Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ ಕ್ರಿಕೆಟ್ ಬ್ಯಾಡ್ಮಿಂಟನ್

ಕ್ರೀಡೆ ದೈನಂದಿನ ಜೀವನದ ಭಾಗವಾಗಲಿ-ಗೌತಮ್ ಶೆಟ್ಟಿ

ಕುಂದಾಪುರ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ “ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ​​(SKPA)” ಇವರ ಆಶ್ರಯದಲ್ಲಿ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಮತ್ತು  ಕುಂದಾಪುರ- ಬೈಂದೂರು ವಲಯದ “ದಿ.ರಾಬರ್ಟ್ ಡಿಸೋಜಾ ಟ್ರೋಫಿ-2023” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೆನಿಸ್ ಬಾಲ್ ಬಾಕ್ಸ್ ಕ್ರಿಕೆಟ್ ಪಂದ್ಯಾಟ 28.10.2023 ರಂದು ರಂದು ಸಹನಾ ಸ್ಪೋರ್ಟ್ಸ್ ಕ್ಲಬ್ ಕುಂದಾಪುರದಲ್ಲಿ ನಡೆಯಿತು.
 ಪಂದ್ಯಾವಳಿಯನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮತ್ತು ಕರ್ನಾಟಕ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಉಪಾಧ್ಯಕ್ಷ  ಗೌತಮ್ ಶೆಟ್ಟಿ ಮಾತನಾಡಿ “ಕ್ರೀಡೆ ದೈನಂದಿನ ಜೀವನದ ಭಾಗವಾಗಿರಬೇಕು.ಕ್ರೀಡೆ ನಮಗೆ ಜೀವನ ಕೌಶಲ್ಯವನ್ನು ಕಲಿಸುತ್ತದೆ.ಪೋಷಕರು ತಮ್ಮ ಮಕ್ಕಳಿಗೆ ಕ್ರೀಡೆಯ ಮೇಲಿರುವ ಆಸಕ್ತಿಯನ್ನು ಪ್ರೋತ್ಸಾಹಿಸಬೇಕು ಎಂದರು.
“ಛಾಯಾಚಿತ್ರ ಗ್ರಾಹಕರು ಮೆದುಳು ಮತ್ತು ತಂತ್ರ ವನ್ನು ಬಳಸಿ ನಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತಾರೆ ಎಂಬುದರ ಕುರಿತು ಮಾತನಾಡಿದರು. ಉಡುಪಿ ಜಿಲ್ಲೆಯ ವಿಭಜನೆಯ ನಂತರವೂ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್‌ನಂತೆ  ಒಗ್ಗಟ್ಟಾಗಿದ್ದಾರೆ,ಬಿಡುವಿಲ್ಲದ ವೇಳೆಯಲ್ಲೂ ಸುಳ್ಯದಿಂದ ಬೈಂದೂರಿನವರೆಗೂ ಛಾಯಾಚಿತ್ರಗ್ರಾಹಕರು ಈ ಪಂದ್ಯಾವಳಿಯಲ್ಲಿ ಭಾಗವಹಿಸಿರುವುದು ಶ್ಲಾಘನೀಯ ಎಂದರು.”
ಈ ಸಂದರ್ಭ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ,ಸಹನಾ ಗ್ರೂಪ್ಸ್ ನ ಸುರೇಂದ್ರ ಶೆಟ್ಟಿ ಮತ್ತು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೊಶಿಯೇಶನ್ ನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Categories
ಬ್ಯಾಡ್ಮಿಂಟನ್

ಮೊಗವೀರ ಸಂಘ ಬೆಂಗಳೂರು(ನೋಂ)ಆಶ್ರಯದಲ್ಲಿ ಬ್ಯಾಡ್ಮಿಂಟನ್ ಕಪ್ 2022-23

ಬೆಂಗಳೂರು-ಮೊಗವೀರ ಸಂಘದ ವತಿಯಿಂದ ಸಮುದಾಯದ ಬಾಂಧವರಿಗೆ  ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು  ಆಯೋಜಿಸಲಾಗಿದ್ದು ಈ ಬಾರಿ ಪ್ರಥಮ ಬಾರಿಗೆ ಮಕ್ಕಳ ಮತ್ತು ಹಿರಿಯರ ವಿಭಾಗದಲ್ಲೂ ಸ್ಪರ್ಧೆ ನಡೆಯಲಿದೆ.  ಮೊಗವೀರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಂದ್ಯಾವಳಿಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
ಮಕ್ಕಳ ವಿಭಾಗ:
ಸಿಂಗಲ್ಸ್
1) 15 ವರ್ಷದ ಒಳಗಿನ ಮಕ್ಕಳಿಗೆ
ಮಹಿಳೆಯರ ವಿಭಾಗ:
ಸಿಂಗಲ್ಸ್
1) 15 ವರ್ಷ ಮೇಲ್ಪಟ್ಟವರಿಗೆ
ಡಬ್ಬಲ್ಸ್
1) 15 ವರ್ಷ ಮೇಲ್ಪಟ್ಟವರಿಗೆ
ಪುರುಷರ ವಿಭಾಗ:
 ಸಿಂಗಲ್ಸ್
1) 15 ರಿಂದ 35 ವರ್ಷದವರೆಗೆ
2) 35 ವರ್ಷ ಮೆಲ್ಪಟ್ಟವರಿಗೆ
ಡಬಲ್ಸ್
1) 15 ರಿಂದ 35 ವರ್ಷದವರೆಗೆ
2) 35 ವರ್ಷ ಮೆಲ್ಪಟ್ಟವರಿಗೆ
3) 50 ವರ್ಷ ಮೇಲ್ಪಟ್ಟವರಿಗೆ
ಮಿಕ್ಸೆಡ್ ಡಬಲ್ಸ್
1) ವಯಸ್ಸಿನ ಮಿತಿ ಇಲ್ಲ
ಪ್ರವೇಶ ಶುಲ್ಕ:
ಸಿಂಗಲ್ಸ್: ರೂ 400
ಡಬಲ್ಸ್: ರೂ 600
ಮಕ್ಕಳಿಗೆ: ರೂ 250
ಡಿಸೆಂಬರ್ 10 ರ ಒಳಗೆ ಶುಲ್ಕವನ್ನು ಈ ಕೆಳಕಂಡ ಫೋನ್ ನಂಬರ್ ಗೆ ಗೂಗಲ್ ಪೆ/ಫೋನ್ ಪೆ ಮೂಲಕವೂ ಪಾವತಿಸಬಹುದು…
ಮನೋಹರ್ – 99002 84925
ಪ್ರಶಾಂತ್ – 98867 72214
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ವಿಶ್ವನಾಥ್ ಕಾಂಚನ್
99021 76454
ದತ್ತಾತ್ರೇಯ ಕುಂದಾಪುರ
94485 25648
ಜಯಪ್ರಕಾಶ್
99001 14536
ಪಂದ್ಯದ ದಿನಾಂಕ:
11 ಡಿಸೆಂಬರ್ 2022, ಭಾನುವಾರ
ಸ್ಥಳ:
ಆಕೊಲೆಡ್ಸ್ ಬ್ಯಾಡ್ಮಿಂಟನ್ & ಸ್ಪೋರ್ಟ್ಸ್ ಅಕಾಡೆಮಿ
ನಾಗಸಂದ್ರ ಮೆಟ್ರೋ ಸ್ಟೇಷನ್ ಹತ್ತಿರ.
Categories
ಬ್ಯಾಡ್ಮಿಂಟನ್

ಮೊಗವೀರ ಬ್ಯಾಡ್ಮಿಂಟನ್ ಕಪ್ ಸಂಪನ್ನ

ಮೊಗವೀರ ಸಂಘ, ಬೆಂಗಳೂರು(ನೋಂ) ತನ್ನ ಸದಸ್ಯರಿಗಾಗಿ ಆಯೋಜಿಸಿದ್ದ   *ಮೊಗವೀರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ* ಯು  ಜಕ್ಕೂರಿನ ಜೆ ಪಿ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಯಶಸ್ವಿಯಾಗಿ ಸಮಾಪ್ತಿಯಾಯಿತು.‌ ಸಂಘದ ಹಿರಿಯ ಸದಸ್ಯರಾದ ಶ್ರೀಮತಿ ಜಾಂಬವತಿ ಮತ್ತು  ಶ್ರೀ ಶ್ರೀನಿವಾಸ ಮೊಗೇರ ದಂಪತಿಗಳು ಪಂದ್ಯಾವಳಿಗೆ ಚಾಲನೆ ನೀಡಿ ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್, ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್‌ನಲ್ಲಿ ಒಟ್ಟು ಏಳು ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.‌
ಮೊಗವೀರ ಸಮುದಾಯದ ಹಲವಾರು ಕಿರಿಯರು, ಹಿರಿಯರು ಉತ್ಸಾಹದಿಂದ ಪಂದ್ಯಾವಳಿಯಲ್ಲಿ ಪಾಲ್ಗೊಂಡರು. ಪಂದ್ಯಾವಳಿಯ ನಂತರ ವಿನ್ನರ್ ಮತ್ತು ರನ್ನರ್ ವಿಭಾಗದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು..
Categories
ಬ್ಯಾಡ್ಮಿಂಟನ್

ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಸೆಮಿ ಪೈನಲ್ ಹಂತಕ್ಕೆ

ಟೋಕಿಯೋ: ವಿಶ್ವ ಬ್ಯಾಡ್ಮಿಂಟನ್ ಅಂಕಣದಲ್ಲಿ ಇಬ್ಬರೂ ಮದಗಜಗಳ ಹೋರಾಟವೆಂದೆ ಖ್ಯಾತಿ ಪಡೆದ  ಪಿ.ವಿ. ಸಿಂಧು ಮತ್ತು ಯಮಗುಚಿ ನಡುವಿನ ಪಂದ್ಯದಲ್ಲಿ ಪಿ ವಿ ಸಿಂಧು ಗೆಲುವಿನ ನಗೆಬಿರಿವುದರ ಜೋತೆಗೆ ಪದಕದ ಖಚಿತದೊಂದಿಗೆ ಸೆಮಿ ಪೈನಲ್ ಹಂತಕ್ಕೆ ತಲುಪಿದ್ದಾರೆ
ಮೊದಲಿನ ಸೆಟ್ ನಲ್ಲಿ ಇಬ್ಬರೂ ಅಂಕ ಪಡೆಯಲು ಹೋರಾಟ ನಡೆಸಿದರೂ ಸಿಂಧು ತಮ್ಮ ಆಕ್ರಮಣಕಾರಿ ಆಟದಿಂದ  ಮೇಲುಗೈ ಸಾಧಿಸಿದರು. ಆದರೆ ಎರಡನೇ ಸೆಟ್ ಅಷ್ಟು ಸುಲಭದ್ದಾಗಿರಲಿಲ್ಲ ಅದರಲ್ಲೂ ಸ್ಕೋರ್ 10 ರ ಮೇಲೆ ತಲುಪಿದ ಮೇಲೆ ಇಬ್ಬರೂ ಜಿದ್ದಿಗೆ ಬಿದ್ದವರಂತೆ ಹೋರಾಡಿದರು
ಆದರೆ ಸಿಂಧು ಹೊಡೆತವನ್ನು ನಿಭಾಯಿಸಲು ಯಮಗುಚಿ ತಪ್ಪು ಮಾಡಿದ್ದರಿಂದ ಒತ್ತಡ ಬಿದ್ದು  ಸೋತಿದ್ದು ಸ್ಪಷ್ಟವಾಗಿ ಕಾಣುತ್ತಿತ್ತು. ಯಮಗುಚಿ ಒತ್ತಡಕ್ಕೆ ಸಿಲುಕಿ ನಿಭಾಯಿಸಲಾಗದೇ ಕೆಲವೊಂದು ತಪ್ಪು ಆಟವಾಡಿದರೆ  ಸಿಂಧು ಒತ್ತಡವನ್ನು ಕೂಲ್ ಆಗಿ ತೆಗೆದುಕೊಂಡು ಕೊನೆಯವರೆಗೂ ತಾಳ್ಮೆ ಕಳೆದುಕೊಳ್ಳದೆ ಆಟವಾಡಿ  ಗೆಲುವಿಗೆ ದಡ ಸೇರಿದರು.
ಈ ಬಾರಿ ಒಲಿಂಪಿಕ್ಸ್ ಗಾಗಿ ಸಿಂಧು ಭರ್ಜರಿ ತಯಾರಿಯನ್ನೇ ಮಾಡಿಕೊಂಡಿದ್ದರು ಲಂಡನ್ ಗೆ ತೆರಳಿ ವಿಶೇಷವಾಗಿ ಮಾನಸಿಕವಾಗಿ ಫಿಟ್ ಆಗಿರಲು ತರಬೇತಿ ಪಡೆದಿದ್ದರು. ಅದೆಲ್ಲದರ ಫಲ ಅವರಿಗೆ ಇಂದಿನ ಪಂದ್ಯದಲ್ಲಿ ಕೈ ಹಿಡಿಯಿತು. ಸಿಂಧು ಇಂದು ಆಡಿದ ರೀತಿ ಆಕೆ 2019 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ಚಿನ್ನದ ಪದಕ ಗೆಲ್ಲುವಾಗ ಇದ್ದಂತಹ ಹುರುಪು ಕಂಡುಬಂತು. ಇದೇ ಫಾರ್ಮ್ ಮುಂದುವರಿಸಿದರೆ ಆಕೆ ಸತತ ಎರಡನೇ ಬಾರಿಗೆ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಅಥವಾ ಚಿನ್ನದ ಪದಕ ಗೆಲ್ಲುವುದನ್ನು ಯಾರಿಂದಲೂ ತಪ್ಪಿಸಲಾಗದು.
Categories
ಬ್ಯಾಡ್ಮಿಂಟನ್

ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು : ಪ್ರಭಾಕರ್.ಎಸ್

ಬೈಂದೂರು ಸುದ್ಧಿ ಜ.24 : ಇಲ್ಲಿನ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ (ರಿ.) ಬಂಕೇಶ್ವರ ಇವರ ಆಶ್ರಯದಲ್ಲಿ ತೃತೀಯ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ ಪುರುಷರ ಡಬಲ್ಸ್ ಶಟಲ್ ಪಂದ್ಯಾಟ ಎಸ್.ಎಮ್.ಬಿ.ಸಿ ಟ್ರೋಫಿ – 2021, ಶನಿವಾರ ಸಂಜೆ ಬಂಕೇಶ್ವರ ಮಹಾಕಾಳಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಬೈಂದೂರು ತಾಲೂಕು ಯುವ ಸಬಲೀಕರಣ ಕ್ರೀಡಾಧಿಕಾರಿ ಪ್ರಭಾಕರ್ ಎಸ್ ಸಭಾ ಕಾರ್ಯಕ್ರಮ ಹಾಗೂ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿ, ಮಾತನಾಡಿ ಬಾಲ್ಯದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಹೊಂದಬೇಕು. ಯಾರಲ್ಲಿ ಕ್ರೀಡಾ ಮನೋಭಾವನೆ ಇರುತ್ತದಯೋ ಅವರು ಮಾನಸಿಕ, ದೈಹಿಕವಾಗಿ ಸದೃಢರಾಗಿರುತ್ತಾರೆ. ಯಾವ ಆಟದಲ್ಲಿ ನಮಗೆ ಆಸಕ್ತಿ ಇದೆಯೋ ಆ ಆಟದ ಬಗ್ಗೆ ಶ್ರದ್ಧೆ ಹೊಂದಿರಬೇಕು. ಆಟದಲ್ಲಿ ಯಶಸ್ಸು ಕಾಣಲು ಕಠಿಣವಾದ ಪರಿಶ್ರಮ ಅಗತ್ಯ ಎಂದರು.
ಬಂಕೇಶ್ವರ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ (ರಿ.) ಇದರ ಅಧ್ಯಕ್ಷ ಸತೀಶ್ ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಥಳೀಯ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮುಖ್ಯಅತಿಥಿಗಳಾಗಿ ಕ್ಲಬ್ ನ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಎಚ್ ಬಂಕೇಶ್ವರ, ಕ್ರೀಡಾಂಗಣದ ಸ್ಥಳದಾನಿ ನಿವೃತ್ತ ಶಿಕ್ಷಕ ನಾಗೇಶ್ ಜಿ ನಾಯಕ್, ಬಂಕೇಶ್ವರ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ವ್ಯವಸ್ಥಾಪಕಿ ಚಿತ್ರಾ, ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ (ರಿ.) ನ ಉಪಾಧ್ಯಕ್ಷ ಮಂಜುನಾಥ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಲಬ್ ನ ಸದಸ್ಯರಾದ ಆದೀಶ್ ಸ್ವಾಗತಿಸಿದರು, ಪಂಜು ಪೂಜಾರಿ ಪ್ರಾಸ್ತಾವಿಕ ಮಾತನಾಡಿದರು, ಶಿಕ್ಷಕ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು, ಯೋಗೀಶ್ ವಂದಿಸಿದರು.
ಸಭಾ ಕಾರ್ಯಕ್ರಮದ ಮುಂಚಿತವಾಗಿ ಹಾಗೂ ಬಳಿಕ ಬೈಂದೂರು ಖ್ಯಾತ ಗಾಯಕಿ ಗೀತಾ ಬೈಂದೂರು ಇವರಿಂದ ಮ್ಯೂಸಿಕ್ ನೈಟ್ ಹಾಗೂ ಸ್ಥಳೀಯ ಮಕ್ಕಳ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ನಡೆಯಿತು.
ವರದಿ : ಎಚ್. ಸುಶಾಂತ್ ಬೈಂದೂರು
Categories
ಗ್ರಾಮೀಣ ಬ್ಯಾಡ್ಮಿಂಟನ್

ಜೀವನದಲ್ಲಿ ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅಗತ್ಯ : ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಜಿ ನಾಯಕ್

ಬೈಂದೂರು : ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ “ಪುರುಷರ ಡಬಲ್ಸ್ ಶಟಲ್ ಪಂದ್ಯಾಟ ಎಸ್.ಎಮ್.ಬಿ.ಸಿ ಟ್ರೋಫಿ – 2020” ಶನಿವಾರ ಸಂಜೆ ಬಂಕೇಶ್ವರ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ನಡೆಯಿತು.

ಬೈಂದೂರು ಆರಕ್ಷಕ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಜಿ ನಾಯಕ್ ಸಭಾ ಕಾರ್ಯಕ್ರಮ ಹಾಗೂ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟಗಳ ಯಶಸ್ಸಿಗೆ ಸಹಕರಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಒಂದು ಒಂದು ಕಲೆ ಅಡಗಿರುತ್ತದೆ. ಸಾಕಷ್ಟು ಜನ ಕ್ರೀಡಾಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಜೀವನದಲ್ಲಿ ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅಗತ್ಯ. ಎಲ್ಲಾ ವಯೋಮಾನದವರಿಗೂ ಕ್ರೀಡೆ ದೈಹಿಕ ಕ್ಷಮತೆಯನ್ನು ಕೊಡುತ್ತದೆ ಎಂದರು.

ಕ್ಲಬ್ ನ ಗೌರವಾಧ್ಯಕ್ಷ ಉದಯ್ ಎಸ್. ಕೆ.ಆರ್.ಸಿ.ಎಲ್ ಅವರು ಮಾತನಾಡಿ, ಕಳೆದ ವರ್ಷ ಸ್ಥಾಪಿಸಿದ ಹೆಮ್ಮೆಯಿದೆ. ಕಳೆದ ವರ್ಷ ಯಾವುದೇ ದೇಣಿಗೆಯನ್ನು ಪಡೆಯದೆ ನಮ್ಮೆಲ್ಲರ ಯುವಕ ಕೈಗೊಡಿಸಿಕೊಂಡು ಶಟಲ್ ಪಂದ್ಯಾಟ ನಡೆಸಿದ್ದೇವೆ. ಆ ಕಾರ್ಯಕ್ರಮವೂ ಕೂಡಾ ಬಹಳ ಯಶ್ವಸಿಯಾಗಿದೆ. ಅದಕ್ಕೆಲ್ಲಾ ನಮ್ಮ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ನ ಪ್ರತಿಯೊಬ್ಬ ಸದಸ್ಯರು ಸಾಕಷ್ಟು ಶ್ರಮ ವಹಿಸಿದ ಕಾರಣದಿಂದ ಇಂದು ಎರಡನೇ ವರ್ಷದ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ ಎಂದರು.

ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಎಚ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.

ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಥಳೀಯ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಆಕಾಶವಾಣಿ ಮತ್ತು ದೂರದರ್ಶನ ಗಾಯಕಿ ಗೀತಾ ಬಂಕೇಶ್ವರ ಸನ್ಮಾನಿಸಲಾಯಿತು.

ಮುಖ್ಯಅತಿಥಿಗಳಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಪ್ರಭಾಕರ ಎಸ್, ಬಂಕೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪಕ ಚಿತ್ರಾ, ಸ್ಥಳದಾನಿ ನಿವೃತ್ತ ಶಿಕ್ಷಕ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕ್ಲಬ್ ನ ಸದಸ್ಯ ಸುರೇಂದ್ರ ಪೂಜಾರಿ ಸ್ವಾಗತಿಸಿ/ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಯೋಗೀಶ್ ವಂದಿಸಿದರು.

Categories
ಬ್ಯಾಡ್ಮಿಂಟನ್

ಭಾರತದ ಅನುಭವಿ ಬ್ಯಾಡ್ಮಿಂಟನ್‌ ಪಟುಗಳಾದ ಸೈನಾ, ಶ್ರೀಕಾಂತ್‌ ಮೇಲೆ ನಿರೀಕ್ಷೆ, ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇನ್ನೂ ಸಾಧ್ಯವಾಗಿಲ್ಲ

ಬ್ಯಾಂಕಾಕ್‌ : ಭಾರತದ ಅನುಭವಿ ಬ್ಯಾಡ್ಮಿಂಟನ್‌ ಪಟುಗಳಾದ ಸೈನಾ ನೆಹ್ವಾಲ್‌ ಮತ್ತು ಕಿದಂಬಿ ಶ್ರೀಕಾಂತ್‌ ಅವರಿಗೆ ಇನ್ನು ಆರು ತಿಂಗಳಲ್ಲಿ ಆರಂಭವಾಗುವ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಇನ್ನೂ ಸಾಧ್ಯವಾಗಿಲ್ಲ. ಈ ಅವಕಾಶ ಜೀವಂತವಾಗಿಟ್ಟುಕೊಳ್ಳಬೇಕಾದರೆ, ಬುಧವಾರ ಆರಂಭವಾಗುವ ಥಾಯ್ಲೆಂಡ್‌ ಮಾಸ್ಟರ್ಸ್‌ ಸೂಪರ್‌ 300 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಬೇಕಾಗಿದೆ.

ಕಳೆದ ವರ್ಷ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಕಾರಣ ಸೈನಾ ಮತ್ತು ಶ್ರೀಕಾಂತ್‌ ಅವರು ‘ವಿಶ್ವ ಬ್ಯಾಡ್ಮಿಂಟನ್‌ ಫೆಡರೇಷನ್‌ನ (ಬಿಡಬ್ಲ್ಯುಎಫ್‌) ಟೋಕಿಯೊ ರ‍್ಯಾಂಕಿಂಗ್‌’ನಲ್ಲಿ ಕ್ರಮವಾಗಿ 22 ಮತ್ತು 23ನೇ ಸ್ಥಾನದಲ್ಲಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಏಪ್ರಿಲ್‌ 26 ಅಂತಿಮ ದಿನವಾಗಿದೆ. ಥಾಯ್ಲೆಂಡ್ ಟೂರ್ನಿ ಸೇರಿದಂತೆ ಏಪ್ರಿಲ್‌ಗೆ ಮೊದಲು ಒಟ್ಟು ಎಂಟು ಟೂರ್ನಿಗಳು ಆಡಲು ಉಳಿದಿವೆ. ಈ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದರೆ ಮಾತ್ರ ಭಾರತದ ಈ ಇಬ್ಬರು ಸ್ಪರ್ಧಿಗಳಿಗೆ ಟೋಕಿಯೊಗೆ ಟಿಕೆಟ್‌ ಖಚಿತಪಡಿಸಿಕೊಳ್ಳಬಹುದು.

ಸೈನಾ ಈ ಟೂರ್ನಿಯ ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಡೆನ್ಮಾರ್ಕ್‌ನ ಲಿನೆ ಹೊಜ್‌ಮಾರ್ಕ್ ವಿರುದ್ಧ ಆಡಲಿದ್ದಾರೆ. ಶ್ರೀಕಾಂತ್‌ ಪುರುಷರ ಸಿಂಗಲ್ಸ್‌ನಲ್ಲಿ ಶೆಸರ್‌ ಹಿರೆನ್‌ ರುಸ್ಟಾವಿಟೊ ಅವರನ್ನು ಮತ್ತೆ ಎದುರಿಸಲಿದ್ದಾರೆ.

 

Categories
ಬ್ಯಾಡ್ಮಿಂಟನ್

ಕಂಚಿನಡ್ಕ ಬ್ಯಾಡ್ಮಿಂಟನ್ ಲೀಗ್: ಹೊನಲು ಬೆಳಕಿನ ಐಪಿಎಲ್ ಮಾದರಿಯ ಬ್ಯಾಡ್ಮಿಂಟನ್ ಪಂದ್ಯಾಕೂಟ

 

“ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ.ಸರಳವಾಗಿ ಸ್ವೀಕರಿಸಿದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ.ಸ್ಪರ್ಧೆಗಳಲ್ಲಿ ಭಾಗವಹಿಸಿದವರೆಲ್ಲರೂ ಗೆಲ್ಲಲು ಸಾಧ್ಯವಿಲ್ಲ,ಭಾಗವಹಿಸುವಿಕೆ ಮುಖ್ಯ”ಎಂದು ಎಂ.ಆರ್.ಜಿ ಗ್ರೂಪ್ ನ ಸಿ.ಎಂ.ಡಿ ಪ್ರಕಾಶ್ ಶೆಟ್ಟಿ ಕಂಚಿನಡ್ಕ ಬ್ಯಾಡ್ಮಿಂಟನ್ ಲೀಗ್ ಉದ್ಘಾಟಿಸಿ ಮಾತನಾಡಿದ್ದರು.

ಕೃಷ್ಣ ಬಂಗೇರ ಸಾರಥ್ಯದಲ್ಲಿ


ಪಡುಬಿದ್ರಿ ಕಂಚಿನಡ್ಕದಲ್ಲಿ ನಡೆದ ಹೊನಲು ಬೆಳಕಿನ ಐಪಿಎಲ್ ಮಾದರಿಯ ಬ್ಯಾಡ್ಮಿಂಟನ್ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿದ್ದರು.
ಶಾಸಕ ಲಾಲಾಜಿ‌.ಆರ್.ಮೆಂಡನ್ ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲೇ ಒಳಾಂಗಣ ಕ್ರೀಡಾಂಗಣವಾಗಿ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ನಿರ್ಮಿಸುವ ಯೋಜನೆಯಿದೆ ಎಂದು ಹೇಳಿದರು.

ಈ ಸಂದರ್ಭ ಇತ್ತೀಚೆಗಷ್ಟೇ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದು,
60 ನೇ ವರ್ಷದ ಸಂಭ್ರಮದಲ್ಲಿರುವ
ಎಂ.ಆರ್.ಜಿ.ಗ್ರೂಪ್ ನ ಸಿ.ಎಂ.ಡಿ ಪ್ರಕಾಶ್ ಶೆಟ್ಟಿಯವರನ್ನು,
ಆಲ್ ಇಂಡಿಯಾ ರಾಷ್ಟ್ರೀಯ ಮಟ್ಟದ ಪಂದ್ಯಾಕೂಟದ ರನ್ನರ್ಸ್ ಹಾಗೂ ಪೋಲ್ಯಾಂಡ್ ನಲ್ಲಿ ನಡೆದ
BWE ವಿಶ್ವ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಬ್ಯಾಡ್ಮಿಂಟನ್ ಪಟು ಸಂಜಯ್ ಪಡುಬಿದ್ರಿ ಹಾಗೂ ಹಳೆಯಂಗಡಿಯಲ್ಲಿ
ಟೊರ್ಪೆಡೋಸ್ ಸಂಸ್ಥೆಯನ್ನು ಕಟ್ಟಿ,ನಿರಂತರ ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸಿ,ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿ,ಕ್ರೀಡೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿರುವ ಸಮಾಜರತ್ನ,ಬಂಟರತ್ನ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಗೌತಮ್ ಶೆಟ್ಟಿ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು.

ಹೊನಲು ಬೆಳಕಿನಲ್ಲಿ ಸಾಗಿದ ಈ ಪಂದ್ಯಾವಳಿಯ ರೋಮಾಂಚಕಾರಿ ದೀರ್ಘಕಾಲದ ಹೋರಾಟದ ಬಳಿಕ ಪವನ್ ಪಾದೆಬೆಟ್ಟು ಮಾಲೀಕತ್ವದ ಎಸ್.ಪಿ.ಅಟ್ಯಾಕರ್ಸ್ ತಂಡ ,
ಪಾದೆಬೆಟ್ಟು ಪ್ರಕಾಶ್ ಮಾಲೀಕತ್ವದ ಸ್ಕಂದ ವಾರಿಯರ್ಸ್ ತಂಡವನ್ನು
12-15,9-15,15-12,12-15,15-9,15-6 ಹೀಗೆ 6 ಸೆಟ್ ಗಳ ಮುನ್ನಡೆಯೊಂದಿಗೆ ಪ್ರಥಮ ಪ್ರಶಸ್ತಿ ಪಡೆಯಿತು.


ವಿಜೇತ ತಂಡ 55,555 ನಗದು,
ರನ್ನರ್ಸ್ ತಂಡ 33,333 ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರೆ,


ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಎಸ್.ಅಟ್ಯಾಕರ್ಸ್ ನ ನಿನಾದ್,
ಬೆಸ್ಟ್ ರಿಸೀವರ್ ಸ್ಕಂದ ವಾರಿಯರ್ಸ್ ನ ಶಶನ್ ರಾಜ್,ಬೆಸ್ಟ್ ಸ್ಮ್ಯಾಶರ್ ಎಸ್.ಪಿ ಅಟ್ಯಾಕರ್ಸ್ ನ ಪ್ರವೀಣ್ ಬಜಗೋಳಿ,ಆಲ್ ರೌಡರ್ ಪ್ರಶಸ್ತಿಯನ್ನು ಸಂಜಯ್ ಪಡುಬಿದ್ರಿ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ


ಪಡುಬಿದ್ರಿ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ನ ಅಧ್ಯಕ್ಷ ನವೀನ್ ಚಂದ್ರ.ಜೆ.ಶೆಟ್ಟಿ,ಕಾಪು ಬಿ.ಜೆ.ಪಿ ಕ್ಷೇತ್ರಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಶರತ್ ಶೆಟ್ಟಿ,ಸಂಘಟಕರಾದ ಕೃಷ್ಣ ಬಂಗೇರ,ಪದ್ಮನಾಭ ಕಂಚಿನಡ್ಕ,ಲೋಹಿತಾಕ್ಷ ಸುವರ್ಣ,ಸುನಿಲ್ ಶೆಟ್ಟಿ, ತಾರಾನಾಥ ಅಮೀನ್,ಅಣ್ಣು ಕಂಚಿನಡ್ಕ, ನಿಜಾಮುದ್ದೀನ್,ಸುರೇಶ್ ಪಡುಬಿದ್ರಿ, ಹರೀಶ್ ಕಂಚಿನಡ್ಕ, ಶಂಕರ್ ಕಂಚಿನಡ್ಕ, ದಿನೇಶ್ ಪಡುಬಿದ್ರಿ,ಯೋಗೀಶ್ ಪಡುಬಿದ್ರಿ


ಉಪಸ್ಥಿತರಿದ್ದರು.
ಆರ್.ಕೆ.ಆಚಾರ್ಯ ಕೋಟ…

Categories
ಬ್ಯಾಡ್ಮಿಂಟನ್

ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ “B.T.K ಟ್ರೋಫಿ-2019”

ಪಡುಬಿದ್ರಿ ನ್ಯೂಸ್:

ಬ್ಯಾಡ್ಮಿಂಟನ್ ಟೀಮ್ ಕಂಚಿನಡ್ಕ ವತಿಯಿಂದ

ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ಬ್ಯಾಡ್ಮಿಂಟನ್ ಆಟಗಾರರನ್ನು ಒಳಗೊಂಡ ಮೂರನೆಯ ಆವೃತ್ತಿಯ ಹೊನಲು ಬೆಳಕಿನ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2019 ಪಂದ್ಯಾಟವು ಇದೇ ಬರುವ ದಿನಾಂಕ 07.12.2019 ಶನಿವಾರ ಸಂಜೆ 4:00 ಗಂಟೆಗೆ ಸರಿಯಾಗಿ ಕಂಚಿನಡ್ಕದ ಬ್ಯಾಡ್ಮಿಂಟನ್ ಕ್ರೀಡಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.

ಪ್ರಮುಖವಾಗಿ ಉಡುಪಿ ಜಿಲ್ಲಾಧಿಕಾರಿ ಶ್ರೀ ಜಗದೀಶ್,ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀ ಪ್ರಕಾಶ್ ಶೆಟ್ಟಿ (ಎಮ್ ಆರ್ ಜಿ ಗ್ರೂಪ್), ಶಾಸಕರಾದ ಶ್ರೀ ರಘುಪತಿ ಭಟ್,ಶ್ರೀ ಲಾಲಾಜಿ ಆರ್ ಮೆಂಡನ್,ವೇದವ್ಯಾಸ್ ಕಾಮತ್ ಉದ್ಯಮಿಗಳಾದ ಶ್ರೀ ಮುನಿಯಾಲು ಉದಯಕುಮಾರ್ ಶೆಟ್ಟಿ,ಸುರೇಶ್ ಶೆಟ್ಟಿ ಗುರ್ಮೆ,ಮಟ್ಟಾರು ರತ್ನಾಕರ ಹೆಗ್ಡೆ, ಶರತ್ ಶೆಟ್ಟಿ ಪಡುಬಿದ್ರಿ,ವಿನಯ್ ಕುಮಾರ್ ಸೊರಕೆ,ಯಶಪಾಲ್ ಸುವರ್ಣ ,ರಾಜಕೀಯ ಧುರೀಣರು ಈ ಉದ್ಘಾಟನ ಸಮಾರಂಭದಲ್ಲಿ ಗೌರವದ ಉಪಸ್ಥಿತರಿಲಿದ್ದಾರೆ.
ಈ ಸಮಾರಂಭದಲ್ಲಿ ಪ್ರಮುಖವಾಗಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರರಾದ ಶ್ರೀ ಸಂಜಯ್ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಯುವ ಪ್ರತಿಭಗಳಿಗೆ ಸದಾ ಪ್ರೋತ್ಸಾಹಿಗಳಾದ ಶ್ರೀ ಗೌತಮ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು.

ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ – 2019

ಸತತ 2 ವರ್ಷಗಳಿಂದ ಯಶಸ್ವಿಯಾಗಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ನಡೆಸಿದೆ. ಮೊದಲನೆಯ ಆವೃತ್ತಿಯಲ್ಲಿ ಪಡುಬಿದ್ರಿಯ ಆಟಗಾರರಿಗೆ ಸೀಮಿತವಾಗಿದ್ದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿತ್ತು.
ಎರಡನೇ ಆವೃತ್ತಿಯಲ್ಲಿ ಕಾಪು,ಹಳೆಯಂಗಡಿ, ಪಡುಬಿದ್ರಿ ಭಾಗದ ಆಟಗಾರರ ಸೀಮಿತವಾದ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ನಿರೀಕ್ಷೆಗೂ ಮೀರಿದ ಯಶಸ್ಸುಗಳಿತ್ತು.

ಈ ಭಾರಿ ಮೂರನೇ ಆವೃತ್ತಿಗೆ ದಾಪುಗಾಲು ಇಡುವ ಹೊಸ್ತಿಲಲ್ಲಿ ಒಂದು ಹೆಜ್ಜೆ ಮುಂದುವರಿಸುತ್ತ ಬಹುಬೇಡಿಕೆಯಂತೆ ಅವಿಭಜಿತ ದ.ಕ ಮತ್ತು ಉಡುಪಿ ಜಿಲ್ಲೆಯ ಆಟಗಾರರಿಗಾಗಿ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ 2019 ಆಯೋಜಿಸಲಾಗಿದೆ..


ನಿರಂತರವಾಗಿ 1 ವರ್ಷದ ಅವಧಿಯಲ್ಲಿ ಈ ಪಂದ್ಯಾಟದ ರೂಪುರೇಷೆಗಳು ಸಿದ್ಧಗೊಂಡಿರುತ್ತದೆ. ಸುಮಾರು 198 ಆಟಗಾರರು ನೋಂದಾಯಿಸಿದ್ದು ಮತ್ತು ಸುಮಾರು 20 ಕ್ಕೂ ಅಧಿಕ ಮಾಲಕರು ತಮ್ಮ ಆಸಕ್ತಿತೊರ್ಪಡಿಸಿರುತ್ತರೆ, ಆದರಲ್ಲಿ ಅಳೆದುತೂಗಿ 10 ತಂಡಗಳಿಗೆ 10 ಮಾಲಕರನ್ನು ಅದಿಕೃತಗೊಳಿಸಿರುತ್ತೇವೆ ಮತ್ತು ಹಿರಿಯ ಆಟಗಾರರ ಸಲಹೆ – ಸೂಚನೆಯಂತೆ ಪ್ರತಿಭಾನ್ವಿತ 70 ಆಟಗಾರಿಗೆ ಅವಕಾಶ ಕಲ್ಪಿಸಿ,ಅವರವರ ಪ್ರತಿಭೆ ಅನುಸಾರವಾಗಿ ಗ್ರೇಡ್ ರೀತಿಯಲ್ಲಿ ಆಟಗಾರರ ಹಂಚಿಕೆ ನಡೆಸಲಾಗಿದೆ. ಆಟಗಾರ ಹಂಚಿಕೆ ಪ್ರಕ್ರಿಯೆ ಮತ್ತು ಟ್ರೋಫಿ ಅನಾವರಣ ಸಮಾರಂಭವು 2019 ನವೆಂಬರ್ 3 ರಂದು ಅದ್ದೂರಿಯಾಗಿ ಸಮಾಪನಗೊಂಡಿದೆ.

ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳ ಮಾಲಕರು ಮತ್ತು ತಂಡಗಳ ವಿವರ

ಪಡುಬಿದ್ರಿ ಸಿ.ಎ ಬ್ಯಾಂಕ್ ನ ಅದ್ಯಕ್ಷರಾದ ಶ್ರೀ ವೈ.ಸುಧೀರ್ ಕುಮಾರ್ ಮಾಲಕತ್ವದ ನವರಂಗ್ ವಾರಿಯರ್ಸ್


ಯುವ ಉದ್ಯಮಿ ಶ್ರೀ ಪವನ್ ಪಾದೆಬೆಟ್ಟು ಮಾಲಿಕತ್ವದ ಎಸ್.ಪಿ ಆಟೇಕರ್ಸ್


ಕಾಪು ಭಾ.ಜ.ಪ ಅದ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ ಮಾಲಕತ್ವದ ಸ್ಕಂದ ವಾರಿಯರ್ಸ್.
ಯುವ ಉದ್ಯಮಿ ಶ್ರೀ ಕೃಷ್ಣ ಬಂಗೇರ ಮಾಲಿಕತ್ವದ ನಮೋ ವಾರಿಯರ್ಸ್


ಯುವ ಉದ್ಯಮಿ ಶ್ರೀ ಪ್ರತೀಕ್ ಕೋಟ್ಯಾನ್ ನೇತೃತ್ವದ ನಂದಿಕೂರು ಜವನೆರ್
ಯುವ ಉದ್ಯಮಿ ಶ್ರೀ ಪದ್ಮನಾಭ ನೇತೃತ್ವದ ಬನ್ವಿತ ಸ್ಮಾಶರ್ಸ್
ಕ.ರ.ವೇ ಜಿಲ್ಲಾಧ್ಯಕ್ಷರಾದ ಶ್ರೀ ಅನ್ಸರ್ ಅಹಮದ್ ಮಾಲಿಕತ್ವದ ತಾನಿಯ ರೆಡ್ ರಾಕರ್ಸ್.
ಯುವನಾಯಕ ಶ್ರೀ ಶಂಕರ್ ಪಡುಬಿದ್ರಿ ಮಾಲಿಕತ್ವದ ಯಶ್ ವಾರಿಯರ್ಸ್
ಅಶೋಕ್ ಶೆಟ್ಟಿ ಬೆಂಗಳೂರು ಮಾಲಿಕತ್ವದ ಶೆಟ್ಟಿ ಪೈಟರ್ಸ್
ಪ್ರಶಾಂತ್ ಎರ್ಮಾಳ್ ಮಾಲಿಕತ್ವದ ಎಸ್.ಎನ್.ಜಿ ರಾಯಲ್ಸ್

ಪಂದ್ಯಾಟದಲ್ಲಿ ಭಾಗವಹಿಸುವ ಪ್ರಮುಖ ಆಟಗಾರರು
ಪ್ರಮುಖವಾಗಿ ಈ ಭಾರಿ ರಾಷ್ಟ ಮಟ್ಟದ ಬ್ಯಾಡ್ಮಿಂಟನ್ ಆಟಗಾರರಾದ ಶ್ರೀ ಸಂಜಯ್,ಏಷ್ಯಾನ್ ಗೇಮ್ಸ್ ಆಯ್ಕೆಗೊಂಡಿರುವ ಉಜಿರೆ ಎಸ್.ಡಿ.ಎಮ್ ವಿದ್ಯಾರ್ಥಿ ಶ್ರೀ ವಿನಯ್ ಡಿ,ಆರ್, ಪ್ರತಿಭಾನ್ವಿತ ಆಟಗಾರರಾದ ಶ್ರೀ ಮನೀಶ್ ಶ್ರೀ ಮಿನ್ನ ಪಡುಬಿದ್ರಿ,ಮನೋಜ್ ಹೆಜಮಾಡಿ, ಶಿವ ಬೆಳ್ತಂಗಡಿ, ಅಜಯ್ ಶೆಟ್ಟಿ,ಪ್ರಣಮ್ ಬೆಂಗಳೂರು, ಅಶ್ರಪ್ ಪಡುಬಿದ್ರಿ, ಪ್ರದೀಪ್ ಭಟ್ ಭಾಗವಹಿಸಲಿದ್ದಾರೆ..

Categories
ಬ್ಯಾಡ್ಮಿಂಟನ್

ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ನ 5ನೇ ಆವೃತ್ತಿ, ಹಿಂದೆ ಸರಿದ ಸೈನಾ

ನವದೆಹಲಿ (ಪಿಟಿಐ): ಭಾರತದ ಪ್ರಮುಖ ಸಿಂಗಲ್ಸ್‌ ಆಟಗಾರ್ತಿ ಸೈನಾ ನೆಹ್ವಾಲ್‌ ಅವರು ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌ (ಪಿಬಿಎಲ್‌) ಐದನೇ ಆವೃತ್ತಿಯಿಂದ ಹಿಂದೆ ಸರಿದಿದ್ದಾರೆ.

ಮುಂದಿನ ಋತುವಿನಲ್ಲಿ ನಡೆಯುವ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಅವರು ಇದಕ್ಕಾಗಿ ಸೂಕ್ತ ಸಿದ್ಧತೆ ಕೈಗೊಳ್ಳುವ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದಾರೆ.

ಐದನೇ ಆವೃತ್ತಿಯ ಪಿಬಿಎಲ್‌, ಮುಂದಿನ ವರ್ಷದ ಜನವರಿ 20ರಿಂದ ಫೆಬ್ರುವರಿ 9ರವರೆಗೆ ನಡೆಯಲಿದೆ. 29 ವರ್ಷ ವಯಸ್ಸಿನ ಸೈನಾ, ಹಿಂದಿನ ಆವೃತ್ತಿಯಲ್ಲಿ ನಾರ್ತ್‌ ಈಸ್ಟರ್ನ್‌ ವಾರಿಯರ್ಸ್‌ ತಂಡದ ಪರ ಆಡಿದ್ದರು.

‘ಗಾಯ ಹಾಗೂ ಇತರ ಕಾರಣಗಳಿಂದಾಗಿ ಈ ವರ್ಷ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ನನ್ನಿಂದ ಉತ್ತಮ ಸಾಮರ್ಥ್ಯ ಮೂಡಿಬರಲಿಲ್ಲ. ಮುಂದಿನ ಋತುವಿನಲ್ಲಾದರೂ ಚೆನ್ನಾಗಿ ಆಡಿ ಪ್ರಶಸ್ತಿ ಗೆಲ್ಲಬೇಕು ಎಂದು ತೀರ್ಮಾನಿಸಿದ್ದೇನೆ. ಇದಕ್ಕಾಗಿ ಕಠಿಣ ಅಭ್ಯಾಸ ನಡೆಸಬೇಕಿದೆ. ಹೀಗಾಗಿ ಮುಂದಿನ ಆವೃತ್ತಿಯ ಪಿಬಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಇದಕ್ಕಾಗಿ ಅಭಿಮಾನಿಗಳ ಕ್ಷಮೆ ಕೇಳುತ್ತೇನೆ’ ಎಂದು ಸೈನಾ ಟ್ವೀಟ್‌ ಮಾಡಿದ್ದಾರೆ.

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿರುವ ಸೈನಾ, ಸದ್ಯ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ
ದಲ್ಲಿದ್ದಾರೆ. ಈ ವರ್ಷ ಅವರು ಒಟ್ಟು ಆರು ಟೂರ್ನಿಗಳಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದರು.

29 ವರ್ಷ ವಯಸ್ಸಿನ ಸೈನಾ, ಹಿಂದಿನ ಆವೃತ್ತಿಯಲ್ಲಿ ನಾರ್ತ್‌ ಈಸ್ಟರ್ನ್‌ ವಾರಿಯರ್ಸ್‌ ತಂಡದ ಪರ ಆಡಿದ್ದರು.