ಉಡುಪಿ-T.C.A ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್,ಜಿಲ್ಲಾ ಮಟ್ಟದ ಪಂದ್ಯಾಟದ ಪೂರ್ವಭಾವಿ ಸಭೆ ಆಗಸ್ಟ್ 26 ಶುಕ್ರವಾರ ರಾತ್ರಿ ಕೊರವಡಿ ಬೇ ನೆಸ್ಟ್ ಬೀಚ್ ಹೌಸ್ ನಲ್ಲಿ ಜರುಗಿತು.
ಸಭೆಯ ಪ್ರಾರಂಭದಲ್ಲಿ ಇತ್ತೀಚೆಗಷ್ಟೇ ನಿಧನರಾದ,T.C.A ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ ಇವರ ಧರ್ಮಪತ್ನಿ ದಿ.ಸುಲೋಚನಾ.ಎಸ್. ಶೆಟ್ಟಿ ಇವರ ಸ್ಮರಣಾರ್ಥ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ತದನಂತರ ಕೋಶಾಧಿಕಾರಿ ಪ್ರವೀಣ್ ಪಿತ್ರೋಡಿ ಇವರು T.C.A ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟದ ಲೆಕ್ಕಪತ್ರವನ್ನು ಮಂಡಿಸಿದರು.T.C.A ಅಧ್ಯಕ್ಷರಾದ ಗೌತಮ್ ಶೆಟ್ಟಿಯವರು ಮಾತನಾಡಿ “ತಾಲೂಕು ಮಟ್ಟದಲ್ಲಿ ಜಯಗಳಿಸಿದ 14 ತಂಡಗಳ ನಡುವೆ ಜಿಲ್ಲಾಮಟ್ಟದ ಪಂದ್ಯಗಳನ್ನು ಮುಂಬರುವ ನವೆಂಬರ್ ನಲ್ಲಿ ಉಡುಪಿಯಲ್ಲಿ ಅದ್ಧೂರಿಯಾಗಿ ನಡೆಸಲಾಗುವುದು ಎಂದರು.ಹಾಗೂ ತಾಲೂಕು ಮಟ್ಟದ ಪಂದ್ಯಾಟದ ಯಶಸ್ಸಿಗೆ ಕಾರಣರಾದ 7 ತಾಲೂಕಿನ ಪದಾಧಿಕಾರಿಗಳು, ಸದಸ್ಯರು ಮತ್ತು ಆಟಗಾರರಿಗೆ ಧನ್ಯವಾದ ತಿಳಿಸಿದರು.

ಈ ಸಂದರ್ಭ ಗೌರವಾಧ್ಯಕ್ಷರಾದ ಶ್ರೀಧರ್ ಶೆಟ್ಟಿ ಪ್ಯಾರಡೈಸ್ ಬನ್ನಂಜೆ,ಟಿ.ಸಿ.ಎ ಪದಾಧಿಕಾರಿಗಳಾದ ಯಾದವ್ ನಾಯಕ್ ಕೆಮ್ಮಣ್ಣು,ಪ್ರವೀಣ್ ಕುಮಾರ್ ಬೈಲೂರು,ಪ್ರವೀಣ್ ಪಿತ್ರೋಡಿ,ನಾರಾಯಣ ಶೆಟ್ಟಿ, ಸತೀಶ್ ಕೋಟ್ಯಾನ್,ಮನೋಜ್ ನಾಯರ್, ಕೆ.ಪಿ.ಸತೀಶ್,ಶ್ರೀಕಾಂತ್, ಶಿವನಾರಾಯಣ್ ಐತಾಳ್, ವಿಷ್ಣುಮೂರ್ತಿ ಉರಾಳ,ಕೋಟ ರಾಮಕೃಷ್ಣ ಆಚಾರ್,ರಾಘು ಬ್ರಹ್ಮಾವರ ಮತ್ತು ಚಂದ್ರ ಚಾಲೆಂಜ್ ಉಪಸ್ಥಿತರಿದ್ದರು.