ಉಡುಪಿಯಲ್ಲಿ ಕೀರ್ತಿಶೇಷ ಶ್ರೀಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಸ್ಮರಣಾರ್ಥ ರಾಜ್ಯಮಟ್ಟದ ಲೆಜೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾಟ

ಉಡುಪಿಯಲ್ಲಿ ಕೀರ್ತಿಶೇಷ ಶ್ರೀಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಸ್ಮರಣಾರ್ಥ ರಾಜ್ಯಮಟ್ಟದ ಲೆಜೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾಟ

ಉಡುಪಿಯಲ್ಲಿ ಕೀರ್ತಿಶೇಷ ಶ್ರೀಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಸ್ಮರಣಾರ್ಥ ರಾಜ್ಯಮಟ್ಟದ ಲೆಜೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾಟ

ಆತ್ಮೀಯರೇ
ಇದೇ ಬರುವ 2025 ಡಿಸೆಂಬರ್ ತಿಂಗಳ 19,20,21ರಂದು ಶುಕ್ರವಾರದಿಂದ ಭಾನುವಾರದವರೆಗೆ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಧರ್ಮ, ಸಾಹಿತ್ಯ, ಕಲೆ, ಕ್ರೀಡೆಯ ಮಹಾನ್ ಪೋಷಕರಾಗಿದ್ದ ಶ್ರೀಶಿರೂರು ಮಠದ ಕೀರ್ತಿಶೇಷ ಶ್ರೀಲಕ್ಷ್ಮೀವರತೀರ್ಥಶ್ರೀಪಾದರ ಸ್ಮರಣಾರ್ಥ ಉಡುಪಿಯಲ್ಲಿ ರಾಜ್ಯಮಟ್ಟದಲ್ಲಿ ಲೆಜೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಬೇಕೆಂದು ನೂರಾರು ಕ್ರೀಡಾಭಿಮಾನಿಗಳು ಜೊತೆಗೂಡಿ ಸಂಕಲ್ಪಿಸಿದ್ದಾರೆ.

ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ 80,90 ದಶಕದಲ್ಲಿ ಮಿಂಚಿದ, ಅಪ್ರತಿಮ ಸಾಧನೆಗೈದ ರಾಜ್ಯದ ಪ್ರಸಿದ್ಧ ಕ್ರಿಕೆಟ್ ಆಟಗಾರರ ಕೂಡುವಿಕೆಯಲ್ಲಿ ಉಡುಪಿಯಲ್ಲಿ ಮೊತ್ತಮೊದಲ ಭಾರಿಗೆ ಲೆಜೆಂಡ್ಸ್ ಕಪ್ ಕ್ರಿಕೆಟ್ ಪಂದ್ಯಾಟವು ಜರಗುತ್ತಿದೆ.

ಬೆಂಗಳೂರು, ಮೈಸೂರು, ಕೋಲಾರ, ದಾವಣಗೆರೆ, ಹಾಸನ, ಶಿವಮೊಗ್ಗ, ತುಮಕೂರು, ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರತಿಭಾನ್ವಿತ ತಂಡಗಳು ಈ ಸ್ಪರ್ಧಾಕೂಟದಲ್ಲಿ ಪಾಲ್ಗೊಳ್ಳುತ್ತಿವೆ.

ವಿಜೇತರಿಗೆ ಶ್ರೀಲಕ್ಷ್ಮೀವರತೀರ್ಥಶ್ರೀ ಟ್ರೋಫಿ ನಗದು ಹಾಗೂ ಆಕರ್ಷಕ ಪಾರಿತೋಷಕಗಳು ಒಲಿಯಲಿದೆ.

ಉಡುಪಿಯ ಶಾರದಾ ಕಲ್ಯಾಣ ಮಂಟಪ-ಬೀಡಿನಗುಡ್ಡೆಯ ಮಾರ್ಗದ ಬಳಿಯ ಉಡುಪಿ ನಗರಸಭೆಯ ಮಹಾತ್ಮಗಾಂಧಿ ಬಯಲು ರಂಗಮಂದಿರದ ಮೈದಾನದಲ್ಲಿ ಈ ಪಂದ್ಯಾಕೂಟ ಆಯೋಜನೆಗೊಂಡಿದೆ.

ಕನ್ನಡನಾಡಿನ ಪ್ರಸಿದ್ಧ ಕ್ರೀಡಾವಾಹಿನಿಯಾದ ಸ್ಪೋರ್ಟ್ಸ್ ಕನ್ನಡ ಚಾನೆಲ್ ಹಾಗೂ ಶ್ರೀಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಅಭಿಮಾನಿಗಳ-ಸಾರಥ್ಯದಲ್ಲಿ ಮೂಡಿಬರಲಿರುವ ಈ ಮಹೋನ್ನತ ಕ್ರೀಡಾಉತ್ಸವದಲ್ಲಿ ಎಲ್ಲಾ ಕ್ರೀಡಾಭಿಮಾನಿಗಳು ಪಾಲ್ಗೊಂಡು ಹೃತ್ಪೂರ್ವಕವಾದ ಸಹಕಾರ ಸಹಾಯದೊಂದಿಗೆ ರಾಜ್ಯಮಟ್ಟದ ಈ ಕ್ರಿಕೆಟ್ ಪಂದ್ಯಾವಳಿಯನ್ನು ಅಭೂತಪೂರ್ವವಾಗಿ ನಡೆಸಿಕೊಡಬೇಕೆಂದು ಪ್ರೀತಿ-ಅಭಿಮಾನಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇವೆ.

ನಿಮ್ಮ ವಿಶ್ವಾಸಿ.

ಮುಖ್ಯಸ್ಥರು.

ಸ್ಪೋರ್ಟ್ಸ್ ಕನ್ನಡ ಚಾನೆಲ್
ಉಡುಪಿ.

Leave a Reply

Your email address will not be published. Required fields are marked *