
ಪ್ರಿಯ ಕ್ರಿಕೆಟ್ ಅಭಿಮಾನಿಗಳೇ,
ಅರಬ್ ಸಂಯುಕ್ತ ರಾಷ್ಟ್ರದ ದುಬೈನಲ್ಲಿ ನೆಲೆಸಿರುವ ಉಡುಪಿ ಸೂರಾಲು ಮೂಲದ ವಿಠಲ ರಿಶಾನ್ ನಾಯಕರು ಇದೀಗ ಕರ್ನಾಟಕದ ಪ್ರಸಿದ್ಧ ಕ್ರೀಡಾವಾಹಿನಿ ಸಂಸ್ಥೆ ಸ್ಪೋರ್ಟ್ಸ್ ಕನ್ನಡ ಚಾನೆಲಿಗೆ ಮಧ್ಯಪ್ರಾಚ್ಯರಾಷ್ಟ್ರಗಳ ಅಧಿಕೃತ ಪ್ರತಿನಿಧಿಯಾಗಿ ನೇಮಿತರಾಗಿದ್ದಾರೆ.


ಪ್ರಸ್ತುತ ದುಬೈನ ಪ್ರಸಿದ್ಧ ಮರೈನ್ ಸಂಸ್ಥೆಯೊಂದರಲ್ಲಿ ಕಳೆದ ಎರಡುದಶಕಗಳಿಂದ ಸೇವೆ ಸಲ್ಲಿಸುತ್ತಿರುವ ವಿಠಲ ರಿಶಾನ್ ನಾಯಕರು ಇತ್ತೀಚಿನ ವರ್ಷಗಳಲ್ಲಿ ಅರಬ್ ರಾಷ್ಟ್ರಗಳಲ್ಲಿ ಪ್ರಸಿದ್ಧ ಕ್ರಿಕೆಟ್ ಆಟಗಾರನಾಗಿ ಗುರುತಿಸಿಕೊಂಡವರು.ದುಬೈನ ಟೆಕ್ನೋ ಟೈಟಾನ್ಸ್ ಕ್ರಿಕೆಟ್ ತಂಡದ ನಾಯಕನಾಗಿ ಹಾಗೂ ವಿದ್ವಾರ್ಸ ಬಾಯ್ಸ್ ತಂಡದ ಮಾರ್ಗದರ್ಶಕರಾಗಿ ವಿಠಲ ನಾಯಕರು ತಮ್ಮತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.



ಯಾರು ಈ ವಿಠಲ ರಿಶಾನ್ ನಾಯಕ್..?
ಸ್ನೇಹಿತರೇ,ಉಡುಪಿ ಜಿಲ್ಲೆಯ ಕುಂದಾಪುರ ಸೂರಾಲು ಪೆಜಮಂಗ್ಳೂರು ಸಮೀಪದ ಕುಗ್ರಾಮದಲ್ಲಿನ ಪುಟ್ಟಮನೆ.ಅತ್ಯಂತ ಸರಳ ಸಾಮಾನ್ಯ ಬದುಕಿನ ಕುಟುಂಬ.1983ರ ಇಸವಿಯಲ್ಲಿ ಈ ಕುಟುಂಬದ ಶ್ರೀಮತಿ ಜಯಂತಿ ನಾಯಕ್ ಹಾಗೂ ಶ್ರೀ ಮಂಜುನಾಥ್ ನಾಯಕ್ ಅವರಿಗೆ ಸುಪುತ್ರನಾಗಿ ಶ್ರೀವಿಠಲ ನಾಯಕ್ ಅವರು ಜನಿಸಿದರು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕುಕ್ಕೆಹಳ್ಳಿ ಸರ್ಕಾರಿ ಶಾಲೆ ಹಾಗೂ ಬೆಳ್ಳಂಪಳ್ಳಿ ವಿಶ್ವಕರ್ಮ ಶಾಲೆಯಲ್ಲಿ ಪೂರೈಸಿದ ವಿಠಲ ನಾಯಕರಿಗೆ ಬಾಲ್ಯದಿಂದಲೂ ಕ್ರಿಕೆಟ ಆಟದ ವಿಪರೀತ ಗೀಳು.ಅವಕಾಶ ಸಿಕ್ಕಾಗೆಲ್ಲಾ ಸ್ನೇಹಿತರೊಡನೆ ಸೇರಿ ಬ್ಯಾಟ್ ಬಾಲ್ ಹಿಡಿದುಕೊಂಡು ಸೂರ್ಯೋದಯದಿಂದ ಚಂದ್ರೋದಯದವರೆಗೂ ಇವರ ಕ್ರಿಕೆಟ್ ಸಾಗುತ್ತಿತ್ತು.


ಆಟ-ಪಾಠದ ನಡುವೆ ಜೀವನಚಕ್ರ ಶರವೇಗದಲ್ಲಿ ಸಾಗುತ್ತಿತ್ತು.ವೈಯುಕ್ತಿಕ,ಕೌಟುಂಬಿಕ ಎಲ್ಲಾ ನೋವು ನಲಿವುಗಳ ನಡುವೆಯೇ ವಿಠಲ್ ನಾಯಕ್ ಮೈಸೂರ-ವಿಶ್ವವಿದ್ಯಾಲಯದಲ್ಲಿ ಬಿಎ ಪದವಿ ಹಾಗೂ ಮಾಸ್ಟರ್ಸ್ ಪದವಿ ಗಳಿಸಿದರು.ತದನಂತರ ಮಂಗಳೂರಿನ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳ ತರಭೇತಿ ಸಂಸ್ಥೆ ಟೈಮಲ್ಲಿ ಸೇವೆಸಲ್ಲಿಸಿ ಹೆಚ್ಚಿನ ಉದ್ಯೋಗ ಅರಸಿ ದುಬೈಗೆ ಪಯಣಿಸಿದರು.

ದುಬೈನಲ್ಲಿ ಪ್ರಸಿದ್ಧ ಸಂಸ್ಥೆ ಟೆಕ್ನೋ ಮರೈನನಲ್ಲಿ ಉದ್ಯೋಗ ಪ್ರಾಪ್ತಿಯಾಯಿತು. ಉದ್ಯೋಗದ ನಡುವೆ ಪ್ರೀತಿಯ ಕ್ರಿಕೆಟ್ ಆಟ ವಿಠಲರನ್ನು ಮತ್ತೆ ಕರೆಯಿತು.ಕ್ರಿಕೆಟ್ ಆಟದೊಂದಿಗೆ ಪುನಃ ಶುಭಮಿಲನವಾಯಿತು.

ಮೈ ಚುರ್ ಎನ್ನುವ ದುಬೈನ ಉರಿಬಿಸಿಲಿಗೆ ಕ್ಯಾರೆ ಎನ್ನದೆ ವಿಠಲ ಅವರು ತಮ್ಮ ಸಾಧನೆಯಿಂದ ಅಲ್ಲಿನ ಪ್ರಸಿದ್ಧ ಕ್ರಿಕೆಟ್ ತಂಡಗಳಿಗೆ ಸೇರ್ಪಡೆಯಾದರು.ವೃತ್ತಿ ಪ್ರವೃತ್ತಿ ಎರಡರಲ್ಲೂ ನಿಸ್ಸೀಮರೆನಿಸಿದರು.


ಟೆಕ್ನೋಟೈಟಾನ್ಸ್,ಟೆಕ್ನೋ ಕ್ರಿಕೆಟರ್ಸ್,ಟೆಕ್ನೋ ವಾರಿಯರ್ಸ್ ತಂಡದ ನಾಯಕನಾಗಿ ಜೊತೆಗೆ ಶ್ರೀವಿದ್ಯಾನಂದ ಶೆಟ್ಟಿ ಹಾಗೂ ಶ್ರೀಪ್ರವೀಣ್ ಶೆಟ್ಟಿ ಒಡೆತನದ ವಿಧ್ವಾರ್ಸ್ ಬಾಯ್ಸ್ ಮಂಗಳೂರು ತಂಡಕ್ಕೆ ಪ್ರಮುಖ ಮಾರ್ಗದರ್ಶಕರಾಗಿ ತಂಡದ ಯಶಸ್ಸಿಗೆ ಕರ್ತೃಗಳಾದರು.

ದುಬೈನಲ್ಲಿ ನಡೆದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಗಳಾದ ಯಕ್ಷ ಪ್ರೀಮಿಯರ್ ಲೀಗ್,ಕರ್ನಾಟಕ ಪ್ರೀಮಿಯರ್ ಲೀಗ್,ನೆಲ್ಯಾಡಿ ಚಾಂಪಿಯನ್ ಟ್ರೋಫಿ ಸೇರಿದಂತೆ ಹತ್ತು ಹಲವು ಟ್ರೋಫಿಗಳು ನಮ್ಮ ವಿಠಲ್ ನಾಯಕ್ ಸಾರಥ್ಯದ ತಂಡದ ಬಗಲಿಗೆ ಸೇರಿತು.
ವಿಶೇಷವೆಂದರೆ ಇಷ್ಟೆಲ್ಲಾ ಬಿಡುವಿರದ ಕ್ಷಣಗಳ ನಡುವೆಯೂ ಕೂಡಾ ಶ್ರೀಮಹಾಗಣಪತಿದೇವರ ಸಂಕಷ್ಟಿ ವೃತವನ್ನು ಶ್ರದ್ದಾಭಕ್ತಿಯಿಂದ ವಿಧಿವತ್ತಾಗಿ ಸಲ್ಲಿಸುತ್ತಿರುವ ಸದ್ಭಕ್ತಿಯ ಹೃದಯ ಇವರದು.

ಪ್ರಕೃತ ದುಬೈನಲ್ಲಿ ಜರಗುತ್ತಿರುವ ವಿವಿಧ ಕ್ರಿಕೆಟ್ ಪಂದ್ಯಾಕೂಟಗಳಲ್ಲಿ ಸಾಧೆನೆಗಳ ಸರದಾರನಾಗಿ ವಿಠಲ್ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.ವಿಠಲ್ ನಾಯಕ್ ಅವರು ಕ್ರಿಕೆಟ್ ಆಟಕ್ಕೆ ನೀಡುತ್ತಿರುವ ಕೊಡುಗೆ ಸೇವೆ ಕಂಡು ದುಬೈನ ಸ್ಥಳೀಯ ಸಂಸ್ಥೆಗಳು ಶ್ರೀಯುತ ಫೈಜಲ್ ಕಾಪು ಇವರ ನೇತೃತ್ವದಲ್ಲಿ ವಿಠಲ್ ನಾಯಕರಿಗೆ ದುಬೈನ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಬೃಹತ್ ಅಭಿನಂದನೆಯನ್ನು 2025ರ ಫೆಬ್ರವರಿ 16 ರಂದು ಆಯೋಜಿಸಿತ್ತು.

ವಿಶ್ವವಿಖ್ಯಾತ ಕ್ರಿಕೆಟಿಗರ ಸಾಧನೆಗಳಿಗೆ ಸಾಕ್ಷಿಯಾದ ಈ ಅಂಗಣದಲ್ಲಿ ನಮ್ಮ ಊರಿನ ವಿಠಲ್ ನಾಯಕರಿಗೆ ಅರ್ಪಣೆಯಾದ ಸಮ್ಮಾನವು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗೆ ಸಂದ ಅತಿ ದೊಡ್ಡ ಗೌರವ ಎಂಬುದು ನಮ್ಮ ಭಾವನೆ.


ಕುಗ್ರಾಮದಲ್ಲಿ ಬದುಕು ಆರಂಭಿಸಿ ಕೋಟ್ಯಾಧಿಪತಿಗಳ ನೆಲೆವೀಡಾದ ದುಬೈಯಲ್ಲಿ ಸ್ವಂತ ಸಾಧನೆಯಿಂದ ಸದ್ದುಮಾಡುತ್ತಿರುವ ನಮ್ಮ ವಿಠಲಣ್ಣನವರು ಇದೀಗ ರಾಹುಲ್ ದ್ರಾವಿಡ್ ಪಂದ್ಯಾಟವನ್ನು ಆಯೋಜಿಸುವುದರ ಮೂಲಕ ಗಲ್ಫ್ ರಾಷ್ಟ್ರದಲ್ಲಿ ನೆಲೆಸಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಪ್ರತಿಭೆಗಳಿಗೆ ಪ್ರತಿಷ್ಠಿತ ವೇದಿಕೆ ರೂಪಿಸಿ ತನ್ಮೂಲಕ ಅವರ ಬದುಕಿಗೂ ಆಸರೆಯಾಗಿದ್ದಾರೆ.






ಸೃಜನಾತ್ಮಕ ಚಿಂತನೆಯೊಂದಿಗೆ ಸದಾ ಲವಲವಿಕೆಯಿಂದಿರುವ, ಸೇವಾಮನೋಭಾವದ ಸಜ್ಜನಮಿತ್ರ ಮಾನ್ಯ ವಿಠಲ್ ರಿಶಾನ್ ನಾಯಕರು ಇದೀಗ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ನಮ್ಮ ಸ್ಪೋರ್ಟ್ಸ್ ಕನ್ನಡ ಕ್ರೀಡಾವಾಹಿನಿಯ ಮುಖ್ಯಪ್ರತಿನಿಧಿಯಾಗಿ ನೇಮಿತರಾಗಿರುತ್ತಾರೆ.




ಮಧ್ಯಪ್ರಾಚ್ಯದ ಪ್ರಮುಖ ರಾಷ್ಟ್ರಗಳಾದ-ಯು.ಎ.ಇ, ಕತಾರ್, ಬಹೆರೇ




