ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ ವೆಂಕಟರಮಣ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ರಿ.ಪಿತ್ರೋಡಿ ಇವರ ಆಶ್ರಯದಲ್ಲಿ ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ವಿನೂತನ ಪ್ರಯತ್ನದ ರೂಪದಲ್ಲಿ ಉಡುಪಿ ಜಿಲ್ಲಾ ಅಂತರ್ ಗ್ರಾಮೀಣ ತಂಡಗಳ ಕ್ರಿಕೆಟ್ ಪಂದ್ಯಾಕೂಟ “ವೆಂಕಟರಮಣ ಟ್ರೋಫಿ-2022” ಆಯೋಜಿಸಲಾಗಿದೆ.
ಫೆಬ್ರವರಿ 12 ಮತ್ತು 13 ರಂದು ಉದ್ಯಾವರ ಗ್ರಾಮ ಪಂಚಾಯತ್ ಮೈದಾನ ಹಾಗೂ ಕಟಪಾಡಿ ಪಳ್ಳಿಗುಡ್ಡೆ ಮೈದಾನದಲ್ಲಿ ಆಯೋಜಿಸಲಾಗಿರುವ ಈ ಪಂದ್ಯಾವಳಿಯ ಪ್ರಥಮ ಪ್ರಶಸ್ತಿ ವಿಜೇತ ತಂಡ ಆಕರ್ಷಕ ಬೆಳ್ಳಿಯ ಟ್ರೋಫಿಯೊಂದಿಗೆ 70 ಸಹಸ್ರ ನಗದು,ದ್ವಿತೀಯ ಸ್ಥಾನಿ 40000 ನಗದು ಬಹುಮಾನಗಳನ್ನು ನೀಡಲಾಗುತ್ತಿದೆ.
*ವಿಶೇಷ ಆಕರ್ಷಣೆ ಎಂಬಂತೆ ರಾಜ್ಯ ಲೆದರ್ ಬಾಲ್ ಮಹಿಳಾ ತಂಡಗಳ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿದೆ.*
ಉಡುಪಿ ಜಿಲ್ಲೆಯ ಎಲ್ಲಾ ಗ್ರಾಮಗಳ ತಂಡಗಳಿಗೆ ಭಾಗವಹಿಸಲು ಅವಕಾಶವಿದ್ದು,ಪ್ರವೇಶ ಶುಲ್ಕ ನೀಡಿ ತಂಡವನ್ನು ನೋಂದಣಿ ಮಾಡಿಕೊಳ್ಳಬಹುದು.
ನಗರಸಭಾ ವ್ಯಾಪ್ತಿಯ ತಂಡಗಳಿಗೂ ಅವಕಾಶವಿದೆ.
ತಂಡಗಳು ಪಂದ್ಯದ 15 ನಿಮಿಷ ಮುಂಚೆ ಹಾಜರಿರತಕ್ಕದ್ದು.ಮಾಹಿತಿಗಾಗಿ 9964244946,
7019243403 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
ಕ್ರೀಡೆ ಮಾತ್ರವಲ್ಲದೇ ಶೈಕ್ಷಣಿಕ,ಸಾಂಸ್ಕೃತಿಕ,ಸಾಮಾಜಿಕ ಹೀಗೆ ವಿವಿಧ ಕ್ಷೇತ್ರಗಳಲ್ಲೂ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ವೆಂಕಟರಮಣ ಸಂಸ್ಥೆ ಆಯೋಜಿಸುವ ಪ್ರತಿ ಪಂದ್ಯಾವಳಿಯಲ್ಲೂ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಾ ಬಂದಿದ್ದು,ಈ ಬಾರಿಯೂ ಡೋಪ್ ಟೆಸ್ಟಿಂಗ್,
ನೇತ್ರದಾನ ಶಿಬಿರ,ಪರಿಸರ ಸಂರಕ್ಷಣಾ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ.
M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಪಂದ್ಯಾಟದ ನೇರ ಪ್ರಸಾರ ಬಿತ್ತರಗೊಳ್ಳಲಿದೆ.