ಯಥೇಚ್ಛವಾದ ಚಿನ್ನ,ರಸಭರಿತ ಮಾವಿನ ಹಣ್ಣಿಗೆ ಪ್ರಸಿದ್ಧವಾದ ಕೋಲಾರದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವಾರು ಕ್ರಿಕೆಟ್ ಪಂದ್ಯಾವಳಿಗಳು ಅವ್ಯಾಹತವಾಗಿ ನಡೆಯುತ್ತಿರುವುದು ತಿಳಿದ ವಿಚಾರ. ಕಳೆದ ವರ್ಷ ಕೋಲಾರದ ಶ್ರೀನಿವಾಸಪುರದಲ್ಲಿ ಪ್ರಸಿದ್ಧ ಉದ್ಯಮಿ M.K.S ಗ್ರೂಪ್ ನ ಮಾಲೀಕ ನದೀಮ್ ಅಖ್ತರ್ ಸಾರಥ್ಯದಲ್ಲಿ ನಡೆದ S.P.L ಸೀಸನ್ 1 ಶ್ರೀನಿವಾಸಪುರದಲ್ಲಿ ಕ್ರಿಕೆಟ್ ಕ್ರಾಂತಿಯನ್ನೇ ಎಬ್ಬಿಸಿತ್ತು.ಯುವ ಪ್ರತಿಭೆಗಳು ಮತ್ತೆ ಕ್ರಿಕೆಟ್ ನತ್ತ ಮರಳಿ ಇದೀಗ ಕೋಲಾರದ ತಂಡಗಳು ಮತ್ತೆ ರಾಜ್ಯ ಮಟ್ಟದ ಪ್ರತಿಷ್ಟಿತ ಪಂದ್ಯಾವಳಿಯಲ್ಲಿ ಭಾಗವಹಿಸಿ ಯಶಸ್ಸು ಕಾಣುತ್ತಿವೆ.
M.K.S ಗ್ರೂಪ್ಸ್ ಮಾಲೀಕರು ನದೀಮ್ ಅಖ್ತರ್ ಹಾಗೂ S.A.S ಗ್ರೂಪ್ಸ್ ಮಾಲೀಕರಾದ ಶಾಮೀರ್ ರವರು ಕೋಲಾರ ಜಿಲ್ಲೆಯಲ್ಲಿ ಸತತ ಕ್ರೀಡಾ ಚಟುವಟಿಕೆಗಳನ್ನು ಸಂಘಟಿಸಿ ಅನೇಕ ಯುವ ಪ್ರತಿಭೆಗಳನ್ನು ಗುರುತಿಸಿ,ಪ್ರೋತ್ಸಾಹಿಸಿ ರಾಜ್ಯ,ರಾಷ್ಟ್ರೀಯ,ಅಂತರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಮೊದಲ ಆವೃತ್ತಿಯ S.P.L ನ ಯಶಸ್ಸಿನ ಬಳಿಕ ಈ ಬಾರಿ
ನದೀಮ್ ಅಖ್ತರ್ ರವರು ಧೋನಿ ಪ್ರೀಮಿಯರ್ ಲೀಗ್ ಯಶಸ್ಸಿನ ರೂವಾರಿ ಶ್ರೀನಿವಾಸಪುರದ S.A.S ಗ್ರೂಪ್ ನ ಮಾಲೀಕ ಶಾಮೀರ್ ಒಡಗೂಡಿ ಕೋಲಾರ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಹೊನಲು ಬೆಳಕಿನ
ವೈಭವೋಪೇತ ಪಂದ್ಯಾವಳಿಗೆ ನಾಂದಿ ಹಾಡಲಿದ್ದಾರೆ.
ಪಂದ್ಯಾಕೂಟ ಐ.ಪಿ.ಎಲ್ ಮಾದರಿಯಲ್ಲಿ ನಡೆಯಲಿದ್ದು,ಈಗಾಗಲೇ 8 ಫ್ರಾಂಚೈಸಿಗಳು ಒಂದೊಂದು ತಂಡದಲ್ಲಿ ತಲಾ ರಾಜ್ಯದ 3 ಪ್ರಸಿಧ್ಧ ಆಟಗಾರರನ್ನು ಹೊಂದಿದ್ದು,
ಹೋರಾಟದ ಕಣಕ್ಕಿಳಿಯಲು ಸನ್ನದ್ಧರಾಗಿದ್ದು,
ಫ್ರಾಂಚೈಸಿಗಳ ವಿವರ ಈ ಕೆಳಗಿನಂತಿದೆ.
1.ಐ.ಕ್ಯೂ.ಪ್ರೊಫಿಶಿಯಂಟ್ಸ್
2.ಮೋನ್ ಸ್ಟಾರ್
3.ಸೈ ಬಾಯ್ಸ್
4.ಬಿ.ಎಸ್.ಆರ್.ಕನ್ಸ್ಟ್ರಕ್ಷನ್
5.ಜಾಕಿ ಕ್ರಿಕೆಟ್ ಕ್ಲಬ್.
6.ರೈಸಿಂಗ್ ಸ್ಟಾರ್ಸ್
7.ಫ್ರೆಂಡ್ಸ್ ಅಟ್ಯಾಕರ್ಸ್.
8.ಬ್ರ್ಯಾಂಡ್ ಯುವಾ.
ಪ್ರಥಮ ಪ್ರಶಸ್ತಿ ವಿಜೇತ ತಂಡ 2 ಲಕ್ಷ ನಗದು,ದ್ವಿತೀಯ ಸ್ಥಾನಿ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳು,ಇನ್ನಿತರ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರಿಗೆ ವಿಶೇಷ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ.
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ ಮಾಜಿ ವಿಧಾನ ಸಭಾ ಅಧ್ಯಕ್ಷರು ಕೆ.ಆರ್.ರಮೇಶ್ ಕುಮಾರ್ ಸಹಿತ ಅನೇಕ ರಾಜಕೀಯ ಧುರೀಣರು ಆಗಮಿಸಲಿದ್ದು,
ಕೆ.ಜಿ.ಎಫ್ ಖ್ಯಾತಿಯ ಗರುಡಾ,ಪ್ರಸಿದ್ಧ ಡ್ರಮ್ಮರ್ ದೇವಾ,ಐ.ಪಿ.ಎಲ್,ಪ್ರೊ ಕಬಡ್ಡಿ ಕಾಮೆಂಟೇಟರ್ ನವೀನ್ ಶೌರಿ,ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ,ಹಿರಿಯ ಪ್ರಸಿದ್ಧ ಕನ್ನಡ ವೀಕ್ಷಕ ವಿವರಣೆಕಾರ ಕೋಟ ಶಿವನಾರಾಯಣ ಐತಾಳ್,ಹಿಂದಿ ಕಾಮೆಂಟೇಟರ್ ಸ್ಟಾರ್ ನವಾಝ್,ಸ್ಪೋರ್ಟ್ಸ್ ಕನ್ನಡ ಸಂಚಾಲಕ ಕೋಟ ರಾಮಕೃಷ್ಣ ಆಚಾರ್ಯ ಭಾಗವಹಿಸಲಿದ್ದಾರೆ.
ಸಚಿನ್ ಮಹಾದೇವ್ ಮಾಲೀಕತ್ವದ M.Sports ಓಂಕಾರ್ ಪಾಟೀಲ್ ಸಾರಥ್ಯದಲ್ಲಿ ನೇರ ಪ್ರಸಾರವನ್ನು ಬಿತ್ತರಿಸಲಿದ್ದಾರೆ.