ಡಿಸೆಂಬರ್ 27 ರಿಂದ ಮೂಡುಬೆಳ್ಳೆ ಪ್ರೀಮಿಯರ್ ಲೀಗ್(M.P.L-2020)

ಮೂಡುಬೆಳ್ಳೆ ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಯಶಸ್ವಿ ಸ್ಪೋರ್ಟ್ಸ್&ಕಲ್ಚರಲ್ ಕ್ಲಬ್ ನೆಲ್ಲಿಕಟ್ಟೆ ತಂಡ ಅನಿತ್,ರೋಯ್ ಡೇಸಾ ಹಾಗೂ ರವಿರಾಜ್ ನೇತೃತ್ವದಲ್ಲಿ ಮೂಡುಬೆಳ್ಳೆ ಪ್ರೀಮಿಯರ್ ಲೀಗ್(M.P.L)ಪಂದ್ಯಾವಳಿ ಡಿಸೆಂಬರ್ 27 ರಿಂದ ಹಮ್ಮಿಕೊಂಡಿದ್ದಾರೆ.

ಸ್ಥಳೀಯ 8 ತಂಡಗಳು ಭಾಗವಹಿಸುವ ಈ ಪಂದ್ಯಾವಳಿ ಲೀಗ್ ಮಾದರಿಯಲ್ಲಿ ಸಾಗಲಿದೆ.
ವಿಜೇತ ತಂಡಗಳು ನಗದು ಬಹುಮಾನ ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ‌.
ಈ ಪಂದ್ಯಾವಳಿಯ ನೇರಪ್ರಸಾರ M9 ಸ್ಪೋರ್ಟ್ಸ್ ಬಿತ್ತರಿಸಲಿದ್ದು,ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲಿದ್ದು,ಯು‌.ಆರ್.ಸ್ಪೋರ್ಟ್ಸ್ ಮಣಿಪಾಲ ಪಂದ್ಯಾಕೂಟಕ್ಕೆ ಶುಭಕೋರಿದ್ದಾರೆ.

ಕೋಟ ರಾಮಕೃಷ್ಣ ಆಚಾರ್ಯ

Written by ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published. Required fields are marked *

1 × 3 =

ಗೆದ್ದ ನಡಾಲ್, ತ್ರಿಮೂರ್ತಿಗಳು ಮತ್ತು ಟೆನ್ನಿಸ್ ಭವಿಷ್ಯ…

ರಾಫೆಲ್ ನಡಾಲ್ : ಒಂದು ಅಂಕಿ ಅಂಶ