್ಟು ಪ್ರಶಸ್ತಿಗಳನ್ನು ಜಯಿಸಿದ್ದರು.

ಕುಂದಾಪುರದ ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್ ಪ್ರೇರಣೆ : 80 ರ ದಶಕದಲ್ಲಿ ಹಿರಿಯರಾದ ನಿತ್ಯಾನಂದ ಮುನ್ನಾ ನೇತೃತ್ವದಲ್ಲಿ ಸ್ಥಾಪನೆಯಾದ” ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್”ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.ತಾವು ಭಾಗವಹಿಸಿದ ಪ್ರಥಮ ಪಂದ್ಯಾಕೂಟದಲ್ಲೇ ಪ್ರಶಸ್ತಿ ಬಾಚಿದ ಟೊರ್ಪೆಡೋಸ್ ಸಂಸ್ಥೆ ಹಿರಿಯ ಕ್ರಿಕೆಟಿಗರ ನೇತ್ರತ್ವದಲ್ಲಿ ರಾಜ್ಯದ ಶ್ರೇಷ್ಠ ತಂಡವಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿತ್ತು.ಹಿರಿಯರು ತೆರೆಮರೆಗೆ ಸರಿದಂತೆ ತಂಡವನ್ನು ಮುನ್ನಡೆಸುವ ನಾಯಕನ ಜವಾಬ್ದಾರಿ ಗೌತಮ್ ಶೆಟ್ಟಿಯವರ ಪಾಲಿಗೆ ಬಂದಂದಿನಿಂದ ಹಿಂತಿರುಗಿ ನೋಡಿಯೇ ಇಲ್ಲ.ನಾಯಕನಾಗಿ ಜವಾಬ್ದಾರಿಯುತ ಆಟವಾಡಿ, ಕರ್ನಾಟಕ ರಾಜ್ಯದ ಗಮನ ಸೆಳೆದು 100 ಕ್ಕೂ ಮಿಕ್ಕಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಜಯಿಸಿ ತನ್ನ ತಂಡವನ್ನು ರಾಜ್ಯದ ಅಗ್ರಗಣ್ಯ ಸಾಲಿಗೆ ಕೊಂಡೊಯ್ದಿದ್ದರು.90 ರ ದಶಕದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಡಬಲ್ ವಿಕೆಟ್ ಪಂದ್ಯಾಟದಲ್ಲೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಜೊತೆಯಾಗಿ ಭಾಗವಹಿಸಿದ ಎಲ್ಲಾ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸಿ,ಶ್ರೇಷ್ಠ ಆರಂಭಿಕ ಜೋಡಿ ಗೌರವಕ್ಕೂ ಪಾತ್ರರಾಗಿದ್ದರು.
ಸಮಯ ಕಳೆದಂತೆ ಹಿರಿಯ ಕ್ರಿಕೆಟಿಗರು ನೇಪಥ್ಯಕ್ಕೆ ಸರಿದು,ತಂಡದ ಆಟಗಾರರು ಉದ್ಯೋಗ ನಿಮಿತ್ತ ದೂರದೂರಿಗೆ ತೆರಳಬೇಕಾದ ಸಂದರ್ಭದಲ್ಲಿ ಟೊರ್ಪೆಡೋಸ್ ಸಂಸ್ಥೆಯ ಚಟುವಟಿಕೆಗಳನ್ನು ಮೊಟಕುಗೊಳಿಸದೆ,ಏಕಾಂಗಿಯಾಗಿ ವಿಸ್ತರಿಸುವ ಪಣ ತೊಟ್ಟು 2015 ರಲ್ಲಿ ಮಂಗಳೂರಿನ ಹಳೆಯಂಗಡಿಯ ಲೈಟ್ ಹೌಸ್ ಬಳಿ ಸುಸಜ್ಜಿತ “ಟೊರ್ಪೆಡೋಸ್ ಇಂಡೋರ್ ಸ್ಪೋರ್ಟ್ಸ್‌ ಕ್ಲಬ್ ಸ್ಥಾಪಿಸಿದರು.

ಟೊರ್ಪೆಡೋಸ್ ಕ್ಲಬ್ ಹಾಗೂ ಸಾಧನೆ : ವುಡನ್ ಫ್ಲೋರ್ ಬ್ಯಾಡ್ಮಿಂಟನ್ ಕೋರ್ಟ್ ಗಳು,10 ಟೇಬಲ್ ಟೆನ್ನಿಸ್ ಟೇಬಲ್ ಗಳು,ಕ್ರಿಕೆಟ್ ನೆಟ್ ಪಿಚ್,ಹೊನಲು ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಿ ನುರಿತ ತರಬೇತುದಾರರಿಂದ ತರಬೇತಿ ಕೊಡಿಸಿ, ಖುದ್ದು ಗೌತಮ್ ಶೆಟ್ಟಿಯವರು 26 ವರ್ಷದ ಕ್ರೀಡಾ ಬದುಕಿನಲ್ಲಿ 1,000 ಕ್ಕೂ ಅಧಿಕ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡಿದ್ದ ಹೊಸ ಪ್ರತಿಭೆಗಳನ್ನು ಬೆಳಕಿಗೆ ತಂದು ಬೆಳೆಸಿದ್ದಾರೆ.

ಈ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳಾದ ಇಶಾನಿ ಹರೀಶ್,ಆರ್ನಾ ಸದೋತ್ರಾ,ಪ್ರಶಸ್ತಿ ಶೆಟ್ಟಿ ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾ ಕೂಟದಲ್ಲಿ ದಾಖಲೆಯ ಜಯಗಳಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ಸಾತ್ವಿಕಾ, ಪ್ರಶಸ್ತಿ.ಜಿ‌.ಶೆಟ್ಟಿ, ಚಿರಂತನ್, ನಹಾಲಾ, ಆಯುಷ್ ಆರ್.ಶೆಟ್ಟಿ, ಪ್ರೀತೇಶ್ ಸಾಲ್ಯಾನ್, ಟ್ರಿವಿಯ ವೇಗಸ್ ಮತ್ತು ಮಾಹಿಷ್ಮತಿ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಜಯಿಸಿರುತ್ತಾರೆ. ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ,ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗೆದ್ದು, ಮುಂದೆ ವಿದ್ಯಾರ್ಥಿಗಳು ಕ್ರೀಡಾ ಕೋಟಾದಡಿಯಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟ್ ಪಡೆದು ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ.

ಅಲ್ಲದೇ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಉಚಿತವಾಗಿ ಟಿ- ಶರ್ಟ್,ಶೂ,ರ‌್ಯಾಕೆಟ್ ಅಲ್ಲದೇ ಟೇಬಲ್ ಟೆನ್ನಿಸ್,ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಸ್ಥಾಪನೆಯಾದ ಕೇವಲ 2 ವರ್ಷಗಳಲ್ಲಿ ಸಂಸ್ಥೆಯ ನಿರಂತರ ಕ್ರೀಡಾ ಸೇವೆಯನ್ನು ಗುರುತಿಸಿ 2017 ರ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಗೌತಮ್ ಶೆಟ್ಟಿಯವರು ಪಾತ್ರರಾಗಿದ್ದರು. ಅಲ್ಲದೇ ಪ್ರತಿಷ್ಟಿತ ಬಂಟರ ವಾಹಿನಿ ಪತ್ರಿಕೆಯಲ್ಲಿ ನೂರಾರು ಸಾಧಕರ ನಡುವೆ ಓದುಗರ ಆಯ್ಕೆಗೆ ಪಾತ್ರರಾಗಿ 2019 ರ ಸಾಲಿನ‌ ಬಂಟರತ್ನ ಪ್ರಶಸ್ತಿಗೆ ಭಾಜನರಾಗಿದ್ದರು.

ವೃತ್ತಿ ಬದುಕಿನ ಸಾಧನೆ : ಕುಂದಾಪುರದ ಭಂಡಾರ್ಕಾಸ್ ಕಾಲೇಜಿನಲ್ಲಿ ಬಿ.ಎ ಪದವಿ ಹಾಗೂ ಮೈಸೂರು ಯೂನಿವರ್ಸಿಟಿಯಿಂದ ದೈಹಿಕ ಶಿಕ್ಷಣ ಪದವಿ ಮತ್ತು ರಾಜಸ್ಥಾನದ ಯೂನಿವರ್ಸಿಟಿಯಿಂದ ಮಾಸ್ಟರ್ ಆಫ್ ಫಿಕ್ಸೇಶನ್ ನಲ್ಲಿ ಮಾಸ್ಟರ್ ಆಫ್ ಫಿಸಿಕಲ್ ಎಜ್ಯುಕೇಶನ್ ಸ್ನಾತಕೋತ್ತರ ಪದವಿ ಪಡೆದು, 1997 ರಲ್ಲಿ ಉಡುಪಿಯ ಸೈಂಟ್ ಮೇರೀಸ್ ಇಂಗ್ಲೀಷ್ ಮೀಡಿಯಂ‌ ಸ್ಕೂಲ್ ನಲ್ಲಿ ಫಿಸಿಕಲ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿ,1998 ರಿಂದ ಮಂಗಳೂರಿನ M.R.P.L ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ದೈಹಿಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೌತಮ್ ಶೆಟ್ಟಿಯವರು,ಕ್ರೀಡಾ ಪಟುಗಳನ್ನು ಗುರುತಿಸಿ,ಪ್ರೋತ್ಸಾಹಿಸಿ ವಿದ್ಯಾಸಂಸ್ಥೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಟೊರ್ಪೆಡೋಸ್ ಕ್ಲಬ್ ಆಯೋಜಿಸಿದ ಪ್ರಮುಖ ಕ್ರೀಡಾ ಸ್ಪರ್ಧೆಗಳು ನುರಿತ ಕ್ರೀಡಾ ತರಬೇತುದಾರ ಹಾಗೂ ಸಂಘಟಕರಾಗಿ ಏರ್ಪಡಿಸಿದ್ದ ಕ್ರೀಡಾ ಸ್ಪರ್ಧೆಗಳು. ಜಿಲ್ಲಾ,ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುಮಾರು 100 ಕ್ಕೂ ಮಿಕ್ಕಿ ವಿ.ವಿ‌ ಕ್ರೀಡಾ ಪಂದ್ಯಗಳು,

ಅಂತಾರಾಷ್ಟ್ರೀಯ ಮಟ್ಟದ ಟಿ.ಪಿ.ಎಲ್-2017, 2006,2010 ರಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪಂದ್ಯಾಕೂಟ, 2018 ರಲ್ಲಿ ಪುರುಷರ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್, 2015-16 ರಲ್ಲಿ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ,
2016 ರಿಂದ ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ಹಾಗೂ ಟೆನ್ನಿಸ್ ಲೀಗ್ ಪಂದ್ಯಗಳು, 2002 ರಿಂದ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಟೂರ್ನಮೆಂಟ್, 2018 ರಲ್ಲಿ 2 ಟೇಬಲ್ ಟೆನ್ನಿಸ್ ಲೀಗ್ ಗಳು, 2018ರಲ್ಲಿ ಅಂತರ್ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್, 2018 ರಲ್ಲಿ 2 ಟೇಬಲ್ ಟೆನ್ನಿಸ್ ಲೀಗ್, 2019 ರಲ್ಲಿ ಪೋಲಿಸರಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್,  2019 ರಲ್ಲಿ ಜಿ.ಎಸ್.ಬಿ ಟೊರ್ಪೆಡೋಸ್ ಟ್ರೋಫಿ, 2019 ರಲ್ಲಿ ಟಿ‌.ಪಿ.ಎಲ್ ಲೆದರ್ ಬಾಲ್ ಪಂದ್ಯಾಕೂಟ, ಇತ್ತೀಚೆಗಷ್ಟೇ ಹಾಕಿ‌ ಮಾಂತ್ರಿಕ ಧ್ಯಾನ್ ಚಂದ್ ಜನ್ಮದಿನಾಚರಣೆಯಂದು ನಡೆದ ಅಂತರಾಷ್ಟ್ರೀಯ ಕ್ವಿಜ್ ಮಾಸ್ಟರ್ ರಿಂದ ಕ್ವಿಜ್ ಕಾರ್ಯಕ್ರಮ ಹೀಗೆ ಹಲವಾರು ಕ್ರೀಡಾ ಸ್ಪರ್ಧೆಗಳು ತಿಂಗಳಿಗೊಂದರಂತೆ ನಡೆಯುತ್ತಿದೆ.

ಹಿರಿಯ ಕ್ರೀಡಾ ಪಟುಗಳ ಮೇಲೆ ಅಪಾರ ಗೌರವ ಹೊಂದಿರುವ ಗೌತಮ್ ಶೆಟ್ಟಿಯವರು ತಾವು ಅತಿಥಿಗಳಾಗಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಜೀವನದಲ್ಲಿ ಕ್ರೀಡೆಯ ಮಹತ್ವದ ಸಂದೇಶನ್ನು ನೀಡಿ,ಖುದ್ದು ಏರ್ಪಡಿಸಿ ವಿಶೇಷ ಕ್ರೀಡಾ ಕಾರ್ಯಕ್ರಮಗಳಲ್ಲಿ ಗೌರವಿಸುವ ಪರಿಪಾಠವನ್ನು ಕ್ರೀಡಾ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದಿರುತ್ತಾರೆ.

ಗೌರವ-ಪುರಸ್ಕಾರಗಳು. ಗೌತಮ್ ಶೆಟ್ಟಿಯವರ ಕಠಿಣ ಪರಿಶ್ರಮ, ಶೃದ್ಧೆ , ನಿಷ್ಠೆ, ದೂರದೃಷ್ಟಿಯ ಚಿಂತನೆಯಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿದೆ.

ಅವುಗಳಲ್ಲಿ ಪ್ರಮುಖವಾದುದು : ಪ್ರತಿಷ್ಟಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸುರತ್ಕಲ್ ಸಾರ್ವಜನಿಕ ಅಭಿನಂದನಾ ಸಮಿತಿ ಸನ್ಮಾನ, ಗಣೇಶಪುರ ಕೇಸರಿ ಫ್ರೆಂಡ್ಸ್, ಅಂತರಾಷ್ಟ್ರೀಯ ಬಂಟರ ಪ್ರೊ ಕಬಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ತೋಕೂರು ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್, ಸೀಮಾ ಸ್ಪೋರ್ಟ್ಸ್ ಕ್ಲಬ್ ಸೂರಿಂಜೆ, ಮಿತ್ರಪಟ್ನ ಯುವಕ ಮಂಡಲ,ಲಯನ್ಸ್ ಕ್ಲಬ್ ಮೂಡಬಿದ್ರೆ,ರಾಮ ಲಕ್ಷ್ಮಣ ಕಂಬಳ ಉತ್ಸವ,ಚಾಲೆಂಜ್ ಕ್ರಿಕೆಟ್ ಕ್ಲಬ್, ಜಾನ್ಸನ್ ಕ್ರಿಕೆಟರ್ಸ್, ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಸಮಾರಂಭ ಕೋಡ್ದಬ್ದು,ನವದುರ್ಗಾ ಫ್ರೆಂಡ್ಸ್, ನವೋದಯ ಯುವಕ ಮಂಡಲ, ಮೀರಾ ಕ್ರಿಕೆಟರ್ಸ್, ಹಸನಬ್ಬ ಪ್ರಶಸ್ತಿ, ಮೂಕಾಂಬಿಕಾ ಹೈಸ್ಕೂಲ್ ಕೊಲ್ಲೂರು, ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಹೀಗೆ ನೂರಾರು ಸಂಸ್ಥೆಗಳು ಗೌತಮ್ ಶೆಟ್ಟಿಯವರ ಕ್ರೀಡಾ ಕ್ಷೇತ್ರದ ಶ್ರೇಷ್ಠ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಿದೆ.

ಪರಿವಾರ ಸಮೇತ ಮಂಗಳೂರಿನಲ್ಲಿ ವಾಸವಿದ್ದು,ಪುತ್ರಿ ಪ್ರಶಸ್ತಿ ಹಾಗೂ ಪ್ರಥಮ್ ತಂದೆಯಿಂದಲೇ ಕೋಚಿಂಗ್ ಪಡೆದು ಸಂಸ್ಥೆಗೆ ಪ್ರಥಮ, ಪ್ರಶಸ್ತಿಗಳ ಗರಿ ಮೂಡಿಸಿರುತ್ತಾರೆ.

ಸಂಸ್ಥೆಯ ಉದ್ದೇಶ : ಎಲ್ಲರಿಗೂ ಉತ್ತಮ ಸಂಘಟನಾತ್ಮಕ ಕ್ರೀಡಾ ತರಬೇತಿ ನೀಡುವ ಮೂಲಕ ಆತ್ಮವಿಶ್ವಾಸ ತುಂಬಿ,ಸ್ವಂತ ಬಲದ ಮೂಲಕ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಹಾಗೂ ಸೂಕ್ತ ಮಾರ್ಗದರ್ಶನದಿಂದ ಅವರನ್ನು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಳಾಗಿ ಮಾರ್ಪಡಿಸಲು ಶಕ್ತಿಮೀರಿ ಪ್ರಯತ್ನಿಸುವುದೇ ಟೊರ್ಪೆಡೋಸ್ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆಯೆಂದು ಗೌತಮ್ ಶೆಟ್ಟಿಯವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಆರ್.ಕೆ.ಆಚಾರ್ಯ ಕೋಟ

Categories
Action Replay ಕ್ರಿಕೆಟ್

ಅಂದು ಕುಂಬ್ಳೆ ವಿಶ್ವದಾಖಲೆಯ 10 ವಿಕೆಟ್ ಗಳಿಸಲು ಗೊಂಚಲಿಗೆ ನೆರವಾಗಿದ್ದ ಶ್ರೀನಾಥ್

ಭಾರತೀಯರ ಪಾಲಿಗೆ ಹಾಗೂ ಅನಿಲ್ ಕುಂಬ್ಳೆ ಅದೊಂದು ಅವಿಸ್ಮರಣೀಯ ದಿನ ಅಂದರೆ ತಪ್ಪಾಗಲಾರದು. ಅವತ್ತು ದಿನಾಂಕ 7 ಫೆಬ್ರವರಿ 1999 ಆ ದಿನ ಬಹುಶಃ ವಿಶ್ವ ಕ್ರಿಕೆಟ್ ಅನಿಲ್ ಕುಂಬ್ಳೆ ಎಂಬ ಸ್ಪಿನ್ ಗಾರುಡಿಗನತ್ತ ತಿರುಗಿ ನೋಡಿದ ದಿನ.

ದಿನಾಂಕ 7 ಫೆಬ್ರವರಿ 1999ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ 2 ನೇ ಟೆಸ್ಟ್ ನಲ್ಲಿ ಅನಿಲ್ ಕುಂಬ್ಳೆ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು.

ಹಾಗೆ 2 ನೇ ಇನ್ನಿಂಗ್ಸ್ ನಲ್ಲಿ ಎದುರಾಳಿಗಳಿಗೆ ಆರಂಭದಿಂದಲೂ ಅನಿಲ್ ಕುಂಬ್ಳೆ ದುಃಸ್ವಪ್ನವಾಗಿ ಕಾಡಿದ್ದರು ಅಂತಿಮವಾಗಿ ಕುಂಬ್ಳೆ 9 ವಿಕೆಟ್ ಪಡೆದಿದ್ದರು ಇತಿಹಾಸ ನಿರ್ಮಿಸಲು ಕುಂಬ್ಳೆಗೆ ಒಂದು ವಿಕೆಟ್ ಅವಶ್ಯಕತೆ ಇತ್ತು .ಪಾಕಿಸ್ತಾನದ 9 ವಿಕೆಟ್ ಗಳು ಉರುಳಿದಾಗ ಬೌಲಿಂಗ್ ಸರದಿ ಜವಾಗಲ್ ಶ್ರೀನಾಥ್ ಅವರದ್ದಾಗಿತ್ತು ಆದರೆ ಅವರು ಎಸೆದ ಆ ಓವರ್ ಕುಂಬ್ಳೆಗೆ 10 ವಿಕೆಟ್ ಗಳಿಸಲು ಸಂಪೂರ್ಣ ಅನುವು ಮಾಡಿಕೊಟ್ಟಿತು.

ಮುಂದಿನ ಓವರ್ ನಲ್ಲಿ ಕುಂಬ್ಳೆಗೆ ವಿಕೆಟ್ ಸಿಗಲೆಂದು ಅವರು ಆ ಓವರ್ ನಲ್ಲಿ ವಾಸಿಮ್ ಅಕ್ರಮ್ ಅವರಿಗೆ ಆಫ್ ಸ್ಟಂಪ್ ನಿಂದ ಹೊರಗೆ ಮತ್ತು ಲೆಗ್ ಸ್ಟಂಪ್ ನಿಂದ ಹೊರಗೆ ಚೆಂಡನ್ನು ಎಸೆದು ತಮ್ಮ ಓವರ್ ಅನ್ನು ಮುಗಿಸಿದ ಕನ್ನಡಿಗ ಇನ್ನೊಬ್ಬ ಕನ್ನಡಿಗನ 10 ವಿಕೆಟ್ ಗಳ ದಾಖಲೆಗೆ ನೆರವಾದರು. ಮುಂದಿನ ಓವರ್ ನಲ್ಲೇ ವಾಸಿಂ ಅಕ್ರಮ್ ಅವರ ವಿಕೆಟ್ ಕಬಳಿಸುವುದರ ಮೂಲಕ ಕುಂಬ್ಳೆ ಭಾರತೀಯ ಕ್ರಿಕೆಟ್ ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದರು.

ಶ್ರೀನಾಥ್ ಕುಂಬ್ಳೆ ಗೆ10 ನೇ ವಿಕೆಟ್ ಗಳಿಸಲು ನೆರವಾದ ರೋಮಾಂಚಕ ವಿಡಿಯೋ ಇಲ್ಲಿದೆ ನೋಡಿ ಆನಂದಿಸಿ.

Categories
Action Replay ಸ್ಪೋರ್ಟ್ಸ್

ಟೊರ್ಪೆಡೋಸ್ ಸಂಸ್ಥೆಯ ರೂವಾರಿ ಗೌತಮ್ ಶೆಟ್ಟಿ ಪ್ರತಿಷ್ಟಿತ ಬಂಟರತ್ನ ಪ್ರಶಸ್ತಿ ಗೆ ಆಯ್ಕೆ

ಕ್ರೀಡಾಲೋಕದಲ್ಲಿ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಪ್ರಚಲಿತವಿರುವ ಹಳೆಯಂಗಡಿಯ ಪ್ರತಿಷ್ಟಿತ ಕ್ರೀಡಾ ತರಬೇತಿ ಸಂಸ್ಥೆ”ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್” ನ ರೂವಾರಿ ಗೌತಮ್ ಶೆಟ್ಟಿಯವರು, ಬಂಟರ ಪ್ರಮುಖ ವಾಹಿನಿ “ಬಂಟರ ಮಿತ್ರ” ಪತ್ರಿಕೆಯಲ್ಲಿ 10 ಸಂಚಿಕೆಗಳಲ್ಲಿ ಪ್ರಕಟವಾದ 500 ಮಿಕ್ಕಿದ ಸಾಧಕರಲ್ಲಿ,ಓದುಗರ ಹಾಗೂ ಸಂಪಾದಕೀಯ ಮಂಡಳಿಯ ಆಯ್ಕೆಯಾಗಿ 2019 ರ ಸಾಲಿನ “ಬಂಟ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವೆಂಬರ್ 23 ರಂದು ಮೈಸೂರಿನ ಪುರಭವನದ ಜಸ್ಟಿಸ್ ಕೆ.ಎಸ್.ಹೆಗ್ಡೆ ವೇದಿಕೆ ಹಾಗೂ ಶ್ರೀ ಮಧುಕರ ಶೆಟ್ಟಿ ಸಭಾಂಗಣದಲ್ಲಿ ನಡೆಯುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಗೌರವವನ್ನು ಸ್ವೀಕರಿಸಲಿದ್ದಾರೆ.

ಬಾಲ್ಯದಿಂದಲೇ ಕ್ರೀಡೆಯಲ್ಲಿ ಬಹಳಷ್ಟು ಆಸಕ್ತಿ ಹೊಂದಿದ್ದ ಗೌತಮ್ ಶೆಟ್ಟಿ, ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್, ಬಾಲ್ ಬ್ಯಾಡ್ಮಿಂಟನ್ , ವಾಲಿಬಾಲ್, ಕಬಡ್ಡಿ, ಲಾನ್ ಟೆನ್ನಿಸ್ ಮುಂತಾದ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಬಹಳಷ್ಟು ಪ್ರಶಸ್ತಿಗಳನ್ನು ಜಯಿಸಿದ್ದರು.

80 ರ ದಶಕದಲ್ಲಿ ಹಿರಿಯ ನಿತ್ಯಾನಂದ ಮುನ್ನಾ ನೇತೃತ್ವದಲ್ಲಿ ಸ್ಥಾಪನೆಯಾದ” ಟೊರ್ಪೆಡೋಸ್ ಕ್ರಿಕೆಟ್ ಕ್ಲಬ್”ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.ತಾವು ಭಾಗವಹಿಸಿದ ಪ್ರಥಮ ಪಂದ್ಯಾಕೂಟದಲ್ಲೇ ಪ್ರಶಸ್ತಿ ಬಾಚಿದ ಟೊರ್ಪೆಡೋಸ್ ಸಂಸ್ಥೆ ಹಿರಿಯ ಕ್ರಿಕೆಟಿಗರ ನೇತ್ರತ್ವದಲ್ಲಿ ರಾಜ್ಯದ ಶ್ರೇಷ್ಠ ತಂಡವಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿತ್ತು.ಹಿರಿಯರು ತೆರೆಮರೆಗೆ ಸರಿದಂತೆ ತಂಡವನ್ನು ಮುನ್ನಡೆಸುವ ನಾಯಕನ ಜವಾಬ್ದಾರಿ ಗೌತಮ್ ಶೆಟ್ಟಿಯವರ ಪಾಲಿಗೆ ಬಂದಂದಿನಿಂದ ಹಿಂತಿರುಗಿ ನೋಡಿಯೇ ಇಲ್ಲ.ನಾಯಕನಾಗಿ ಜವಾಬ್ದಾರಿಯುತ ಆಟವಾಡಿ, ಕರ್ನಾಟಕ ರಾಜ್ಯದ ಗಮನ ಸೆಳೆದು 100 ಕ್ಕೂ ಮಿಕ್ಕಿ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿಗಳನ್ನು ಜಯಿಸಿ ತನ್ನ ತಂಡವನ್ನು ರಾಜ್ಯದ ಅಗ್ರಗಣ್ಯ ಸಾಲಿಗೆ ಕೊಂಡೊಯ್ದಿದ್ದರು.90 ರ ದಶಕದಲ್ಲಿ ಹೆಚ್ಚಾಗಿ ನಡೆಯುತ್ತಿದ್ದ ಡಬಲ್ ವಿಕೆಟ್ ಪಂದ್ಯಾಟದಲ್ಲೂ ಟೆನ್ನಿಸ್ ಬಾಲ್ ನ ತೆಂಡುಲ್ಕರ್ ಹರಿಪ್ರಸನ್ನ(ಪುಟ್ಟ)ಜೊತೆಯಾಗಿ ಭಾಗವಹಿಸಿದ ಎಲ್ಲಾ ಟೂರ್ನಿಗಳಲ್ಲೂ ಪ್ರಶಸ್ತಿ ಜಯಿಸಿ,ಶ್ರೇಷ್ಠ ಆರಂಭಿಕ ಜೋಡಿ ಗೌರವಕ್ಕೂ ಪಾತ್ರರಾಗಿದ್ದರು.

ಸಮಯ ಕಳೆದಂತೆ ಹಿರಿಯ ಕ್ರಿಕೆಟಿಗರು ನೇಪಥ್ಯಕ್ಕೆ ಸರಿದು,ತಂಡದ ಆಟಗಾರರು ಉದ್ಯೋಗ ನಿಮಿತ್ತ ದೂರದೂರಿಗೆ ತೆರಳಬೇಕಾದ ಸಂದರ್ಭದಲ್ಲಿ ಟೊರ್ಪೆಡೋಸ್ ಸಂಸ್ಥೆಯ ಚಟುವಟಿಕೆಗಳನ್ನು ಮೊಟಕುಗೊಳಿಸದೆ,ಏಕಾಂಗಿಯಾಗಿ ವಿಸ್ತರಿಸುವ ಪಣ ತೊಟ್ಟು 2015 ರಲ್ಲಿ ಮಂಗಳೂರಿನ ಹಳೆಯಂಗಡಿಯ ಲೈಟ್ ಹೌಸ್ ಬಳಿ ಸುಸಜ್ಜಿತ “ಟೊರ್ಪೆಡೋಸ್ ಇಂಡೋರ್ ಸ್ಪೋರ್ಟ್ಸ್‌ ಕ್ಲಬ್ ಸ್ಥಾಪಿಸಿದರು. ವುಡನ್ ಫ್ಲೋರ್ ಬ್ಯಾಡ್ಮಿಂಟನ್ ಕೋರ್ಟ್ ಗಳು,10 ಟೇಬಲ್ ಟೆನ್ನಿಸ್ ಟೇಬಲ್ ಗಳು, ಕ್ರಿಕೆಟ್ ನೆಟ್ ಪಿಚ್, ಹೊನಲು ಬೆಳಕಿನ ವ್ಯವಸ್ಥೆಯನ್ನು ಕಲ್ಪಿಸಿ ನುರಿತ ತರಬೇತುದಾರರಿಂದ ತರಬೇತಿ ಕೊಡಿಸಿ, ಖುದ್ದು ತಮ್ಮನ್ನು ತೊಡಗಿಸಿಕೊಂಡು ನೂರಾರು ಹೊಸ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತಂದು ಬೆಳೆಸಿದ್ದಾರೆ. ಈ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿಗಳಾದ ಇಶಾನಿ ಹರೀಶ್, ಆರ್ನಾ ಸದೋತ್ರಾ, ಪ್ರಶಸ್ತಿ ಶೆಟ್ಟಿ ಇತ್ತೀಚೆಗಷ್ಟೇ ಮೈಸೂರಿನಲ್ಲಿ ನಡೆದ ದಸರಾ ಕ್ರೀಡಾ ಕೂಟದಲ್ಲಿ ದಾಖಲೆಯ ಜಯಗಳಿಸಿ ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ.

ಸಾತ್ವಿಕಾ ,ಪ್ರಶಾಂತಿ.ಜಿ‌.ಶೆಟ್ಟಿ, ವಿನಯ್, ಪ್ರಣವ್, ಹರ್ಷವರ್ಧನ್, ಚಿರಂತನ್, ಮಾಯಾಂಕ್  ಚಿರಂತನ್, ನಹಾಲಾ, ಆಯುಷ್ ಆರ್.ಶೆಟ್ಟಿ, ಪ್ರೀತೇಶ್ ಸಾಲ್ಯಾನ್, ಟ್ರಿವಿಯ ವೇಗಸ್ ಮತ್ತು ಮಾಹಿಷ್ಮತಿ ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಭಾಗವಹಿಸಿ ಪ್ರಶಸ್ತಿ ಜಯಿಸಿರುತ್ತಾರೆ. ಇವರಿಂದ ತರಬೇತಿ ಪಡೆದ ವಿದ್ಯಾರ್ಥಿಗಳು ರಾಜ್ಯ,ರಾಷ್ಟ್ರ ಮಟ್ಟದ ಪ್ರಶಸ್ತಿಗಳನ್ನು ಗೆದ್ದು,ಮುಂದೆ ವಿದ್ಯಾರ್ಥಿಗಳು ಕ್ರೀಡಾ ಕೋಟಾದಡಿಯಲ್ಲಿ ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಸೀಟ್ ಪಡೆದು ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಅಲ್ಲದೇ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಉಚಿತವಾಗಿ ಟಿ- ಶರ್ಟ್,ಶೂ,ರ‌್ಯಾಕೆಟ್ ಅಲ್ಲದೇ ಟೇಬಲ್ ಟೆನ್ನಿಸ್,ಬ್ಯಾಡ್ಮಿಂಟನ್ ಹಾಗೂ ಕ್ರಿಕೆಟ್ ತರಬೇತಿಯನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಸ್ಥಾಪನೆಯಾದ ಕೇವಲ 2 ವರ್ಷಗಳಲ್ಲಿ ಸಂಸ್ಥೆಯ ನಿರಂತರ ಕ್ರೀಡಾ ಸೇವೆಯನ್ನು ಗುರುತಿಸಿ 2017 ರ ಸಾಲಿನ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಗೌತಮ್ ಶೆಟ್ಟಿಯವರು ಪಾತ್ರರಾಗಿದ್ದರು.

ಮಂಗಳೂರಿನ M.R.P.L ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ದೈಹಿಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೌತಮ್ ಶೆಟ್ಟಿಯವರು, ಕ್ರೀಡಾ ಪಟುಗಳನ್ನು ಗುರುತಿಸಿ,ಪ್ರೋತ್ಸಾಹಿಸಿ ವಿದ್ಯಾಸಂಸ್ಥೆ ಸರ್ವತೋಮುಖ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ನುರಿತ ಕ್ರೀಡಾ ತರಬೇತುದಾರ ಹಾಗೂ ಸಂಘಟಕರಾಗಿ ಏರ್ಪಡಿಸಿದ್ದ  ಕ್ರೀಡಾ ಸ್ಪರ್ಧೆಗಳು. ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸುಮಾರು 100 ಕ್ಕೂ ಮಿಕ್ಕಿ ವಿ.ವಿ‌ ಕ್ರೀಡಾ ಪಂದ್ಯಗಳು, ಅಂತಾರಾಷ್ಟ್ರೀಯ ಮಟ್ಟದ ಟಿ.ಪಿ.ಎಲ್-2017, 2006,2010 ರಲ್ಲಿ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಪಂದ್ಯಾಕೂಟ, 2018 ರಲ್ಲಿ ಪುರುಷರ ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಟೂರ್ನಮೆಂಟ್, 2015-16 ರಲ್ಲಿ ರಾಜ್ಯ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ, 2016 ರಿಂದ ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ಹಾಗೂ ಟೆನ್ನಿಸ್ ಲೀಗ್ ಪಂದ್ಯಗಳು, 2002 ರಿಂದ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನ್ನಿಸ್ ಟೂರ್ನಮೆಂಟ್, 2018 ರಲ್ಲಿ 2 ಟೇಬಲ್ ಟೆನ್ನಿಸ್ ಲೀಗ್ ಗಳು, 2018ರಲ್ಲಿ ಅಂತರ್ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್, 2018 ರಲ್ಲಿ 2 ಟೇಬಲ್ ಟೆನ್ನಿಸ್ ಲೀಗ್, 2019 ರಲ್ಲಿ ಪೋಲಿಸರಿಗಾಗಿ ಅಂತರ್ ಜಿಲ್ಲಾ ಬ್ಯಾಡ್ಮಿಂಟನ್, 2019 ರಲ್ಲಿ ಜಿ.ಎಸ್.ಬಿ ಟೊರ್ಪೆಡೋಸ್ ಟ್ರೋಫಿ, 2019 ರಲ್ಲಿ ಟಿ‌.ಪಿ.ಎಲ್ ಲೆದರ್ ಬಾಲ್ ಪಂದ್ಯಾಕೂಟ, ಇತ್ತೀಚೆಗಷ್ಟೇ ಹಾಕಿ‌ ಮಾಂತ್ರಿಕ ಧ್ಯಾನ್ ಚಂದ್ ಜನ್ಮದಿನಾಚರಣೆಯಂದು ನಡೆದ ಅಂತರಾಷ್ಟ್ರೀಯ ಕ್ವಿಜ್ ಮಾಸ್ಟರ್ ರಿಂದ ಕ್ವಿಜ್ ಕಾರ್ಯಕ್ರಮ ಹೀಗೆ ಹಲವಾರು ಕ್ರೀಡಾ ಸ್ಪರ್ಧೆಗಳು ತಿಂಗಳಿಗೊಂದರಂತೆ ನಡೆಯುತ್ತಿದೆ.ಹಿರಿಯ ಕ್ರೀಡಾ ಪಟುಗಳ ಮೇಲೆ ಅಪಾರ ಗೌರವ ಹೊಂದಿರುವ ಗೌತಮ್ ಶೆಟ್ಟಿಯವರು ತಾವು ಏರ್ಪಡಿಸಿ ವಿಶೇಷ ಕ್ರೀಡಾ ಕಾರ್ಯಕ್ರಮಗಳಲ್ಲಿ ಗೌರವಿಸುವ ಪರಿಪಾಠವನ್ನು ಕ್ರೀಡಾ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದಿರುತ್ತಾರೆ.

ಗೌತಮ್ ಶೆಟ್ಟಿಯವರ ಕಠಿಣ ಪರಿಶ್ರಮ,ಶೃದ್ಧೆ ,ನಿಷ್ಠೆ, ದೂರದೃಷ್ಟಿಯ ಚಿಂತನೆಯಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿದೆ. ಅವುಗಳಲ್ಲಿ ಪ್ರಮುಖವಾದುದು- ಪ್ರತಿಷ್ಟಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ,ಸುರತ್ಕಲ್ ಸಾರ್ವಜನಿಕ ಅಭಿನಂದನಾ ಸಮಿತಿ ಸನ್ಮಾನ, ಗಣೇಶಪುರ ಕೇಸರಿ ಫ್ರೆಂಡ್ಸ್, ಅಂತರಾಷ್ಟ್ರೀಯ ಬಂಟರ ಪ್ರೊ ಕಬಡ್ಡಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ತೋಕೂರು ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್, ಸೀಮಾ ಸ್ಪೋರ್ಟ್ಸ್ ಕ್ಲಬ್ ಸೂರಿಂಜೆ, ಮಿತ್ರಪಟ್ನ ಯುವಕ ಮಂಡಲ, ಲಯನ್ಸ್ ಕ್ಲಬ್ ಮೂಡಬಿದ್ರೆ, ರಾಮ ಲಕ್ಷ್ಮಣ ಕಂಬಳ ಉತ್ಸವ, ಚಾಲೆಂಜ್ ಕ್ರಿಕೆಟ್ ಕ್ಲಬ್, ಜಾನ್ಸನ್ ಕ್ರಿಕೆಟರ್ಸ್, ಸ್ಪೋರ್ಟ್ಸ್ ಕನ್ನಡ ಲೋಕಾರ್ಪಣಾ ಸಮಾರಂಭ ಕೋಡ್ದಬ್ದು, ನವದುರ್ಗಾ ಫ್ರೆಂಡ್ಸ್, ನವೋದಯ ಯುವಕ ಮಂಡಲ, ಮೀರಾ ಕ್ರಿಕೆಟರ್ಸ್, ಹಸನಬ್ಬ ಪ್ರಶಸ್ತಿ, ಮೂಕಾಂಬಿಕಾ ಹೈಸ್ಕೂಲ್ ಕೊಲ್ಲೂರು, ಭಂಡಾರ್ಕರ್ಸ್ ಕಾಲೇಜು ಕುಂದಾಪುರ ಹೀಗೆ ನೂರಾರು ಸಂಸ್ಥೆಗಳು ಗೌತಮ್ ಶೆಟ್ಟಿಯವರ ಕ್ರೀಡಾ ಕ್ಷೇತ್ರದ ಶ್ರೇಷ್ಠ ಸಾಧನೆಗಳನ್ನು ಗುರುತಿಸಿ ಸನ್ಮಾನಿಸಿದೆ.

ಪರಿವಾರ ಸಮೇತ ಮಂಗಳೂರಿನಲ್ಲಿ ವಾಸವಿದ್ದು,ಪುತ್ರಿ ಪ್ರಶಸ್ತಿ ಹಾಗೂ ಪ್ರಥಮ್ ತಂದೆಯಿಂದಲೇ ಕೋಚಿಂಗ್ ಪಡೆದು ಸಂಸ್ಥೆಗೆ ಪ್ರಥಮ, ಪ್ರಶಸ್ತಿಗಳ ಗರಿ ಮೂಡಿಸಿರುತ್ತಾರೆ.

ಸಂಸ್ಥೆಯ ಉದ್ದೇಶ :  ಎಲ್ಲರಿಗೂ ಉತ್ತಮ ಸಂಘಟನಾತ್ಮಕ ಕ್ರೀಡಾ ತರಬೇತಿ ನೀಡುವ ಮೂಲಕ ಆತ್ಮವಿಶ್ವಾಸ ತುಂಬಿ,ಸ್ವಂತ ಬಲದ ಮೂಲಕ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಹಾಗೂ ಸೂಕ್ತ ಮಾರ್ಗದರ್ಶನದಿಂದ ಅವರನ್ನು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಳಾಗಿ ಮಾರ್ಪಡಿಸಲು ಶಕ್ತಿಮೀರಿ ಪ್ರಯತ್ನಿಸುವುದೇ ಟೊರ್ಪೆಡೋಸ್ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆಯೆಂದು ಗೌತಮ್ ಶೆಟ್ಟಿಯವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

– ಆರ್.ಕೆ.ಆಚಾರ್ಯ ಕೋಟ

Categories
Action Replay ಕ್ರಿಕೆಟ್

ಮರೆಯಾದ ದೈತ್ಯ ಮಾಲ್ಕಮ್ ಮಾರ್ಷಲ್ ಮರೆಯಲಾದೀತೆ?

ಮರೆಯಲಾದೀತೆ? 1982ರಲ್ಲಿ ಭಾರತಿ ಪ್ರುಡೆನ್ಷಿಯಲ್ ಕಪ್ ನ್ನು ಅಚ್ಚರಿಯಾಗುವಂತೆ ಗೆದ್ದಿದ್ದು ಸಾಧನೆಯೇ ಅಲ್ಲ..ಅದೊಂದು ಆಕಸ್ಮಿಕ ಎಂದು ಕಪ್ ಗೆದ್ದ ಕೆಲವೇ ತಿಂಗಳುಗಳ ಅಂತರದಲ್ಲಿ ತಲೆಗೆ ಹೊಡೆದು ಹೇಳಿದ ವಿಂಡೀಸ್ ತಂಡದ ಪರಾಕ್ರಮಿಗಳಲ್ಲಿ ಅಗ್ರಗಣ್ಯ. 1999 ರ ನವೆಂಬರ್ 4ರಂದು ತನ್ನ ಇಹಲೋಕದ ಯಾತ್ರೆ ಮುಗಿಸಿದಾಗ, ಇನ್ನೂ ಕೇವಲ 41 ವಯಸ್ಸು. ಹ್ಯಾಂಪ್ ಶೈರ್ ಮತ್ತು ವಿಂಡೀಸ್ ತಂಡಗಳೆರಡಕ್ಕೂ ಕೋಚ್ ಆಗಿ ಕೆಲಸ ಮಾಡುತ್ತಿದ್ದ ಮಾರ್ಷಲ್ ಕೆಲ ದಿನಗಳ ಹಿಂದಷ್ಟೇ ತಮ್ಮ ದಶಕಗಳ ’ಸಂಗಾತಿ’ ಕೋನಿ ರಾಬರ್ಟಾಳನ್ನು ಮದುವೆಯಾಗಿದ್ದರು. ಒಬ್ಬ ಮಗನೂ ಇದ್ದ. ಆದರೆ ಕ್ಯಾನ್ಸರ್ ಎಂಬ ಮಹಾಮಾರಿ ಯಾವುದನ್ನೂ ಲೆಕ್ಕಿಸಲಿಲ್ಲ. 1999ರ ವಿಶ್ವಕಪ್ ಸಂದರ್ಭದಲ್ಲಿಯೇ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು.

ವಿಶ್ವಕಪ್ ಗೆಲ್ಲಲಾರದೇ ಹತಾಶರಾಗಿ ಲಾಯ್ಡ್ ತಾವು ಇನ್ನುಮುಂದೆ ನಾಯಕನ ಕೆಲಸ ಮಾಡಲು ಲಬ್ಧರಿಲ್ಲವೆಂದು ’ಶಸ್ತ್ರ’ತ್ಯಾಗ ಮಾಡಿದ್ದರೂ, ಅವರ ನಾಯಕತ್ವದ ಬಗ್ಗೆ ಅಪರಿಮಿತ ವಿಶ್ವಾಸವಿದ್ದ ವಿಂಡೀಸ್ ಆಯ್ಕೆ ಸಮಿತಿ ಹಠಹಿಡಿದು ಮತ್ತೆ ಅವರಿಗೇ ನಾಯಕತ್ವದ ಪಟ್ಟ ಕಟ್ಟಿತು. ಭಾರತದ ಗೆಲುವು ಆಕಸ್ಮಿಕವೆಂದು ನಿರೂಪಿಸಲು ಇದೊಂದು ಸುವರ್ಣಾವಕಾಶವೆಂದು ಹುರುಪು ತುಂಬಿತು. ವಿಂಡೀಸ್ ಆಟಗಾರರೆಲ್ಲರ ಪ್ರೀತಿ-ಪಾತ್ರರಾಗಿದ್ದ ಲಾಯ್ಡ್ ಪಟ್ಟು ಸಡಲಿಸಿ ತಮ್ಮ ದೈತ್ಯಸೇನೆಯೊಂದಿಗೆ ಭಾರತದ ಮೇಲೆ ದಂಡೆತ್ತಿ ಬಂದರು.

ಅಲ್ಲಿಯವರೆಗೂ ಮಾರ್ಷಲ್ ಅಂದರೆ ಧೂಳೆಬ್ಬಿಸುವ ಸಾಮಾನ್ಯ ಗಾಳಿಯೆಂದು ತಿಳಿದಿದ್ದ ಕಪಿಲ್ ರ ’ಹುಡುಗರಿ’ಗೆ, ಅದೊಂದು ’ಕತ್ರೀನಾ’ ಎಂದು ತಿಳಿಯಲಾರಂಭಿಸಿದ್ದೇ ಕಾನ್ಪುರದಲ್ಲಿ. ಇಡೀ ಸರಣಿಯಲ್ಲಿ ಮಾರ್ಷಲ್ NIGHTMARE ಪದದ ಅರ್ಥ ಸವಿವರವಾಗಿ ತಿಳಿಸಿಕೊಟ್ಟರು. ’ಲಿಟಲ್ ಮಾಸ್ಟರ್’, ’ಜಿಮ್ಮಿ’, ’ಮಾಸ್ಟರ್ ಬ್ಯಾಟ್ಸ್ ಮನ್’ ಎಂಬ ಬಿರುದಾಂಕಿತರಿಗೆಲ್ಲಾ ಅವರ ಇತಿ-ಮಿತಿಗಳನ್ನು ಅರ್ಥ ಮಾಡಿಸಿದರು, ಹೋಲ್ಡಿಂಗ್, ಡೇನಿಯಲ್ ತರಹದ ಸಹದೈತ್ಯರೊಡಗೂಡಿ ಭಾರತದ ಇನ್ನಿಂಗ್ಸ್ ಗಳನ್ನು ’ಇವರು ವಿಶ್ವ ಚಾಂಪಿಯನ್ ಗಳಾಗಿದ್ದು ನಿಜವೇ??’ ಎಂಬ ಸಂದೇಹದೊಂದಿಗೆ ಪರ್ಯವಸಾನಗೊಳಿಸಿದರು.

ವಿಂಡೀಸ್ ವಿರುದ್ಧವೇ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಹೆಗ್ಗಳಿಕೆ ’ಸನ್ನಿ’ ಗಾವಸ್ಕರ್ ಅವರಿಗಿತ್ತು, (1971ರಲ್ಲಿ-ಪೋರ್ಟ್ ಅಫ಼್ ಸ್ಪೈನ್ ನಲ್ಲಿ 124 ಮತ್ತು 220, ಅಲ್ಲದೇ 1978ರಲ್ಲಿ ಕಲ್ಕತ್ತದಲ್ಲಿ 107-182). ಆದರೆ 82ರ ಆ ಸರಣಿಯಲ್ಲಿ ರನ್ ಗಳು ಅವರಿಗೆ ಸುಲಭವಾಗಿ ದಕ್ಕಲಿಲ್ಲ. ಆ ಸರಣಿಯಲ್ಲಿ 10 ಬಾರಿ ಔಟ್ ಆದ ಗವಾಸ್ಕರ್, 5 ಬಾರಿ ಮಾರ್ಷಲ್ ಗೆ ಇನ್ನು 4 ಬಾರಿ ಹೋಲ್ಡಿಂಗ್ ಗೆ ವಿಕೆಟ್ ಒಪ್ಪಿಸಿದ್ದರು. ಕಾನ್ಪುರದ, ಇನ್ನಿಲ್ಲದಂತೆ ಸೋತ ಆ ಮೊದಲ ಟೆಸ್ಟ್ ಮತ್ತು ಡ್ರಾ ಆದ ಮುಂಬೈ ಟೆಸ್ಟ್ ನ ಎರಡೂ ಇನ್ನಿಂಗ್ಸ್ ಗಳಲ್ಲಿ ಮಾರ್ಷಲ್ ಅವರಿಗೇ ಗವಾಸ್ಕರ್ ವಿಕೆಟ್ ಒಪ್ಪಿಸಿದ್ದರು. (ಅಹಮದಾಬಾದ್ ಟೆಸ್ಟ್ ನಲ್ಲಿ ಹೋಲ್ಡಿಂಗ್, ಗವಾಸ್ಕರ್ ಅವರನ್ನು ಎರಡೂ ಇನ್ನಿಂಗ್ಸ್ ಗಳಲ್ಲಿ ಹೊರನಡೆಸಿದರು). ರಾಬರ್ಟ್ಸ್, ಬಾಬ್ ವಿಲ್ಲೀಸ್, ಇಮ್ರಾನ್ ತರದವರನ್ನು ಎದುರಿಸಿದ್ದ ಗವಾಸ್ಕರ್, ಆ ಸರಣಿಯಲ್ಲಿ ಅಪ್ರತಿಭರಾಗಿ ನಿಂತದ್ದು ಇಂದಿಗೂ ಅಚ್ಚರಿಯಾಗುತ್ತದೆ. ಮಾರ್ಷಲ್ ಬೌನ್ಸರ್ ಗೆ ಗವಾಸ್ಕರ್ ರ ವಿಕೆಟ್ ತರಗೆಲೆಯಂತೆ ಹಾರಿ ಬಿದ್ದಿತು…-0 ಮತ್ತು 7 -ಕಾನ್ಪುರ ದಲ್ಲಿ, 12 ಮತ್ತು 3 – ಮುಂಬೈನಲ್ಲಿ, ೦ ಕಲ್ಕತ್ತ ದಲ್ಲಿ.

ನಂತರವೂ ಇಂತಹ ಹಲವು ವೈಫಲ್ಯಗಳನ್ನು ಢಾಳಾಗಿ ಪ್ರದರ್ಶಿಸಿದರೂ, ಗವಾಸ್ಕರ್ ಮಾತ್ರ ತಂಡದಲ್ಲಿ ನಿಂತೇ ಇದ್ದರು. ನಿರುಮ್ಮಳ ಠೇಂಕಾರವನ್ನೇ ಮೈಗೂಡಿಸಿಕೊಂಡಿದ್ದ ಗವಾಸ್ಕರ್, ಕೊನೆಯವರೆಗೂ ತಂಡದಲ್ಲಿ ಉಳಿದೇ ತೀರಿದರು. ಮಾರ್ಷಲ್ ಬೌನ್ಸರ್ ಕೂಡಾ ಅವರನ್ನು ಮೈದಾನದಿಂದ ’ಔಟ್’ ಮಾಡಿತೇ ವಿನಹ, ತಂಡದಿಂದ ಅಲ್ಲ… ಬಹುಶಃ ಇದು ಮಾರ್ಷಲ್ ಬೌನ್ಸರ್ ನ ಮಿತಿಯೂ ಇರಬಹುದು. ಗವಾಸ್ಕರ್ ಆ ಸರಣಿಯಲ್ಲಿ ಶತಕ ಬಾರಿಸಿದರು. ಆದರೆ ಭಾರತವನ್ನು ಗೆಲ್ಲಿಸಲ್ಲಿಕ್ಕಾಗಲಿಲ್ಲ. ತಮಗೆ ಮಾರ್ಷಲ್ ಭಯವಿಲ್ಲ ಎಂದು ಒತ್ತಿಹೇಳುವ ಇಚ್ಛೆಯಿತ್ತೇ ಹೊರತು ತಂಡ ಗೆಲ್ಲಿಸುವ ಹುರುಪಿರಲಿಲ್ಲ.

“Revenge Series” ಎಂದೇ ಕುಚೋದ್ಯದಿಂದ ಕರೆಯಲ್ಪಡುವ ಈ ಸರಣಿಯಲ್ಲಿ, ಕಪಿಲ್ ಪಡೆಯ ನಿರಾಶಾದಾಯಕ ಪ್ರದರ್ಶನ, ವಿಶ್ವಕಪ್ ನಲ್ಲಿನ ಗೆಲುವನ್ನು ಅಣಕಿಸಿತು.1982ರ ಜೂನ್ ನಲ್ಲಿ ಚಾಂಪಿಯನ್ ಗಳೆಂದು ಬೀಗುತ್ತಿದ್ದವರು, ನಾಲ್ಕೇ ತಿಂಗಳ (ಸರಣಿ ಆರಂಭವಾಗಿದ್ದು ಅಕ್ಟೋಬರ್ 4) ಅವಧಿಯಲ್ಲಿ ಆ ಪರಿ ಸೊರಗಿದ್ದನ್ನು ಕಂಡಾಗ, ಈ ರೀತಿಯ ಗ್ರಹಿಕೆ ಸ್ವಾಭಾವಿಕ. ಪ್ರಥಮ ಟೆಸ್ಟ್ ನ ಸೋಲು ಹಾಗಿರಲಿ. ನಂತರದ ಇನ್ನೂ ಎರಡು ಟೆಸ್ಟ್ ಗಳಲ್ಲಿನ ಅನುಚಿತವಾದ ಸೋಲು, ಎಲ್ಲಾ ಒಂದು ದಿನದ ಪಂದ್ಯಗಳಲ್ಲೂ ಹೀನಾಯ ಸೋಲು, ಎಲ್ಲಾ ಪಂದ್ಯಗಳಲ್ಲೂ ಸ್ಕೋರ್ 50 ತಲುಪುವ ಮುಂಚೆಯೇ ಕನಿಷ್ಟ ೫ ವಿಕೆಟ್ ಗಳ ನಷ್ಟ….ಇವೆಲ್ಲಾ ವಿಶ್ವಕಪ್ ಗೆಲುವು ಆಕಸ್ಮಿಕವೆಂದು ನಿರೂಪಿಸಿ ಬಿಟ್ಟವು. 3-0 ಸರಣಿ ಸೋಲು, ತನ್ನ ನೆಲದಲ್ಲೇ ಭಾರತೀಯ ತಂಡ ಕಂಡ ಅತಿ ದೊಡ್ಡ ಸರಣಿ ಸೋಲಾಗಿತ್ತು. ಅಹಮದಾಬಾದ್ ನ ಮೂರನೆಯ ಟೆಸ್ಟ್ ನಲ್ಲಂತೂ, ನಮ್ಮವರು ೧೦೩ ರನ್ ಗಳಿಗೆ ಎರಡನೇ ಇನ್ನಿಂಗ್ಸ್ ಮುಗಿಸಿಕೊಂಡರು. ಕಲ್ಕತ್ತದ ಐದನೇ ಟೆಸ್ಟ್ ನ ಎರಡನೆಯ ಇನ್ನಿಂಗ್ಸ್ ನಲ್ಲಿ ಕೇವಲ ೯೦ ರನ್ಗಳಿಗೆ ಸರ್ವಪತನವಾದ ತಂಡ, ಪ್ರೇಕ್ಷಕರ ರೋಷಾವೇಶಕ್ಕೆ ಗುರಿಯಾಗಿತ್ತು. ಗವಾಸ್ಕರ್ ಮೇಲೆ ಕಲ್ಲೆಸೆತವಾಗಿತ್ತು.

ಜಮ್ ಷೆಡ್ ಪುರದ ಒಂದು ದಿನದ ಪಂದ್ಯದಲ್ಲಿ ಗ್ರೀನಿಡ್ಜ್-ರಿಚರ್ಡ್ಸ್ ಭಾರತೀಯ ಬೌಲರ್ ಗಳನ್ನು ಹೀನಾಯವಾಗಿ ಶಿಕ್ಷಿಸಿದರು. ಎರಡನೆಯ ವಿಕೆಟ್ ಗೆ 221 ರನ್ ಪೇರಿಸಿದ್ದು, ಭಾರತೀಯ ನೆಲದಲ್ಲಿ ವಿಂಡೀಸರ ಒಂದು ದಾಖಲೆ. ಅಲ್ಲದೇ ಅತಿಥಿ ತಂಡವೊಂದು ಒಂದುದಿನದ ಪಂದ್ಯದಲ್ಲಿ ಪ್ರಥಮ ಬಾರಿಗೆ ಭಾರತದಲ್ಲಿ 300 ಕ್ಕೂ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆ ಕೂಡಾ ವಿಂಡೀಸ್ ದಾಯಿತು. ನಮ್ಮ ತಂಡವನ್ನು ಅಪಮಾನಿಸುವ ಉದ್ದೇಶ್ಯವಿಲ್ಲ. ಆದರೆ ಸೋತ ಸೋಲು ಕೂಡಾ ವೀರೋಚಿತವಾಗಿರಲಿಲ್ಲ. ಹೋರಾಟದ ಕೆಚ್ಚು ಉಡುಗಿದ್ದಂತೂ ನಿಜ. ವಿಂಡೀಸ್ ತಂಡ ಗ್ರಹಿಸಿದ್ದು ವಾಸ್ತವದಲ್ಲಿ ಮೂಡಿಬಂದಿದ್ದು ಖೇದಕರ.

ವಿಸ್ಡೆನ್ ನಿಂದ ’ವಿಶ್ವದ ಶೇಷ್ಟ ವೇಗಿಗಳಲ್ಲಿ ಒಬ್ಬರು’ ಎಂಬ ಮುಕ್ತ ಕಂಠದ ಪ್ರಶಂಸೆಗೆ ಪಾತ್ರರಾದ ಮಾರ್ಷಲ್ 1978ರಲ್ಲಿ ಬೆಂಗಳೂರಿನಲ್ಲೇ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು.ಇನ್ನಿಂಗ್ಸ್ ಒಂದರಲ್ಲಿ 5ಕ್ಕೂ ಹೆಚ್ಚು ವಿಕೆಟ್ ಗಳನ್ನು 22 ಬಾರಿ ಗಳಿಸಿದ್ದರು. ಮಾರ್ಷಲ್ ರ ಬೌಲಿಂಗ್ ಸರಾಸರಿ 20.94. ಅಂದರೆ ಪ್ರತಿ ಸರಿಸುಮಾರು 20 ರನ್ ಗಳಿಗೆ ಒಂದು ವಿಕೆಟ್. ವೇಗದ ಬೌಲರ್ ಗಳಲ್ಲಿ ಬಹಳ ಅಪರೂಪದ, ಅಚ್ಚರಿಯ ಸಾಧನೆ. 1979-9೦ ರ ಎರಡು ವರ್ಷಗಳೂ ಐಸಿಸಿ ಶ್ರೇಯಾಂಕದಲ್ಲಿ ಮಾರ್ಷಲ್ ಮೊದಲಿಗರಾಗಿದ್ದರು. ಮಾರ್ಷಲ್ ಗಳಿಸಿದ್ದು 376 ವಿಕೆಟ್ ಗಳು. ಇಂಗ್ಲೆಂಡ್ ವಿರುದ್ಧ 22ಕ್ಕೆ 7 ವಿಕೆಟ್ ಪಡೆದ್ದದ್ದು (1988 ರಲ್ಲಿ) ಅವರ ಶ್ರೇಷ್ಟ ಸಾಧನೆಗಳಲ್ಲೊಂದು. ಒಲ್ಡ್ ಟ್ರಾಫರ್ಡ್ ನ ಸ್ಪಿನ್ನರ್ ಗಳಿಗೆಂದೇ ತಯಾರುಮಾಡಿದ್ದ ಪಿಚ್ ನಲ್ಲಿ ತನ್ನ ಕರಾರುವಾಕ್ಕಾದ ಸ್ವಿಂಗ್ ಗಳಿಂದ ಗಳಿಸಿದ ಆ 7 ವಿಕೆಟ್ ಗಳ ಅವರ ಸಾಧನೆ ಸ್ಮರಣೀಯ.

1984ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ತಮ್ಮ ಎಡಗೈ ಹೆಬ್ಬರಳು ಮುರಿದುಕೊಂಡಿದ್ದ ಮಾರ್ಷಲ್ ಕೈಗೆ ಪ್ಲಾಸ್ಟರ್ ಹಾಕಿಕೊಂಡು ಹನ್ನೊಂದನೆಯ ಆಟಗಾರನಾಗಿ ಬಂದದಲ್ಲದೇ ಒಂದೇ ಕೈನಲ್ಲಿ ಆಡಿ ನಾಯಕ ಗೋಮ್ಸ್ ಶತಕಗಳಿಸಲು ನೆರವಾದರು. ಆ ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಅದರ ನೆಲದಲ್ಲೇ 5-0 ಪಂದ್ಯಗಳಿಂದ ಗುಡಿಸಿಹಾಕಿದವರಲ್ಲಿ ಮಾರ್ಷಲ್ ಮತ್ತು ಜೊಯೆಲ್ ಗಾರ್ನರ್ ಪ್ರಮುಖರು. ಆದರೆ ಆ ಸರಣಿಯದೊಂದು ದುರಂತ. ಸರಣಿಯ ಮೊದಲ ಟೆಸ್ಟ್ ನಲ್ಲಿ ಇಂಗ್ಲೇಂಡ್ ಪಡೆಯ ಆರಂಭಿಕ ಬ್ಯಾಟ್ಸ್ಮನ್ ಆಂಡಿ ಲಾಯ್ಡ್, ಮಾರ್ಷಲ್ ಎದುರು ಅಳುಕುತ್ತಲೇ ಆಟ ಆರಂಭಿಸಿದ್ದರು. 10 ರನ್ ಮಾಡಿದ್ದಾಗ ಮಾರ್ಷಲ್ ರ ಅನಾಹುತಕಾರಿ ಬೌನ್ಸರ್ ಒಂದು ಆಂಡಿ ಲಾಯ್ಡ್ ರ ತಲೆಯ ಬಲಭಾಗವನ್ನು ಜಜ್ಜಿತ್ತು. ಅದೇ ಲಾಯ್ಡ್ ರ ಮೊದಲ ಹಾಗೂ ಕೊನೆಯ ಟೆಸ್ಟ್. ಹಲವು ತಿಂಗಳು ಆಸ್ಪತ್ರೆಯಲ್ಲಿ ಕಳೆದ ಲಾಯ್ಡ್ ನಂತರ ಸ್ಥಳೀಯ ಪಂದ್ಯಗಳಲ್ಲಿ ಮಾತ್ರ ಆಡುತ್ತಿದ್ದರು. 1961-62 ರ ಭಾರತ-ವಿಂಡೀಸ್ ಪಂದ್ಯದಲ್ಲಿ, ಬಾರ್ಬಡೊಸ್ ಕ್ರೀಡಾಂಗಣದಲ್ಲಿ, ಭಾರತದ ಸ್ಫುರದ್ರೂಪಿ ಬ್ಯಾಟುಗಾರ ನಾರೀ ಕಂಟ್ರಾಕ್ಟರ್ ರ ಟೆಸ್ಟ್ ಜೀವನವೂ ಹೀಗೆಯೇ ಅಂತ್ಯಗೊಂಡಿತ್ತು. ವಿಂಡೀಸ್ ದೈತ್ಯ ಚಾರ್ಲೀ ಗ್ರೀಫಿತ್ ನ ಬೌನ್ಸರ್, ಕಂಟ್ರಾಕ್ಟರ್ ತಲೆಯ ಹಿಂಬದಿಗೆ ಬಡಿಯಿತು. ಮೈದಾನದಲ್ಲೇ ಕುಸಿದ ಕಂಟ್ರಾಕ್ಟರ್, ನಂತರ ಒಂದುವಾರ ಪ್ರಜ್ಞಾಹೀನರಾಗಿದ್ದರು. ಅವರಿಗೆ ರಕ್ತದ ತುರ್ತಿದ್ದಾಗ, ವಿಂಡೀಸ್ ಕ್ರಿಕೆಟ್ಟಿಗ ಫ಼್ರಾಂಕ್ ವೊರೆಲ್ ರಕ್ತನೀಡಿದ್ದರು.

ದಕ್ಷಿಣ ಆಫ್ರಿಕಾ ವರ್ಣಭೇದ ನೀತಿ ಅನುಸರಿಸುತ್ತಿದ್ದ ಕಾಲದಲ್ಲಿ, ಮಾರ್ಷಲ್ ಗೆ ಆ ದೇಶದ ಪರ ಆಡಲು ಒಂದು ಮಿಲಿಯನ್ ಡಾಲರ್ ಹಣದ ಆಮಿಶ ಒಡ್ಡಲಾಗಿತ್ತು. ಮಾರ್ಷಲ್ ನಯವಾಗಿ ತಿರಸ್ಕರಿಸಿ ಮತ್ತಷ್ಟು ದೊಡ್ಡವರಾದರು. ಕ್ರಿಕೆಟ್-ಜಾಹೀರಾತುಗಳೆರಡರಲ್ಲೂ ಕೊಪ್ಪರಿಗೆಯಷ್ಟು ಹಣ ಮಾಡುವ ಇಂದಿನ ಕಲಿಗಳು ಮಾರ್ಷಲ್ ರಿಂದ ಕಲಿಯಬೇಕಿದೆ.

99 ರ ಅಕ್ಟೋಬರ್ ವೇಳೆಗೆ ಕ್ಯಾನ್ಸರ್ ದಾಳಿಗೆ ಮಾರ್ಷಲ್ ತತ್ತರಿಸಿಹೋಗಿದ್ದರು. ಕರುಳು ಬಹುತೇಕ ಬೆಂದಿತ್ತು. ಮೈ ತೂಕ ಆತಂಕಕರವಾಗಿ ಇಳಿದಿತ್ತು. ನವೆಂಬರ್ ನಾಲ್ಕರಂದು ಮಾಲ್ಕಮ್ ಮಾರ್ಷಲ್ ಇಹಲೋಕದ ಯಾತ್ರೆ ಮುಗಿಸಿದರು. ವಿಶ್ವದಾದ್ಯಂತ ಶ್ರದ್ಧಾಂಜಲಿಯ ಮಹಾಪೂರವೇ ಹರಿದುಬಂತು. ಮಾರ್ಷಲ್ ರ ಕಾಫಿನ್ (ಶವಪೆಟ್ಟಿಗೆ) ಅನ್ನು ವೆಸ್ ಹಾಲ್, ಕ್ಲೈವ್ ಲಾಯ್ಡ್ ಆದಿಯಾಗಿ ಐವರು ವಿಂಡೀಸ್ ಕಪ್ತಾನರು ಹೊತ್ತು ಬಾರ್ಬಡೊಸ್ ನ ಚರ್ಚ್ ಗೆ ಸಾಗಿಸಿದರು. ಬಾಲ್ಯದಲ್ಲಿ ಆ ಚರ್ಚ್ ನ ಆಸುಪಾಸಿನಲ್ಲಿಯೇ ಮಾರ್ಷಲ್ ಗೆ ಅವರ ತಾತನಿಂದ ಕ್ರಿಕೆಟ್ ನ ಮೊದಲಪಾಠಗಳಾಗಿದ್ದವು. ತಾನು ಹುಟ್ಟಿ ಬೆಳೆದ ಬಾರ್ಬಡೊಸ್ ನಲ್ಲಿಯೇ ಮಾರ್ಷಲ್ ಮಣ್ಣಾದರು. ತನ್ನ ಟೆಸ್ಟ್ ಜೀವನದ ಕೊನೆಯ ಪಂದ್ಯವನ್ನು ವಿಂಡೀಸ್ ವಿರುದ್ಧ ಆಡಿದ ಸಚಿನ್, ತಮ್ಮ ವಿದಾಯ ಭಾಷಣದಲ್ಲಿ ಮಾರ್ಷಲ್ ರನ್ನು ನೆನೆದು ಭಾವುಕರಾಗಿದ್ದರು.

ವೆಸ್ಲಿ ಹಾಲ್, ಸೋಬರ್ಸ್, ಗ್ರೀಫ಼ಿತ್, ಗ್ರೀನಿಡ್ಜ್, ಕಾಳಿಚರಣ್, ರಾಬರ್ಟ್ಸ್, ಮುಂತಾದ ವಿಂಡೀಸ್ ದೈತ್ಯರ ನಡುವೆಯೂ ೩೭೬ ವಿಕೆಟ್ ಪಡೆದ ಮಾರ್ಷಲ್ ಗೆ ತನ್ನದೇ ಸ್ಥಾನವಿದೆ. ಇದು ಅವರ ಸಾಧನೆ. ಮಾರ್ಷಲ್ ಕೂಡಾ ಹಲವು ವೈಪರೀತ್ಯಗಳನ್ನು ಕಂಡರು. ಎಲ್ಲಾ ಕ್ರೀಡಾಪಟುಗಳಿಗೆ ಆಗುವಂತೆ ಸದಾ ಅವರಿಗೆ ಯಶಸ್ಸು ಸಿಕ್ಕಲಿಲ್ಲ. ಆದರೂ ನಾವುಗಳೆಲ್ಲಾ ಕ್ರಿಕೆಟ್ ಹುಚ್ಚು ಆಂಟಿಸಿಕೊಳ್ಳುತ್ತಿದ್ದ-ಟೀವಿ ಎಂಬುದೇ ಅಪರೂಪವಾಗಿದ್ದ-ಪಾಕೆಟ್ ಟ್ರಾನ್ಸಿಸ್ಟರ್ ನಲ್ಲಿ ಬರುತ್ತಿದ್ದ ಕಾಮೆಂಟರಿಗಾಗಿಯೋ, ಇಲ್ಲವೇ ಮರುದಿನದ ಪ್ರಜಾವಾಣಿ/ಹೆರಾಲ್ಡ್ ಗಳಲ್ಲಿ ಪ್ರಕಟವಾಗುತ್ತಿದ್ದ ರಾಜನ್ ಬಾಲ/ದೇವನಾಥ್ ರ ವರದಿಗಳಿಗಾಗಿ ಕಾದು “ಸಾಯ”ಬೇಕಿದ್ದ ಆ ದಿನಗಳಲ್ಲಿ ಭಯಮಿಶ್ರಿತ ರೋಮಾಂಚನ ಉಂಟುಮಾಡಿದ್ದ ಮಾರ್ಷಲ್ ನಮ್ಮ ನೆನಪಿಂದ ಮರೆಯಾಗಲಾರರು. ನಮ್ ಹುಡುಗ್ರು ವಿಶ್ವ ಚಾಂಪಿಯನ್ ಗಳಾದರೆಂದು ಹೆಮ್ಮೆಯಿಂದ ಬೀಗುತ್ತಿದ್ದಾಗ ನಮಗೆಲ್ಲಾ ಭ್ರಮನಿರಸನ ಮಾಡಿಸಿದ ಅವರ ಆಟ ಮತ್ತು ಆ ಸರಣಿ ಮರೆಯುವುದುಂಟೇ?

-ಶ್ರೀ ರಾಘವನ್ ಚಕ್ರವರ್ತಿ                                                                                                                                                                              ಖ್ಯಾತ ಅಂಕಣಕಾರರು

Categories
Action Replay ಸ್ಪೋರ್ಟ್ಸ್

ಪ್ರಸಿದ್ಧ ಹಾಳುಕೋಟೆ ಮೈದಾನ ಕ್ರೀಡಾಂಗಣವಾಗಬೇಕು ಎಂಬ ಹಳೆಯ ಕನಸೊಂದು ನನಸಾಗಬೇಕು….

ಸ್ಪೋರ್ಟ್ಸ್‌ಕನ್ನಡ ಡಾಟ್ ಕಾಮ್ ಸುದ್ಧಿ

      ವಿಶೇಷ ವರದಿ : ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹಾಳುಕೋಟೆ ಮೈದಾನ ಎಂಬುದು ಕ್ರೀಡಾ ಪ್ರೇಮಿಗಳಿಗಂತೂ ಚಿರಪರಿಚಿತವಾಗಿ ಬಿಟ್ಟಿದೆ. ನಮ್ಮೂರಿನ ಹಲವಾರು ಸಂಘ ಸಂಸ್ಥೆಗಳ ಕ್ರೀಡಾ ಚಟುವಟಿಕೆಗಳು, ಸಾಂಸ್ಕೃತಿಕ ಕಾರ್ಯಕ್ರಮದ ಸುಂದರ ನೆನಪುಗಳು ಮಾಸಿಹೊಗದಂತೆ ಹಾಳುಕೋಟೆ ಮೈದಾನವು ತನ್ನಲ್ಲಿ ಸಾಕ್ಷೀಕರಿಸಿಕೊಂಡಿದೆ. ಅಂತಹ ನೆನಪುಗಳಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ನ ಸವಿನೆನಪುಗಳಿಗೆ ಇಲ್ಲಿ ಸಿಂಹಪಾಲಿದೆ.

        ಟೆನಿಸ್ ಬಾಲ್ ಕ್ರಿಕೆಟ್ ಗೆ ಯೋಗ್ಯವೆನಿಸಿದ ಅಂಗಣಗಳ ಸಾಲಿನಲ್ಲಿ ಹಾಳುಕೋಟೆ ಮೈದಾನವು ಒಂದಾಗಿ ಹಲವು ದಶಕಗಳ ಹಿಂದೆಯೇ ತನ್ನ ಹೆಸರನ್ನು ಆ ಸಾಲಿನಲ್ಲಿ ನೊಂದಾಯಿಸಿಕೊಂಡಿದೆ. ಆರು ಬಾರಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟದ ಚೆಲುವನ್ನು, ಹಾಗೂ ಹಲವು ಜಿಲ್ಲಾ ಮಟ್ಟದ ಹಾಗೂ ಸ್ಥಳೀಯ ಕ್ರಿಕೆಟ್ ಪಂದ್ಯಾಟಗಳ ಸೊಬಗನ್ನು ತನ್ನದಾಗಿಸಿಕೊಂಡ ಹೆಗ್ಗಳಿಕೆ ಈ ಮೈದಾನಕ್ಕಿದೆ. ಕರಾವಳಿ ಭಾಗದ ಹಲವು ಪ್ರತಿಷ್ಠಿತ ಸಂಸ್ಥೆಗಳು ಯಶಸ್ವಿ ಪಂದ್ಯಾಕೂಟವನ್ನು ಇಲ್ಲಿ ನಡೆಸಿ ಪ್ರಸಿದ್ಧಿಯನ್ನು ಪಡೆದಿದೆ. ಇಂದು ರಾಷ್ಟ್ರಮಟ್ಟದ ಶ್ರೇಷ್ಠ ಕ್ರಿಕೇಟಿಗರಾಗಿ ಹೆಸರುವಾಸಿಯಾದ ಹಲವರ ಬೆಳವಣಿಗೆ ಈ ಅಂಗಣ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಅಭಿವೃದ್ಧಿಯ ನೆಪವಾಗಿ ಗಿಜಿಗುಡುವ ಬಹುಮಹಡಿ ಕಟ್ಟಡಗಳಿಂದಾಗಿ ತಮ್ಮ ಅಸ್ತಿತ್ವವನ್ನು ಕಳೆದುಕೊಂಡ ಕೆಲವು ಮೈದಾನಗಳ ಇವತ್ತಿನ ಪರಿಸ್ಥಿತಿಯನ್ನು ಗಮನಿಸಿದರೆ ಹಾಳುಕೋಟೆ ಮೈದಾನ ತನ್ನ ಹಿಂದಿನ ಕಳೆಯನ್ನು ಇನ್ನೂ ಹಾಗೆಯೇ ಉಳಿಸಿಕೊಂಡಿದೆ. ಇವತ್ತಿಗೂ ಈ ಮೈದಾನದಲ್ಲಿ ಹಲವು ವ್ಯವಸ್ಥಿತ ಪಂದ್ಯಾಟಗಳು ಆಯೋಜನೆಗೊಳ್ಳುತ್ತಿವೆ. ಇಂತಹ ಸುಂದರ ಕ್ಷಣವನ್ನು ಕಾಣುವ ಹಿರಿಯ ಕ್ರಿಕೇಟಿಗನೊಬ್ಬ ತಾನಾಡಿದ ಪಂದ್ಯಾಟದ ನೆನಪಿನಲ್ಲಿ ಖುಷಿಪಡುತ್ತಾನೆ, ಅದೇ ಯುವ ಕ್ರಿಕೇಟಿಗ ತಾನು ಇಲ್ಲೊಂದು ಪಂದ್ಯಾಟವನ್ನು ಆಡಬೇಕು ಎಂದು ಕನಸು ಕಾಣುತ್ತಾನೆ.

ಅದೇ ಒಬ್ಬ ಕ್ರಿಕೆಟ್ ಅಭಿಮಾನಿ ತಾನು ಪ್ರೇಕ್ಷಕನಾಗಿ ಕಂಡ ರೋಚಕ ಪಂದ್ಯಾಟದ ನೆನಪಿನಲ್ಲಿ ಮತ್ತೆ ರೋಮಾಂಚನಗೊಳ್ಳುತ್ತಾನೆ. ಈ ಮೈದಾನವೊಂದು ಸುಸಜ್ಜಿತವಾದ ಕ್ರೀಡಾಂಗಣವಾಗಬೇಕು ಎಂಬ ಮಾತು ಇಂದು ನಿನ್ನೆಯದಲ್ಲ. ಇಲ್ಲಿ ನಡೆಯುವ ಪ್ರತಿ ಪಂದ್ಯಾಕೂಟದ ಸಭೆಯಲ್ಲಿ ಈ ಕನಸೊಂದು ಬಿತ್ತರಗೊಂಡು ಮತ್ತೆ ಮೌನವಾಗಿ ಬಿಡುತ್ತಿತ್ತು.

     ಇಂತಹ ಶ್ರೇಷ್ಠ ದಂತಕಥೆಗಳ ಆಗರವಾಗಿರುವ ನಮ್ಮೂರ ಹಾಳುಕೋಟೆ ಮೈದಾನವನ್ನು ಮುಂದೆಯೂ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ “ಹಾಳುಕೋಟೆ ಮೈದಾನ ಉಳಿಸಿ ಹೋರಾಟ ಸಮಿತಿ ” ಎಂಬ ಸಮಾನ ಮನಸ್ಕ ಸಂಘಟನೆಯೊಂದು ಕಾರ್ಯಪೃವೃತ್ತರಾಗಿದೆ.

ಹಲವು ಪ್ರತಿಭೆಗಳನ್ನು ಬೆಳೆಸಿದ, ಬೆಳೆಸುತ್ತಿರುವ ಹಾಳುಕೋಟೆ ಮೈದಾನ ಸುಸಜ್ಜಿತ ಕ್ರಿಡಾಂಗಣವಾಗಿ ಮಾರ್ಪಾಡುಗೊಳ್ಳುವ ಎಲ್ಲಾ ಅವಕಾಶಗಳನ್ನು, ಅರ್ಹತೆಗಳನ್ನು ತನ್ನಲ್ಲಿ ಹಾಗೇಯೇ ಉಳಿಸಿಕೊಂಡಿದೆ ಎಂಬ ವಿಚಾರವನ್ನು ಮತ್ತೆ ನೆನಪಿಸುತ್ತ ಆ ಮೈದಾನವನ್ನು ಮುಂದಿನ ಪೀಳಿಗೆಗೆ ಉಳಿಸಿಕೊಡಬೇಕು ಎಂಬ ದೆಸೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ನೀಡುವುದರ ಮೂಲಕ ಮೈದಾನದ ಅಭಿವೃದ್ಧಿಯ ಕನಸನ್ನು ವ್ಯಕ್ತಪಡಿಸಿದ ಇವರ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದದ್ದು.

ಇಂತಹ ಅರ್ಥಪೂರ್ಣ ಅಭಿಯಾನಕ್ಕೆ ಇನ್ನಷ್ಟು ಹಲವು ಮನಗಳ ಬೆಂಬಲವು ಬಲವಾಗಿ ಮಾದರಿ ಕ್ರೀಡಾಂಗಣವೊಂದು ಜನ್ಮತಳೆಯೂವುದರೊಂದಿಗೆ ಹಲವು ವರುಷಗಳ ಭರವಸೆಯ ಕನಸ್ಸೊಂದು ನೆರವೇರಲಿ ಎಂಬ ಸದಾಶಯ ನಮ್ಮದು..

ವರದಿ : ಮಂಜುನಾಥ್ ಕಾರ್ತಟ್ಟು

Categories
Action Replay ಕ್ರಿಕೆಟ್

India scripts most innings victories under the captaincy of Virat Kohli

India won the Ranchi Test against South Africa by an innings and 202 runs to provide India’s ninth win under the captaincy of V Kohli. V Kohli now owns the record for scripting most innings victories for India. He went past M Azharuddin under whose captaincy India had scripted eight innings victories. The following table lists India’s innings victories under these two captains.

Captain No Team Won Margin Opposition Ground Start Dae
V Kohli 1 India won inns & 092 runs v West Indies North Sound 21 Jul 2016
V Kohli 2 India won inns & 036 runs v England Mumbai 08 Dec 2016
V Kohli 3 India won inns & 075 runs v England Chennai 16 Dec 2016
V Kohli 4 India won inns & 053 runs v Sri Lanka Colombo (SSC) 03 Aug 2017
V Kohli 5 India won inns & 171 runs v Sri Lanka Pallekele 12 Aug 2017
V Kohli 6 India won inns & 239 runs v Sri Lanka Nagpur 24 Nov 2017
V Kohli 7 India won inns & 272 runs v West Indies Rajkot 04 Oct 2018
V Kohli 8 India won inns & 137 runs v South Africa Pune 10 Oct 2019
V Kohli 9 India won inns & 202 runs v South Africa Ranchi 19 Oct 2019

Captain No Team Result Margin Opposition Ground Start Date
M Azharuddin 1 India won inns & 008 runs v Sri Lanka Chandigarh 23 Nov 1990
M Azharuddin 2 India won inns & 022 runs v England Chennai 11 Feb 1993
M Azharuddin 3 India won inns & 015 runs v England Mumbai 19 Feb 1993
M Azharuddin 4 India won inns & 013 runs v Zimbabwe Delhi 13 Mar 1993
M Azharuddin 5 India won inns & 119 runs v Sri Lanka Lucknow 18 Jan 1994
M Azharuddin 6 India won inns & 095 runs v Sri Lanka Bengaluru 26 Jan 1994
M Azharuddin 7 India Won inns & 017 runs v Sri Lanka Ahmedabad 08 Feb 1994
M Azharuddin 8 India won inns & 219 runs v Australia Kolkata 18 Mar 1998.

HR Gopalakrishna
Cricket statistician

Categories
Action Replay ಕ್ರಿಕೆಟ್ ಸಂಪಾದಕರ ಮಾತು

80ರ ದಶಕದ ಟೆನ್ನಿಸ್ ಕ್ರಿಕೆಟ್ ನ ಕೌತುಕದ ಪಂದ್ಯ ಟೆನ್ನಿಸ್ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿದ್ದ, ದಕ್ಷಿಣ ಕನ್ನಡ

80ರ ದಶಕದ ಟೆನ್ನಿಸ್ ಕ್ರಿಕೆಟ್ ನ ಕೌತುಕದ ಪಂದ್ಯ. ಅದಾಗಲೇ ಟೆನ್ನಿಸ್ ಕ್ರಿಕೆಟ್ ನಲ್ಲಿ ಪ್ರಭುತ್ವ ಸಾಧಿಸಿದ್ದ, ದಕ್ಷಿಣ ಕನ್ನಡ ಜಿಲ್ಲೆಯ ಚಾಂಪಿಯನ್ ತಂಡ, ಶಿಸ್ತಿನ‌ ಸಿಪಾಯಿಗಳು, ಟೆನ್ನಿಸ್ ಕ್ರಿಕೆಟ್ ನ ಹುಲಿಗಳಾದ ಪ್ಯಾರಡೈಸ್ ಬನ್ನಂಜೆ ವಿರುದ್ಧವಾಗಿ 15 ವರ್ಷಗಳ ಹಿಂದಷ್ಟೇ ಸ್ಥಾಪನೆಯಾಗಿದ್ದ ಕುಂದಾಪುರದ ಸಂಯೋಜಿತ ತಂಡ ಚಕ್ರವರ್ತಿ ಕುಂದಾಪುರದ ನಡುವಿನ ಬೈಂದೂರಿನ ಗಾಂಧಿಮೈದಾನದಲ್ಲಿ ವಿಕ್ರಂ ಸ್ಪೋರ್ಟ್ಸ್ ಕ್ಲಬ್ ಆಯೋಜಿಸಿದ್ದ ಡಾ|ಪ್ರದೀಪ್ ಕುಮಾರ್ ಶೆಟ್ಟಿ ಸ್ಮರಣಾರ್ಥ ನಡೆದ ಪಂದ್ಯಾಕೂಟದ ಫೈನಲ್ ಪಂದ್ಯಾಟವಾಗಿತ್ತು.

 

20 ಓವರ್ ಗಳ ಎರಡು ಇನ್ನಿಂಗ್ಸ್ ನಲ್ಲಿ ಜರುಗಿದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಪ್ಯಾರಡೈಸ್ ಬನ್ನಂಜೆ ತಂಡ ಪ್ರದೀಪ್ ವಾಜ್,ದಿ|ಪ್ರತಾಪ್ ಚಂದ್ರ ಹೆಗ್ಡೆ,ಗಣೇಶ್ ನಾವುಡರ ನಿಖರ ದಾಳಿಗೆ 37 ರನ್ ಗಳಿಗೆ ಆಲೌಟ್ ಆಗಿತ್ತು. ಆದರೆ ನಂತರ ಬ್ಯಾಟಿಂಗ್ ಮಾಡಿದ್ದ ಚಕ್ರವರ್ತಿ ತಂಡ ಪ್ಯಾರಡೈಸ್ ನ ದಂತಕಥೆ ಶ್ರೀಧರ್ ಶೆಟ್ಟಿ ಹಾಗೂ ಅಂದಿನ ದಿನಗಳಲ್ಲಿ ಭರವಸೆ ಮೂಡಿಸಿದ್ದ ಬೌಲಿಂಗ್ ಮಿಂಚು ಕೋಟೇಶ್ವರ ದಿ|ಸರ್ದಾರ್ ಬಾಬ್ ಜಾನ್ ದಾಳಿ ಎದುರಿಸಲಾಗದೆ 31 ರನ್ ಗಳಿಗೆ ಆಲೌಟ್ ಆಗಿತ್ತು.ಪ್ಯಾರಡೈಸ್ 6 ರನ್ ಗಳ ಮೊದಲ ಇನ್ನಿಂಗ್ಸ್ ಲೀಡ್ ಗಳಿಸಿತ್ತು.

ದ್ವಿತೀಯ ಇನ್ನಿಂಗ್ಸ್ ನಲ್ಲಿ ಮತ್ತೆ ಅತ್ಯುತ್ತಮ ಬೌಲಿಂಗ್ ದಾಳಿ ಸಂಘಟಿಸಿದ ಚಕ್ರವರ್ತಿಗಳ ಅಂದಿನ ದಿನಗಳ ಬೌಲಿಂಗ್ ಬ್ರಹ್ಮಾಸ್ತ್ರ ಸದಾನಂದ ಬನ್ನಾಡಿ,ಗಣೇಶ್ ನಾವುಡ,ಯುವ ಎಸೆತಗಾರ ಮೊಹಮದ್ ಶಫಿ ದಾಳಿ ಎದುರಿಸಲಾಗದೆ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 43 ರನ್ ಗಳಷ್ಟೇ ಗಳಿಸಲು ಶಕ್ತವಾಗಿತ್ತು.

ವಿಜಯ ಗಳಿಸಲು 50 ರನ್ ಗಳ ಕಠಿಣ ಸವಾಲನ್ನು ಚಕ್ರವರ್ತಿ ತಂಡ ಮನಮೋಹಕ ಹೊಡೆತಗಳ ಆಟಗಾರ ಪ್ರಕಾಶ್ ಶಿರಸಿಕರ್ ರ ಆಕರ್ಷಕ ಅಜೇಯ 25 ರನ್ ಗಳ ನೆರವಿನಿಂದ 4 ವಿಕೆಟ್ ಅಂತರದ ಜಯಗಳಿಸಿತ್ತು.

ಅಂದು ಚಕ್ರವರ್ತಿ ತಂಡದ ಬೆನ್ನೆಲುಬಾಗಿದ್ದ ಸ್ಪುರದ್ರೂಪಿ,ಪ್ರತಿಭಾವಂತ ಆಟಗಾರ, ಶ್ರೇಷ್ಠ ಕ್ಷೇತ್ರರಕ್ಷಕ ದಿ| ಬಿ.ಪ್ರತಾಪ್ ಚಂದ್ರ ಹೆಗ್ಡೆ 7 ಕ್ಯಾಚ್ ಹಿಡಿದು ಪಂದ್ಯಾಟದ ಮೇಲೆ ಹಿಡಿತ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಪಂದ್ಯಾಕೂಟದ ಶ್ರೇಷ್ಠ ದಾಂಡಿಗ ಪ್ರಶಸ್ತಿಯನ್ನು ಅಂದಿನ ದಿನಗಳ ನಾಯಕ ಶಿವಾನಂದ ಗೌಡ, ಬೌಲಿಂಗ್ ಮಿಂಚು ಪ್ರದೀಪ್ ವಾಜ್ ಶ್ರೇಷ್ಠ ಬೌಲರ್ ಹಾಗೂ ಪ್ರಕಾಶ್ ಸಿರ್ಸಿಕರ್ ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರೆ,ಬೌಲಿಂಗ್,ಬ್ಯಾಟಿಂಗ್ ವಿಭಾಗದಲ್ಲಿ ಶ್ರೇಷ್ಠ ನಿರ್ವಹಣೆ ತೋರಿದ್ದ ಅಂದಿನ ದಿನಗಳ ಶ್ರೇಷ್ಠ ಆಲ್ ರೌಂಡರ್ ಪ್ಯಾರಡೈಸ್ ಬನ್ನಂಜೆಯ ಸರ್ದಾರ್ ಬಾಬ್ ಜಾನ್ ಕೋಟೇಶ್ವರ ಪಡೆದುಕೊಂಡಿದ್ದರು.

ಶ್ರೇಷ್ಠ ಪ್ರದರ್ಶನದ ಮೂಲಕ ಚಕ್ರವರ್ತಿಗಳಿಗೆ ರಾಜ್ಯ,ರಾಷ್ಟ್ರೀಯ ಮಟ್ಟದ ಮನ್ನಣೆ ಕೊಡಿಸಿದ್ದಮೇರು ಕಪ್ತಾನ ಶ್ರೀಪಾದ ಉಪಾಧ್ಯಾಯ, ಟೆನ್ನಿಸ್ ಕ್ರಿಕೆಟ್ ಸಂಜಯ್ ಮಂಜ್ರೇಕರ್ ಸತೀಶ್ ಕೋಟ್ಯಾನ್, ಪ್ರದೀಪ್ ವಾಜ್, ದಿನೇಶ್ ಗಾಣಿಗ ಬೈಂದೂರು, ಮನೋಜ್ ನಾಯರ್, ಕೆ.ಪಿ.ಸತೀಶ್ ರಿಗೆ ಈ ಪಂದ್ಯ ಪ್ರಾರಂಭದ ದಿನಗಳು.

ಅಂದಿನ ದಿನಗಳ ಬೈಂದೂರಿನ ಪರಿಸರದ ಶಿಸ್ತು ಹಾಗೂ ಸಂಯೋಜಿತ ತಂಡ ವಿಕ್ರಂ ತಂಡ ಹಲವಾರು ಪಂದ್ಯಾಕೂಟಗಳನ್ನು ಆಯೋಜಿಸಿದ್ದ ಬೈಂದೂರಿನ ಗಾಂಧಿಮೈದಾನದ ವಿಶಾಲ ಅಂಗಣ ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರದ ಹಲವು ಯುವ ಕ್ರಿಕೆಟಿಗರ ಭವಿಷ್ಯ ರೂಪಿಸಿತ್ತು‌. ಅಂತರಾಷ್ಟ್ರೀಯ ಕ್ರಿಕೆಟಿಗರಿಗೆ ಇಂಗ್ಲೆಂಡ್ ನ ಲಾರ್ಡ್ಸ್ ಕ್ರಿಕೆಟ್ ಕಾಶಿಯಾದರೆ, ಟೆನ್ನಿಸ್ ಕ್ರಿಕೆಟಿಗರ ಪಾಲಿಗೆ ಬೈಂದೂರಿನ ಗಾಂಧಿಮೈದಾನ ಕ್ರಿಕೆಟ್ ಸ್ವರ್ಗವಾಗಿತ್ತು.

ಈ ಅಂಗಣದಲ್ಲಿ ಹಿರಿಯ ತಂಡ ಜೈ ಕರ್ನಾಟಕ ಬೆಂಗಳೂರು,ಪಡುಬಿದ್ರಿ,ಸನ್ನಿ ಉಡುಪಿ,ವೀರಕೇಸರಿ ಇನ್ನಿತರ ತಂಡಗಳು ಹಲವು ದಾಖಲೆಗಳನ್ನು ಬರೆದಿದೆ.ಇಂದಿಗೆ 30 ವರ್ಷಗಳು ಸರಿದರೂ ರಾಜ್ಯದ ಹಿರಿಯ ಟೆನ್ನಿಸ್ ಕ್ರಿಕೆಟಿಗರು ನೆನಪುಗಳನ್ನು ಸದಾ ಸ್ಮರಿಸುತ್ತಾರೆ. ಆ ಎಲ್ಲಾ ತಂಡಗಳ,ಎಲ್ಲಾ ಗತಕಾಲದ ನೆನಪುಗಳನ್ನು ಮುಂದಿನ ದಿನಗಳಲ್ಲಿ ಪ್ರತಿ ರವಿವಾರ ನಿಮ್ಮೆಲ್ಲರ ಪ್ರೀತಿಯ “ಸ್ಪೋರ್ಟ್ಸ್ ಕನ್ನಡ” ವೆಬ್ಸೈಟ್ ನಲ್ಲಿ ಬರೆಯುವೆ.

ಆರ್.ಕೆ.ಆಚಾರ್ಯ ಕೋಟ

Categories
Action Replay ಕ್ರಿಕೆಟ್

ಟೆನ್ನಿಸ್ ಲೋಕದ ಮಹಾನ್ ದಂತಕಥೆ-ರಾಡ್ ಲೇವರ್

ಟೆನ್ನಿಸ್‌ನಲ್ಲಿ ವರ್ಷಕ್ಕೆ ನಾಲ್ಕು ಗ್ರಾಂಡ್‌ಸ್ಲಾಮ್‌ಗಳಿರುವುದು ಬಹುತೇಕರಿಗೆ ಗೊತ್ತಿರುವ ವಿಷಯ. ಗ್ರಾಂಡ್‌ ಸ್ಲಾಮ್‌ವೊಂದನ್ನು ಗೆಲ್ಲುವುದೆಂದರೆ ಅದು ಹರಸಾಹಸದ ಕೆಲಸವೇ ಸರಿ. ಒಂದೇ ಒಂದು ಗ್ರಾಂಡ್‌ಸ್ಲಾಮ್ ಗೆದ್ದವರನ್ನು ಸಹ ಸಾಧಕರ ಪಟ್ಟಿಯಲ್ಲಿ ಗುರುತಿಸುತ್ತದೆ ಟೆನ್ನಿಸ್ ಲೋಕ.ಹೀಗಿದ್ದಾಗಿಯೂ ನಾಲ್ಕೂ ಗ್ರಾಂಡ್ಸ್‌ಸ್ಲಾಮ್‌ಗಳನ್ನು ಗೆದ್ದು ಸಾಧಕರೂ ಇಲ್ಲದಿಲ್ಲ. ತುಂಬ ಕಷ್ಟದ ಸಾಧನೆಯೆನ್ನಿಸಿರುವ ಈ ಬಗೆಯ ಸಾಧನೆಯನ್ನು ತಮ್ಮ ವೃತ್ತಿ ಬದುಕಿನಲ್ಲಿ ಮಾಡಿರುವ ಮಾಡಿರುವ ಪುರುಷ ಆಟಗಾರರು ಮುಕ್ತ ಯುಗದಲ್ಲಿ ಕೇವಲ ಐದು ಜನ .ಮಹಿಳೆಯರು ಆರು ಜನ.

ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿಯಿದೆ. ಹೀಗೆ ತಮ್ಮ ಕರಿಯರ್ ಸ್ಲಾಮ್ ಪೂರ್ತಿಗೊಳಿಸಿದವರ ಪೈಕಿ ಬಹುತೇಕರು ವರ್ಷಕ್ಕೆ ಒಂದೊ ಎರಡೋ ಪಂದ್ಯಾವಳಿಯನ್ನು ಗೆದ್ದು ಸ್ಲಾಮ್ ಪೂರ್ತಿಗೊಳಿಸಿಕೊಂಡವರು. ಉದಾಹರಣಗೆ ಹೇಳುವುದಾದರೆ ಈ ವರ್ಷ ವಿಂಬಲ್ಡನ್ ಯು‌ಎಸ್ ಓಪನ್ ಗೆದ್ದು ಕೊಂಡರೆ ಇನ್ನೊಂದೆರಡು ವರ್ಷಗಳಲ್ಲಿ ಉಳಿದೆರಡು ಪಂದ್ಯಾವಳಿಗಳನ್ನು ಗೆದ್ದು ಸರಣಿ ಪೂರ್ತಿ ಗೊಳಿಸಿದವರ ಸಂಖ್ಯೆಯೇ ಇಲ್ಲಿ ಹೆಚ್ಚು. ಬಿಡಿ,ಅದೂ ಸಹ ದೊಡ್ಡ ಸಾಧನೆಯೇ. ವಿಭಿನ್ನ ಪ್ರಕಾರದ ಟೆನ್ನಿಸ್ ಅಂಗಳದಲ್ಲಿ ತಮ್ಮ ಅಪ್ರತಿಮ ಪ್ರತಿಭೆ ತೋರಿಸಿ ಗೆಲ್ಲುವುದೇನೂ ಸಣ್ಣ ವಿಷಯವಲ್ಲ.

ಆದರೆ ಇನ್ನೂ ಕೆಲವರಿರುತ್ತಾರೆ ದೈತ್ಯರು.ತಮ್ಮ ಆಟದ ಪ್ರವಾಹಕ್ಕೆ ಎದುರಾದವರನ್ನೆಲ್ಲ ಕೊಚ್ಚಿಕೊಂಡು ಹೋಗುವವರು.ಒಂದೇ ವರ್ಷದಲ್ಲಿ ನಾಲ್ಕೂ ಪಂದ್ಯಾವಳಿಗಳನ್ನು ಗೆದ್ದು ಬಿಡುವವರು.1988ರಲ್ಲಿ ಸ್ಟೆಫಿ ಗ್ರಾಫ್ ಈ ಸಾಧನೆ ಮಾಡಿದ್ದರು. ‘ಕ್ಯಾಲೆಂಡರ್ ಇಯರ್ ಗ್ರಾಂಡ್ ಸ್ಲಾಮ್’ ಎಂದು ಕರೆಯಲ್ಪಡುವ ಈ ಸಾಧನೆ ಬಹುತೇಕ ಅಸಾಧ್ಯವೆನ್ನುವುದು ಪಂಡಿತರ ಅಂಬೋಣ. ನೂರಾರು ವರ್ಷಗಳ ಇತಿಹಾಸವಿರುವ ಈ ಕ್ರೀಡೆಯಲ್ಲಿ ಇಂಥದ್ದೊಂದು ಸಾಧನೆ ಮಾಡಿದವರು ಕೇವಲ ಮೂರು ಜನ ಎಂದರೆ ಸಾಧನೆಯ ಮಹತ್ವದ ಅರಿವು ನಿಮಗಾದೀತು.

ಹೀಗಿದ್ದು ಇಂಥಹ ಸಾಧನೆಯನ್ನು ಎರಡು ಸಲ ಮಾಡಿದ್ದವರಿದ್ದರೆ ಅವರಿಗೆ ಏನೆನ್ನುವುದು..? ಅಧಿಕೃತವಾಗಿ ‘ರಾಡ್ ಲೇವರ್’ ಎನ್ನುತ್ತಾರೆ ಟೆನ್ನಿಸ್ ಜಗತ್ತಿನಲ್ಲಿ. 1962 ಮತ್ತು 1969ರಲ್ಲಿ ಈ ಸಾಧನೆಯನ್ನು ಮಾಡಿದ್ದರು ಆಸ್ಟ್ರೇಲಿಯಾದ ಲೇವರ್.ಆ ಸಾಧನೆ ಮಾಡಿ್ದದ ವಿಶ್ವದ ಏಕೈಕ ಆಟಗಾರನೀತ. ಟೆನ್ನಿಸ್ ಲೋಕದ ಮಹಾನ್ ದಂತ ಕತೆ. ಕ್ರಿಕೆಟ್‌ನಲ್ಲಿ ಡಾನ್ ಬ್ರಾಡ್ಮನ್ ಇದ್ದಂತೆ ಟೆನ್ನಿಸ್‌ಗೆ ರಾಡ್ ಲೇವರ್‌. ಇವರ ಸಾಧನೆಯ ಗೌರವಕ್ಕೆ ಆಸ್ಟ್ರೇಲಿಯಾ ತನ್ನ ವಿಶ್ವಪ್ರಸಿದ್ಧ ಟೆನ್ನಿಸ್ ಅಂಕಣಕ್ಕೆ ‘ರಾಡ್ ಲೇವರ್ ಅರೀನಾ’ ಎಂಬ ಹೆಸರು ಕೊಟ್ಟಿದೆ. ಪ್ರತಿವರ್ಷ ನಡೆಯುವ ಪ್ರಸಿದ್ಧ’ಲೇವರ್ ಕಪ್ ‘ಸಹ ಇವರ ಗೌರವಾರ್ಥವೇ. ನಿನ್ನೆಯಿಂದ ಅವರ ಆತ್ಮಚರಿತ್ರೆ ಓದುತ್ತಿದ್ದೇನೆ. ಆಸಕ್ತಿಕರ ವಿಷಯ ಸಿಕ್ಕರೆ ಖಂಡಿತ ಇಲ್ಲಿಯೂ ಹಂಚಿಕೊಳ್ಳುತ್ತೇನೆ.

-ಗುರುರಾಜ್ ಕೊಡ್ಕಣಿ ಯಲ್ಲಾಪುರ

Categories
Action Replay ಟೆನಿಸ್

ಸೇಡು ತೀರಿಸುಕೊಳ್ಳುವುದು ಇರಬೇಕು ಅವನ ಸಾಧನೆಯಂತೆ….!!

ಟೆನ್ನಿಸ್ ತರಬೇತಿ ಪಡೆಯುತ್ತಿದ್ದ ಆ ಹುಡುಗನ ಬಗ್ಗೆ ಸ್ವತಃ ತರಬೇತಿದಾರರಿಗೆ ತಾತ್ಸಾರವಿತ್ತು.ದೈತ್ಯದೇಹಿ ಬೊಜ್ಜು ದೇಹದ ಹುಡುಗ ವೃತ್ತಿಪರ ಟೆನ್ನಿಸ್‌ಗೆ ಅನರ್ಹವೆನ್ನುವುದು ಅವರ ಭಾವ. ಡೇವಿಸ್ ಕಪ್‌ ತಂಡದ ಆಯೋಜಕರಿಗೂ ಮತ್ತದೇ ಭಾವ. ಹುಡುಗ ವಿಕಾರಿ ,ಒಡ್ಡೊಡ್ಡು ಎಂಬ ತಿರಸ್ಕಾರ. ಡೇವಿಸ್ ಕಪ್‌ನ ಪಂದ್ಯಗಳಲ್ಲಿ ತನ್ನನ್ನು ಬಾಲ್ ಬಾಯ್ ಆಗಿ ಆಯ್ಕೆ ಮಾಡಿ ಎಂದಾತ ಆಯೋಜಕರಲ್ಲಿ ವಿನಂತಿಸಿಕೊಂಡರೇ ನೇರವಾಗಿಯೇ ಅವನನ್ನು ಅವಮಾನಿಸಿದ್ದರು ಆಯೋಜಕರು.ನೀನು ಟೆನ್ನಿಸ್ ಆಡಲಾಗದು,ಬೇಕಿದ್ದರೆ ಫುಟ್ಬಾಲ್ ಆಡಬಹುದು,ಅದೂ ಸಹ ನೀನು ಪುಟ್ಬಾಲ್ ಆಗಿದ್ದರೆ ಮಾತ್ರ ಎಂಬ ಅಪಹಾಸ್ಯದ ಮಾತುಗಳನ್ನು ಕೇಳಿಸಿಕೊಂಡ ಹುಡುಗ ಮಂಕಾಗಿ ಮನೆಗೆ ಬಂದಿದ್ದ.ರಾತ್ರಿಯಿಡಿ ಮಗುಮ್ಮಾಗಿ ಕುಳಿತಿದ್ದವನ ಮನಸ ತುಂಬ ಅಸಹನೆ,ನಿರಾಸೆಯ ಹೊಯ್ದಾಟ.

ಆದರೆ ಬದುಕಿನಲ್ಲಿ ಬಟರ್ ಫ್ಲೈ ಪರಿಣಾಮ ಎನ್ನುವುದೊಂದಿರುತ್ತದೆ. ಯಾವುದೋ ಚಿಕ್ಕದ್ದೊಂದು ಘಟನೆಯ ಬದುಕಿನ ಮಹತ್ವದ ಬದಲಾವಣೆಗೆ ಕಾರಣವಾಗುವಂಥದ್ದು.ಜಾರಿ ಬಿದ್ದ ದುರ್ಯೋಧನನನ್ನು ನೋಡಿ ದ್ರೌಪದಿ ನಕ್ಕ ಕಾರಣಕ್ಕೆ ಮಹಾಭಾರತವೇ ನಡೆದು ಹೊಯ್ತು ಎಂಬಂತೆ. ತನ್ನೆಡೆಗನ ಅಪಹಾಸ್ಯದ ಅದೊಂದು ಘಟನೆ ಅವನಲ್ಲಿಯೂ ಬಟರ್ ಫ್ಲೈ ಇಫೆಕ್ಟ್ ತೋರಿಸಿತ್ತು.ಹಟಕ್ಕೆ ಬಿದ್ದವನಂತೆ ಸತತವಾಗಿ ಟೆನ್ನಿಸ್ ಅಭ್ಯಾಸದಲ್ಲಿ ನಿರತನಾದವನು ಹದಿವಯಸ್ಸಿನ ಹೊತ್ತಿಗಾಗಲೇ ಮೈ ಕರಗಿಸಿದ್ದ.ಹದಿನೆಂಟನೆ ವಯಸ್ಸಿಗೆ ವೃತ್ತಿಜೀವನವನ್ನಾರಂಭಿಸಿ ಮೊದಮೊದಲು ಡಬಲ್ಸ್ ಆಟಗಾರನಾಗಿ ಆಟವನ್ನಾರಂಭಿಸಿದ್ದ.

ಇಪ್ಪತ್ತೆರಡನೇ ವಯಸ್ಸಿಗಾಗಲೇ ಪ್ರಥಮ ಯಶಸ್ಸು ಕೈಗೆ ಹತ್ತಿತ್ತು.ಡಬಲ್ಸ್‌ನ ಮೊದಲ ಯು.ಎಸ್ ಓಪನ್ ಗೆದ್ದಿದ್ದ 1968ರಲ್ಲಿ.ನಿಧಾನಕ್ಕೆ ಡಬಲ್ಸ್‌ನಲ್ಲಿಯೇ ವೃತ್ತಿಜೀವನ ಮುಂದುವರೆಸಿದ್ದವನಿಗೆ ತಾನೇಕೆ ಸಿಂಗಲ್ಸ್ ಆಡಬಾರದು ಎಂಬ ಪ್ರಶ್ನೆ ಎದುರಾಗಿತ್ತು. ಡಬಲ್ಸ್ ಆಡುತ್ತಲೇ ಸಿಂಗಲ್ಸ್ ಸಹ ಆಡಲಾರಂಭಿಸಿದವನಿಗೆ ಸಹಜವಾಗಿ ಆರಂಭಿಕ ಸೋಲುಗಳು ಕಾಡಿದ್ದವು. ಆದರೆ ಆಟವನ್ನು ತುಂಬ ಪ್ರೀತಿಸಿದ್ದವನು ಆತ. ಏಕಾಗ್ರತೆಯಿಂದ ಗಮನಿಸಿ ಬಹುಬೇಗ ಸಿಂಗಲ್ಸ್ ಆಟದ ಪಟ್ಟುಗಳನ್ನು ಕಲಿತುಬಿಟ್ಟಿದ್ದ.ಬದುಕು ಪರಿಶ್ರಮವನ್ನು ಸೋಲಿಸಿದ ಉದಾಹರಣೆಗಳು ತೀರ ಕಡಿಮೆ.ಅವನ ಪರಿಶ್ರಮವೂ ಸೋಲಲಿಲ್ಲ. 1971ರಲ್ಲಿ ಇಪ್ಪತ್ತೈದನೇ ವಯಸ್ಸಿಗೆ ತನ್ನ ಮೊದಲ ಸಿಂಗಲ್ಸ್ ಯು.ಎಸ್ ಓಪನ್ ಗೆದ್ದಿದ್ದ.ಅದೇ ಮರು ವರ್ಷ ಅಂದರೆ ಇಪ್ಪತ್ತಾರನೇ ವಯಸ್ಸಿಗೆ ಮೊದಲ ವಿಂಬಲ್ಡನ್ ಸಹ ಗೆದ್ದು ಬೀಗಿದ್ದ ಅವನು.ಸಹಜವಾಗಿ ವರ್ಷಾಂತ್ಯವನ್ನು ಅಗ್ರ ಶ್ರೇಯಾಂಕಿತನಾಗಿ ಮುಗಿಸಿದ್ದ.ಸಾಮಾನ್ಯವಾಗಿ ಪುರುಷರ ವಿಭಾಗದಲ್ಲಿ ಸಿಂಗಲ್ಸ್ ಆಡುವವರಿಗೆ ಡಬಲ್ಸ್ ನ ಯಶಸ್ಸು ಕಡಿಮೆ.ಆದರೆ ಇವನ ಕತೆ ಬೇರೆಯದಿತ್ತು.

ಡಬಲ್ಸ್‌‌ನಿಂದಲೇ ವೃತ್ತಿ ಜೀವನವನ್ನಾರಂಭಿಸಿದೆನ್ನುವ ಕಾರಣಕ್ಕೊ ಏನೋ,ಆತನಿಗೆ ಡಬಲ್ಸ್‌‌ನ ಮೇಲೆಯೂ ಗಟ್ಟಿಯಾದ ಹಿಡಿತವಿತ್ತು.ನಾಲ್ಕು ಯು.ಎಸ್ ಓಪನ್‌ ಮತ್ತು ಒಂದು ಆಸ್ಟ್ರೇಲಿಯನ್ ಓಪನ್‌ನ ಡಬಲ್ಸ್ ಪ್ರಶಸ್ತಿಯನ್ನು ಸಹ ಅವನು ತನ್ನ ಮಡಲಿಗೆ ಹಾಕಿಕೊಂಡುಬಿಟ್ಟಿದ್ದ. ಒಟ್ಟಾರೆಯಾಗಿ ಸಿಂಗಲ್ಸ್ ಮತ್ತು ಡಬಲ್ಸ್ ಪಂದ್ಯಾವಳಿ ಸೇರಿ ಆತ ಗೆದ್ದಿದ್ದು ಏಳು ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳು.

ಈ ಎಲ್ಲ ಸಾಧನೆಗಳನ್ನು ಆತ ಮಾಡಿದ್ದರೂ ಆತ ಬಹುಮುಖ್ಯವಾಗಿ ಗುರುತಿಸಲ್ಪಡುವುದೇ ಅಮೇರಿಕಾದ ತಂಡಕ್ಕೋಸ್ಕರ ಆತ ಡೇವಿಸ್ ಕಪ್‌ನಲ್ಲಿ ಮಾಡಿರುವ ಸಾಧನೆಗಾಗಿ. 1968ರಿಂದ 1979ರವರೆಗೆ ಅಮೆರಿಕೆಯ ಡೇವಿಸ್ ಕಪ್‌ನ ತಂಡದಲ್ಲಿ ಆಡಿದ ಆತ ಇಂದಿಗೂ ಅಮೇರಿಕಾದ ಸಾರ್ವಕಾಲಿಕ ಶ್ರೇಷ್ಠ ಡೇವಿಸ ಕಪ್ ಆಟಗಾರರಲ್ಲಿ ಒಬ್ಬನೆಂದೇ ಗುರುತಿಸಲ್ಪಡುತ್ತಾನೆ. ಡೇವಿಸ್ ಕಪ್‌ನ ಟೂರ್ನಿಯಲ್ಲಿ ಆಡಿದ ಒಟ್ಟು ನಲ್ವತ್ತೆರಡು ಪಂದ್ಯಗಳ ಪೈಕಿ ಮೂವತ್ತೈದರಲ್ಲಿ ಆತ ಜಯ ಸಾಧಿಸಿದ್ದಾನೆ. ಡೇವಿಸ್ ಕಪ್‌ನ ಡಬಲ್ಸ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ಗೇಮ್‌ಗಳನ್ನಾಡಿದ ದಾಖಲೆ ಇವತ್ತಿಗೂ ಇವನ ಹೆಸರಲ್ಲಿದೆ. ಡಬಲ್ಸ್ ಆಟದ ಸೆಟ್ಟೊಂದರಲ್ಲಿ ಅತೀ ಹೆಚ್ಚು ಗೇಮ್‌ಗಳನ್ನಾಡಿದ ದಾಖಲೆ ಸಹ ಇವನದ್ದೇ.ಇವನ ಸಾಧನೆಯನ್ನು ಗಮನಿಸಿದ ಅಂತರಾಷ್ಟ್ರೀಯ ಟೆನ್ನಿಸ್ ಸಂಸ್ಥೆ 1987ರಲ್ಲಿ ಇವನನ್ನು ಅಂತರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ್ ಫೇಮ್‌ನ ಪಟ್ಟಿಗೆ ಸೇರಿಸಿತು.1979ರಲ್ಲಿ ಆತ್ಮಕಥೆ ಬರೆದ ಮತ್ತೊಬ್ಬ ಟೆನ್ನಿಸ್ ದಂತಕತೆ ಜಾಕ್ ಕ್ರಾಮರ್,ವಿಶ್ವದ ಸಾರ್ವಕಾಲಿಕ ಇಪ್ಪತ್ತು ಶ್ರೇಷ್ಠ ಆಟಗಾರರ ಪೈಕಿ ಇವನನ್ನೂ ಒಬ್ಬನಾಗಿ ಸೇರಿಸಿದ. 2005ರಲ್ಲಿ ತನ್ನ ನಲ್ವತ್ತನೇ ವಸಂತವನ್ನು ಪೂರೈಸಿದ ಟೆನ್ನಿಸ್‌ನ ಶ್ರೇಷ್ಠ ಟೆನ್ನಿಸ್ ಕ್ರೀಡಾ ಪತ್ರಿಕೆ ‘TENNIS’ ಸಾರ್ವಕಾಲಿಕ ವಿಶ್ವಶ್ರೇಷ್ಠ ನಲ್ವತ್ತು ಟೆನ್ನಿಸ್ ಕ್ರೀಡಾಳುಗಳ ಪೈಕಿ ಇವನನ್ನು ಒಬ್ಬನಾಗಿ ಗುರುತಿಸಿತ್ತು.

ನಾವು ಹೆಚ್ಚಾಗಿ ಕೇಳಿರದ, ಒಂದು ಕಾಲದ ಅಮೇರಿಕಾದ ಟೆನ್ನಿಸ್ ದಂತ ಕತೆ ಸ್ಟಾನ್ಲಿ ರೋಜರ್ ಸ್ಮಿತ್‌ನ ಯಶೋಗಾಥೆಯಿದು. ಆದರೆ ಇಷ್ಟಕ್ಕೆ ಮುಗಿಯಲಿಲ್ಲ ಅವನ ಯಶಸ್ಸಿನ ಕತೆ.ಪ್ರಸಿದ್ದ ಬೂಟು ಕಂಪನಿ ಆಡಿಡಾಸ್ ತನ್ನ ಬೂಟುಗಳ ಪ್ರಚಾರಕ್ಕಾಗಿ ಟೆನ್ನಿಸ್ ಆಟಗಾರನೊಬ್ಬನನ್ನು ಹುಡುಕುತ್ತಿತ್ತು. ಆಡಿಡಾಸ್‌ನ ಟೆನ್ನಿಸ್ ರಾಯಭಾರಿಯಾಗಿದ್ದ ಪ್ರಾನ್ಸ್‌ನ ಖ್ಯಾತ ಟೆನ್ನಿಸ್ ಆಟಗಾರ ರಾಬರ್ಟ್ ಹೆಲ್ಲೆಟ್ ಆಟದಿಂದ ನಿವೃತ್ತನಾಗಿದ್ದ.ತಕ್ಷಣವೇ ಕಂಪನಿ ಸ್ಟಾನ್ಲಿಯನ್ನು ತನ್ನ ರಾಯಭಾರಿಯಾಗಿ ಒಪ್ಪಿಸಿತ್ತು. ಮುಂದಿನದ್ದು ಇತಿಹಾಸ. ಇವತ್ತಿಗೂ ಆಡಿದಾಸ್ ಸ್ಟಾನ್ಲಿ ಸ್ಮಿತ್ ಶೂಗಳೆಂದರೇ ಟೆನ್ನಿಸ್ ಲೋಕದ ಅತ್ಯಂತ ಪ್ರಸಿದ್ಧ ಶೂಗಳು. ವೃತ್ತಿಪರರು ಈಗ ಹೆಚ್ಚಾಗಿ ಸ್ಟಾನ್ಲಿ ಸ್ಮಿತ್ ಶೂಗಳನ್ನು ಬಳಸುವುದಿಲ್ಲವಾದರೂ ಟೆನ್ನಿಸ್ ಪ್ರಿಯರ ಲೋಕದಲ್ಲಿನ್ನೂ ಅವುಗಳ ಜನಪ್ರಿಯತೆ ಕಡಿಮೆಯಾಗಿಲ್ಲ.

ತನ್ನ ಆಟವನ್ನು ನೋಡಿರದ ಕೇಳಿರದ ಇಂದಿನ ಅನೇಕ ಯುವಕರು ನನ್ನ ಹೆಸರು ಕೇಳಿದಾಕ್ಷಣ ಅದೇನು ಶೂ ಹೆಸರಿಟ್ಟುಕೊಂಡಿದ್ದೀರಿ ಎಂದು ಮುಗ್ಧವಾಗಿ ಕೇಳಿಬಿಡುತ್ತಾರೆ. ಬಹುತೇಕರು ಇಂದಿಗೂ ನನ್ನ ಶೂ ಎಂದೇ ತಿಳಿದುಕೊಂಡಿದ್ದಾರೆ’ ಎಂದು ನಕ್ಕುಬಿಡುತ್ತಾನೆ ಸ್ಟಾನ್ಲಿ. ವೃತ್ತಿಜೀವನದ ನಂತರ ಟೆನ್ನಿಸ್ ತರಬೇತುದಾರನಾಗಿ ಕೆಲಕಾಲ ಕಾರ್ಯ ನಿರ್ವಹಿಸಿದ ಸ್ಟಾನ್ಲಿ ಪ್ರಸ್ತುತಕ್ಕೆ ಅಮೇರಿಕಾದಲ್ಲಿರುವ ಅಂತರಾಷ್ಟ್ರೀಯ ಟೆನ್ನಿಸ್ ಹಾಲ್ ಆಫ್ ಫೇಮ್‌ನ ಅಧ್ಯಕ್ಷ.

ಹಿಂತಿರುಗಿ ನೋಡಿದರೆ ಸ್ಟಾನ್ಲಿ ಗೆದ್ದದ್ದು ಒಟ್ಟು ತೊಂಬತ್ತೆರಡು ಪ್ರಶಸ್ತಿಗಳು.ಅದರಲ್ಲಿ ಏಳು ಗ್ರಾಂಡ್‌ಸ್ಲಾಮ್‌ಗಳು.ವಿಚಿತ್ರ ನೋಡಿ,ಯಾವ ಡೇವಿಸ್ ಕಪ್ ಅಂಗಳದಲ್ಲಿ ಅವನ ಬಗ್ಗೆ ದೈತ್ಯಜೀವಿ ಎಂದು ವ್ಯಂಗ್ಯವಾಡಲಾಗಿತ್ತೋ ಅದೇ ಅಂಕಣದ ಟೆನ್ನಿಸ್ ದೈತ್ಯನಾಗಿ ಬೆಳೆದು ನಿಂತ ಸ್ಟಾನ್ಲಿ. ಬಾಲ್ ಬಾಯ್ ಆಗಲೂ ಸಹ ಯೋಗ್ಯತೆಯಿಲ್ಲ ಎನ್ನಿಸಿಕೊಂಡ ಆಟಗಾರ,ತನ್ನ ಹೆಸರಿನ ಶೂಗಳನ್ನು ಅದೆಷ್ಟೋ ಆಟಗಾರರು ಕಾಲುಗಳಲ್ಲಿ ಧರಿಸುವಷ್ಟು ಕೀರ್ತಿ ಸಂಪಾದಿಸಿದ ಸ್ಟಾನ್ಲಿ ಸ್ಮಿತ್. ಅಪಹಾಸ್ಯವಾಡಿದವರ ಅಪಹಾಸ್ಯವೇ ಅಪಹಾಸ್ಯಕ್ಕೊಳಗಾಗುವಂತೆ ಗೆದ್ದು ನಿಲ್ಲಬೇಕು ಎನ್ನುತ್ತದೆ ಬದುಕು. ಅಣಕವಾಡುವವರೆದುರು ಸೇಡು ತೀರಿಸಿಕೊಳ್ಳುವುದೆಂದರೆ ಹೀಗಿರಬೇಕು ಎನ್ನುವುದಕ್ಕೆ ಸ್ಟಾನ್ಲಿಯ ಯಶೊಗಾಥೆಯೊಂದು ಋಜುವಾತು. ಹಾಗೊಂದು ಯಶಸ್ಸು ಸಾಧಿಸಿ ತೋರಿಸಿದ ಸ್ಟಾನ್ಲಿ ಸ್ಮಿತ್‌ನ ಗೆಲುವಿನ ಕತೆ ಸಾಧನೆಯ ಹಾದಿಯಲ್ಲಿ ಸೋತು ನಿರಾಶರಾಗಿ ಕೈ ಚೆಲ್ಲಿದ ಅದೆಷ್ಟೋ ಜನಕ್ಕೊಂದು ಸ್ಪೂರ್ತಿಯಾಗಿ ಗೋಚರಿಸಬಹುದಲ್ಲವೆ..?

-ಗುರುರಾಜ ಕೊಡ್ಕಣಿ,ಯಲ್ಲಾಪುರ

Categories
Action Replay ಬ್ಯಾಡ್ಮಿಂಟನ್

ಅಪಮಾನದ ಕಿಚ್ಚಿಗೆ ಗೆಲುವಿನುತ್ತರ ನೀಡಿದ ಡಾನಿಲ್ ಮಡ್ವಡೇವ್

ಪಂದ್ಯವೊಂದರ ವೇಳೆ ಸಣ್ಣದ್ದೊಂದು ಒರಟು ವರ್ತನೆಗೆ ಜನ ಛಿಮಾರಿ ಹಾಕಿದ್ದರು ಈ ಹುಡುಗನಿಗೆ.ಪಂದ್ಯ ಪೂರ್ತಿ ಕೂಗುತ್ತಲೇ ಇವನನ್ನು ಅಪಹಾಸ್ಯ ಮಾಡಿದ್ದರು ಪ್ರೇಕ್ಷಕರು.ಅಷ್ಟಾಗಿಯೂ ಧೃತಿಗೆಡದೇ ಪಂದ್ಯವನ್ನು ಗೆದ್ದು ಮುಗಿಸಿದ ಈತ,’ನನ್ನನ್ನು ಅಪಹಾಸ್ಯ ಮಾಡುತ್ತಿರುವ ನಿಮಗೆ ಧನ್ಯವಾದಗಳು.ನಿಮ್ಮ ಈ ಅಪಹಾಸ್ಯದ ಧ್ವನಿಯೇ ನನ್ನನ್ನು ಅವುಡುಗಚ್ಚಿ ಆಡುವಂತೆ ಪ್ರೋತ್ಸಾಹಿಸುತ್ತದೆ.

ಇದೊಂದು ಪಂದ್ಯದಲ್ಲಿನ ನಿಮ್ಮ ತಿರಸ್ಕಾರದಿಂದ ನನ್ನಲ್ಲಿ ಹುಟ್ಟಿಕೊಂಡಿರುವ ಕಿಚ್ಚು ಕನಿಷ್ಟ ಮುಂದಿನ ಐದು ಪಂದ್ಯಗಳನ್ನು ಗೆಲ್ಲುವ ಶಕ್ತಿ ಕೊಟ್ಟಿದೆ’ ಎಂದಿದ್ದ.ಮಾತಿಗೆ ತಕ್ಕ ಹಾಗೆ ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದು ಬಂದವನು ಪ್ರಶಸ್ತಿ ಗೆಲ್ಲುವ ಕೊನೆಯ ಹಂತದಲ್ಲಿ ವಿಶ್ವ ಶ್ರೇಷ್ಠ ಎದುರಾಳಿಗೆ ಸಂಪೂರ್ಣ ಬೆವರಿಳಿಸಿ ವೀರೋಚಿತ ಸೋಲು ಕಂಡ .ಆವತ್ತಿನ ಮಾತುಗಳನ್ನೇ ಇವತ್ತಿಗೂ ಪುನರಾವರ್ತಿಸಿದವನ ಧಾಟಿ ಕೊಂಚಬದಲಾಗಿತ್ತು.’ನಿಮ್ಮ ಅಪಹಾಸ್ಯದ ಕೂಗು ನನ್ನನ್ನ ಗೆಲ್ಲಿಸುತ್ತಿದೆ ಎಂದು ಆವತ್ತು ಕೊಂಚ ಕೋಪದಲ್ಲಿ ನುಡಿದಿದ್ದೆ.ಇವತ್ತಿಗೂ ಅದೇ ಮಾತನ್ನ ಹೇಳುತ್ತೇನಾದರೂ ಕೋಪದಲ್ಲಿ ಅಲ್ಲ,ನಿಮ್ಮ ಪ್ರೋತ್ಸಾಹವೇ ನನ್ನನ್ನು ಇಲ್ಲಿಯವರೆಗೂ ಎಳೆದುತಂದಿದ್ದು’ ಎಂದು ನುಡಿದವನ ಧ್ವನಿಯಲ್ಲಿ ಪ್ರಾಮಾಣಿಕತೆ ಇತ್ತು.ಅಂದು ಅಪಹಾಸ್ಯದ ಕೂಗಿದ್ದ ಪ್ರೇಕ್ಷಕರ ಧ್ವನಿಯಲ್ಲಿಂದು ಮೆಚ್ಚುಗೆಯ ಹರ್ಷೋಧ್ಘಾರವಿತ್ತು.

ಇಪ್ಪತ್ಮೂರರ ಹರೆಯದ ಹುಡುಗನ ಆಟದಲ್ಲಿ ಅದ್ಭುತ ಶಾಸ್ತ್ತಿಯತೆಯಿದೆ,ಗೆಲ್ಲುವ ಛಲವಿದೆ.ಸಧ್ಯಕ್ಕಂತೂ ಎಟಿಪಿ ರ‌್ಯಾಂಕಿಂಗ್‌ನಲ್ಲಿ ನಾಲ್ಕನೆ ಸ್ಥಾನದಲ್ಲಿರುವ ರಷ್ಯಾದ ಡಾನಿಲ್ ಮಡ್ವಡೇವ್ ಭವಿಷ್ಯದ ಟೆನ್ನಿಸ್ ಭರವಸೆಯ ಆಟಗಾರನೇನೋ ಎನ್ನಿಸುತ್ತದೆ.ಹೌದಾ ಅಲ್ಲವಾ ಎಂಬ ಪ್ರಶ್ನೆಗೆ ಕಾಲವೇ ಉತ್ತರವಾದೀತು.

-ಗುರುರಾಜ್ ಕೊಡ್ಕಣಿ ಯಲ್ಲಾಪುರ