ಸತತ ನಾಲ್ಕು ಪಂಧ್ಯಗಳನ್ನ ಗೆದ್ದು ಬೀಗುತಿದ್ದ ಆರ್ಸಿಬಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು ಚೆನ್ನೈ ಸೂಪರ್ ಕಿಂಗ್ಸ್. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಚೆನ್ನೈ ರುತುರಾಜ್ ಗಾಯಕ್ವಾಡ್ ಹಾಗು ಡುಪ್ಲೆಸ್ಸಿ ಅವರಿಂದ ಉತ್ತಮ ಆರಂಭ ಪಡೆಯಿತು.ಡುಪ್ಲೆಸ್ಸಿ ಅರ್ಧಶತಕವನ್ನೂ ಸಹ ಗಳಿಸಿದರು.




ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .
ಸತತ ನಾಲ್ಕು ಪಂಧ್ಯಗಳನ್ನ ಗೆದ್ದು ಬೀಗುತಿದ್ದ ಆರ್ಸಿಬಿಯ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು ಚೆನ್ನೈ ಸೂಪರ್ ಕಿಂಗ್ಸ್. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಚೆನ್ನೈ ರುತುರಾಜ್ ಗಾಯಕ್ವಾಡ್ ಹಾಗು ಡುಪ್ಲೆಸ್ಸಿ ಅವರಿಂದ ಉತ್ತಮ ಆರಂಭ ಪಡೆಯಿತು.ಡುಪ್ಲೆಸ್ಸಿ ಅರ್ಧಶತಕವನ್ನೂ ಸಹ ಗಳಿಸಿದರು.
ಗ್ರಾಮೀಣ ಮಟ್ಟದ ಯುವ ಪ್ರತಿಭೆಗಳ ಅನ್ವೇಷಣೆ,ವಲಯ ಮಟ್ಟದ ತಂಡಗಳ ಬಲವರ್ಧನೆ ಸದುದ್ದೇಶದಿಂದ,ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಕೋಟೇಶ್ವರ ಆಯೋಜಿಸಿದ್ದ 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ “ಫ್ರೆಂಡ್ಸ್ ಟ್ರೋಫಿಯನ್ನು ಈಗಲ್ಸ್ ಕುಂಭಾಶಿ ತಂಡ ಗೆದ್ದುಕೊಂಡಿತು.![]()
![]()
ಶ್ರೀದೇವಿ ಕ್ರಿಕೆಟ್ ಕ್ಲಬ್ ಗುಡ್ಡೆಯಂಗಡಿ, ಹಿರಿಯಡಕ*
ಇವರ ಆಶ್ರಯದಲ್ಲಿ ಮಣಿಪಾಲ ಡಿಪ್ಲೋಮಾ ಕಾಲೇಜಿನ ವಿದ್ಯಾರ್ಥಿ ಅನಾರೋಗ್ಯದಲ್ಲಿರುವ ಕಿರಣ್ ಆಚಾರ್ಯ ಸಹಾಯಾರ್ಥವಾಗಿ ನಡೆಸಿದ ಅಂತರ್ಕಾಲೇಜು ಹಾಗೂ 21ರ ವಯೋಮಿತಿಯ ಕ್ರಿಕೆಟ್ ಪಂದ್ಯಾಕೂಟ 🏆 ಟಿ.ಎಂ.ಎ. ಪೈ ಟ್ರೋಫಿ – 2020 🏆 ಮಣಿಪಾಲದ ಕ್ರೀಡಾಂಗಣದಲ್ಲಿ ದಿನಾಂಕ 26-01-2020 ರಂದು ಯಶಸ್ವಿಯಾಗಿ ನಡೆಯಿತು..
ಫೈನಲ್ ಪಂದ್ಯದಲ್ಲಿ ಬಾಯ್ಸ್ ಚಿಟ್ಪಾಡಿ ಯ ತಂಡ ಎಂ.ಐ.ಟಿ. ಕುಂದಾಪುರ ವನ್ನು ಸೋಲಿಸುವುದರ ಮೂಲಕವಾಗಿ ಪ್ರಶಸ್ತಿಯನ್ನು ಪಡೆದುಕೊಂಡಿತು..
ಅತ್ಯಂತ ಆಕರ್ಷಕವಾದ, ಅತೀ ಎತ್ತರದ ಟ್ರೋಫಿಗಳನ್ನು ಪಂದ್ಯಾಕೂಟದಲ್ಲಿ ನೀಡಿ ಗೌರವಿಸಲಾಯಿತು..
ಬಾಯ್ಸ್ ಚಿಟ್ಪಾಡಿ ತಂಡದ ಸುನಿಲ್ ಬಾಬು ಪಂದ್ಯಶ್ರೇಷ್ಠ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.
ಅದೇ ತಂಡದ ವಿನೋದ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು. ಎಂ.ಐ.ಟಿ. ಕುಂದಾಪುರದ ಶಶಿ ಉತ್ತಮ ದಾಂಡಿಗ ಪ್ರಶಸ್ತಿ ಪಡೆದರು.
ಸಾಯಿ ಕ್ರಿಕೆಟರ್ಸ್ ಕಾರ್ಕಳ ಶಿಸ್ತಿನ ತಂಡ ಪ್ರಶಸ್ತಿ ಪಡೆಯಿತು
ಸಮಾರೋಪ ಸಮಾರಂಭದಲ್ಲಿ ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಕಾಲೇಜಿನ ಉಪಪ್ರಾಂಶುಪಾಲ ಪ್ರಶಾಂತ್ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಅದೇ ಕಾಲೇಜಿನ ಆಟೋಮೊಬೈಲ್ ವಿಭಾಗದ ಮುಖ್ಯಸ್ಥ ರವೀಂದ್ರ ಶೆಣೈ, ಕಾಲೇಜಿನ ಗೌರವ ಉಪನ್ಯಾಸಕರಾದ ಕುಮಾರಸ್ವಾಮಿ , ಪಂದ್ಯಾವಳಿಯ ಪ್ರಮುಖ ದಾನಿಗಳಾದ ಸೌರಭ್ ಬಲ್ಲಾಳ್ , ಸಿರಾಜ್ ಶೇಖ್, ಪರೀಕ್ಷಿತ್ ಅಲೆವೂರು, ಸಿದ್ಧಾಂತ್ ಕದ್ರಿ, ಸುಶ್ಮಿತ್ ಪೂಂಜ ಭಾಗವಹಿಸಿದ್ದರು.
ಪಂದ್ಯದ ತೀರ್ಪುಗಾರರಾಗಿ ವಿಶ್ವನಾಥ್ ನಾಯಕ್ ಪೆಲತ್ತೂರು, ಸಂಪತ್ ಕಣಂಜಾರು, ಸ್ವಸ್ತಿಕ್ ಹಿರಿಯಡಕ, ಪ್ರಜೇಶ್ ಪೆರ್ಡೂರು ಸಹಕರಿಸಿದರು.
ವೀಕ್ಷಕ ವಿವರಣೆಗಾರರಾಗಿ ಪ್ರಕಾಶ್ ಗುಡ್ಡೆಯಂಗಡಿ, ಪ್ರತುಲ್ ಹಿರಿಯಡಕ ಸಹಕರಿಸಿದರು..
ಫ್ರೆಂಡ್ಸ್ ಟ್ರೋಫಿ-2020
ಹೊನಲು ಬೆಳಕಿನ ಪಂದ್ಯಾವಳಿ
ಇಂದು,ನಾಳೆ ಕೋಟೇಶ್ವರದಲ್ಲಿ.
ನ್ಯೂ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಕೋಟೇಶ್ವರ ಇವರ ಆಶ್ರಯದಲ್ಲಿ
ತೃತೀಯ ಬಾರಿಗೆ ಕೋಟೇಶ್ವರದ ಸ.ಹಿ.ಪ್ರಾ ಶಾಲೆ(ಕರ್ನಾಟಕ ಪಬ್ಲಿಕ್ ಸ್ಕೂಲ್) ಮೈದಾನದಲ್ಲಿ ಫೆಬ್ರವರಿ 8,9 ರಂದು 40 ಗಜಗಳ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ.
ಗ್ರಾಮೀಣ ಮಟ್ಟದ ತಂಡಗಳ ಬಲವರ್ಧನೆ,ಸ್ಥಳೀಯ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ,
ಆಯಾಯ ಏರಿಯಾಕ್ಕೆ ಸಂಬಂಧಿಸಿದ ಆಟಗಾರರನ್ನೊಳಗೊಂಡ ತಂಡಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಈಗಾಗಲೇ 36 ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು ಕುತೂಹಲಕಾರಿ ಪಂದ್ಯಾಟಗಳು ಕೋಟೇಶ್ವರದ ಶಾಲಾ ಮೈದಾನದಲ್ಲಿ ನಡೆಯಲಿದೆ.
ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ರೂಪದಲ್ಲಿ 30,030 ರೂ ನಗದು,ದ್ವಿತೀಯ ಸ್ಥಾನಿ ತಂಡ 20,020 ರೂ ನಗದು ಜೊತೆಯಾಗಿ ಆಕರ್ಷಕ ಟ್ರೋಫಿಗಳು ಹಾಗೂ ಇನ್ನಿತರ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರಿಗೆ ಅರ್ಹ ಪುರಸ್ಕಾರಗಳನ್ನು ನೀಡಲಾಗುತ್ತಿದೆ.
ಇಂದು ಸಂಜೆ 6.30 ಕ್ಕೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು,
ನಾಳೆ ನಡೆಯುವ ಸಮಾರೋಪ ಸಮಾರಂಭದಲ್ಲೂ ಗಣ್ಯಾತಿಗಣ್ಯರು ಭಾಗವಹಿಸಲಿದ್ದಾರೆ.
ಆರ್.ಕೆ.ಆಚಾರ್ಯ ಕೋಟ…
ಹರಿಹರ-ರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಮಾರ್ಚ್ 5 ರಿಂದ 8 ರ ತನಕ.
ಓಂ ಕ್ರಿಕೆಟ್ ಕ್ಲಬ್ ಹರಿಹರ ತಂಡದ ಆಶ್ರಯದಲ್ಲಿ ನಗರಸಭಾ ಸದಸ್ಯ ರಜನೀಕಾಂತ್,ಹಿರಿಯ ಕ್ರೀಡಾಪಟು
ಗುರುನಾಥ್ ಹಾಗೂ ಜನಪ್ರಿಯ ಇಲೆವೆನ್ ದಾವಣಗೆರೆ ಮಾಲೀಕರು ಜಯಪ್ರಕಾಶ್ ಗೌಡ ಈ ಮೂವರ ದಕ್ಷ ಸಾರಥ್ಯದಲ್ಲಿ 4 ದಿನಗಳ ಹಗಲಿನ ರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಮಾರ್ಚ್ 5 ರಿಂದ 8 ರ ವರೆಗೆ ಹರಿಹರದ ಗಾಂಧಿಮೈದಾನದಲ್ಲಿ ಜರುಗಲಿದೆ.
ವಿಜೇತ ತಂಡ 2,22,222 ರೂ ನಗದು,ರನ್ನರ್ಸ್ ತಂಡ 1,11,111ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ಇನ್ನಿತರ ವೈಯಕ್ತಿಕ ಆಕರ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಭಾಗವಹಿಸಲು ಆಸಕ್ತ ತಂಡಗಳು
ರಜನೀಕಾಂತ್-9535603721,
ಗುರುನಾಥ್-9742503733
ಈ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.
ಅತಿಥಿ ತಂಡಗಳಿಗೆ ಊಟೋಪಚಾರ,ವಸತಿ ಸೌಕರ್ಯಗಳನ್ನು ನೀಡಲಾಗುತ್ತಿದೆ.
ಪಂದ್ಯಾವಳಿಯ ನೇರ ಪ್ರಸಾರ M.Sports ಬಿತ್ತರಿಸಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಲಿದೆ.
ಆರ್.ಕೆ.ಆಚಾರ್ಯ ಕೋಟ.
ವಿಷ್ಣು ಕಪ್-2020
ಬೆಂಗಳೂರಿನ ಆರ್.ಟಿ. ನಗರದಲ್ಲಿ.
ಕ್ಲಾಸಿಕ್ ಕ್ರಿಕೆಟರ್ಸ್ ಬೆಂಗಳೂರು ಇವರ ಆಶ್ರಯದಲ್ಲಿ,ವಿಲ್ಲೋ ಪವರ್ ಕ್ರಿಕೆಟ್ ಅಕಾಡೆಮಿ ಇವರ ಸಹಭಾಗಿತ್ವದಲ್ಲಿ 2 ದಿನಗಳ ರಾಜ್ಯ ಮಟ್ಟದ ಪಂದ್ಯಾವಳಿ “ವಿಷ್ಣು ಕಪ್-2020” ಮಾರ್ಚ್ 7,8 ರಂದು ಬೆಂಗಳೂರಿನ ಆರ್.ಟಿ.ನಗರ ಪೋಲಿಸ್ ಠಾಣೆಯ ಹತ್ತಿರದ ಎಚ್.ಎಮ್.ಟಿ ಅಂಗಣದಲ್ಲಿ ಆಯೋಜಿಸಲಾಗಿದೆ.
ಪ್ರಥಮ ಪ್ರಶಸ್ತಿ ರೂಪದಲ್ಲಿ 1,11,111 ರೂ,ದ್ವಿತೀಯ ಸ್ಥಾನಿ 55,555 ರೂ,ತೃತೀಯ ಹಾಗೂ ಚತುರ್ಥ ಸ್ಥಾನಿ ತಂಡ ತಲಾ 5,555
ನಗದು ಪುರಸ್ಕಾರ ಹಾಗೂ ಆಕರ್ಷಕ ಟ್ರೋಫಿಗಳು,ಇನ್ನಿತರ ಆಕರ್ಷಕ ವೈಯಕ್ತಿಕ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತಿದೆ.
ಆಸಕ್ತ ತಂಡಗಳು ಮೇಲ್ಕಾಣಿಸಿದ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.
Y.Sports ಪಂದ್ಯಾವಳಿಯ ನೇರ ಪ್ರಸಾರವನ್ನು ಬಿತ್ತರಿಸಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ಕಾರ್ಯ ನಿರ್ವಹಿಸಲಿದೆ.
ಆರ್.ಕೆ.ಆಚಾರ್ಯ ಕೋಟ…
ಸ್ಯಾಂಡಿ ಆರ್ಭಟ-ಮೈಟಿಗೆ ನ್ಯಾಶ್-2020 ಕಿರೀಟ
ನ್ಯಾಶ್ ಬೆಂಗಳೂರು ತಂಡದ ಆಶ್ರಯದಲ್ಲಿ ಮಲ್ಲೇಶ್ವರಂ 18 ನೇ ಕ್ರಾಸ್ ಮೈದಾನದಲ್ಲಿ
ಮೂರು ದಿನಗಳ ಕಾಲ ನಡೆದ ನ್ಯಾಶ್ ಟ್ರೋಫಿಯನ್ನು ಮೈಟಿ ಬೆಂಗಳೂರು ತಂಡ ಗೆದ್ದುಕೊಂಡಿದೆ.
ರಾಜ್ಯದ ಬಲಿಷ್ಠ 20 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ
ಲೀಗ್ ಹಂತದ ಹೋರಾಟಗಳ ಬಳಿಕ
2 ರೋಚಕ ಉಪಾಂತ್ಯ ಪಂದ್ಯಗಳಲ್ಲಿ
ಎಮ್.ಬಿ.ಸಿ.ಸಿ ತಂಡ ರಿಯಲ್ ಫೈಟರ್ಸ್ ಉಡುಪಿ ಯನ್ನು,
ಮೈಟಿ ಬೆಂಗಳೂರು ಎಮ್.ಎಲ್.ಸಿ ತಂಡವನ್ನು ಸೋಲಿಸಿ ಫೈನಲ್ ಗೆ ಭಡ್ತಿ ಪಡೆದಿದ್ದರು.
ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಎಮ್.ಬಿ.ಸಿ.ಸಿ 8 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿತ್ತು.ಪೈಪೋಟಿಯ ಗುರಿಯನ್ನು ಬೆಂಬತ್ತುವ ಹಂತದಲ್ಲಿ ಸಿಡಿದ ಮೈಟಿಯ ಸ್ಯಾಂಡಿ ಭರ್ಜರಿ ಸಿಕ್ಸರ್ ಹಾಗೂ ಬೌಂಡರಿಗಳ ಮೂಲಕ 19 ಎಸೆತಗಳಲ್ಲಿ 41 ರನ್ ಸಿಡಿಸಿ
ಕೇವಲ 6 ಓವರ್ ಗಳಲ್ಲಿ ಗುರಿ ತಲುಪಿ ಎದುರಾಳಿಗಳ ಮೇಲೆ ಅಧಿಕಾರಯುತ ಗೆಲುವು ಸಾಧಿಸಿದರು.
ಪ್ರಥಮ ಪ್ರಶಸ್ತಿ ವಿಜೇತ ಮೈಟಿ ಬೆಂಗಳೂರು 2 ಲಕ್ಷ ನಗದು ಹಾಗೂ ದ್ವಿತೀಯ ಸ್ಥಾನಿ ತಂಡ ಎಮ್.ಬಿ.ಸಿ.ಸಿ1 ಲಕ್ಷ ನಗದು
ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದುಕೊಂಡರು.
ವೈಯಕ್ತಿಕ ಬಹುಮಾನವಾಗಿ
ಫೈನಲ್ ನ ಪಂದ್ಯಶ್ರೇಷ್ಟ,ಸರಣಿ ಶ್ರೇಷ್ಟ ಪ್ರಶಸ್ತಿಗಳೆರಡೂ ಮೈಟಿಯ ಸ್ಯಾಂಡಿ,ಬೆಸ್ಟ್ ಬ್ಯಾಟ್ಸ್‌ಮನ್ ಎಮ್.ಎಲ್.ಸಿ ತಂಡದ ಗೌರಿ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಎಮ್.ಬಿ.ಸಿ.ಸಿ ಯ ವಿಮಲ್ ಪಡೆದುಕೊಂಡರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ನ್ಯಾಶ್ ತಂಡದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಆಟಗಾರರನ್ನು ಸನ್ಮಾನಿಸಲಾಯಿತು.
ಪಂದ್ಯಾವಳಿಯ ನೇರ ಪ್ರಸಾರವನ್ನು
M.Sports ಬಿತ್ತರಿಸಿದರೆ,
ವೀಕ್ಷಕ ವಿವರಣೆಯಲ್ಲಿ ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಪ್ರಶಾಂತ್ ಅಂಬಲಪಾಡಿ,ವಿನಯ್ ಉದ್ಯಾವರ ಹಾಗೂ ಗಿರಿಧರ್ ಕೆ.ಆರ್.ಪುರಂ ಸಹಕರಿಸಿದರು.
ಆರ್.ಕೆ.ಆಚಾರ್ಯ ಕೋಟ.
ಇತ್ತೀಚೆಗಷ್ಟೇ ಸೌತ್ ಆಫ್ರಿಕಾದ ಕೇಪ್ ಟೌನ್ ನಲ್ಲಿ ಅತ್ಯಂತ ಯಶಸ್ವಿ ಪ್ರದರ್ಶನ ತೋರಿದ್ದ ಭಾರತದ ಮಾಸ್ಟರ್ಸ್ ಇಂಡೋರ್ ತಂಡದ 2020 ರ ಸಾಲಿನ ಅಂತರಾಷ್ಟ್ರೀಯ ಪಂದ್ಯಾಕೂಟಗಳ ವೇಳಾಪಟ್ಟಿ ಪ್ರಕಟವಾಗಿದೆ.
ಎಪ್ರಿಲ್ 16-18 ರ ವರೆಗೆ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸರಣಿ ಪಂದ್ಯಗಳು ನಡೆಯಲಿದೆ.
ಮೇ 27-31 ರ ವರೆಗೆ ಶ್ರೀಲಂಕಾದ ಕೊಲಂಬೋದಲ್ಲಿ ಏಷ್ಯಾಕಪ್ ಪಂದ್ಯಾವಳಿ ನಡೆಯಲಿದೆ.
ಅಕ್ಟೋಬರ್ 10-17 ರ ವರೆಗೆ 11 ನೇ ಆವೃತ್ತಿಯ ಇಂಡೋರ್ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಆತಿಥ್ಯವನ್ನು ಆಸ್ಟ್ರೇಲಿಯಾ ವಹಿಸಿಕೊಳ್ಳಲಿದೆ.
ಟೂರ್ನಿಯ ಪಂದ್ಯಗಳು ಮೆಲ್ಬರ್ನ್ ನ ಕೇಸಿ ಸ್ಟೇಡಿಯಂ ಮತ್ತು ಸಿಟಿಪವರ್ ಸೆಂಟರ್ ಸ್ಟೇಡಿಯಂಗಳಲ್ಲಿ ನಡೆಯಲಿರುವುದಾಗಿ ವಿಶ್ವ ಇಂಡೋರ್ ಕ್ರಿಕೆಟ್ ಫೆಡರೇಶನ್ ಘೋಷಿಸಿದೆ.
ಆರ್.ಕೆ.ಆಚಾರ್ಯ ಕೋಟ.
ದಮಾಮ್ ನಲ್ಲಿ ರಾಜಾ ಕಮಾಲ್-ಗುಕಾ ದಮಾಮ್
ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ ಚಾಂಪಿಯನ್ಸ್
ದಮಾಮ್ ನ ಗುಕಾ ಸ್ಟೇಡಿಯಂ ನಲ್ಲಿ ನಡೆದ ಎಸ್.ಎ.ಎಫ್ ಕ್ರಿಕೆಟ್ ಬ್ಲಾಸ್ಟ್ 2020 ಪಂದ್ಯಾವಳಿಯಲ್ಲಿ ರಾಜಾ ಸಾಲಿಗ್ರಾಮ ಸರ್ವಾಂಗೀಣ ಪ್ರದರ್ಶನದ ನೆರವಿನಿಂದ
ಗುಕಾ ದಮಾಮ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
16 ಬಲಿಷ್ಠ ತಂಡಗಳು ಭಾಗವಹಿಸಿದ ಈ ಟೂರ್ನಿಯ ಪ್ರಥಮ ಲೀಗ್ ಪಂದ್ಯದಲ್ಲಿ ಬಿರುಸಿನ
ಅರ್ಧ ಶತಕ 53 ರನ್ ಗಳಿಸಿ,
ಗಳಿಸಿ ಪಂದ್ಯಶ್ರೇಷ್ಟ ಪ್ರಶಸ್ತಿ ರಾಜಾ ಪಡೆದಿದ್ದರು.
ಸೆಮಿಫೈನಲ್ ನಲ್ಲಿಎದುರಾಳಿಗಳು 8 ಓವರ್ ಗಳಲ್ಲಿ 125 ರನ್ ಗಳ ಗುರಿಯನ್ನು ನೀಡಿತ್ತು.ಚೇಸಿಂಗ್ ವೇಳೆ ಗುಕಾ ದಮಾಮ್ ತಂಡ
2 ಓವರ್ ಗಳಲ್ಲಿ 23 ರನ್ ಗಳಿಸಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ಈ ಸಂದರ್ಭ ತಂಡವನ್ನು ಆಧರಿಸಿದ ರಾಜಾ 27 ಎಸೆತಗಳಲ್ಲಿ ಭರ್ಜರಿ ಸಿಕ್ಸ್,ಬೌಂಡರಿಗಳ ಸಹಿತ 95 ರನ್ ಹಾಗೂ 1 ಓವರ್ ನಲ್ಲಿ 9 ರನ್ ನೀಡಿ 2 ವಿಕೆಟ್ ಉರುಳಿಸಿ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದಿದ್ದರು.
ಫೈನಲ್ ನಲ್ಲಿ ದಮಾಮ್ ಸಿ.ಸಿ ತಂಡ ನೀಡಿದ 91 ರನ್ ಗುರಿಯ ಅನಾಯಾಸವಾಗಿ ಚೇಸ್ ಮಾಡಿ ಗುಕಾ ದಮಾಮ್ ಚಾಂಪಿಯನ್ ಪಟ್ಟ ಅಲಂಕರಿಸಿತು.
ಟೂರ್ನಿಯ ಬೆಸ್ಟ್ ಬ್ಯಾಟ್ಸ್‌ಮನ್,ಸರಣಿ ಶ್ರೇಷ್ಟ ಪ್ರಶಸ್ತಿ ರಾಜಾ ಸಾಲಿಗ್ರಾಮ ಪಾಲಾದರೆ,ಬೆಸ್ಟ್ ಬೌಲರ್ ಚಿಕ್ಕಿ ಹಾಗೂ ಫೈನಲ್ ನ ಪಂದ್ಯಶ್ರೇಷ್ಟ ಪ್ರಶಸ್ತಿ ಫವಾದ್ ಪಡೆದರು.
ಆರ್.ಕೆ.ಆಚಾರ್ಯ ಕೋಟ.
ಬೈಂದೂರು : ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ಬೈಂದೂರು ತಾಲೂಕು ಮಟ್ಟದ ಹೊನಲು ಬೆಳಕಿನ “ಪುರುಷರ ಡಬಲ್ಸ್ ಶಟಲ್ ಪಂದ್ಯಾಟ ಎಸ್.ಎಮ್.ಬಿ.ಸಿ ಟ್ರೋಫಿ – 2020” ಶನಿವಾರ ಸಂಜೆ ಬಂಕೇಶ್ವರ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ನಡೆಯಿತು.
ಬೈಂದೂರು ಆರಕ್ಷಕ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಸುರೇಶ್ ಜಿ ನಾಯಕ್ ಸಭಾ ಕಾರ್ಯಕ್ರಮ ಹಾಗೂ ಪಂದ್ಯಾಟದ ಕ್ರೀಡಾಂಗಣವನ್ನು ಉದ್ಘಾಟಿಸಿ, ಮಾತನಾಡಿ ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟಗಳ ಯಶಸ್ಸಿಗೆ ಸಹಕರಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಕೂಡಾ ಒಂದು ಒಂದು ಕಲೆ ಅಡಗಿರುತ್ತದೆ. ಸಾಕಷ್ಟು ಜನ ಕ್ರೀಡಾಯಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಜೀವನದಲ್ಲಿ ಮಾನಸಿಕವಾಗಿ ಸಧೃಡರಾಗಲು ಕ್ರೀಡೆ ಅಗತ್ಯ. ಎಲ್ಲಾ ವಯೋಮಾನದವರಿಗೂ ಕ್ರೀಡೆ ದೈಹಿಕ ಕ್ಷಮತೆಯನ್ನು ಕೊಡುತ್ತದೆ ಎಂದರು.
ಕ್ಲಬ್ ನ ಗೌರವಾಧ್ಯಕ್ಷ ಉದಯ್ ಎಸ್. ಕೆ.ಆರ್.ಸಿ.ಎಲ್ ಅವರು ಮಾತನಾಡಿ, ಕಳೆದ ವರ್ಷ ಸ್ಥಾಪಿಸಿದ ಹೆಮ್ಮೆಯಿದೆ. ಕಳೆದ ವರ್ಷ ಯಾವುದೇ ದೇಣಿಗೆಯನ್ನು ಪಡೆಯದೆ ನಮ್ಮೆಲ್ಲರ ಯುವಕ ಕೈಗೊಡಿಸಿಕೊಂಡು ಶಟಲ್ ಪಂದ್ಯಾಟ ನಡೆಸಿದ್ದೇವೆ. ಆ ಕಾರ್ಯಕ್ರಮವೂ ಕೂಡಾ ಬಹಳ ಯಶ್ವಸಿಯಾಗಿದೆ. ಅದಕ್ಕೆಲ್ಲಾ ನಮ್ಮ ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ನ ಪ್ರತಿಯೊಬ್ಬ ಸದಸ್ಯರು ಸಾಕಷ್ಟು ಶ್ರಮ ವಹಿಸಿದ ಕಾರಣದಿಂದ ಇಂದು ಎರಡನೇ ವರ್ಷದ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ ಎಂದರು.
ಶ್ರೀ ಮಹಾಕಾಳಿ ಬ್ಯಾಡ್ಮಿಂಟನ್ ಕ್ಲಬ್ ಬಂಕೇಶ್ವರ ಇದರ ಅಧ್ಯಕ್ಷ ಸುಬ್ರಹ್ಮಣ್ಯ ಎಚ್ ಸಮಾರಂಭದ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸ್ಥಳೀಯ 5 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಆಕಾಶವಾಣಿ ಮತ್ತು ದೂರದರ್ಶನ ಗಾಯಕಿ ಗೀತಾ ಬಂಕೇಶ್ವರ ಸನ್ಮಾನಿಸಲಾಯಿತು.
ಮುಖ್ಯಅತಿಥಿಗಳಾಗಿ ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಪ್ರಭಾಕರ ಎಸ್, ಬಂಕೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪಕ ಚಿತ್ರಾ, ಸ್ಥಳದಾನಿ ನಿವೃತ್ತ ಶಿಕ್ಷಕ ನಾಗೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಲಬ್ ನ ಸದಸ್ಯ ಸುರೇಂದ್ರ ಪೂಜಾರಿ ಸ್ವಾಗತಿಸಿ/ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು. ಯೋಗೀಶ್ ವಂದಿಸಿದರು.