
KBP CUP 2025 – ಮೈದಾನಕ್ಕೆ ಹೊಸ ಮೆರಗು

ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿರುವ *30 ಯಾರ್ಡ್ ಬಾಕ್ಸ್ ಕ್ರಿಕೆಟ್ ಟೂರ್ನಮೆಂಟ್ – KBP CUP 2025* ಗೆ ಸಜ್ಜಾಗುತ್ತಿರುವ ಆಯೋಜಕರು ಹಾಗೂ ಬಾಂಡ್ XI ತಂಡವು ಅಭಿಮಾನಿಗಳಿಗೆ ಉತ್ತಮ ಅನುಭವ ನೀಡಲು ವಿಶಿಷ್ಟ ಹೆಜ್ಜೆ ಇಟ್ಟಿದ್ದಾರೆ.

ಟೂರ್ನಮೆಂಟ್ ವೇಳೆ ಪ್ರೇಕ್ಷಕರು ಅನುಭವಿಸುವ ಸೌಕರ್ಯವನ್ನು ಗಮನದಲ್ಲಿ ಇಟ್ಟುಕೊಂಡು, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಳಸುವ ಸುಸಜ್ಜಿತ *ಸಿಟಿಂಗ್ ಸ್ಟ್ಯಾಂಡ್‌ಗಳು* ಹೊರರಾಜ್ಯಗಳಿಂದ ತರಿಸಲಾಗಿದ್ದು, ಮೈದಾನಕ್ಕೆ ಅಳವಡಿಸಲಾಗಿದೆ. ಕೆಂಪು ಮತ್ತು ನೀಲಿ ಬಣ್ಣದ ಈ ಆಕರ್ಷಕ ಆಸನಗಳು ಮೈದಾನದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿವೆ.



ಆಯೋಜಕರು ಹೇಳುವಂತೆ, “ಪ್ರೇಕ್ಷಕರು ಕೇವಲ ಪಂದ್ಯ ವೀಕ್ಷಿಸುವಷ್ಟೇ ಅಲ್ಲ, ಅತ್ಯುತ್ತಮ ಅನುಭವ ಪಡೆಯಬೇಕು ಎಂಬುದು ನಮ್ಮ ಉದ್ದೇಶ. ಅದಕ್ಕಾಗಿ ಮೈದಾನವನ್ನು ಸುಂದರಗೊಳಿಸುವುದು, ಸುಸಜ್ಜಿತ ಸೌಕರ್ಯ ಕಲ್ಪಿಸುವುದು ನಮ್ಮ ಆದ್ಯತೆ” ಎಂದು ತಿಳಿಸಿದ್ದಾರೆ.


ಈ ಟೂರ್ನಮೆಂಟ್‌ನಲ್ಲಿ ದೇಶದ ವಿವಿಧ ರಾಜ್ಯಗಳಿಂದ ಪ್ರಥಮ ದರ್ಜೆಯ ತಂಡಗಳು ಭಾಗವಹಿಸಲಿದ್ದು, ಉತ್ಸಾಹಭರಿತ ಕ್ರೀಡಾ ಪಟುಗಳ ನಡುವಿನ ಕಾದಾಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.




