ಜಾನ್ಸನ್ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಅದ್ಧೂರಿಯ ಚಾಲನೆ.
ಕುಂದಾಪುರ-ಇಲ್ಲಿನ ಗಾಂಧಿ ಮೈದಾನದಲ್ಲಿ ಆಯೋಜಿಸಲಾದ ಜಾನ್ಸನ್ ಟ್ರೋಫಿ-2022 ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಗೆ ಅದ್ಧೂರಿಯ ಚಾಲನೆ ದೊರಕಿದೆ.
ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಯುತ ಬಿ.ಎಮ್.ಸುಕುಮಾರ್ ಶೆಟ್ಟಿ ಬಲೂನ್ ಹಾರಿಸಿ ಬಿಡುವುದರ ಮೂಲಕ ಪಂದ್ಯಾಟ ಉದ್ಘಾಟಿಸಿ ಮಾತನಾಡಿ “ಕ್ರೀಡೆ ಯುವಕರನ್ನುಒಗ್ಗೂಡಿಸಿ,
ಉತ್ಸಾಹ ಮೂಡಿಸಿ,ಜೀವಕಳೆಯನ್ನು ತುಂಬುತ್ತದೆ.
ಜಾನ್ಸನ್ ಕುಂದಾಪುರ ತಂಡ ಕ್ರೀಡೆ ಮಾತ್ರವಲ್ಲದೇ ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿ ಕೊಂಡು ಜಿಲ್ಲೆಯ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ” ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಸಹನಾ ಗ್ರೂಪ್ಸ್ ನ ಸುರೇಂದ್ರ ಶೆಟ್ಟಿ ಮಾತನಾಡಿ “ಕ್ರೀಡಾಪಟುಗಳು ಸೋಲು,ಗೆಲುವನ್ನು ಸಮಾನವಾಗಿ ಸ್ವೀಕರಿಸಿ,ಸೋತಾಗ ಕುಗ್ಗದೆ,ಗೆದ್ದಾಗ ಹಿಗ್ಗದೆ ಸಮಭಾವದಿಂದ ಬದುಕನ್ನು ರೂಪಿಸಿಕೊಂಡರೆ ಯಶಸ್ಸು ಖಂಡಿತ” ಎಂದರು.
ಉದ್ಯಮಿ ದಿನೇಶ್ ಹೆಗ್ಡೆ ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಕೋಟ ರಾಮಕೃಷ್ಣ ಆಚಾರ್ ಪಂದ್ಯಾವಳಿಗೆ ಶುಭಹಾರೈಸಿದರು.
ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೈದ ಪ್ರಥ್ವೀರಾಜ್ ಶೆಟ್ಟಿ ಹುಂಚನಿ ಮತ್ತು ಸಮಾಜಸೇವೆಯಲ್ಲಿ ಗುರುತಿಸಿ ಕೊಂಡ ಕ್ರೀಡಾಪಟು ಪ್ರಶಾಂತ್ ಪಡುಕರೆ ಇವರನ್ನು ಸನ್ಮಾನಿಸಲಾಯಿತು.
*ಕಾಂತಾರ ಮಾದರಿಯ ವಿಶಿಷ್ಟ ಟ್ರೋಫಿ ಅನಾವರಣ*
ಉದ್ಘಾಟನೆಯ ಬಳಿಕ ಜಾನ್ಸನ್ ಟ್ರೋಫಿ ಪಂದ್ಯಾವಳಿಗೆ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾದ ಕಾಂತಾರ ಮಾದರಿಯ ಟ್ರೋಫಿಯನ್ನು,ರಾಟೆ ತಿರುಗಿಸಿ,ಆಕರ್ಷಕ ಘಂಟಾ ಕವಚವನ್ನು ತೆರೆಯುವ ಮೂಲಕ ವಿಶಿಷ್ಟವಾಗಿ ಟ್ರೋಫಿ ಅನಾವರಣಗೊಳಿಸಲಾಯಿತು.
ಈ ಸಂದರ್ಭ ಉದ್ಯಮಿಗಳಾದ ಪ್ರಕಾಶ್ ಶೆಟ್ಟಿಗಾರ್,ಶೆರ್ಡಿ ಪ್ರಕಾಶ್ ಶೆಟ್ಟಿ,ಜಾನ್ಸನ್ ಅಧ್ಯಕ್ಷ ರವೀಂದ್ರ ಹೆಗ್ಡೆ,ಗೌರವಾಧ್ಯಕ್ಷ ಉಮೇಶ್ ಶೆಟ್ಟಿ ಕಲ್ಗದ್ದೆ,
ಜಯಶೀಲ ಶೆಟ್ಟಿ ಘಟಪ್ರಭಾ,ಸಂಪತ್ ಶೆಟ್ಟಿ, ರತ್ನಾಕರ ಶೆಟ್ಟಿ ಪಡುಮುಂಡು,ಸುಜಯ್ ಶೆಟ್ಟಿ ತೆಕ್ಕಟ್ಟೆ,ಸುಭಾಶ್ ಶೆಟ್ಟಿ ಹೊಳ್ಮಗೆ, ಪ್ರವೀಣ್ ಶೆಟ್ಟಿ ವಂಡಾರು,ಮನೋಜ್ ನಾಯರ್ ಚಕ್ರವರ್ತಿ,ಸುಧೀರ್ ಪೂಜಾರಿ,ನಾಗೇಶ್ ನಾವಡ,ರಾಜಾ ಸಾಲಿಗ್ರಾಮ,ಅನಿಲ್ ಖಾರ್ವಿ,ಪ್ರದೀಪ್ ಹೆಗ್ಡೆ ತಂಡದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಉಮೇಶ್ ಶೆಟ್ಟಿ ಕಲ್ಗದ್ದೆ ಪ್ರಾಸ್ತಾವಿಕ ಮಾತುಗಳನ್ನಾಡಿದರೆ,ಶಿವನಾರಾಯಣ ಐತಾಳ್ ಕೋಟ ನಿರೂಪಿಸಿದರು.