ಮೊಬೈಲ್ ರೀಟೈಲರ್ಸ್ ಮಲ್ಪೆ ಇವರ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮೊಬೈಲ್ ಕ್ಷೇತ್ರದ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ 6 ಫ್ರಾಂಚೈಸಿಗಳ ಮೊಬೈಲ್ ಪ್ರೀಮಿಯರ್ ಲೀಗ್-ನ್ಯೂ ಇಯರ್ ಟ್ರೋಫಿ-2022 ಆಯೋಜಿಸಲಾಗಿದೆ.

ಫೆಬ್ರವರಿ 20 ರವಿವಾರದಂದು ಮಲ್ಪೆಯ ಗಾಂಧಿ ಶತಾಬ್ದಿ ಮೈದಾನದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು,ಪ್ರಥಮ ಬಹುಮಾನ 22,222 ರೂ ನಗದು,ದ್ವಿತೀಯ ಬಹುಮಾನ 11,111 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಮತ್ತು ವೈಯಕ್ತಿಕ ಶ್ರೇಷ್ಠ ನಿರ್ವಹಣೆ ನೀಡಿದ ಆಟಗಾರರಿಗೆ ಆಕರ್ಷಕ ಉಡುಗೊರೆ ನೀಡಲಾಗುತ್ತಿದೆ.
ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿದೆ.
1)ಸಂದೇಶ್ ಬಲ್ಲಾಳ್ ಮಾಲೀಕತ್ವದ ಉಡುಪಿ ರಾಯಲ್ಸ್

2)ಸ್ವೀಕೃತ್ ಮಂಗಳೂರು ಮಾಲೀಕತ್ವದ ಯುನೈಟೆಡ್ ಉಡುಪಿ

3)ಶ್ರೀಕಾಂತ್ ಭಟ್ ಮಾಲೀಕತ್ವದ ಉಡುಪಿ ಸ್ಟ್ರೈಕರ್ಸ್

4)ಅನಿಲ್ ಖಾರ್ವಿ ಮಾಲೀಕತ್ವದ ಕುಂದಾಪುರ ಸ್ಟ್ರೈಕರ್ಸ್

5)ಮುಸ್ತಾಫ್ ಮಾಲೀಕತ್ವದ ಕುಂದಾಪುರ ಅಟ್ಯಾಕರ್ಸ್

6)ದೇವಿದಾಸ್ ನಾಯಕ್ ಮಾಲೀಕತ್ವದ ರೈಸಿಂಗ್ ಸ್ಟಾರ್ಸ್ ಉಡುಪಿ

ಪಂದ್ಯಾವಳಿಯ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಕ್ಕೆ ಗಣ್ಯ ಅತಿಥಿಗಳು ಮತ್ತು ಉದ್ಯಮಿಗಳು ಆಗಮಿಸಲಿದ್ದಾರೆ.


