ವಿದ್ಯೆಯ ಜೊತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ: ಹರಿ ಪ್ರಸಾದ್ ರೈ

ವಿದ್ಯೆಯ ಜೊತೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಿ: ಹರಿ ಪ್ರಸಾದ್ ರೈ

ಬ್ರಹ್ಮಾವರ: ಇಲ್ಲಿನ ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿ‌ನಾಚರಣೆ ಕ್ಲಬ್ ನ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಜರುಗಿತು.

ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ,ಯುವ ಜನಾಂಗ ಸೋಷಿಯಲ್‌ ಮೀಡಿಯಾ ಮತ್ತು ಮತ್ತು ಮೊಬೈಲ್ ನಲ್ಲಿ ತಮ್ಮ ಸಮಯವನ್ನು ಕಳೆಯದೇ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ ಎಂದರು.

ಉಡುಪಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ್ ರೈ ಮಾತನಾಡಿ “ವಿದ್ಯೆಯ ಜೊತೆ ಕ್ರೀಡೆಯಲ್ಲಿಯೂ ತೊಡಗಿಸಿಕೊಂಡರೆ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ” ಎಂದರು.

ಸ್ಪೋರ್ಟ್ಸ್ ಕ್ಲಬ್ ನ ಗೌರವಾಧ್ಯಕ್ಷ ಎಂ‌.ಚಂದ್ರಶೇಖರ್ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಕ್ಲಬ್ ನ ಅಧ್ಯಕ್ಷ ಬಿಜು ನಾಯರ್ ಪಾಲ್ಗೊಂಡಿದ್ದರು.ಈ ಸಂದರ್ಭ ಕ್ರೀಡಾ ತರಬೇತುದಾರರಾದ ಶಾಲಿನಿ.ಆರ್.ಶೆಟ್ಟಿ ಮತ್ತು ಎಸ್.ಎಂ.ಜಹೀರ್ ಅಬ್ಬಾಸ್ ಅವರನ್ನು ಗೌರವಿಸಲಾಯಿತು.

ಉದ್ಯಮಿ ಸತೀಶ್ ಶೆಟ್ಟಿ,ಗೌರವ ಕಾರ್ಯದರ್ಶಿ ಗ್ರೆಗರಿ ಡಿಸಿಲ್ವಾ,ಕಾರ್ಯದರ್ಶಿ ಮೇಜರ್ ಬಾಲಕೃಷ್ಣ ಶೆಟ್ಟಿ, ಖಜಾಂಚಿ ವಿಕ್ರಮ್ ಪ್ರಭು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರೌಢಶಾಲೆ ಮತ್ತು ಪದವಿಪೂರ್ವ ಮತ್ತು ಕಾಲೇಜು ವಿಭಾಗಗಳಲ್ಲಿ ಕ್ರೀಡೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ 28 ಕ್ರೀಡಾಪಟುಗಳಿಗೆ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಇಬ್ಬರು ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ನೀಡಲಾಯಿತು.

ಸ್ವಾತಿ ಪ್ರಾರ್ಥಿಸಿದರು,ಎಂ.ಚಂದ್ರಶೇಖರ್ ಹೆಗ್ಡೆ ಸ್ವಾಗತಿಸಿದರು.ಗ್ರೆಗೋರಿ ಡಿಸಿಲ್ವಾ ಆರೂರು,ಶ್ರೀಧರ್ ಶೆಟ್ಟಿ,ಜೇಮ್ಸ್‌ ಒಲಿವೆರಾ ಸಾಧಕರ ಪಟ್ಟಿ ವಾಚಿಸಿದರು.ಸುಶೀಲಾ ರೈ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *