ಉಡುಪಿ: ಸೆಪ್ಟೆಂಬರ್ 19ರಂದು ಡ್ರಗ್ ಫ್ರೀ ಉಡುಪಿ ನೈಟ್ ರನ್

ಉಡುಪಿ: ಸೆಪ್ಟೆಂಬರ್ 19ರಂದು ಡ್ರಗ್ ಫ್ರೀ ಉಡುಪಿ ನೈಟ್ ರನ್

ಉಡುಪಿ: ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅವರ ಸಹಯೋಗದಲ್ಲಿ, ಉಡುಪಿ ರನ್ನರ್ಸ್ ಕ್ಲಬ್ (R) ವತಿಯಿಂದ ‘ನೈಟ್ ರನ್ – ಡ್ರಗ್ ಫ್ರೀ ಉಡುಪಿ’ ಕಾರ್ಯಕ್ರಮದ 3ನೇ ಆವೃತ್ತಿಯನ್ನು ಸೆಪ್ಟೆಂಬರ್ 19ರಂದು ರಾತ್ರಿ 8.30ಕ್ಕೆ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವುದು, ವಿಶೇಷವಾಗಿ ಯುವಜನರನ್ನು ಮಾದಕ ವ್ಯಸನದಿಂದ ದೂರವಿರಿಸಿ ಕ್ರೀಡೆ, ಆರೋಗ್ಯ ಮತ್ತು ಸಕಾರಾತ್ಮಕ ಜೀವನಶೈಲಿಯತ್ತ ಪ್ರೇರೇಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.

14 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದಾಗಿದ್ದು, 250 ಮಂದಿಗೆ ಮಾತ್ರ ಅವಕಾಶವಿದೆ. ಓಟದ ಮೂಲಕ ‘ಡ್ರಗ್ ಫ್ರೀ ಉಡುಪಿ’ ಎಂಬ ಬಲವಾದ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶ ಹೊಂದಲಾಗಿದೆ.

Leave a Reply

Your email address will not be published. Required fields are marked *