ಏಪ್ರಿಲ್ 17 ಭಾನುವಾರದಂದು ಉಡುಪಿ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಹಿಂಭಾಗದ ಮೈದಾನದಲ್ಲಿ ನಡೆದ ಕ್ರೌನ್ ಪ್ರೀಮಿಯರ್ ಲೀಗ್-2022 ನಡೆಯಿತು.

ಒಟ್ಟು 6 ಫ್ರಾಂಚೈಸಿಗಳ ನಡುವೆ,ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಿದ ಪಂದ್ಯಾಟದ ಫೈನಲ್ ನಲ್ಲಿ ಪ್ರಕೃತಿ ರಿಯಲ್ ಫೈಟರ್ಸ್ ತಂಡ,ವಾರಾಹಿ ಕ್ರಿಕೆಟರ್ಸ್
ಕಂಗಣಬೆಟ್ಟು ತಂಡವನ್ನು ಸೋಲಿಸಿ ಪ್ರಥಮ ಬಹುಮಾನ 25,555 ಮತ್ತು ವಾರಾಹಿ ಕ್ರಿಕೆಟರ್ಸ್
ದ್ವಿತೀಯ ಬಹುಮಾನ 12,222 ನಗದು ಬಹುಮಾನದೊಂದಿಗೆ ಆಕರ್ಷಕ ಟ್ರೋಫಿಗಳನ್ನು ಪಡೆದರು.


ಸಮಾರೋಪ ಸಮಾರಂಭದಲ್ಲಿ ಟಿ.ರಾಘವೇಂದ್ರ ರಾವ್ ಕೊಡವೂರು,ಜಯಪ್ರಕಾಶ್ ಕಂಗಣಬೆಟ್ಟು ಇವರನ್ನು ಸನ್ಮಾನಿಸಲಾಯಿತು.


ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸಂತೋಷ್ ಶೆಟ್ಟಿ ಪಂಚರತ್ನ ಹೋಟೆಲ್,ನಾರಾಯಣ ಕರ್ಕೇರಾ
ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಮಲ್ಪೆ ಬೀಚ್,ಪ್ರಶಾಂತ್ ಆಚಾರ್ಯ, ದಿನೇಶ್ ಶೆಟ್ಟಿ ಕಲ್ಯ,ಪ್ರಕಾಶ್ ಆಚಾರ್, ರಮೇಶ್ ಶೆಟ್ಟಿ, ದಿನೇಶ್ ಶೆಟ್ಟಿಗಾರ್,ಕರುಣಾಕರ್,
ಮನೋಜ್,ರವಿಕುಮಾರ್,ವಿನೇಶ್,ಅಜಿತ್ ಮಲ್ಪೆ,
ದಿಲೀಪ್,ಪ್ರಮೋದ್,ಭಾಸ್ಕರ್,ಮಿಥುನ್, ಜ್ನಾನೇಶ್,
ವಿಕೇಶ್,ಅನಿಲ್ ಮತ್ತಿತರರು ಉಪಸ್ಥಿತರಿದ್ದರು.