ಬೆಂಗಳೂರು-ಅವಿಘ್ನ ಸೃಷ್ಟಿ ಬೆಂಗಳೂರು ತಂಡದ ಆಶ್ರಯದಲ್ಲಿ ಅಕ್ಟೋಬರ್ ನಲ್ಲಿ ಆಯೋಜಿಸಲಾಗಿದ್ದ44+ ಸೃಷ್ಟಿ ಸೀನಿಯರ್ಸ್ ಕಪ್ ಮಳೆಯಿಂದಾಗಿ ಮುಂದೂಲ್ಪಟ್ಟಿತ್ತು.ಇದೀಗ ಇಂದಿನಿಂದ ನವೆಂಬರ್ 18,19 ಮತ್ತು 20 ರಂದು ಬೆಂಗಳೂರಿನ ಮಾಕಳಿ ಸೃಷ್ಟಿ ಹುಲ್ಲುಹಾಸಿನ ಮೈದಾನದಲ್ಲಿ ಹೊನಲು ಬೆಳಕಿನಡಿಯಲ್ಲಿ ಮುಂದುವರಿಯಲಿದೆ.
ಅಕ್ಟೋಬರ್ 12 ರಂದು ನಡೆದ ಮೊದಲ ದಿನದ ಪಂದ್ಯಗಳಲ್ಲಿ ಸೃಷ್ಟಿ ಬೆಂಗಳೂರು ತಂಡ ತಾನಾಡಿದ ಎರಡೂ ಪಂದ್ಯವನ್ನು ಜಯಿಸಿ ಕ್ವಾಲಿಫೈಯರ್ ಹಂತ ಪ್ರವೇಶಿಸಿದೆ.ಫ್ಯೂಚುರಾ ಇಲೆವೆನ್ ಒಂದು ಪಂದ್ಯವನ್ನು ಜಯಿಸಿ ಕ್ವಾಲಿಫೈಯರ್ ಪ್ರವೇಶ ಪಡೆದಿದೆ.
*ಮುಂದಿನ ಪಂದ್ಯಗಳ ಸಮಗ್ರ ವಿವರ*
ಬಿ ಗ್ರೂಪ್ ನಲ್ಲಿ ಆನಂದ್ ಇಲೆವೆನ್,ರಂಗ ಇಲೆವೆನ್,
ಆರ್.ಡಿ ಇಲೆವೆನ್, ಗುರುಬ್ರಹ್ಮ ಬೆಂಗಳೂರು ತಂಡಗಳ ನಡುವಿನ ಪಂದ್ಯಗಳು ನವೆಂಬರ್ 18 ರಂದು ನಡೆಯಲಿದೆ.
ಸಿ ಗ್ರೂಪ್ ನಲ್ಲಿ ಜೈ ಕರ್ನಾಟಕ ಬೆಂಗಳೂರು,ನಾಗಾ ಇಲೆವೆನ್ ಕೆ.ಆರ್.ಪುರಂ,ಜನಪ್ರಿಯ ಬೆಂಗಳೂರು ಮತ್ತು ವೈ.ಬಿ.ಸಿ ದಾಸರಹಳ್ಳಿ ತಂಡಗಳ ನಡುವಿನ ಪಂದ್ಯಗಳು ನವೆಂಬರ್ 19 ರಂದು ನಡೆಯಲಿದೆ.
ಡಿ ಗ್ರೂಪ್ ನಲ್ಲಿ ಐಡಿಯಲ್ ಶಿವಮೊಗ್ಗ,ಚಮಕ್ ಬೆಂಗಳೂರು,ಶ್ರೀ ಬೆಂಗಳೂರು ಮತ್ತು ಫ್ರೆಂಡ್ಸ್ ಬೆಂಗಳೂರು ತಂಡಗಳ ನಡುವಿನ ಪಂದ್ಯಗಳು ಹಾಗೂ ನಿರ್ಣಾಯಕ ಹಂತದ ಪಂದ್ಯಗಳು ನವೆಂಬರ್ 20 ರವಿವಾರದಂದು ನಡೆಯಲಿದೆ.
ಡಿಸೆಂಬರ್ 31-1978 ಒಳಗಡೆ ಜನಿಸಿದ ಆಟಗಾರರಿಗೆ ಮಾತ್ರ ಆಡಲು ಅವಕಾಶವಿದ್ದು,16 ತಂಡಗಳು ಭಾಗವಹಿಸುತ್ತಿದೆ.ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿರುವ ಈ ಪಂದ್ಯಾವಳಿಯ ಪ್ರಥಮ ಬಹುಮಾನ 50 ಸಾವಿರ,ದ್ವಿತೀಯ 25 ಸಾವಿರ,ತೃತೀಯ 15 ಸಾವಿರ ಮತ್ತು ಚತುರ್ಥ 10 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.
M.Sports ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.