ಉಡುಪಿ/ನೇಜಾರು: ಶ್ರೀ ಗುರು ಗಣೇಶ್ ಕನ್‌ಸ್ಟ್ರಕ್ಷನ್ಸ್ ಹಾಗೂ ಗುರುಗಣೇಶ್ ಕ್ರಿಕೆಟರ್ಸ್ ನೇಜಾರು ಇವುಗಳ ಆಶ್ರಯದಲ್ಲಿ, ವಿಶ್ವಕರ್ಮ ಸಮಾಜದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ 90 ಗಜಗಳ ಹೊನಲು ಬೆಳಕಿನ ಅದ್ಧೂರಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ — “ವಿಶ್ವಕರ್ಮ ಪ್ರೀಮಿಯರ್ ಲೀಗ್-2026” ಆಯೋಜಿಸಲಾಗಿದೆ.
ಈ ಕ್ರಿಕೆಟ್ ಮಹೋತ್ಸವವು ಮುಂಬರುವ ಡಿಸೆಂಬರ್ 3, 4, 5 ಮತ್ತು 6ರಂದು ನೇಜಾರು ಮೈದಾನದಲ್ಲಿ ನಡೆಯಲಿದ್ದು, ರಾಜ್ಯದ ವಿವಿಧ ಭಾಗಗಳಿಂದ ಪ್ರತಿಭಾವಂತ ಆಟಗಾರರು ಭಾಗವಹಿಸಲಿದ್ದಾರೆ.
ಆಕರ್ಷಕ ಬಹುಮಾನಗಳ ವಿವರ:
- ಪ್ರಥಮ ಬಹುಮಾನ: ₹3,00,003/- ಮತ್ತು ಆಕರ್ಷಕ ಟ್ರೋಫಿ
- ದ್ವಿತೀಯ ಬಹುಮಾನ: ₹2,00,002/- ಮತ್ತು ಆಕರ್ಷಕ ಟ್ರೋಫಿ
- ಪ್ರವೇಶ ಶುಲ್ಕ: ₹30,000/-
ವೈಯಕ್ತಿಕ ಬಹುಮಾನಗಳು: ಆಟಗಾರರಲ್ಲಿ ಕ್ರೀಡಾ ಉತ್ಸಾಹ ತುಂಬಲು ವಿವಿಧ ವೈಯಕ್ತಿಕ ಬಹುಮಾನಗಳನ್ನು ಪ್ರಕಟಿಸಲಾಗಿದೆ.
- ಸರಣಿ ಶ್ರೇಷ್ಠ (Man of the Series): Hero Xtreme 125 CC ಬೈಕ್
- ಉತ್ತಮ ದಾಂಡಿಗ (Best Batsman): Hero HF 100 ಬೈಕ್
- ಉತ್ತಮ ಬೌಲರ್ (Best Bowler): Hero HF 100 ಬೈಕ್
ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲಿರುವ ಈ ಪಂದ್ಯಾಟವನ್ನು ಸ್ಪೋರ್ಟ್ಸ್ ಕನ್ನಡ (Sports Kannada) ವಾಹಿನಿಯ ಮೂಲಕ ನೇರ ಪ್ರಸಾರ ಮಾಡಲಾಗುವುದು. ಕ್ರೀಡಾ ಪ್ರೇಮಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಆಟಗಾರರನ್ನು ಪ್ರೋತ್ಸಾಹಿಸುವಂತೆ ಆಯೋಜಕರು ಕೋರಿದ್ದಾರೆ.
ಸಂಪರ್ಕ ಹಾಗೂ ನೋಂದಣಿಗೆ:
- ಪ್ರಕಾಶ್ ಆಚಾರ್ಯ: 9880636620
- ಪ್ರಸಿದ್ಧ್ ಆಚಾರ್ಯ: 9900103969

