Home ಕ್ರಿಕೆಟ್ ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ- ಶಿವ ಬಿಗ್ ಬ್ಯಾಶ್ ಲೀಗ್-2025 ಚಾಂಪಿಯನ್ಸ್

ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ- ಶಿವ ಬಿಗ್ ಬ್ಯಾಶ್ ಲೀಗ್-2025 ಚಾಂಪಿಯನ್ಸ್

ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ- ಶಿವ ಬಿಗ್ ಬ್ಯಾಶ್ ಲೀಗ್-2025 ಚಾಂಪಿಯನ್ಸ್

ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ- ಶಿವ ಬಿಗ್ ಬ್ಯಾಶ್ ಲೀಗ್-2025 ಚಾಂಪಿಯನ್ಸ್

ಕೋಟ- ಶಿವನಾರಾಯಣ ಐತಾಳ್ ಕೋಟ ಇವರ ವೀಕ್ಷಕ ವಿವರಣೆಯ ಸಾರ್ಥಕ 35 ವರ್ಷಗಳ ಸವಿನೆನಪಿಗಾಗಿ ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ ಎರಡು ದಿನಗಳ ಕ್ರಿಕೆಟ್ ಪಂದ್ಯಾಟ ಶಿವ ಬಿಗ್ ಬ್ಯಾಶ್ ಲೀಗ್-2025 ವಿಜೃಂಭಣೆಯಿಂದ ಜರುಗಿತು.12 ಪ್ರತಿಷ್ಠಿತ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಫೈನಲ್ ನಲ್ಲಿ ಶ್ರೇಯಸ್ ಕಡಿಯಾಳಿ ಇವರ ಕೊನೆಯ ಓವರ್ ನ ಘಾತಕ ಸ್ಪಿನ್ ದಾಳಿಯ ಫಲವಾಗಿ, ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ ತಂಡವು ಪೊಲೀಸ್ ಇಲೆವೆನ್ ಉಡುಪಿ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ತಂಡದ ಶ್ರೇಯಸ್ ಕಡಿಯಾಳಿ ಅರ್ಹವಾಗಿ ಫೈನಲ್ ಪಂದ್ಯಶ್ರೇಷ್ಟ ಪಡೆದರೆ ಮಧು(ಕೆ.ಹೆಚ್) ಬೆಸ್ಟ್ ಫೀಲ್ಡರ್,ಪಿಪಿಎಲ್ ತಂಡದ ಕೇಶವ್ ಮಂಗಳೂರು ಬೆಸ್ಟ್ ಬ್ಯಾಟರ್ ಮತ್ತು ಪೊಲೀಸ್ ಇಲೆವೆನ್ ತಂಡದ ಕೆಂಪರಾಜು ಬೆಸ್ಟ್ ಬೌಲರ್ ಹಾಗೂ ಅದೇ ತಂಡದ ಕಿಶನ್ ಸರಣಿ ಶ್ರೇಷ್ಟ ಗೌರವಕ್ಕೆ ಪಾತ್ರರಾದರು.

ವಿಶೇಷವಾಗಿ ಕ್ರೀಡಾಪಟುಗಳ ಸುರಕ್ಷತೆಯ ದೃಷ್ಟಿಯಿಂದ ಕ್ರಿಕೆಟ್ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಪ್ರತಿ ಪಂದ್ಯದ ಪಂದ್ಯಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಹೆಲ್ಮೆಟ್ ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಡಾ.ಶ್ರೀಪತಿ ಹಂದಟ್ಟು, ರೊಟೇರಿಯನ್ ದೇವಾನಂದ್ CA ಉಡುಪಿ, ಪ್ರವೀಣ್ ಗಡಿಯಾರ್ ಬಾರ್ಕೂರು, ಸತೀಶ್.ಹೆಚ್‌.ಕುಂದರ್, ಸಂತೋಷ ಸುವರ್ಣ ಮಣೂರು ಆಯೋಜಕರಾದ ಕೋಟ ಶಿವನಾರಾಯಣ ಐತಾಳ್ ಇನ್ನಿತರರು ಉಪಸ್ಥಿತರಿದ್ದರು.

 

ಎರಡು ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾಟದ ನೇರ ಪ್ರಸಾರ ಶಿವ ಸ್ಪೋರ್ಟ್ಸ್ ಕೋಟ ಮತ್ತು ಸ್ಪೋರ್ಟ್ಸ್ ಕನ್ನಡ ಚಾನೆಲ್ ನಲ್ಲಿ ಬಿತ್ತರಗೊಂಡಿತು.

LEAVE A REPLY

Please enter your comment!
Please enter your name here

eight + 17 =

ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ- ಶಿವ ಬಿಗ್ ಬ್ಯಾಶ್ ಲೀಗ್-2025 ಚಾಂಪಿಯನ್ಸ್

ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ- ಶಿವ ಬಿಗ್ ಬ್ಯಾಶ್ ಲೀಗ್-2025 ಚಾಂಪಿಯನ್ಸ್ ಕೋಟ- ಶಿವನಾರಾಯಣ ಐತಾಳ್ ಕೋಟ ಇವರ ವೀಕ್ಷಕ ವಿವರಣೆಯ ಸಾರ್ಥಕ 35 ವರ್ಷಗಳ ಸವಿನೆನಪಿಗಾಗಿ ಸಾಲಿಗ್ರಾಮ ಹಳೆಕೋಟೆ ಮೈದಾನದಲ್ಲಿ ಎರಡು ದಿನಗಳ ಕ್ರಿಕೆಟ್ ಪಂದ್ಯಾಟ ಶಿವ ಬಿಗ್ ಬ್ಯಾಶ್ ಲೀಗ್-2025 ವಿಜೃಂಭಣೆಯಿಂದ ಜರುಗಿತು.12 ಪ್ರತಿಷ್ಠಿತ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದು, ಫೈನಲ್ ನಲ್ಲಿ ಶ್ರೇಯಸ್ ಕಡಿಯಾಳಿ ಇವರ ಕೊನೆಯ ಓವರ್ ನ ಘಾತಕ ಸ್ಪಿನ್ ದಾಳಿಯ ಫಲವಾಗಿ, ಕಸ್ತೂರ್ಬಾ ಹಾಸ್ಪಿಟಲ್ ಮಣಿಪಾಲ ತಂಡವು ಪೊಲೀಸ್ ಇಲೆವೆನ್ ಉಡುಪಿ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಗಳಾಗಿ ಹೊರಹೊಮ್ಮಿದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ತಂಡದ ಶ್ರೇಯಸ್ ಕಡಿಯಾಳಿ ಅರ್ಹವಾಗಿ ಫೈನಲ್ ಪಂದ್ಯಶ್ರೇಷ್ಟ ಪಡೆದರೆ ಮಧು(ಕೆ.ಹೆಚ್) ಬೆಸ್ಟ್ ಫೀಲ್ಡರ್,ಪಿಪಿಎಲ್ ತಂಡದ ಕೇಶವ್ ಮಂಗಳೂರು ಬೆಸ್ಟ್ ಬ್ಯಾಟರ್ ಮತ್ತು ಪೊಲೀಸ್ ಇಲೆವೆನ್ ತಂಡದ ಕೆಂಪರಾಜು ಬೆಸ್ಟ್ ಬೌಲರ್ ಹಾಗೂ ಅದೇ ತಂಡದ ಕಿಶನ್ ಸರಣಿ ಶ್ರೇಷ್ಟ ಗೌರವಕ್ಕೆ ಪಾತ್ರರಾದರು. ವಿಶೇಷವಾಗಿ ಕ್ರೀಡಾಪಟುಗಳ ಸುರಕ್ಷತೆಯ ದೃಷ್ಟಿಯಿಂದ ಕ್ರಿಕೆಟ್ ಇತಿಹಾಸದಲ್ಲೇ

Send this to a friend