ಕುಶಾಲನಗರದಲ್ಲಿ ಅಕುಲ್ ಟೂರಿಸಂ ಅದ್ದೂರಿ ಕ್ರಿಕೆಟ್ ಪಂದ್ಯಾವಳಿ: ₹3 ಲಕ್ಷ ಪ್ರಥಮ ಬಹುಮಾನ

ಕುಶಾಲನಗರದಲ್ಲಿ ಅಕುಲ್ ಟೂರಿಸಂ ಅದ್ದೂರಿ ಕ್ರಿಕೆಟ್ ಪಂದ್ಯಾವಳಿ: ₹3 ಲಕ್ಷ ಪ್ರಥಮ ಬಹುಮಾನ

ಕುಶಾಲನಗರ: ಕೊಡಗು ಜಿಲ್ಲೆಯ ಕುಶಾಲನಗರದ ಜಾತ್ರೆ ಮೈದಾನದಲ್ಲಿ ಅಕುಲ್ ಟೂರಿಸಂ ವತಿಯಿಂದ ಅದ್ದೂರಿ ಅಕುಲ್ ಟೂರಿಸಂ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

ಅಕ್ಟೋಬರ್ 16ರಿಂದ 18ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ ಈ ಟೂರ್ನಮೆಂಟ್‌ನಲ್ಲಿ ಹಗಲು–ರಾತ್ರಿ ಲೀಗ್ ಪಂದ್ಯಗಳು ನಡೆಯಲಿವೆ. ITCSF ಹಾಗೂ KTCSF ಸಹಯೋಗದೊಂದಿಗೆ ಆಯೋಜಿಸಲಾಗುತ್ತಿರುವ ಈ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

“Big Prizes! Big Action! Big Dreams!” ಎಂಬ ಘೋಷವಾಕ್ಯದೊಂದಿಗೆ ನಡೆಯಲಿರುವ ಈ ಟೂರ್ನಮೆಂಟ್ ಕೊಡಗಿನ ಕ್ರಿಕೆಟ್ ಪ್ರೇಮಿಗಳಿಗೆ ಮೂರು ದಿನಗಳ ಕಾಲ ಭರ್ಜರಿ ಕ್ರೀಡಾ ಮನರಂಜನೆ ನೀಡಲಿದೆ.

ಪಂದ್ಯಾವಳಿಯ ವಿಜೇತ ತಂಡಕ್ಕೆ ₹3,00,000 ನಗದು ಹಾಗೂ ಟ್ರೋಫಿ, ರನ್ನರ್ಸ್ ಅಪ್ ಪಡೆಯುವ ತಂಡಕ್ಕೆ ₹2,00,000 ನಗದು ಹಾಗೂ ಟ್ರೋಫಿ, 3ನೇ ಸ್ಥಾನ ಪಡೆಯುವ ತಂಡಕ್ಕೆ ₹1,00,000 ನಗದು ಹಾಗೂ ಟ್ರೋಫಿ ಮತ್ತು 4ನೇ ಸ್ಥಾನ ಪಡೆಯುವ ತಂಡಕ್ಕೆ ₹50,000 ನಗದು ಹಾಗೂ ಟ್ರೋಫಿ ನೀಡಿ ಗೌರವಿಸಲಾಗುವುದು.

ವೈಯಕ್ತಿಕ ವಿಭಾಗದಲ್ಲಿ ಪ್ರತಿ ಪಂದ್ಯದ ಶ್ರೇಷ್ಠ ಆಟಗಾರನಿಗೆ (Man of the Match) ₹1,000 ನಗದು ಹಾಗೂ ಟ್ರೋಫಿ, ಅತ್ಯುತ್ತಮ ಬೌಲರ್ (Best Bowler) ಮತ್ತು ಅತ್ಯುತ್ತಮ ಬ್ಯಾಟರ್ (Best Batsman) ಅವರಿಗೆ ತಲಾ ₹5,000 ನಗದು ಹಾಗೂ ಟ್ರೋಫಿ ಮತ್ತು ಸರಣಿ ಶ್ರೇಷ್ಠ (Man of the Series) ಆಟಗಾರನಿಗೆ ₹10,000 ನಗದು ಹಾಗೂ ಟ್ರೋಫಿ ನೀಡಲಾಗುತ್ತದೆ.

ಟೂರ್ನಮೆಂಟ್‌ನಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಕ್ಕೆ ₹35,000 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಆಯೋಜಕರ ವತಿಯಿಂದಲೇ ಜೆರ್ಸಿ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಭಾಗವಹಿಸಲು ಇಚ್ಛಿಸುವ ತಂಡಗಳು ಮಾಹಿತಿಗಾಗಿ 9148330330 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

Leave a Reply

Your email address will not be published. Required fields are marked *