Categories
ಕ್ರಿಕೆಟ್

ಭಾರತದ ಸಿಂಹ ಘರ್ಜನೆ; ಇನ್ಕ್ರೆಡಿಬಲ್ ಪರ್ಫಾರ್ಮೆನ್ಸ್

ಏಕದಿನ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನ ಮಹತ್ವದ ಎನ್‌ಕೌಂಟರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಶುಭಾರಂಭ ಮಾಡಿತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಸ್ಫೋಟಕ ರೀತಿಯಲ್ಲಿ ಇನ್ನಿಂಗ್ಸ್ ಆರಂಭಿಸಿದರು. ಈ ಅವಧಿಯಲ್ಲಿ, ರೋಹಿತ್ ಶರ್ಮಾ ಮೈದಾನದ ಸುತ್ತಲೂ ಬೌಂಡರಿ ಮತ್ತು ಸಿಕ್ಸರ್ ಬಾರಿಸುವ ಕೆಲಸ ಮಾಡಿದರು. Well Played..ಕ್ಯಾಪ್ಟನ್!  Good start!
 *ಸ್ಫೋಟಕ ಆಟವಾಡಿದ ರೋಹಿತ್:* ರೋಹಿತ್ ಶರ್ಮಾ 29 ಎಸೆತಗಳಲ್ಲಿ 47 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಟಿಮ್ ಸೌದಿ ಬೌಲಿಂಗ್ ನಲ್ಲಿ ಸಿಕ್ಸರ್ ಬಾರಿಸುವ ಯತ್ನದಲ್ಲಿ ಅವರು ತಮ್ಮ ವಿಕೆಟ್ ಕಳೆದುಕೊಂಡರು. ಡೈವಿಂಗ್ ಮಾಡಿದ ಕೇನ್ ವಿಲಿಯಮ್ಸನ್ ರೋಹಿತ್ ಅವರ ಅದ್ಭುತ ಕ್ಯಾಚ್ ಪಡೆದರು. ಈ ಕ್ಯಾಚ್ ತುಂಬಾ ಕಷ್ಟಕರವಾಗಿತ್ತು ಆದರೆ ವಿಲಿಯಮ್ಸನ್ ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶಿಸಿ ಕ್ಯಾಚ್ ಹಿಡಿದರು. ರೋಹಿತ್ ಶರ್ಮಾ ರೂಪದಲ್ಲಿ ಭಾರತಕ್ಕೆ ದೊಡ್ಡ ಆಘಾತವಾಯಿತು. ರೋಹಿತ್ ಶರ್ಮಾ ಔಟಾದ ನಂತರ, ವಾಂಖೆಡೆಯಲ್ಲಿ ಪಿನ್ ಡ್ರಾಪ್ ಮೌನ ಕಂಡುಬಂದಿತು.
 *ಸಚಿನ್ ಸಮ್ಮುಖದಲ್ಲೇ ದಾಖಲೆ ಮುರಿದ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ!  ಶತಕಗಳ ಅರ್ಧಶತಕ! :* ರೋಹಿತ್ ಶರ್ಮಾ ನಂತರ ಮೈದಾನಕ್ಕೆ ಬ್ಯಾಟಿಂಗ್ ಗೆ ಬಂದ ವಿರಾಟ್ ಕೊಹ್ಲಿ ಕೂಡ ಉತ್ತಮ ಹೊಡೆತಗಳನ್ನು ಬಾರಿಸಿದರು. ವಿರಾಟ್ ಕೊಹ್ಲಿ ಎರಡನೇ ವಿಕೆಟ್‌ಗೆ ಶುಭಮನ್ ಗಿಲ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದರು. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ಕೂಡ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಮಾಡುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ, ವಿರಾಟ್ ಕೊಹ್ಲಿ ಈ ವಿಶ್ವಕಪ್‌ನಲ್ಲಿ 640 ಕ್ಕೂ ಹೆಚ್ಚು ರನ್‌ಗಳನ್ನು ಪೂರ್ಣಗೊಳಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ 594 ರನ್ ಗಳಿಸಿದ್ದರು. ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಬರೆದಿದ್ದಾರೆ. ಮುಂಬೈನಲ್ಲಿ ವಿರಾಟ್ ಅವರ ಅದ್ಭುತ ಪ್ರದರ್ಶನಕ್ಕೆ ಇಡೀ ವಾಂಖೆಡೆ ಸ್ಟೇಡಿಯಂ ಮತ್ತು  ಟೆಲಿವಿಷನ್‌ಗಳಿಗೆ ಅಂಟಿಕೊಂಡಿದ್ದ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದರು. ಕೊಯ್ಲಿ ಆಟಕ್ಕೆ ಅಭಿಮಾನಿಗಳು ಫಿದಾ ಆದರು. ಭಾರತದ ಚೇಸ್ ಮಾಸ್ಟರ್ ಸಚಿನ್ ಅವರ ಮತ್ತೊಂದು ದಾಖಲೆಯನ್ನು ಬೆನ್ನಟ್ಟಿದಾಗ ಇಡೀ ವಾಂಖೆಡೆ ಸ್ಟೇಡಿಯಂ ಹುಚ್ಚೆದ್ದು ಕುಣಿದಾಡಿತು. ಕ್ರಿಕೆಟ್ ದೇವರ ದಾಖಲೆ ಧ್ವಂಸಗೊಳಿಸಿದ ದೊರೆ ಕಿಂಗ್ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸುವ ಮೂಲಕ ಭಾರತೀಯ ಲೆಜೆಂಡ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಮೂರು ದಾಖಲೆಗಳನ್ನು ಅಳಿಸಿಹಾಕಿ ಮೂಲೆಗುಂಪು ಮಾಡಿದ್ದಾರೆ.ವಿರಾಟ್ ಕೊಹ್ಲಿ 50 ಏಕದಿನ ಶತಕ ಸಿಡಿಸಿದ ಸಾರ್ವಕಾಲಿಕ ಮೊದಲ ಬ್ಯಾಟರ್ ಆದರು.
 *ಸಾರ್ವಕಾಲಿಕ ಶ್ರೇಷ್ಠ!* 🐐 
 *ಈ ಪೀಳಿಗೆಯ ಶ್ರೇಷ್ಠ ಆಟಗಾರ!* 
 *ಆಡು ಮುಟ್ಟದ ಸೊಪ್ಪಿಲ್ಲ, ಕ್ರಿಕೆಟ್ ನ 🐐 ವಿರಾಟ್ ಕೊಹ್ಲಿ ಅಂದ್ರೂ ತಪ್ಪಿಲ್ಲ* .
ವಿಶ್ವ ಕಪ್‌ನಲ್ಲಿ ವಿರಾಟ್ ಕೊಹ್ಲಿ ಇತಿಹಾಸವನ್ನು ಸೃಷ್ಟಿಸಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ನಾನ್ ಓಪನರ್ ಅಂದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಟೂರ್ನಿಯಲ್ಲಿ ಇಷ್ಟು ರನ್ ಗಳಿಸಿದ್ದು ಇದೇ ಮೊದಲು. ಈ ಹಿಂದೆ, ವಿಶ್ವಕಪ್‌ನಲ್ಲಿ 600 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಗಳಿಸಿದಾಗ, ಆರಂಭಿಕ ಬ್ಯಾಟ್ಸ್‌ಮನ್‌ಗಳು ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಭಾರತ ಪರ ಸಚಿನ್ ತೆಂಡೂಲ್ಕರ್ ರನ್ ಗಳಿಸಿದಾಗಲೆಲ್ಲ ತಂಡದ ಪರ ಆರಂಭಿಕ ಬ್ಯಾಟ್ಸ್ ಮನ್ ಆಗಿ ಆಡುತ್ತಿದ್ದರು. ಆದರೆ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಉಳಿದುಕೊಂಡರು.ಇದರೊಂದಿಗೆ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದರು. ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿರಾಟ್ ಕೊಹ್ಲಿ ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿದ್ದಾರೆ.
 ಶ್ರೇಯಸ್ ಅಯ್ಯರ್ ಅವರು ಸದ್ದಿಲ್ಲದೆ ಏಕದಿನ ವಿಶ್ವಕಪ್‌ನಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ಮೂರನೇ ಭಾರತೀಯ ಎನಿಸಿಕೊಂಡರು.
ಮುಂಬೈನಲ್ಲಿ ಧೂo ಧಮಾಕ ಬ್ಯಾಟಿಂಗ್ ಮಾಡಿದ ಭಾರತ ಏಕದಿನ ವಿಶ್ವಕಪ್‌  ಇತಿಹಾಸ ನಾಕೌಟ್ ಪಂದ್ಯದಲ್ಲಿ ಗರಿಷ್ಠ ರನ್ ಗಳಿಸಿತು. ವಾಂಖೆಡೆಯಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ವೈಭವದಿಂದಾಗಿ ಕಿವೀಸ್‌ಗೆ ಗೆಲ್ಲಲು 398 ರನ್ ಗಳ  ಬೃಹತ್ ಗುರಿ ನೀಡಿತು. ಉತ್ತರವಾಗಿ  ನ್ಯೂಜಿಲ್ಯಾಂಡ್ ಅಪಾರ ಒತ್ತಡದಲ್ಲಿ ತತ್ತರಿಸಿತು. ಮೊಹಮ್ಮದ್ ಶಮಿ ಅಮೋಘವಾದ ಬೌಲಿಂಗ್‌ನಲ್ಲಿ  ಏಳು ವಿಕೆಟ್‌ಗಳನ್ನು ಪಡೆದರು.
2019ರ ಸೆಮಿಫೈನಲ್ ಸೋಲಿಗೆ ಟೀಮ್ ಇಂಡಿಯಾ ಪ್ರತಿಕಾರ ನೀಡಿ ಫೈನಲ್‌ಗೆ ಲಗ್ಗೆ ಇಟ್ಟಿದೆ ರೋಹಿತ್ ಬಳಗ! ಭಾರತವು ಕಮಾಂಡಿಂಗ್ ಸ್ಥಾನದಲ್ಲಿದೆ ಮತ್ತು ಅಹಮದಾಬಾದ್‌ನ ನರೇಂದ್ರ ಮೋದಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಬ್ಲಾಕ್ ಬಸ್ಟರ್  ಫೈನಲ್‌ನಲ್ಲಿ ತಮ್ಮ ದಿನಾಂಕವನ್ನು ನಿಗದಿಪಡಿಸಿದೆ.
✍🏼ಸುರೇಶ್ ಭಟ್, ಮೂಲ್ಕಿ
ಕ್ರೀಡಾ ಲೇಖಕ
ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

ಬೆಂಗಳೂರಿನಲ್ಲಿ ನಡೆಯಲಿರುವ IND vs NED ನಡುವಿನ ಪಂದ್ಯ

ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಅಂತಿಮ ಗುಂಪಿನ ಪಂದ್ಯದಲ್ಲಿ ಭಾರತ ಮತ್ತು ನೆದರ್ಲೆಂಡ್ಸ್ ನಡುವೆ ಹಣಾಹಣಿ ನಡೆಯಲಿದೆ. ಟೀಮ್ ಇಂಡಿಯಾ ಇಲ್ಲಿಯವರೆಗೆ ಅಜೇಯವಾಗಿದ್ದು ಗ್ರೂಪ್ ಹಂತವನ್ನು ಅಗ್ರಸ್ಥಾನದಲ್ಲಿ ಕೊನೆಗೊಳಿಸಲಿದೆ.ಅವರು ಕೊನೆಯ ಪಂದ್ಯವನ್ನು ಗೆಲುವಿನೊಂದಿಗೆ ಮುಗಿಸಲು ಮತ್ತು ಆ ಮೊಮೆಂಟಮ್ ನ್ನು ಮುಂದಕ್ಕೆ ಕೊಂಡೊಯ್ಯಲು ನೋಡುತ್ತಾರೆ.
ಮತ್ತೊಂದೆಡೆ, ನೆದರ್ಲ್ಯಾಂಡ್ಸ್ ಎರಡು ಪಂದ್ಯಗಳನ್ನು ಗೆದ್ದಿದೆ, ಆದರೆ ಅವರು ಈ ಆಟವನ್ನು ಗೆಲ್ಲಲು ಸಾಧ್ಯವಾದರೆ, ಅವರು ICC ಚಾಂಪಿಯನ್ಸ್ ಟ್ರೋಫಿ 2025 ಗೆ ಅರ್ಹತೆ ಪಡೆಯಬಹುದು. ಆದ್ದರಿಂದ ನಾವು ಕೊನೆಯ ಗುಂಪಿನ ಪಂದ್ಯದಲ್ಲಿ ಅವರಿಂದ ಹೋರಾಟವನ್ನು ನಿರೀಕ್ಷಿಸುತ್ತೇವೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಈ ಪಂದ್ಯ ನಡೆಯಲಿದೆ.
ಈ ಎರಡು ತಂಡಗಳು ಇದುವರೆಗೆ ಎರಡು ಏಕದಿನ ಪಂದ್ಯಗಳನ್ನು ಆಡಿವೆ. ಆ ಎರಡೂ ಪಂದ್ಯಗಳನ್ನು ಭಾರತ ಗೆದ್ದಿದೆ ಮತ್ತು ನೆದರ್ಲೆಂಡ್ಸ್ ಇನ್ನೂ ತನ್ನ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ.ಬೆಂಗಳೂರಿನ ಪಿಚ್ ಬ್ಯಾಟರ್‌ಗಳ ಕನಸಿನ ಸ್ವರ್ಗವಾಗಿದೆ. ಇಲ್ಲಿ ಸರಾಸರಿ ಸ್ಕೋರ್ ಸುಮಾರು 350 ಆಗಿದೆ. ಹಾಗಾಗಿ ಎರಡೂ ತಂಡಗಳು ದೊಡ್ಡ ಮೊತ್ತವನ್ನು ದಾಖಲಿಸಲು ನೋಡುತ್ತವೆ ಮತ್ತು ಬೌಲರ್‌ಗಳು ಇಲ್ಲಿ  ಶಾರ್ಟ್ ಬೌಂಡರಿಸ್ ಗಳೊಂದಿಗೆ ಬೌಲ್ ಮಾಡಲು ಒತ್ತಡಕ್ಕೆ ಒಳಗಾಗುತ್ತಾರೆ.
ಭಾನುವಾರ ಬೆಂಗಳೂರಿನಲ್ಲಿ ನಡೆಯಲಿರುವ ಟೂರ್ನಿಯ ಅಂತಿಮ ಗುಂಪು ಪಂದ್ಯ , ಬೆಂಚ್ ಬಲವನ್ನು ಪರೀಕ್ಷಿಸಲು ಇದು ಸೂಕ್ತ ಪಂದ್ಯವಾಗಿದ್ದು, ಭಾರತವು ತಮ್ಮ ತಂಡದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.ನೆದರ್ಲ್ಯಾಂಡ್ಸ್ ಈಗಾಗಲೇ ಔಟ್-ಆಫ್-ಫಾರ್ಮ್ ಅಗ್ರ-ಆರ್ಡರ್ ಅನ್ನು ಹೊಂದಿದೆ  ಹೀಗಾಗಿ ಭಾರತದ ಬೌಲರ್ ಗಳು ಇದನ್ನು ಬಳಸಿಕೊಳ್ಳಬಹುದು.
✍️ ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

🔴 ಕುಗ್ಗದೆ ಜಗ್ಗದೆ..ನುಗ್ಗಿ ನಡೆ ಮುಂದೆ ಇಂಡಿಯಾ!

ಭಾರತ ತಂಡವು ನಡೆಯುತ್ತಿರುವ ICC ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಅಜೇಯ ತಂಡವಾಗಿದೆ . ಇಲ್ಲಿಯವರೆಗೆ ಎದುರಾಳಿಗಳನ್ನೆಲ್ಲ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ .
ನವೆಂಬರ್ 15 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮೊದಲ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಆದರೆ ಅದಕ್ಕೂ ಮುನ್ನ ನೆದರ್‌ಲ್ಯಾಂಡ್‌ ತಂಡವನ್ನು ಎದುರಿಸಲಿದೆ .ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಭಾರತವು ನವೆಂಬರ್ 15 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸಲಿದೆ ಮತ್ತು ಆಸ್ಟ್ರೇಲಿಯಾ ನವೆಂಬರ್ 16 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ನಿಮ್ಮ ಮೇಲೆ ಹಳೆ ಜಿದ್ದು ಇದೆ.ಬನ್ನಿ ಈ ಬಾರಿ ತೀರಿಸುತ್ತೇವೆ ಎನ್ನುತ್ತಿದೆ ಟೀಮ್ ಇಂಡಿಯಾ. ಇದು ಸೇಡಿನ ಸಮಯ! 🤞 ಇಲ್ಲಿ ಸೋತರೆ ಅವಕಾಶ ಸಿಗಲ್ಲ. ಕಾನ್ಫಿಡೆನ್ಸ್ ಓಕೆ ಆದರೆ ಓವರ್ ಕಾನ್ಫಿಡೆನ್ಸ್ ಬೇಡ. ಎರಡು ಮ್ಯಾಚ್ ವಿನ್ ಆದ್ರೆ ಕಪ್ ನಮ್ದೇ. ಈ ತರ ಅಜೇಯ ಆಗಿ ಸೋತಿದ್ದೆ ಜಾಸ್ತಿ ಭಯ ಆಗುತ್ತೆ.
✍️ ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

ಭಾರತ ವಿಶ್ವಕಪ್ ವಿಜಯಕ್ಕೆ ಎರಡೇ ಮೆಟ್ಟಿಲು ಬಾಕಿ

ಈ ಬಾರಿ ಭಾರತ ಕಪ್ ಗೆಲ್ಲದಿದ್ದರೆ ಮುಂದೆ ಗೆಲ್ಲೋದು ಯಾವಾಗ? 
——————————————–
ವಿಶ್ವಕಪ್ 2023ರ ಲೀಗ್ ಹಂತದ ಪಂದ್ಯಗಳು ಈಗಾಗಲೇ ಮುಕ್ತಾಯದ ಹಂತದಲ್ಲಿವೆ. ಭಾರತಕ್ಕೆ ಈ ವಾರಾಂತ್ಯದಲ್ಲಿ ನೆದರ್ಲೆಂಡ್ ಜೊತೆಗೆ ಒಂದು ಔಪಚಾರಿಕ ಪಂದ್ಯ ಬಾಕಿ ಇದೆ. ಅದರಲ್ಲಿ ಒಂದಿಷ್ಟು ಪ್ರಯೋಗಗಳನ್ನು ಮಾಡಲು ಕೋಚ್ ರಾಹುಲ್ ದ್ರಾವಿಡ್ ಮನಸ್ಸು ಮಾಡಬಹುದು. ಟೇಬಲ್ ಟಾಪ್ ಆಗುವುದರ ಜೊತೆಗೆ ಅತೀ ಹೆಚ್ಚು ಸರಾಸರಿ ಕೂಡ ಪಡೆದು ಸೆಮೀಸ್ ಪ್ರವೇಶ ಮಾಡಿದ ಭಾರತೀಯ ಕ್ರಿಕೆಟ್ ತಂಡದ ಸಾಧನೆಯ ಬಗ್ಗೆ ಎಷ್ಟು ಬರೆದರೂ ಅದು ಕಡಿಮೆಯೇ ಆಗಬಹುದು.
ಭಾರತಕ್ಕೆ ಇದೆ ಉಜ್ವಲವಾದ ಗೆಲ್ಲುವ ಅವಕಾಶ. 
—————————————-
ಭಾರತದ ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳ ಮುಂದೆ ಮೈಕ್ ಹಿಡಿದು ಗೆಲ್ಲುವ ಟೀಮ್ ಯಾವುದು ಎಂದು ಕೇಳಿದರೂ ಎಲ್ಲರ ಉತ್ತರ ಭಾರತ ಮತ್ತು ಭಾರತವೇ ಆಗಿರುತ್ತದೆ!
ಅದಕ್ಕೆ ಕಾರಣ ಭಾರತ ಲೀಗ್ ಹಂತದ ಪಂದ್ಯಗಳನ್ನು ಅನಾಯಾಸವಾಗಿ ಗೆದ್ದ ರೀತಿ. ಭಾರತಕ್ಕೆ ಈ ಬಾರಿ ವಿಶ್ವಕಪ್ಪಿನ ಯಾವ ಟೀಮ್ ಕೂಡ ಸವಾಲೇ ಆಗಲಿಲ್ಲ. ಭಾರೀ ದೊಡ್ಡ ಸವಾಲು ಎಂದು ನಿರೀಕ್ಷೆ ಮೂಡಿಸಿದ ದಕ್ಷಿಣ ಆಫ್ರಿಕಾ ಕೋಲ್ಕತ್ತಾದಲ್ಲಿ 83ಕ್ಕೆ ಆಲೌಟ್ ಆದದ್ದು, ಶ್ರೀಲಂಕಾ ತಂಡ 55ಕ್ಕೆ ಕುಸಿದದ್ದು ಇಡೀ ಕ್ರಿಕೆಟ್ ಜಗತ್ತನ್ನು ನಿಬ್ಬೆರಗು ಮೂಡಿದೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ರನ್ನಿಗೆ ಮೂರು ವಿಕೆಟ್ ಪತನವಾಗಿ ಕುಸಿದು ಹೋಗಿದ್ದ ಟೀಮ್ ಇಂಡಿಯಾ ವಿರಾಟ್ ಕೋಹ್ಲಿ ಮತ್ತು ಕೆ ಎಲ್ ರಾಹುಲ್ ಅವರ ಸ್ಮರಣೀಯವಾದ ಜೊತೆಯಾಟದ ಮೂಲಕ ಕಮ್ ಬ್ಯಾಕ್ ಮಾಡಿ ಮ್ಯಾಚ್ ಗೆದ್ದಾಗಲೆ ಭಾರತೀಯ ತಂಡ ಈ ಬಾರಿ ಫೇವರಿಟ್ ಟೀಮ್ ಆಗಿ ಮೂಡಿತ್ತು. ಅಲ್ಲಿಂದ ಭಾರತಕ್ಕೆ ಎಲ್ಲವೂ ಸಲೀಸು. ಸ್ವಲ್ಪ ಬೆವರು ಹರಿಸಿದ್ದು ನ್ಯೂಜಿಲೆಂಡ್ ವಿರುದ್ಧದ ಪಂದ್ಯ. ಅದನ್ನೂ ಭಾರತ ಐದು ವಿಕೆಟ್ ಅಂತರದಲ್ಲಿ ಗೆದ್ದಿತ್ತು. ಈ ಬಾರಿಯ ಅಚ್ಚರಿಯ ತಂಡ ಆಗಿದ್ದ ಅಫ್ಘಾನಿಸ್ತಾನ್ ಕೂಡ ಭಾರತಕ್ಕೆ ಎಂಟು ವಿಕೆಟ್ ಅಂತರದಲ್ಲಿ ಶರಣಾಗಿತ್ತು. ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಭಾರತ ಪಾಕಿಸ್ತಾನ ಪಂದ್ಯ ಕೂಡ ಏಕಪಕ್ಷೀಯ ಆಗಿ ಮುಗಿಯಿತು. ಭಾರತಕ್ಕೆ ಅಲ್ಲಿ ಕೂಡ ಏಳು ವಿಕೆಟ್ ಜಯ. ಪಾಕಿಸ್ತಾನದ ಸ್ಟಾರ್ ಆಟಗಾರರು ರೋಹಿತ್ ಪಡೆಯ ಮುಂದೆ ಮಂಕಾಗಿ ಹೋದರು.
ಭಾರತದ ಎಲ್ಲ ಆಟಗಾರರೂ ಅದ್ಭುತ ಫಾರ್ಮನಲ್ಲಿ ಇದ್ದಾರೆ.
——————————————
ಸಾಮಾನ್ಯವಾಗಿ ಹೊಸ ಪ್ರಯೋಗಗಳಿಗೆ ಹೆಸರಾದ ಕೋಚ್ ರಾಹುಲ್ ದ್ರಾವಿಡ್ ಇಲ್ಲಿ ಹೆಚ್ಚು ಪ್ರಯೋಗ ಮಾಡಲು ಹೋಗಿಲ್ಲ ಎನ್ನುವುದೇ ತಂಡಕ್ಕೆ ಪ್ಲಸ್. ಯಾವಾಗ ಟೀಮ್ ಮ್ಯಾನೇಜಮೆಂಟ್ ಮತ್ತು ಕೋಚ್ ತಂಡದ ಆಟಗಾರರ ನೈತಿಕ ಬೆಂಬಲಕ್ಕೆ ನಿಲ್ಲುತ್ತಾರೆಯೋ ಆಗ ಎಲ್ಲಾ ಆಟಗಾರರೂ ಜೀವ ಬಿಟ್ಟು ಆಡುತ್ತಾರೆ. ಈ ಬಾರಿ ಆದದ್ದೂ ಹಾಗೆಯೇ! ಭಾರತದ ಟಾಪ್ ಫೋರ್ ಬ್ಯಾಟರುಗಳು( ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್) ಭಾರೀ ಫಾರ್ಮ್ನಲ್ಲಿ ಇದ್ದಾರೆ ಅನ್ನೋದು ಭಾರತಕ್ಕೆ ಪ್ಲಸ್. ಈ ನಾಲ್ವರಲ್ಲಿ ಒಬಿಬ್ಬರು ವಿಫಲರಾದರೂ ಉಳಿದಿಬ್ಬರು ಕೊನೆಯತನಕ ಲಂಗರು ಹೊಡೆದು ನಿಲ್ಲುತ್ತಾರೆ ಅನ್ನುವುದು ಲೀಗ್ ಪಂದ್ಯಗಳಲ್ಲಿ ಸಾಬೀತಾಗಿದೆ. ಆರಂಭಿಕರು ಪವರ್ ಪ್ಲೇಯ ಭರ್ಜರಿ ಲಾಭ ಎತುತ್ತಿದ್ದಾರೆ ಅನ್ನೋದು ಭಾರತಕ್ಕೆ ಗ್ರೇಟ್ ನ್ಯೂಸ್. ಕೆ ಎಲ್ ರಾಹುಲ್ ಅವರಿಂದ ಮಿಡಲ್ ಆರ್ಡರ್ ಸ್ಟ್ರಾಂಗ್ ಆಗಿದೆ.
ಸೂರ್ಯಕುಮಾರ್ ಯಾದವ್ ಸ್ವಲ್ಪ ಎಡವಟ್ಟು ಮಾಡದೆ ಆಡಿದರೆ ರನ್ ರೇಟ್ ಭಾರೀ ಹೈಪ್ ಆಗುತ್ತದೆ. ಈ ಬಾರಿ ಅಚ್ಚರಿ ಹುಟ್ಟಿಸಿದ್ದು ರವೀಂದ್ರ ಜಡೇಜಾ ಅವರ ಫಾರ್ಮ್. ಅವರು ಒಬ್ಬ ಯಶಸ್ವೀ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾರೆ. ಇದೆಲ್ಲವೂ ಭಾರತಕ್ಕೆ ಬ್ಯಾಟಿಂಗ್ ವಿಭಾಗದ ಪ್ಲಸ್ ಅಂಶಗಳು. ಅದರಲ್ಲಿಯೂ ರೋಹಿತ್ ಶರ್ಮ ಹತ್ತು ಓವರ್  ಆಡಿದರೂ ಎದುರಾಳಿಗಳ ಫೀಲ್ಡಿಂಗ್ ಚದುರಿಸಿಬಿಡುವ ಸಾಮರ್ಥ್ಯ ಹೊಂದಿದ್ದಾರೆ. ವಿಶ್ವದ  ರಾಂಕ್ ಒನ್ ಬ್ಯಾಟರ್ ಶುಭಮನ ಗಿಲ್ ನಿಂತು ಆಡುತ್ತಿದ್ದಾರೆ.
ವಿರಾಟ್ ಕೊಹ್ಲಿ ಲೆಜೆಂಡ್ ಆಟಗಾರ, ಗೆಲುವಿನ ರೂವಾರಿ.
——————————————–
2011ರ ವಿಶ್ವಕಪ್ ಭಾರತ ಗೆದ್ದಾಗ ಅದು ಸಚಿನ್ ತೆಂಡೂಲ್ಕರ್ ಅವರ ಕೊನೆಯ ವಿಶ್ವಕಪ್ ಆಗಿತ್ತು. ಆಗ ಸಚಿನ್ ಅವರನ್ನು ತನ್ನ ಬಲಿಷ್ಠ ಭುಜಗಳ ಮೇಲೆ ಕೂರಿಸಿ ಇಡೀ ಸ್ಟೇಡಿಯಂ ಸುತ್ತು ಬಂದವರು ಇದೇ ವಿರಾಟ್ ಕೊಹ್ಲಿ. ಆ ದೃಶ್ಯವನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ! ಈಗ ಅದೇ ಕೊಹ್ಲಿ ಸಚಿನ್ ಅವರ ಉತ್ತರಾಧಿಕಾರಿ ಆಗಿ ಕಂಡುಬರುತ್ತಿದ್ದಾರೆ. ಈ ಬಾರಿ ಕೊಹ್ಲಿ ಸಾಕಷ್ಟು ಮಾಗಿದ್ದಾರೆ. ಸನ್ನಿವೇಶಕ್ಕೆ ಸರಿಯಾಗಿ ಆಡುವುದನ್ನು ಕಲಿತಿದ್ದಾರೆ. ಅವಸರದಲ್ಲಿ ವಿಕೆಟ್ ಚೆಲ್ಲಿ ಬರುತ್ತಿದ್ದ ವಿರಾಟ್ ಈ ಬಾರಿಯ ಟೂರ್ನಿಯಲ್ಲಿ ಕಾಣಲೇ ಇಲ್ಲ. ಈ ಬಾರಿಯ ಲೀಗ್ ಪಂದ್ಯಗಳಲ್ಲಿ ಪ್ರತೀ ಒಂದು ಪಂದ್ಯದಲ್ಲಿಯೂ (ಒಂದೆರಡು ಪಂದ್ಯ ಹೊರತುಪಡಿಸಿ) ವಿರಾಟ್ ಕೋಹ್ಲಿ ತಮ್ಮ ವಿರಾಟ್ ರೂಪವನ್ನು ತೋರಿಸಿದ್ದಾರೆ. ಟೂರ್ನಿಯ ಮೂರನೇ ಅತೀ ಹೆಚ್ಚು ಸ್ಕೋರರ್ ಆಗಿದ್ದಾರೆ. ಚೇಸ್ ಮಾಸ್ಟರ್ ಆಗಿ ಶೈನ್ ಆಗಿದ್ದಾರೆ. ಆಕ್ರಮಣಕಾರಿ ಆಗಿ ಗ್ರೌಂಡಿನಲ್ಲಿ ಎಲ್ಲೆಡೆ ಹಾರಾಡುತ್ತಿದ್ದ ಕೋಹ್ಲಿ ಈ ಬಾರಿ ತಣ್ಣಗಿನ ಜ್ವಾಲಾಮುಖಿ ಆಗಿದ್ದಾರೆ. ಈ ವಿಶ್ವಕಪ್ ಕೂಟದಲ್ಲಿಯೇ ವಿರಾಟ್ ಕೊಹ್ಲಿ ಸಚಿನ್ ಅವರ ಶತಕಗಳ ದಾಖಲೆ ಮುರಿಯುತ್ತಾರೆ ಎಂದು ಕ್ರಿಕೆಟ್ ಅಭಿಮಾನಿಗಳು ಚಾತಕಪಕ್ಷಿಗಳಂತೆ ಕಾಯುತ್ತಿದ್ದಾರೆ. ವಿರಾಟ್ ಅವರನ್ನು ಖಂಡಿತ ನಿರಾಸೆ ಮಾಡುವುದಿಲ್ಲ ಅನ್ನೋದು ನಮ್ಮ ಭರವಸೆ. ವಿರಾಟ್ ಕೋಹ್ಲಿ ಮುಂದೆ ಬರಲಿರುವ ಭಾರತೀಯ ಕ್ರಿಕೆಟ್ ಆಟಗಾರರಿಗೆ ಒಬ್ಬ ಅದ್ಭುತ ಐಕಾನ್ ಆಟಗಾರ ಆಗಿ ನಿಲ್ಲುವುದು ಗ್ಯಾರಂಟೀ.
ಭಾರೀ ಸ್ಟ್ರಾಂಗ್ ಆದ ಬೌಲಿಂಗ್ ಬ್ಯಾಟರಿ! 
——————————————–
ಈ ಹಿಂದಿನ ಯಾವ ವಿಶ್ವಮಟ್ಟದ ಟೂರ್ನಿಯಲ್ಲಿಯು ಭಾರತದ ಬೌಲಿಂಗ್ ಬ್ಯಾಟರಿಯು ಇಷ್ಟೊಂದು ಸ್ಟ್ರಾಂಗ್ ಆಗಿರಲಿಲ್ಲ ಅನ್ನೋದು ಎಲ್ಲರ ಅಭಿಪ್ರಾಯ. ಬುಮ್ರಾ ಸರ್ಜರಿ ಮುಗಿಸಿಕೊಂಡು ಬಂದ ನಂತರ ಎದುರಾಳಿ ಬ್ಯಾಟರಗಳಿಗೆ ಸಿಡಿಲೆ ಆಗಿದ್ದಾರೆ. ಮೊಹಮ್ಮದ್ ಸಿರಾಜ್ ಪವರ್ ಪ್ಲೆ ಹಂತದಲ್ಲಿ ಸುಲಭವಾಗಿ ವಿಕೆಟ್ ಪಡೆಯುತ್ತಿದ್ದಾರೆ. ಮೊದಲ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಂಡ ಮೊಹಮ್ಮದ್ ಶಮ್ಮೀ ಈ ಬಾರಿ ಭಾರತದ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ. ಅವರ ಸ್ವಿಂಗ್ ಎಸೆತಗಳಿಗೆ ಈ ಬಾರಿ ಯಾವ ಆಟಗಾರರೂ ಉತ್ತರ ನೀಡಿಲ್ಲ! ಇದರಿಂದಾಗಿ ಭಾರತ ತಂಡದಲ್ಲಿ ಹಾರ್ದಿಕ ಪಾಂಡ್ಯ ಅವರ ಗೈರು ಹಾಜರಿ ಕಾಡಲಿಲ್ಲ! ಇನ್ನು ಇಬ್ಬರು ಸ್ಪಿನ್ ಬೌಲರಗಳು ತಮ್ಮ ಅತ್ಯುತ್ತಮ ಲಯದಲ್ಲಿ ಇದ್ದಾರೆ. ರವೀಂದ್ರ ಜಡೇಜಾ ಹೆಚ್ಚು ಕಡಿಮೆ ಎಲ್ಲಾ ಪಂದ್ಯಗಳಲ್ಲಿಯು ವಿಕೆಟ್ ಗೊಂಚಲು ಕಿತ್ತಿದ್ದಾರೆ. ಚೈನಾಮನ್ ಬೌಲರ್ ಕುಲದೀಪ್ ಯಾದವ್ ಇನ್ನೂ ಎದುರಾಳಿ ಬ್ಯಾಟರಗಳಿಗೆ ಸಸ್ಪೆನ್ಸ್ ಆಗಿದ್ದಾರೆ. ಈ ಐದೇ ಬೌಲರಗಳು ಮಿಂಚುತ್ತಿರುವ ಕಾರಣ ಪಾರ್ಟ್ ಟೈಮ್ ಬೌಲರ್ ಅಗತ್ಯವೇ ಭಾರತಕ್ಕೆ ಬೀಳಲಿಲ್ಲ. ಸೆಮೀಸ್ ಹೊತ್ತಿಗೆ ರವಿಚಂದ್ರನ್ ಅಶ್ವಿನ್ ಅಥವಾ ಪ್ರಸಿದ್ಧ ಕೃಷ್ಣ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ಅಶ್ವಿನ್ ಬಂದರೆ ಭಾರತದ ಬೌಲಿಂಗ್ ಇನ್ನಷ್ಟು ಘಾತಕ ಆಗುವ ಸಾಧ್ಯತೆ ಇದೆ.
ಕೆ ಎಲ್ ರಾಹುಲ್ ವಿಕೆಟ್ ಕೀಪಿಂಗ್ ಚೆನ್ನಾಗಿ ಮಾಡುವ ಕಾರಣ ಭಾರತೀಯ ಫೀಲ್ಡಿಂಗ್ ಈ ಬಾರಿ ಅತ್ಯುತ್ತಮ ಆಗಿಯೇ ಇದೆ. ರೋಹಿತ್ ಶರ್ಮಾ ಅವರ ನಾಯಕತ್ವ, ಅವರ ಬೌಲಿಂಗ್ ಬದಲಾವಣೆ, ಫೀಲ್ಡ್ ಸೆಟ್ ಭಾರತವನ್ನು ಸಲೀಸಾಗಿ ಗೆಲ್ಲಿಸುತ್ತಿದೆ. ಭಾರತ ಮೊದಲು ಬ್ಯಾಟ್ ಮಾಡಿ ಅಥವಾ ಚೇಸ್ ಮಾಡಿ ಎರಡೂ ವಿಭಾಗಗಳಲ್ಲಿ ಗೆದ್ದಿದೆ ಅನ್ನೋದು ಆಡೆಡ್ ಅಡ್ವಾಂಟೇಜ್! ಅದೃಷ್ಟವೂ ಭಾರತದ ಕಡೆಗಿದೆ ಅನ್ನೋದು ಮೇಲ್ನೋಟಕ್ಕೆ ಕಾಣುತ್ತದೆ.
ಭರತವಾಕ್ಯ 
—————-
1983ರಲ್ಲಿ ವಿಶ್ವಕಪ್ ಗೆದ್ದ ಕಪಿಲ್ ದೇವ್ ಪಡೆ ಮತ್ತು 2011ರಲ್ಲೀ ಗೆದ್ದ ಧೋನಿ ಪಡೆಗಿಂತ ಈ ಬಾರಿಯ ಟೀಮ್ ಇಂಡಿಯಾ ತುಂಬಾ ಬಲಿಷ್ಠ ಆಗಿದೆ. ತಂಡದಲ್ಲಿ ಮೆಚ್ಟುರಿಟಿ ಎದ್ದು ಕಾಣುತ್ತಿದೆ. ಟೀಮ್ ಸ್ಪಿರಿಟ್ ತುಂಬಾ ಸ್ಟ್ರಾಂಗ್ ಇದೆ. ಅದರಲ್ಲಿಯೂ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರಿಗೆ ಇದು ಕೊನೆಯ ವಿಶ್ವಕಪ್ ಎನ್ನುವ ಭಾವನಾತ್ಮಕ ಅಂಶವೇ ಭಾರತವನ್ನು ಗೆಲುವಿನ ಕಡೆಗೆ ಮುನ್ನಡೆಸುತ್ತದೆ. ಲೀಗ್ ಪಂದ್ಯಗಳಲ್ಲಿ ಭಾರತವು ಎಲ್ಲಾ ತಂಡಗಳನ್ನು ಅಧಿಕಾರಯುತವಾಗಿ ಸೋಲಿಸಿರುವ ಕಾರಣ ಅವುಗಳು ಮುಂದೆ ಭಾರತದ ವಿರುದ್ಧ ಆಡುವಾಗ ಭಯದಲ್ಲಿಯೆ ಆಡುತ್ತವೆ ಅನ್ನೋದು ಕಾಮನ್ ಸೆನ್ಸ್. ಇದು ಕೂಡ ಭಾರತಕ್ಕೆ ಪ್ಲಸ್.
ಗೆದ್ದು ಬಾ ಭಾರತ. ಆಲ್ ದ ಬೆಸ್ಟ್. 
ರಾಜೇಂದ್ರ ಭಟ್ ಕೆ.
Categories
ಕ್ರಿಕೆಟ್

ಹರಿಣಗಳ ಮೇಲೆ ಭಾರತದ ಸವಾರಿ, ಮುಂದುವರಿದ ಅಜೇಯ ಜೈತ್ರಯಾತ್ರೆ!

ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 243 ರನ್‌ಗಳಿಂದ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಭಾರತದ ಬೌಲಿಂಗ್ ತಂಡವು ಪ್ರಾಬಲ್ಯ ಸಾಧಿಸಿದೆ ಮತ್ತು ದಕ್ಷಿಣ ಆಫ್ರಿಕಾವನ್ನು ಕೇವಲ 83 ರನ್‌ಗಳಿಗೆ ಆಲೌಟ್ ಮಾಡಿದೆ.
ಈಡನ್ ಗಾರ್ಡನ್‌ನಲ್ಲಿ ದಕ್ಷಿಣ ಆಫ್ರಿಕಾಕ್ಕೆ 327 ರನ್‌ಗಳ ಗುರಿ ನೀಡಲಾಯಿತು ಆದರೆ ಭಾರತೀಯ ಬೌಲರ್‌ಗಳ ವಿರುದ್ಧ ದಯನೀಯವಾಗಿ ವಿಫಲವಾಯಿತು. ರವೀಂದ್ರ ಜಡೇಜಾ ಅವರ 5 ವಿಕೆಟ್ ಗಳಿಕೆ ಮತ್ತು ವಿರಾಟ್ ಕೊಹ್ಲಿ ಅವರ ಶತಕವು ಸೆಮಿಫೈನಲ್‌ಗೆ ಕಾಲಿಡುವ ದಕ್ಷಿಣ ಆಫ್ರಿಕಾದ ಆತ್ಮವಿಶ್ವಾಸವನ್ನು ಕುಗ್ಗಿಸಲು ಸಾಕಾಗಿತ್ತು. ವಿರಾಟ್ ಕೊಹ್ಲಿ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು ಮತ್ತು ಸಚಿನ್ ಅವರ ವಿಶ್ವ ದಾಖಲೆಯನ್ನು ಸರಿಗಟ್ಟಲು ತಮ್ಮ 49 ನೇ ಏಕದಿನ ಶತಕವನ್ನು ಹೊಡೆದರು.
 *ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮಿಂಚು; ಭಾರತಕ್ಕೆ ಸುಲಭ ತುತ್ತಾದ ಬಲಿಷ್ಠ ದಕ್ಷಿಣ ಆಫ್ರಿಕಾ*
ವಿಶ್ವಕಪ್‌ನಲ್ಲಿ ಭಾರತ ತಂಡದ ಅಬ್ಬರ ಮುಂದುವರಿದಿದೆ.  ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಸತತ ಎಂಟನೇ ಗೆಲುವು ದಾಖಲಿಸಿದೆ.ದಕ್ಷಿಣ ಆಫ್ರಿಕಾ ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ಭಾರತ ತಂಡದ ಬಲಿಷ್ಠ ಬೌಲಿಂಗ್ ತೋರಿತು. 83 ರನ್ ಗಳಿಸುವಷ್ಟರಲ್ಲಿ ಆಫ್ರಿಕಾ ತಂಡ ಔಟಾಯಿತು. ಟೀಂ ಇಂಡಿಯಾ ಪರ ಜಡೇಜಾ ಗರಿಷ್ಠ 5 ವಿಕೆಟ್ ಪಡೆದಿದ್ದಾರೆ. ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಸತತ ಎಂಟನೇ ಗೆಲುವಿನೊಂದಿಗೆ ಟೀಂ ಇಂಡಿಯಾ ತನ್ನ ಹಳೆಯ ದಾಖಲೆಯನ್ನು ಸರಿಗಟ್ಟಿದೆ. 2003ರ ವಿಶ್ವಕಪ್‌ನಲ್ಲಿ ಭಾರತ ಸತತ ಎಂಟು ಪಂದ್ಯಗಳನ್ನು ಗೆದ್ದಿತ್ತು. ಭಾರತದ ಗೆಲುವಿನ ಯಾತ್ರೆ ಮುಂದುವರೆದಿದೆ.
🔴 ಟೀಂ ಇಂಡಿಯಾ ರಾಕಿಂಗ್! 🇮🇳👏   
  ✍️ ಸುರೇಶ್ ಭಟ್, ಮೂಲ್ಕಿ
ಕಂಟೆಂಟ್ ಕ್ರಿಯೇಟರ್
ಸ್ಪೋರ್ಟ್ಸ್ ಕನ್ನಡ. ಕಾಮ್
Categories
ಕ್ರಿಕೆಟ್

🔴ಸೋಲಿಲ್ಲದ ಸರದಾರರು!🧨 ನಾವೇ ಟಾಪ್…!

ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಎನ್ಕೌಂಟರ್  ಆಡಲಾಯಿತು.
ತನ್ನ ಐದೂ ಪಂದ್ಯಗಳನ್ನು ಗೆದ್ದು ಗೆಲುವಿನ ನಾಗಾಲೋಟದಲ್ಲಿದ ಟೀಮ್ ಇಂಡಿಯಾ, ಇಂಗ್ಲೆಂಡ್ ತಂಡದೊಂದಿಗೆ ಮುಖಾಮುಖಿಯಾಗಿ ಸೆಣಸಾಡುವ  ಪಂದ್ಯ ಹೈ-ವೋಲ್ಟೇಜ್ ಘರ್ಷಣೆ ಎಂದು ನಿರೀಕ್ಷಿಸಲಾಗಿತ್ತು
ನಾಯಕನಾಗಿ ರೋಹಿತ್ ಶರ್ಮ ಗೆ 100ನೇ ಪಂದ್ಯವಾಗಿತ್ತು. ನಾಯಕತ್ವದ ನೂರನೇ ಪಂದ್ಯದಲ್ಲಿ  ಇದು ಹಿಟ್‌ಮ್ಯಾನ್ ಅವರ ಹೊಸ ಸಾಧನೆ! ಹೊಸ ಮೈಲಿಗಲ್ಲು..!  ಈ ಪಂದ್ಯದಲ್ಲಿ ರೋಹಿತ್ 18,000 ಅಂತರಾಷ್ಟ್ರೀಯ ರನ್ ಕಂಪ್ಲೀಟ್ ಮಾಡಿ ಈ ಮೈಲುಗಲ್ಲು ತಲುಪಿದ ಐದನೆಯ ಭಾರತೀಯ ಅನಿಸಿಕೊಂಡರು. ಅಲ್ಲದೆ  ರೋಹಿತ್ ಶರ್ಮಾ ಅವರು 2023ರಲ್ಲಿ ಏಕದಿನ ಪಂದ್ಯಗಳಲ್ಲಿ 1000 ರನ್ ಪೂರ್ಣಗೊಳಿಸಿದ ಎರಡನೇ ಭಾರತೀಯ ಬ್ಯಾಟರ್ ಎನಿಸಿದರು.
ಈ  ನಿರೀಕ್ಷಿತ ಹಣಾಹಣಿಯ ರೋಚಕ ಸ್ಪರ್ಧೆಯಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.ಭಾರತ ತಂಡದ ಆರಂಭ ಕಳಪೆಯಾಗಿತ್ತು ಸ್ಲೋ ಪಿಚ್ ನಲ್ಲಿ ಕ್ವಾಲಿಟಿ ಇನ್ನಿಂಗ್ಸ್ ಆಡಿದ ನಾಯಕನ ಆಟ ಭಾರತದ ಬ್ಯಾಟಿಂಗ್ ಕುಸಿತಕ್ಕೆ ತಡೆಯಾಯಿತು. ರೋಹಿತ್ ಜೊತೆ ಕೆ ಎಲ್ ಸಾಥ್ ನೀಡಿದರು ಹಾಗೂ ಕೆಳ ಕ್ರಮಾಂಕದಲ್ಲಿ ಸೂರ್ಯ ಶೈನ್ ಆದರು.  ಒತ್ತಡದಲ್ಲಿ ನಾಯಕನ ನಾಕ್ ಆಡಿದ ರೋಹಿತ್ 101 ಎಸೆತಗಳಲ್ಲಿ 87 ರನ್ ಗಳಿಸುವ ಮೂಲಕ ಪಂದ್ಯದಲ್ಲಿ ಅತಿಥೇಯರ ಪರ ಅಗ್ರ ರನ್ ಗಳಿಸಿದ ಆಟಗಾರರಾದರು.ಸೂರ್ಯಕುಮಾರ್ ಯಾದವ್ 49 ರನ್ ಗಳಿಸಿದರೆ, ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಕೂಡ ಅಮೂಲ್ಯ 39 ರನ್ ಕೊಡುಗೆ ನೀಡಿದರು. ನಾಲ್ಕನೇ ವಿಕೆಟ್‌ಗೆ 91 ರನ್‌ಗಳ ಜೊತೆಯಾಟವನ್ನು ರೂಪಿಸಿದ ರಾಹುಲ್ ಮತ್ತು ಶರ್ಮಾ ತಮ್ಮ ತಂಡಕ್ಕಾಗಿ ಅಸ್ತವ್ಯಸ್ತವಾಗಿ  ಮುಳುಗುತ್ತಿದ್ದ ಹಡಗನ್ನು ನೀರಿನಿಂದ ಹೊರಹಾಕಿದರು. ನಿಧಾನಗತಿಯ ಪಿಚ್ ನಲ್ಲಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ ಭಾರತ ಇಂಗ್ಲೆಂಡ್‌ಗೆ ಗೆಲ್ಲಲು 230 ರನ್‌ಗಳ ಗುರಿ ನೀಡಿತು.
 *🔴 ವಿಕೆಟ್ಸ್ ಗಾನ್! ಬೇಟೆ ಶುರೂ!!🔥
ಕೌಂಟರ್ ಇನ್ನಿಂಗ್ಸ್‌ನಲ್ಲಿ ಆಡುವಾಗ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಒಬ್ಬರ ನಂತರ ಒಬ್ಬರಂತೆ ಔಟಾಗುತ್ತಲೇ ಇದ್ದರು. ಭಾರತದ ‘ವೇಗ’ಕ್ಕೆ  ಆಂಗ್ಲರ ಟಾಪ್ ಆರ್ಡರ್ ಹಾರಿ ಹೋಯಿತು.  ಬುಮ್ರಾ- ಶಮಿ  ಶರವೇಗದ ದಾಳಿ ಭಾರತಕ್ಕೆ ಮಾಸ್ ಆರಂಭ ನೀಡಿತು. ಬುಮ್ರಾ- ಶಮಿ ಉರಿ ದಾಳಿಗೆ ಬೆದರಿದ ಆಂಗ್ಲರ ಟಾಪ್ ನಾಲ್ಕು ಬ್ಯಾಟ್ಸಮನ್ ಗಳು ಔಟ್ ಆಗಿ ಇಂಗ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು.  ಬಳಿಕ ಕುಲ್ದೀಪ್ ಸ್ಪಿನ್ ಸುಳಿಗೆ  ಬಟ್ಲರ್‌ ದಂಗಾದರು. ಶಮಿ  ತನ್ನ ಉರಿ ದಾಳಿಯಿಂದ ನಾಲ್ಕು ವಿಕೆಟ್ಸ್ ಕಬಳಿಸಿ ಸೂಪರ್ ಹೀರೋ ಆದರು. ಕ್ರಿಕೆಟ್ ಜನಕರಿಗೂ ತಟ್ಟಿದ ‘ಶಮಿ’ ಕಾಟದಿಂದಾಗಿ  ಭಾರತದ ಅಜೇಯ ಓಟ ಮುಂದುವರೆದಿದೆ. ಮೂರು ವಿಕೆಟ್ ಗಳಿಸಿದ ಬೂಂ ಬೂಂ ಬುಮ್ರಾ ಎದುರಾಳಿಗೆ ‌ಸಿಂಹಸ್ವಪ್ನರಾದರು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 34.5 ಓವರ್ ಗಳಲ್ಲಿ ಕೇವಲ 129 ರನ್ ಗಳಿಗೆ ಸೀಮಿತವಾಗಿ ಹೀನಾಯ ಸೋಲು ಅನುಭವಿಸಿತು.  ಸುಲಭ ಜಯ ದಾಖಲಿಸಿದ  ಟೀಂ ಇಂಡಿಯಾ ತಂಡ ಇಂಗ್ಲೆಂಡ್ ತಂಡವನ್ನು 100 ರನ್‌ಗಳ ಬೃಹತ್ ಅಂತರದಿಂದ ಸೋಲಿಸುವ ಮೂಲಕ ಟೂರ್ನಿಯಿಂದ ಬಹುತೇಕ ಹೊರಹಾಕಿದೆ. ಈ ಗೆಲುವಿನೊಂದಿಗೆ ಭಾರತ ಟೂರ್ನಿಯಲ್ಲಿ ಆರನೇ ಜಯ ದಾಖಲಿಸಿದೆ.
ಆಂಗ್ಲರ  ಮೇಲೆ ಭಾರತದ ಪವರ್ ತೋರಿಸಿದ  ರೋಹಿತ್ ಪಡೆ ಇಂಗ್ಲೆಂಡ್ ರಿಟರ್ನ್ ಟಿಕೆಟ್ ಕನ್ಫರ್ಮ್ ಮಾಡಿದ್ದಾರೆ.  ಹಾಲಿ ಚಾಂಪಿಯನ್  ಇಂಗ್ಲೆಂಡ್ ಅನ್ನು 100 ರನ್‌ಗಳಿಂದ ಸೋಲಿಸುವ ಮೂಲಕ ಟೀಮ್ ಇಂಡಿಯಾದ ಸೆಮಿಫೈನಲ್‌ನ ಹಾದಿ ಸುಲಭವಾಗಿದೆ  ಮತ್ತು ಸತತ ಆರನೇ ಗೆಲುವಿನ ಅಪ್ಪುಗೆ ಭಾರತಕ್ಕೆ ಸಿಕ್ಕಿದೆ. ಭಾರತ ತಂಡ ವಿಶ್ವಕಪ್ ನಲ್ಲಿ ಗೆಲುವಿನ ಅಭಿಯಾನ ಮುಂದುವರಿಸಿದೆ.ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಅಂಕಪಟ್ಟಿಯಲ್ಲಿ ಮತ್ತೆ ನಂಬರ್ ಒನ್ ಕಿರೀಟವನ್ನು ತನ್ನದಾಗಿಸಿಕೊಂಡಿದೆ.
✍️ ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

ಲಂಕಾದ ಎದುರು ಮಂಕಾದ ಆಂಗ್ಲರು! ಆಟವನ್ನೇ ಮರೆತರಾ ಹಾಲಿ ಚಾಂಪಿಯನ್ಸ್..?

ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ದ್ವೀಪ ರಾಷ್ಟ್ರ ಶ್ರೀಲಂಕಾ ವಿರುದ್ಧ ಕ್ರಿಕೆಟ್ ಜನಕ ಇಂಗ್ಲೆಂಡ್ ಮತ್ತೊಮ್ಮೆ ತಮ್ಮನ್ನು ಸೆಳೆಯುವಲ್ಲಿ ವಿಫಲವಾಗಿದೆ.
ಇಂಗ್ಲೆಂಡ್‌ನ ಮಧ್ಯಮ ಕ್ರಮಾಂಕವು ಫ್ಲಾಪ್ ಆಯಿತು ಮತ್ತು ಯಾರೂ ಜೊತೆಯಾಟವನ್ನು ಸೇರಿಸಲು ಮತ್ತು ಅವರ ಇನ್ನಿಂಗ್ಸ್ ಅನ್ನು ಸ್ಥಿರಗೊಳಿಸಲು ಪ್ರಯತ್ನಿಸಲು ಸಾಧ್ಯವಾಗಲಿಲ್ಲ.ಇಂಗ್ಲೆಂಡ್‌ಗೆ ಶಾಕ್ ನೀಡಿದ ಲಂಕಾ 2023ರ ಐಸಿಸಿ ಏಕದಿನ ವಿಶ್ವಕಪ್‌ನ 25ನೇ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ.
 *ಸೆಮಿಫೈನಲ್‌ನಿಂದ ಹೊರಬೀಳುವ ಅಂಚಿನಲ್ಲಿರುವ ವಿಶ್ವ ಚಾಂಪಿಯನ್ ಬಟ್ಲರ್ ಸೇನೆಯ ದುಸ್ಥಿತಿಗೆ ಕಾರಣವೇನು!*
ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡ ವಿಶ್ವಕಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡುತ್ತಿದೆ. ವಿಶ್ವಕಪ್‌ನ ಆರಂಭಕ್ಕೂ ಮುನ್ನ ಇಂಗ್ಲೆಂಡ್‌ ಪ್ರಶಸ್ತಿ ಗೆಲ್ಲುವ ದೊಡ್ಡ ಸ್ಪರ್ಧಿ ಎಂದು ಪರಿಗಣಿಸಲಾಗಿತ್ತು. 2019ರ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಈ ಟೂರ್ನಿಯಲ್ಲಿ ತನ್ನ ಬ್ಯಾಟಿಂಗ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದೆ. ಇಡೀ ಟೂರ್ನಿಯಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಬಣ್ಣರಹಿತವಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ನಾಯಕ ಜೋಸ್ ಬಟ್ಲರ್ ಬ್ಯಾಟ್ ಮೌನವಾಗಿದೆ.
ಕಳೆದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋತಿರುವ ಇಂಗ್ಲೆಂಡ್ ತಂಡಕ್ಕೆ ಶ್ರೀಲಂಕಾ ವಿರುದ್ಧ ಗೆಲುವು ದಾಖಲಿಸುವುದು ಅತ್ಯಂತ ಮಹತ್ವದ್ದಾಗಿತ್ತು.ಶ್ರೀಲಂಕಾ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 156 ರನ್‌ಗಳಿಗೆ ಕುಸಿದಿತ್ತು. ಇಂತಹ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ಗೆ ಈ ಪಂದ್ಯ ಗೆಲ್ಲುವುದು ತುಂಬಾ ಕಷ್ಟ ಎನಿಸಿತು. ಇಲ್ಲಿ ಇಂಗ್ಲೆಂಡ್ ತಂಡ ಸೋತು ಸೆಮಿಫೈನಲ್ ಹಾದಿ ಬಹುತೇಕ ಮುಚ್ಚಿದೆ.
 *ಇಂಗ್ಲೆಂಡ್ ಗೆ ಹಿನ್ನಡೆ:*
ಟೂರ್ನಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದ್ದ ಇಂಗ್ಲೆಂಡ್ ತಂಡ ಅಫ್ಘಾನಿಸ್ತಾನ, ದಕ್ಷಿಣ ಆಫ್ರಿಕಾ ತಂಡಗಳಿಂದ ಸೋಲು ಅನುಭವಿಸಬೇಕಾಯಿತು.ದಿಟ್ಟ ಪ್ರದರ್ಶನ ನೀಡಿದ  ಶ್ರೀಲಂಕಾ  ಮುಂದೆ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳು ತೀರಾ ಸಾಮಾನ್ಯರಂತೆ ಕಾಣುತ್ತಿದ್ದರು. ಇಂಗ್ಲೆಂಡ್‌ನ ಕಳಪೆ ಪ್ರದರ್ಶನಕ್ಕೆ ಅವರ ಬ್ಯಾಟ್ಸ್‌ಮನ್‌ಗಳು ಔಟ್ ಆಫ್ ಫಾರ್ಮ್‌ ಕಾರಣವೆಂದು ಹೇಳಬಹುದು.
ಇಂಗ್ಲೆಂಡ್ ಪರ ಡೇವಿಡ್ ಮಲಾನ್, ಜಾನಿ ಬೈರ್‌ಸ್ಟೋ, ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಅವರಂತಹ ಬ್ಯಾಟ್ಸ್‌ಮನ್‌ಗಳು ಫಾರ್ಮ್‌ನಲ್ಲಿ ಕಾಣಿಸಿಕೊಂಡಿಲ್ಲ. ಈ ಬ್ಯಾಟ್ಸ್‌ಮನ್‌ಗಳು ಫಾರ್ಮ್‌ನಿಂದ ಹೊರಗುಳಿದ ಕಾರಣ ಇಂಗ್ಲೆಂಡ್ ಸತತ ಸೋಲುಗಳನ್ನು ಎದುರಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣವೆಂದರೆ ಇಂಗ್ಲೆಂಡ್ ತಂಡವು ODI ಸ್ವರೂಪವನ್ನು ಕಡಿಮೆ ಮಾಡಲು ಪ್ರಾರಂಭಿಸಿದೆ. ಇಂಗ್ಲೆಂಡ್ ಆಟಗಾರರು ಟಿ-20 ಮತ್ತು ದೇಶೀಯ ಟೂರ್ನಿಗಳ ಮೇಲೆ ಹೆಚ್ಚು ಗಮನ ಹರಿಸಿದ್ದಾರೆ. ಇದರಿಂದಾಗಿ ಏಕದಿನ ಮಾದರಿಯಲ್ಲಿ ಅವರ ಆಟದ ಮೇಲೆ ಪರಿಣಾಮ ಬೀರಿದೆ.
 *ಸೆಮಿಫೈನಲ್ ತಲುಪುವುದು ಕಷ್ಟ:*
ಶ್ರೀಲಂಕಾ ವಿರುದ್ಧ ಇಂಗ್ಲೆಂಡ್ ತಂಡ ಸೋಲು ಕಂಡು ಇಂಗ್ಲೆಂಡ್ ಗೆ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಇಂಗ್ಲೆಂಡ್ ತಂಡ ಇದುವರೆಗೆ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಬಾಂಗ್ಲಾದೇಶ ವಿರುದ್ಧ ಇಂಗ್ಲೆಂಡ್ ಜಯ ಸಾಧಿಸಿತ್ತು. ಇದಾದ ಬಳಿಕ ಇಂಗ್ಲೆಂಡ್ ಯಾವುದೇ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿರಲಿಲ್ಲ.  ಇಂಗ್ಲೆಂಡ್ ತನ್ನ ಮುಂದಿನ ಪಂದ್ಯವನ್ನು ಭಾರತದ ವಿರುದ್ಧ ಆಡಬೇಕಾಗಿದೆ.
✍️ ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ
Categories
ಕ್ರಿಕೆಟ್

2019ರ ಸೋಲಿನ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

India vs New Zealand Updates : 2019ರ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದ ಕಿವೀಸ್ ವಿರುದ್ದ ಸೇಡು ತೀರಿಸಿಕೊಳ್ಳಲು  ಭಾರತ ತಂಡ ಕಾಯುತ್ತಿತ್ತು.ವಿಶ್ವಕಪ್‌ 2023ರ 21ನೇ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಿತು.
ಧರ್ಮಶಾಲಾ ಕ್ರೀಡಾಂಗಣ ಭಾರತ-ಕಿವೀಸ್‌  ಮುಖಾಮುಖಿಯ  ರೋಚಕ ಪಂದ್ಯಕ್ಕೆ ಸಾಕ್ಷಿಯಾಯಿತು. 2019ರ ವಿಶ್ವಕಪ್‌ ಸೆಮಿ ಫೈನಲ್‌ನಲ್ಲಿ ಟೀಂ ಇಂಡಿಯಾವನ್ನು ಸೋಲಿಸಿ ಕಿವೀಸ್ ಫೈನಲ್ ಪ್ರವೇಶಿಸಿತ್ತು. ಹೀಗಾಗಿ 20 ವರ್ಷಗಳ ಬಳಿಕ ಕಿವೀಸ್ ಪಡೆಯನ್ನ ಸೋಲಿಸಲೇಬೇಕೆಂದು ರೋಹಿತ್ ಅಂಡ್ ಟೀಂ ಪಣತೊಟ್ಟಿತ್ತು. ಈಗ ಆ ಸೋಲಿನ ಸೇಡು ತೀರಿಸಿಕೊಂಡು  ಭಾರತ ತಂಡ ಬೀಗುತ್ತಿದೆ.
ಅಂಕಪಟ್ಟಿಯಲ್ಲಿ ನಂಬರ್ ವನ್
ಸ್ಥಾನ ಉಳಿಸಿಕೊಳ್ಳಲು ನ್ಯೂಜಿಲೆಂಡ್ ಪಣ ತೊಟ್ಟಿದ್ರೆ, ಭಾರತ ಕಿವೀಸ್‌ ಸೋಲಿಸಿ ಪಾರಮ್ಯ ಮೆರೆಯಲು ಸನ್ನದ್ದವಾಗಿತ್ತು. ಎರಡು ತಂಡಗಳ ನಡುವೆ ಹಾವು ಏಣಿ ಆಟ ಶುರುವಾಗಿ, ಗೆದ್ದು ನಂಬರ್ 1 ಸ್ಥಾನದಲ್ಲಿ ಮುಂದುವರೆದಿದೆ  ರೋಹಿತ್ ಪಡೆ.
ರೋಹಿತ್ ಬಳಗ ರೋರಿಂಗ್ ಆರಂಭ ನೀಡಿತ್ತು.
ವಿರಾಟ್ ಕೊಹ್ಲಿ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ದಾಂಡಿಗರ ಸಾಂಘಿಕ ಪ್ರದರ್ಶನದಿಂದಾಗಿ
ಭಾರತದ ಅಜೇಯ ಓಟ ಮುಂದುವರೆದಿದೆ!
ಹೀಗೆ ಮುಂದುವರೆಯಲಿ….
✍ ಸುರೇಶ್ ಭಟ್, ಮುಲ್ಕಿ
ಟೀಮ್ ಸ್ಪೋರ್ಟ್ಸ್ ಕನ್ನಡ