ಬೆಂಗಳೂರು-ಯಲಹಂಕ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿ.ಡಿ.ಎ)ಅಧ್ಯಕ್ಷರು ಹಾಗೂ ತಿರುಪತಿ-ತಿರುಮಲ(T.T.D) ಆಡಳಿತ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ ಎಸ್.ಆರ್.ವಿಶ್ವನಾಥ್ ರವರ ಜನ್ಮದಿನದ ಪ್ರಯುಕ್ತ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಅದ್ಧೂರಿಯ ಎಸ್.ಆರ್.ವಿ ಕಪ್-2022 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಬಾಬು ರಾಜೇಂದ್ರ ಪ್ರಸಾದ್ ಇವರ ಸಾರಥ್ಯದಲ್ಲಿ ಯಲಹಂಕ ಉಪನಗರ ಬಸ್ ನಿಲ್ದಾದ ಹಿಂಭಾಗದ ಹೊಯ್ಸಳ ಕ್ರೀಡಾಂಗಣದಲ್ಲಿ ಜುಲೈ ದಿನಾಂಕ 22,23 ಮತ್ತು 24 ರಂದು ಈ ಪಂದ್ಯಾವಳಿ ನಡೆಯಲಿದ್ದು ಕರ್ನಾಟಕ ಸೇರಿದಂತೆ ಮುಂಬಯಿ,
ಮಧ್ಯಪ್ರದೇಶ,ರಾಯಘಡ್,ಚೆನ್ನೈ ನ ಒಟ್ಟು 16 ತಂಡಗಳು ಭಾಗವಹಿಸಲಿದೆ.
ಪ್ರಥಮ ಬಹುಮಾನ 5 ಲಕ್ಷ ನಗದು,ದ್ವಿತೀಯ ಬಹುಮಾನ 3 ಲಕ್ಷ ನಗದು ಸಹಿತ ರಜತ ಖಚಿತ ಮಿರುಗುವ ಟ್ರೊಫಿಗಳನ್ನು ನೀಡಲಾಗುತ್ತದೆ. ಫೈನಲ್ ಪಂದ್ಯದ ಪಂದ್ಯಶ್ರೇಷ್ಟ ಸ್ಮಾರ್ಟ್ ಫೋನ್,ಸರಣಿ ಶ್ರೇಷ್ಠ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಉಡುಗೊರೆ ರೂಪದಲ್ಲಿ ಪಡೆಯಲಿದ್ದಾರೆ.
ಎಸ್.ಆರ್.ಬಿ ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರ ಬಿತ್ತರಗೊಳ್ಳಲಿದೆ.