ಗುರುಗಣೇಶ್ ನೇಜಾರು ಮಡಿಲಿಗೆ ಜವನೆರ್ ಟ್ರೋಫಿ-2025

ಗುರುಗಣೇಶ್ ನೇಜಾರು ಮಡಿಲಿಗೆ ಜವನೆರ್ ಟ್ರೋಫಿ-2025

ಗುರುಗಣೇಶ್ ನೇಜಾರು ಮಡಿಲಿಗೆ ಜವನೆರ್ ಟ್ರೋಫಿ-2025

ಕಡಿಯಾಳಿ ಜವನೆರ್ ಟ್ರೋಫಿ ಸೀಸನ್–3: ಗುರುಗಣೇಶ್ ನೇಜಾರು ತಂಡಕ್ಕೆ ಭರ್ಜರಿ ಜಯ

ಕಡಿಯಾಳಿ ಜವನೆರ್, ಕಡಿಯಾಳಿ ಇವರ ಆಶ್ರಯದಲ್ಲಿ ಆಯೋಜಿಸಲಾದ ಕಡಿಯಾಳಿ ಜವನೆರ್ ಟ್ರೋಫಿ ಸೀಸನ್–3 ಅಂತರ್ಜಾತೀಯ ಹಾಗೂ ನಾನ್–ಸ್ಟೇಟ್ ಕ್ರಿಕೆಟ್ ಪಂದ್ಯಾವಳಿ ಎಂ.ಜಿ.ಎಂ ಕಾಲೇಜ್ ಗ್ರೌಂಡ್, ಕುಂಜಿಬೆಟ್ಟುವಿನಲ್ಲಿ ಕ್ರೀಡಾಭಿಮಾನಿಗಳ ಭರ್ಜರಿ ಬೆಂಬಲದೊಂದಿಗೆ ಯಶಸ್ವಿಯಾಗಿ ನಡೆಯಿತು.

ಫೈನಲ್ ಪಂದ್ಯದಲ್ಲಿ ಪ್ರಕಾಶ್ ಆಚಾರ್ ನೇಜಾರು ನೇತೃತ್ವದ ಗುರುಗಣೇಶ್ ನೇಜಾರು ತಂಡವು  ಓಂ ಬಬ್ಬು, ಪಾದೂರು ತಂಡವನ್ನು ನಿರ್ಬಂಧಿಸಿ ವಿನ್ನರ್ಸ್ ಪಟ್ಟ ಅಲಂಕರಿಸಿತು. ಜಯಶಾಲಿ ಗುರುಗಣೇಶ್ ನೇಜಾರು ತಂಡದಲ್ಲಿ ಗೌರೀಶ್ ಆಚಾರ್ಯ ಪ್ರಸಿದ್ಧ ಆಚಾರ್ಯ, ಸಾಗರ್ ಆಚಾರ್ಯ, ಅಶ್ವಿನ್ ಚಾಲೆಂಜ್ ಮನು ಆಚಾರ್, ಪ್ರಸನ್ನ ಪೆರ್ಡೂರು ಹಾಗೂ ಗಣೇಶ್ ಬ್ರಹ್ಮಾವರ ಉತ್ತಮ ಪ್ರದರ್ಶನ ನೀಡಿದರು.

ರನ್ನರ್ಸ್ ಅಪ್ ಸ್ಥಾನ ಪಡೆದ ಓಂ ಬಬ್ಬು, ಪಾದೂರು ತಂಡದ ಪರವಾಗಿ ಅಶ್ವಿನ್ ಚಾಲೆಂಜ್, ವಿಘ್ನೇಶ್ ಬಗ್ಗಿ, ವಿಘ್ನೇಶ್ ಕಾಂಚನ್, ಮನು ಆಚಾರ್, ಪ್ರಸನ್ನ ಉಪ್ಪೂರು, ಸುಶಾಂತ್ ನೇಜಾರು, ಭರತ್ ಕಾಪು ಮತ್ತು ಪ್ರಸನ್ನ ಪೆರ್ಡೂರು ಶ್ರಮಿಸಿದರು.

ವೈಯಕ್ತಿಕ ಪ್ರಶಸ್ತಿಗಳಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಗೌರವವನ್ನು ಪೆರ್ಡೂರುನ ಪ್ರಸನ್ನ ಆಚಾರ್ಯ ಪಡೆದರು. ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿಗೆ ಮೂಲ್ಕಿಯ ಗೌರೀಶ್ ಆಚಾರ್ಯ ಪಾತ್ರರಾದರೆ, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಮನು ಆಚಾರ್ ತಮ್ಮದಾಗಿಸಿಕೊಂಡರು. ಟೂರ್ನಿಯ ಅತ್ಯುತ್ತಮ ಆಟಗಾರನೆಂಬ ಹೆಗ್ಗಳಿಕೆಯನ್ನು ಸೌಜನ್ ಅಲೆವೂರು ಪಡೆದಿದ್ದು, ಅವರಿಗೆ ಮ್ಯಾನ್ ಆಫ್ ದ ಸೀರೀಸ್ ಪ್ರಶಸ್ತಿಯಾಗಿ ಬ್ಲೂ ಟೂತ್ ಸ್ಪೀಕರ್ ಪ್ರದಾನಿಸಲಾಯಿತು.

ಪಂದ್ಯಾವಳಿಯ ನಿರೂಪಣೆಯನ್ನು ರವಿ ಕಡಿಯಾಳಿ ಅವರು ಸಮರ್ಥವಾಗಿ ನಿರ್ವಹಿಸಿ, ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದರು. ಅಂತರ್ಜಾತೀಯ ಹಾಗೂ ನಾನ್–ಸ್ಟೇಟ್ ಮಟ್ಟದ ಆಟಗಾರರ ಪಾಲ್ಗೊಳ್ಳುವಿಕೆಯಿಂದ ಈ ಟೂರ್ನಿ ಯುವ ಕ್ರಿಕೆಟಿಗರಿಗೆ ಉತ್ತಮ ವೇದಿಕೆಯಾಗಿ ಮೂಡಿಬಂದಿತು.

Leave a Reply

Your email address will not be published. Required fields are marked *