
ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ – 2025: ಅದ್ದೂರಿ ಉದ್ಘಾಟನೆ ಅಜ್ಜರಕಾಡಿನಲ್ಲಿ!
ಉಡುಪಿ: ಉಡುಪಿ ಅಜ್ಜರಕಾಡು ಇಂಡೋರ್ ಬ್ಯಾಡ್ಮಿಂಟನ್ ಮೈದಾನದಲ್ಲಿ ಟೊರ್ಪೆಡೋಸ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ – 2025 ಶನಿವಾರ ಬೆಳಿಗ್ಗೆ 10.30ಕ್ಕೆ ಅದ್ದೂರಿಯಾಗಿ ಆರಂಭಗೊಳ್ಳಲಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉಡುಪಿ ಕ್ಷೇತ್ರದ ಶಾಸಕ ಶ್ರೀ ಯಶಪಾಲ್ ಸುವರ್ಣ ಭಾಗವಹಿಸಲಿದ್ದಾರೆ. ಗೌರವ ಅತಿಥಿಗಳಾಗಿ ಉದ್ಯಮಿ ಹಾಗೂ ಕಾಂಗ್ರೆಸ್ ಮುಖಂಡ ಶ್ರೀ ಪ್ರಸಾದರಾಜ್ ಕಾಂಚನ್, ಯುವಶಕ್ತಿ ಹಾಗೂ ಕ್ರೀಡಾ ಇಲಾಖೆಯ ಸಹ ನಿರ್ದೇಶಕ ಡಾ. ರೋಷನ್ ಕುಮಾರ್ ಶೆಟ್ಟಿ, ವಕೀಲ ಶ್ರೀ ಗಣೇಶ್ ಕುಮಾರ್ ಮಟ್ಟು, ಮತ್ತು ಉದ್ಯಮಿ ಶ್ರೀ ಅಬ್ದುಲ್ ರೆಹಮಾನ್ ಉಪಸ್ಥಿತರಿರಲಿದ್ದಾರೆ.

ಪ್ರತಿಭಾವಂತ ಶಟಲ್ ಬ್ಯಾಡ್ಮಿಂಟನ್ ಆಟಗಾರರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ವೇದಿಕೆ ಒದಗಿಸುವ ಉದ್ದೇಶದಿಂದ ಆಯೋಜಿಸಲಾದ ಈ ಟೂರ್ನಿಯಲ್ಲಿ ಉಡುಪಿ, ಮಂಗಳೂರು, ಕುಂದಾಪುರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬ್ಯಾಡ್ಮಿಂಟನ್ ಆಟಗಾರರು ಭಾಗವಹಿಸಲಿದ್ದಾರೆ. ಈ ಲೀಗ್‌ನಲ್ಲಿ ವಿವಿಧ ತಂಡಗಳ ಮಧ್ಯೆ ತೀವ್ರ ಸ್ಪರ್ಧೆ ನಡೆಯಲಿದ್ದು, ಉಡುಗೊರೆಗಳು ಹಾಗೂ ಪ್ರಶಸ್ತಿಗಳ ಮೂಲಕ ಕ್ರೀಡಾಪಟುಗಳನ್ನು ಗೌರವಿಸಲಾಗುತ್ತದೆ.
ಈ ಅದ್ಭುತ ಉತ್ಸಾಹಭರಿತ ಕ್ರೀಡಾ ಉತ್ಸವದ ಆಯೋಜಕರು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್, ಇದರ ಅಧ್ಯಕ್ಷ ಗೌತಮ್ ಶೆಟ್ಟಿ ಅವರು ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ ಕೋರಿದ್ದಾರೆ.
ಲೀಗ್‌ನ ಪ್ರಸಾರ ಸಹಭಾಗಿಯಾಗಿ ಸ್ಪೋರ್ಟ್ಸ್ ಕನ್ನಡ (Sports Kannada) ಕಾರ್ಯನಿರ್ವಹಿಸಲಿದೆ.





