ಭಾರತ ತಂಡವು ನಡೆಯುತ್ತಿರುವ ICC ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅಜೇಯ ತಂಡವಾಗಿದೆ . ಇಲ್ಲಿಯವರೆಗೆ ಎದುರಾಳಿಗಳನ್ನೆಲ್ಲ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ .
ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮೊದಲ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಆದರೆ ಅದಕ್ಕೂ ಮುನ್ನ ನೆದರ್‌ಲ್ಯಾಂಡ್ ತಂಡವನ್ನು ಎದುರಿಸಲಿದೆ .ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಭಾರತವು ನವೆಂಬರ್ 15 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ ಮತ್ತು ಆಸ್ಟ್ರೇಲಿಯಾ ನವೆಂಬರ್ 16 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ನಿಮ್ಮ ಮೇಲೆ ಹಳೆ ಜಿದ್ದು ಇದೆ.ಬನ್ನಿ ಈ ಬಾರಿ ತೀರಿಸುತ್ತೇವೆ ಎನ್ನುತ್ತಿದೆ ಟೀಮ್ ಇಂಡಿಯಾ. ಇದು ಸೇಡಿನ ಸಮಯ! ಇಲ್ಲಿ ಸೋತರೆ ಅವಕಾಶ ಸಿಗಲ್ಲ. ಕಾನ್ಫಿಡೆನ್ಸ್ ಓಕೆ ಆದರೆ ಓವರ್ ಕಾನ್ಫಿಡೆನ್ಸ್ ಬೇಡ. ಎರಡು ಮ್ಯಾಚ್ ವಿನ್ ಆದ್ರೆ ಕಪ್ ನಮ್ದೇ. ಈ ತರ ಅಜೇಯ ಆಗಿ ಸೋತಿದ್ದೆ ಜಾಸ್ತಿ ಭಯ ಆಗುತ್ತೆ.
ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ