ಶ್ರೀಲಂಕಾ-ಧನುಷ್ಕಾ ಸಂಪತ್ ಚಾಂಪಿಯನ್ಸ್ ಲೀಗ್‌ನಲ್ಲಿ ಬೆಂಗಳೂರಿನ BSC ಚಾಂಪಿಯನ್

ಶ್ರೀಲಂಕಾ-ಧನುಷ್ಕಾ ಸಂಪತ್ ಚಾಂಪಿಯನ್ಸ್ ಲೀಗ್‌ನಲ್ಲಿ ಬೆಂಗಳೂರಿನ BSC ಚಾಂಪಿಯನ್

ಕೊಟ್ಟಾವ ಅಲಯನ್ಸ್ ತಂಡವನ್ನು ಮಣಿಸಿದ ಬ್ಯಾಟರಾಯನಪುರ ಸ್ಪೋರ್ಟ್ಸ್ ಕ್ಲಬ್

ಶ್ರೀಲಂಕಾದ ಕಟುನಾಯಕೆ ನಗರದ FTZ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆದ ಧನುಷ್ಕಾ ಸಂಪತ್ ಚಾಂಪಿಯನ್ಸ್ ಲೀಗ್‌ನ ಎರಡನೇ ಆವೃತ್ತಿಯಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಸ್ಪೋರ್ಟ್ಸ್ ಕ್ಲಬ್ (BSC) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆಗಸ್ಟ್ 26ರಿಂದ 30ರವರೆಗೆ ನಡೆದ ಅಂತರರಾಷ್ಟ್ರೀಯ ಮಟ್ಟದ ಸಾಫ್ಟ್‌ಬಾಲ್ ಫ್ಲಡ್‌ಲೈಟ್ ಕ್ರಿಕೆಟ್ ಟೂರ್ನಿಯಲ್ಲಿ ಹಲವು ತಂಡಗಳು ಭಾಗವಹಿಸಿದ್ದವು.

ಫೈನಲ್ ಪಂದ್ಯದಲ್ಲಿ ಶ್ರೀಲಂಕಾದ ಕೊಟ್ಟಾವ ಅಲಯನ್ಸ್ ತಂಡವನ್ನು ಮಣಿಸಿದ BSC ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಚಾಂಪಿಯನ್ ತಂಡಕ್ಕೆ ₹15 ಲಕ್ಷ ನಗದು ಬಹುಮಾನ ಲಭಿಸಿದರೆ, ರನ್ನರ್-ಅಪ್ ಕೊಟ್ಟಾವ ಅಲಯನ್ಸ್ ತಂಡ ₹6 ಲಕ್ಷ ಬಹುಮಾನವನ್ನು ಪಡೆದುಕೊಂಡಿತು.

ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ಕೊಟ್ಟಾವ ಅಲಯನ್ಸ್ ತಂಡದ ಅಸ್ಸಾಂಕಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅವರಿಗೆ ₹1,500 ನಗದು ಬಹುಮಾನ ಹಾಗೂ DNM ಕ್ರಿಕೆಟ್ ಬ್ಯಾಟ್ ನೀಡಲಾಯಿತು. ಎರಡನೇ ಸೆಮಿಫೈನಲ್‌ನಲ್ಲಿ BSC ತಂಡದ ಸಾಗರ್ ಭಂಡಾರಿ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು. ಅವರಿಗೆ DNM ಕ್ರಿಕೆಟ್ ಬ್ಯಾಟ್ ಮತ್ತು ₹1,500 ನಗದು ಬಹುಮಾನ ದೊರೆಯಿತು.

ಫೈನಲ್ ಪಂದ್ಯದಲ್ಲಿಯೂ ಸಾಗರ್ ಭಂಡಾರಿ ತಮ್ಮ ಅದ್ಭುತ ಪ್ರದರ್ಶನದಿಂದ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದರು. ಅವರಿಗೆ DNM ಕ್ರಿಕೆಟ್ ಬ್ಯಾಟ್ ಜೊತೆಗೆ ₹7,500 ನಗದು ಬಹುಮಾನ ನೀಡಲಾಯಿತು.

ಕೊಟ್ಟಾವ ಅಲಯನ್ಸ್ ತಂಡದ ಪ್ರಭಾತ್ ಸುಲೋಚನ ಟೂರ್ನಿಯ ಅತ್ಯುತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಪಡೆದರು. ಅವರಿಗೆ ₹30,000 ನಗದು ಬಹುಮಾನ ಹಾಗೂ DNM ಕ್ರಿಕೆಟ್ ಬ್ಯಾಟ್ ನೀಡಲಾಯಿತು. ಇದೇ ತಂಡದ ಮಿಲಂತ ರಶ್ಮಿಕ ಅತ್ಯುತ್ತಮ ಬೌಲರ್ ಪ್ರಶಸ್ತಿಗೆ ಆಯ್ಕೆಯಾದರು. ಅವರಿಗೆ ಕೂಡ ₹30,000 ನಗದು ಬಹುಮಾನ ಮತ್ತು DNM ಕ್ರಿಕೆಟ್ ಬ್ಯಾಟ್ ಲಭಿಸಿತು.

ಟೂರ್ನಿಯ ಸರಣಿಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು BSC ತಂಡದ ಸಾಗರ್ ಭಂಡಾರಿ ಪಡೆದುಕೊಂಡರು. ಅವರ ಸಮಗ್ರ ಪ್ರದರ್ಶನವನ್ನು ಗುರುತಿಸಿ ₹45,000 ನಗದು ಬಹುಮಾನ ನೀಡಲಾಯಿತು.

Leave a Reply

Your email address will not be published. Required fields are marked *