ಶ್ರೀನಿವಾಸಪುರ-“ವಿದ್ಯಾರ್ಥಿಗಳು ಕ್ರೀಡಾಸಕ್ತಿ ಜೊತೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು.ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ಸಮಾಜಸೇವಕಿ ಡಾ.ಗಾಯತ್ರಿ ಮುತ್ತಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಅಂತರ ಕಾಲೇಜು ವಾಲಿಬಾಲ್ ಮತ್ತು ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯ ಹಾಗೂ ಪ್ರೋತ್ಸಾಹದ ಕೊರತೆಯಿಂದಾಗಿ ಕ್ರೀಡಾಸಕ್ತಿ ಕುಂಠಿತವಾಗಿದೆ.
ಕ್ರೀಡಾಪಟುಗಳು ಉತ್ತಮ ಪ್ರದರ್ಶನವನ್ನು ನೀಡಬೇಕು ಎಂದು ಡಾ.ಗಾಯತ್ರಿ ಮುತ್ತಪ್ಪ ಆಶಿಸಿದರು.
ಪ್ರಾಂಶುಪಾಲ ಪ್ರೊ.ಎಸ್.ಸಣ್ಣೀರಯ್ಯ ಮಾತನಾಡಿ ಜೀವನದಲ್ಲಿ ಶಿಸ್ತು ಮುಖ್ಯ ಅದನ್ನು ಕ್ರೀಡೆ ನೀಡುತ್ತದೆ.
ಕ್ರೀಡಾಪಟುಗಳು ಶಿಸ್ತಿನ ಸಿಪಾಯಿಯಂತೆ ಗುರಿಯತ್ತ ಸಾಗುತ್ತಾರೆ.ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ.ಪ್ರೇಕ್ಷಕರಿಗೆ ಮನರಂಜನೆ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದರು.
ಕ್ರೀಡಾ ಸಂಚಾಲಕಿ ಪ್ರೊ.ಮಂಜುಳಾ ರೆಡ್ಡಿ ಮಾತನಾಡಿ,
ಕ್ರೀಡಾಪಟುಗಳು ಸೋಲು ಗೆಲುವಿನ ಬಗ್ಗೆ ಯೋಚಿಸದೆ ಸ್ಪರ್ಧೆಯಲ್ಲಿ ಭಾಗವಹಿಸಿ,ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ತಾಲ್ಲೂಕಿನ ಸಾಯಿ ವಿಜಯ ಪದವಿ ಕಾಲೇಜು,
ವೆಂಕಟಾದ್ರಿ,ಜ್ಞಾನಾದ್ರಿ,ಐಐಎಂ ಹಾಗೂ ಸಪ್ತಗಿರಿ ಪದವಿ ಕಾಲೇಜುಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾಲಿಬಾಲ್ ಹಾಗೂ ಜ್ಞಾನಾದ್ರಿ ಪದವಿ ಕಾಲೇಜು ಕಬಡ್ಡಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು…