ಮೈಸೂರು-ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಅಹಮದಾಬಾದ್ ನಲ್ಲಿ ನಡೆಸಲಿರುವ ಅಂಪೈರಿಂಗ್ ಪರೀಕ್ಷೆಗೆ ಮೈಸೂರಿನ ಮೂವರು ಆಯ್ಕೆಯಾಗಿದ್ದಾರೆ.
ಕೆ.ಎಸ್.ಸಿ.ಎ ಜುಲೈ 2 ರಂದು ಅರ್ಹತಾ ಪರೀಕ್ಷೆಯನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಿತ್ತು.ಅಧಿಕ ಅಂಕ ಗಳಿಸಿದ ಮೊದಲ ಏಳು ಅಭ್ಯರ್ಥಿಗಳು ಅರ್ಹರೆಂದು ಘೋಷಿಸಲಾಯಿತು.
ಈ ಪಟ್ಟಿಯಲ್ಲಿ ಮೈಸೂರಿನ ಮೂವರು ಅಂಪೈರ್ ಗಳಾದ ಎನ್.ರಂಗರಾವ್ ಸನ್ಸ್ ಪ್ರೈ.ಲಿ.ನ ಆರ್.ಮಧುಸೂದನ್,
ಸ್ವ ಉದ್ಯೋಗಿ ವಿ.ರಘುನಂದನ್,ಎಂ.ಐ.ಟಿ ಮೈಸೂರು ಕಾಲೇಜಿನ ಆಡಳಿತಾಧಿಕಾರಿ ಎ.ಎಂ.ಅನಿರುದ್ಧ ಸ್ಥಾನ ಪಡೆದುಕೊಂಡು ಮುಂದಿನ ಹಂತಕ್ಕೆ ಆಯ್ಕೆಯಾಗಿದ್ದಾರೆ.
ಜುಲೈ 20 ರಂದು ಅಹಮದಾಬಾದ್ ನಲ್ಲಿ ಪರೀಕ್ಷೆ ನಡೆಯಲಿದೆ.22 ಹಾಗೂ 23 ರಂದು ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆ ಜರುಗಲಿದೆ.ಇದರಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಬಿಸಿಸಿಐ ನಡೆಸುವ ಯಾವುದೇ ಮಟ್ಟದ ಪಂದ್ಯಾವಳಿಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಲು ಅರ್ಹತೆ ಪಡೆದಿರುತ್ತಾರೆ.