ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಸೆಮಿಫೈನಲ್ ರೇಸ್‌ನಿಂದ ಪಾಕಿಸ್ತಾನ ಹೊರಬಿದ್ದಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನೊಂದಿಗೆ ಪಾಕಿಸ್ತಾನ 2023ರ ಐಸಿಸಿ ಕ್ರಿಕೆಟ್ ಸೆಮಿಫೈನಲ್ ಅರ್ಹತೆಯನ್ನು ಕಳೆದುಕೊಂಡು ವಿಶ್ವಕಪ್‌ಗೆ ವಿದಾಯ ಹೇಳಲಿದೆ. ಇಂಗ್ಲೆಂಡ್ ತನ್ನ ಅಂತಿಮ ಲೀಗ್ ಸುತ್ತಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 93 ರನ್‌ಗಳಿಂದ ಸೋಲಿಸಿದೆ.
ಪವಾಡದ ನಿರೀಕ್ಷೆಯಲ್ಲಿದ್ದ ಪಾಕ್‌ಗೆ ಇಂಗ್ಲೆಂಡ್ ಶಾಕ್ ನೀಡಿ 4ನೇ ತಂಡವಾಗಿ ಸೆಮಿಫೈನಲ್‌ಗೆ ಕಿವೀಸ್ ಲಗ್ಗೆಯಿಟ್ಟಿದೆ. ಸೆಮಿಫೈನಲ್ ಸುತ್ತಿಗೆ ಪ್ರವೇಶಿಸಲು ಪಾಕಿಸ್ತಾನಕ್ಕೆ ಇಂಗ್ಲೆಂಡ್ ವಿರುದ್ಧ ದೊಡ್ಡ ಜಯದ ಅಗತ್ಯವಿತ್ತು. ಆದರೆ ಅವರು ಶೋಚನೀಯವಾಗಿ ವಿಫಲರಾದರು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಭಾರಿ ಗುರಿ ನೀಡಿತು. ಇಂಗ್ಲೆಂಡ್ ಬೌಲಿಂಗ್ ನಲ್ಲಿ ಪಾಕಿಸ್ತಾನವನ್ನು 244 ರನ್ ಗಳಿಗೆ ಆಲೌಟ್ ಮಾಡಿತು. ಪಾಕಿಸ್ತಾನ ಕ್ರಿಕೆಟ್ ತಂಡವು ಪಂದ್ಯಾವಳಿಯಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಒಳಗಾಗಿದೆ. ಪಾಕಿಸ್ತಾನದ ಬೌಲರ್‌ಗಳು ಬಹುತೇಕ ಪಂದ್ಯಗಳಲ್ಲಿ ರನ್ ಹರಿವಿಗೆ ಕಡಿವಾಣ ಹಾಕಲು ವಿಫಲರಾಗಿದ್ದಾರೆ. ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ 533 ರನ್‌ಗಳನ್ನು ಬಿಟ್ಟುಕೊಟ್ಟ ಪಾಕಿಸ್ತಾನದ ಅತ್ಯಂತ ದುಬಾರಿ ಬೌಲರ್ ಆಗಿದ್ದಾರೆ. ಅವರ ಕೆಲವು ಆಕ್ಷನ್-ಪ್ಯಾಕ್ಡ್ ಬೌಲಿಂಗ್ ಪ್ರಯತ್ನಗಳನ್ನು ಎದುರು ನೋಡುತ್ತಿರುವ ಪ್ರತಿಯೊಬ್ಬರನ್ನು ನಿರಾಶೆಗೊಳಿಸಿದ್ದಾರೆ.
Bye Bye Pakistan….
ಏನಂತೀರಾ ಫ್ರೆಂಡ್ಸ್..?
ಸುರೇಶ್ ಭಟ್, ಮೂಲ್ಕಿ
ಟೀಂ ಸ್ಪೋರ್ಟ್ಸ್ ಕನ್ನಡ