ಮುಲ್ಕಿ ಫ್ರೆಂಡ್ಸ್ ಆಶ್ರಯದಲ್ಲಿ ಅಶಕ್ತ ಕುಟುಂಬಗಳ ಸಹಾಯಾರ್ಥವಾಗಿ ” ಸಂಜೀವಿನಿ ಬಂಟ್ಸ್ ಟ್ರೋಫಿ 2023 ” ಶೀರ್ಷಿಕೆಯ ವರ್ಲ್ಡ್ ಬಂಟ್ಸ್ ಪ್ರೀಮಿಯರ್ ಲೀಗ್ ಮೂಲ್ಕಿಯ ವಿಜಯಾ ಕಾಲೇಜು ಮೈದಾನದಲ್ಲಿ ಫೆಬ್ರವರಿ 25 ಮತ್ತು 26 ರಂದು ನಡೆಯಲಿದೆ. ಇದು ಆಹ್ವಾನಿತ 09 ತಂಡಗಳ ಲೀಗ್ ಮಾದರಿಯ ಪಂದ್ಯಾಕೂಟವಾಗಿರುತ್ತದೆ. ಈಗಾಗಲೇ ತಂಡದ ಮಾಲೀಕರುಗಳು ಮೂವರು ಐಕಾನ್ ಆಟಗಾರರನ್ನು ಆಯ್ಕೆ ಮಾಡಿ ಉಳಿದ ಆಟಗಾರರನ್ನು ಬಿಡ್ಡಿಂಗ್ ಮೂಲಕ ಆಯ್ಕೆ ಮಾಡಿರುತ್ತಾರೆ.
ಬಹುಮಾನಗಳ ವಿವರಗಳು ಹೀಗಿವೆ:
ಪ್ರಥಮ: ರೂ.1,33,333 +ಟ್ರೋಫಿ
ದ್ವಿತೀಯ: ರೂ. 88,888 +ಟ್ರೋಫಿ
ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಉತ್ತಮ ದಾಂಡಿಗ , ಉತ್ತಮ ಎಸೆತಗಾರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಸಂಘಟಕರಾದ ಅವಿನಾಶ್ ಶೆಟ್ಟಿ, ಸಂದೀಪ್ ಶೆಟ್ಟಿ ಇವರುಗಳು ಟೂರ್ನಮೆಂಟ್ ಗೆ ಬೇಕಾದ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.
ಪಂದ್ಯಾಟದಲ್ಲಿ ರಾಜ್ಯ ಮಟ್ಟದ ತೀರ್ಪುಗಾರರು, ವೀಕ್ಷಕ ವಿವರಣೆಯಲ್ಲಿ ಹಿರಿಯರಾದ ಶ್ರೀಶ ಸರಾಫ್ ಐಕಳ, ಸುರೇಶ ಭಟ್ ಮುಲ್ಕಿ, ಮನೀಶ್ ಕಾರ್ಕಳ, ಇವರು ಸಹಕರಿಸಲಿದ್ದಾರೆ. M9 ಸ್ಪೋರ್ಟ್ಸ್ ಮುಖಾಂತರ ಯೂ ಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾವಳಿಯ ನೇರ ಪ್ರಸಾರವಿರಲಿದೆ.