ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪ್ರತಿಷ್ಠಿತ ಡಾ.ತಿಮ್ಮಪ್ಪಯ ಟ್ರೋಫಿ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ ನಾಲ್ಕು ತಂಡಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕದ ಅನುಭವಿ ಆಫ್ ಸ್ಪಿನ್ ಆಲ್ರೌಂಡರ್ ಕೆ.ಗೌತಮ್ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಬಿ.ಆರ್ ಶರತ್ ಅವರಿಗೆ ನಾಲ್ಕೂ ತಂಡಗಳಲ್ಲಿ ಸ್ಥಾನ ಸಿಕ್ಕಿಲ್ಲ.
KSCA ಟೂರ್ನಿಗೆ ಗೌತಮ್ ಮತ್ತು ಶರತ್ ಅವರಿಗೆ ಅವಕಾಶ ಸಿಗದಿರುವುದನ್ನು ನೋಡಿದರೆ, ಮುಂಬರುವ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ ಮತ್ತು ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಗಳಲ್ಲೂ ಕರ್ನಾಟಕ ಸೀನಿಯರ್ ತಂಡದಲ್ಲಿ ಇವರಿಗೆ ಸ್ಥಾನ ಸಿಗುವುದು ಅನುಮಾನ. ಹೀಗಾಗಿ ಇವರಿಬ್ಬರೂ ಕರ್ನಾಟಕ ತಂಡವನ್ನು ತೊರೆದು ಅನ್ಯ ರಾಜ್ಯದ ಪರ ಆಡಲಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.
ಡಾ.ತಿಮ್ಮಪ್ಪಯ್ಯ ಟೂರ್ನಿಯಲ್ಲಿ ಕೆಎಸ್‌ಸಿಎ ಇಲೆವೆನ್ ತಂಡವನ್ನು ಮನೀಶ್ ಪಾಂಡೆ ಮುನ್ನಡೆಸಲಿದ್ದಾರೆ. ಕೆಎಸ್‌ಸಿಎ ಸೆಕ್ರೆಟರಿ ಇಲೆವೆನ್ ತಂಡವನ್ನು ಶ್ರೇಯಸ್ ಗೋಪಾಲ್, ಕೆಎಸ್‌ಸಿಎ ಪ್ರೆಸಿಡೆಂಟ್ಸ್ ಇಲೆವೆನ್ ತಂಡವನ್ನು ಅನೀಶ್ವರ್ ಗೌತಮ್ ಮತ್ತು ಕೆಎಸ್‌ಸಿಎ ಕೋಲ್ಟ್ಸ್ ತಂಡವನ್ನು ಶುಭಾಂಗ್ ಹೆಗ್ಡೆ ಮುನ್ನಡೆಸಲಿದ್ದಾರೆ.
ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್ ದ್ರಾವಿಡ್ ಕೆಎಸ್‌ಸಿಎ ಕೋಲ್ಟ್ಸ್ ತಂಡದ ಪರ ಆಡಲಿದ್ದಾರೆ.
KSCA XI
ಮನೀಶ್ ಪಾಂಡೆ (ನಾಯಕ), ನಿಕಿನ್ ಜೋಸ್, ಚೇತನ್ ಎಲ್.ಆರ್, ಅನೀಶ್ ಕೆ.ವಿ, ಸ್ಮರಣ್ ಆರ್, ಅಕ್ಷಣ್ ರಾವ್, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಹಾರ್ದಿಕ್ ರಾಜ್, ವಿದ್ಯಾಧರ್ ಪಾಟೀಲ್, ವಿ.ಕೌಶಿಕ್, ಆದಿತ್ಯ ನಾಯರ್, ಮೊಹ್ಸಿನ್ ಖಾನ್, ಸ್ಯಾಂಟೋಕ್ ಸಿಂಗ್, ರೋಹಿತ್ ಕುಮಾರ್ ಎ.ಸಿ, ಸಂಜಯ್ ಅಶ್ವಿನ್.
KSCA SECRETARY XI
ಶ್ರೇಯಸ್ ಗೋಪಾಲ್ (ನಾಯಕ), ರೋಹನ್ ಪಾಟೀಲ್, ವಿಶಾಲ್ ಓನಟ್, ಕಿಶನ್ ಬೆದರೆ, ಅರ್ಸನಾಲ್ ಎಂ., ಕೃತಿಕ್ ಕೃಷ್ಣ (ವಿಕೆಟ್ ಕೀಪರ್), ಯಶೋವರ್ಧನ್ ಪರಂತಪ್, ಅಭಿಲಾಷ್ ಶೆಟ್ಟಿ, ಶಿಖರ ಶೆಟ್ಟಿ, ಅಧೋಕ್ಷ್ ಹೆಗ್ಡೆ, ಕುಮಾರ್ ಎಲ್.ಆರ್., ಜಸ್ಪೆರ್ ಇ.ಜೆ., ಆದಿತ್ಯ ಗೋಯಲ್, ನಿಶ್ಚಿತ್ ರಾವ್, ಶ್ರೀಜಿತ್ ಕೆ.ಎಲ್ (ವಿಕೆಟ್ ಕೀಪರ್), ಲವ್ನೀತ್ ಸಿಸೋಡಿಯಾ (ವಿಕೆಟ್ ಕೀಪರ್).
KSCA PRESIDENTS XI
ಅನೀಶ್ವರ್ ಗೌತಮ್ (ನಾಯಕ), ಮೆಕ್ನೀಲ್ ನೊರೋಹ್ನ, ಸ್ವರೂಪ್ ಎಸ್.ಎಚ್., ಅಭಿನವ್ ಮನೋಹರ್, ಸುಜಯ್ ಸತೇರಿ (ವಿಕೆಟ್ ಕೀಪರ್), ಮನೋಜ್ ಭಾಂಡಗೆ, ವರುಣ್ ರಾವ್, ಪರಾಸ್ ಗುರ್ಬಕ್ಸ್ ಆರ್ಯ, ಮೋನಿಶ್ ರೆಡ್ಡಿ, ರಾಜ್ವೀರ್ ವಾಧ್ವಾ, ಮನ್ವಂತ್ ಕುಮಾರ್ ಎಲ್., ಯಶ್ವಂತ್ ಬಿ.ಎನ್., ತುಷಾರ್ ಸಿಂಗ್, ಶಿವಕುಮಾರ್ ಬಿ.ಯು., ಅಭಿಷೇಕ್ ಪ್ರಭಾಕರ್.
KSCA COLTS
ಶುಭಾಂಗ್ ಹೆಗ್ಡೆ (ನಾಯಕ), ರೋಹಿತ್ ಆರ್.ವಿ., ಹರ್ಷಿಲ್ ಧರ್ಮಾನಿ, ಸಮಿತ್ ದ್ರಾವಿಡ್, ಕಾರ್ತಿಕೇಯ ಕೆ.ಪಿ, ಧೀರಜ್ ಗೌಡ, ಧ್ರುವ ಪ್ರಭಾಕರ್, ಸಮರ್ಥ್ ನಾಗರಾಜ್, ಧನುಷ್ ಗೌಡ, ನಿಶ್ಚಿತ್ ಪೈ, ಯುವರಾಜ್ ಅರೋರ (ವಿಕೆಟ್ ಕೀಪರ್), ಶಿವಂ ಎಂ.ಬಿ., ಮಾಧವ ಧರ್ವಡ್ಕರ್, ಇಶಾನ್ ಎಸ್., ಕ್ರಿಶಿವ್ ಬಜಾಜ್ (ವಿಕೆಟ್ ಕೀಪರ್)