Categories
ಟೆನಿಸ್

ರಾಫೆಲ್ ನಡಾಲ್ : ಒಂದು ಅಂಕಿ ಅಂಶ

ಈ ವರ್ಷದ ಫ್ರೆಂಚ್ ಓಪನ್ ಎಂದಿನಂತೆ ರಾಫೆಲ್ ನಡಾಲ್ ಗೆದ್ದಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ.ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಅಗ್ರಶ್ರೇಯಾಂಕಿತ ಜೊಕೊವಿಚ್‌ರನ್ನು 6 -0,6-2,7-5ಯ ನೇರ ಸೆಟ್‌ಗಳಲ್ಲಿ ಸೋಲಿಸುವ ಮೂಲಕ ಜೊಕೊವಿಚ್‌ನ ಹದಿನೆಂಟನೇಯ ಗ್ರಾಂಡ್‌ಸ್ಲಾಮ್ ಪ್ರಶಸ್ತಿಯ ಕನಸನ್ನು ನಡಾಲ್ ಭಗ್ನ ಗೊಳಿಸಿದರು. ಈ ವರ್ಷದ ಫ್ರೆಂಚ್ ಓಪನ್ ಗೆದ್ದ ನಡಾಲ್ ವೃತ್ತಿ ಬದುಕಿನ ಕೆಲವು ಆಸಕ್ತಿಕರ ಅಂಕಿಅಂಶಗಳು ಹೀಗಿವೆ
13 — ನಡಾಲ್ ಗೆದ್ದ ಒಟ್ಟು ಪ್ರೆಂಚ್ ಓಪನ್‌ಗಳ ಸಂಖ್ಯೆಯಿದು.ಒಂದು ಟೆನ್ನಿಸ್ ಪಂದ್ಯಾವಳಿಯನ್ನು ಅತಿ ಹೆಚ್ಚು ಬಾರಿ ಗೆದ್ದ ದಾಖಲೆಯೀಗ ನಡಾಲ್ ಹೆಸರಿಗೆ ಸೇರಿಕೊಂಡಿತು.ಕಳೆದ ಬಾರಿ ಫ್ರೆಂಚ್ ಓಪನ್ ಗೆಲ್ಲುವ ಮೂಲಕ ಪಂದ್ಯಾವಳಿಯೊಂದನ್ನು ಅತಿ ಹೆಚ್ಚು ಬಾ ಗೆದ್ದ ಮಾರ್ಟಿನಾ ನವ್ರಾಟಿಲೋವಾರ ದಾಖಲೆಯನ್ನು ಸರಿಗಟ್ಟಿದ್ದ ನಡಾಲ್ ಈ ಬಾರಿಯ ಪ್ರಶಸ್ತಿ ಗೆಲ್ಲುವ ಮೂಲಕ ಆ ದಾಖಲೆಯನ್ನು ಮುರಿದರು.ಮಾರ್ಟಿನಾ ನವ್ರಾಟಿಲೋವಾ ಚಿಕಾಗೋ ಓಪನ್ ಪ್ರಶಸ್ತಿಯನ್ನು 1978 ರಿಂದ 1992ರ ನಡುವಣ ಹನ್ನೆರಡು ಬಾರಿ ಗೆದ್ದಿದ್ದರು. ಬಾರ್ಸಿಲೊನಾ ಓಪನ್ ಹನ್ನೊಂದು ಬಾರಿ ಗೆದ್ದಿರುವ ನಡಾಲ್ ಮತ್ತು ಬಾಸಲ್ ಓಪನ್ ಹತ್ತು ಬಾರಿ ಗೆದ್ದಿರುವ ಫೆಡರರ್ ನಂತರದ ಸ್ಥಾನಗಳಲ್ಲಿದ್ದಾರೆ
21 — ವಿಶ್ವದ ಅಗ್ರ ಶ್ರೇಯಾಂಕಿತರನ್ನು ನಡಾಲ್ ಸೋಲಿಸಿರುವ ಸಂಖ್ಯೆಯಿದು.ಅದರಲ್ಲಿ ಏಳು ಬಾರಿ ಜೋಕೊವಿಚ್‌ರನ್ನು ಮತ್ತು ಹದಿನಾಲ್ಕು ಬಾರಿ ಫೆಡರರ್‌ರನ್ನು ಅಗ್ರಶ್ರೇಯಾಂಕಿತರಾಗಿದ್ದಾಗಲೇ ನಡಾಲ್ ಸೋಲಿಸಿದ್ದಾರೆ‌.1973ರ ನಂತರದ ಈ ದಾಖಲೆಯಲ್ಲೊ ಬೋರಿಸ್ ಬೇಕರ್ (19) ಮತ್ತು ನವ್ರಾಟಿಲೋವ (18) ಕ್ರಮವಾಗಿ ಎರಡನೇ ಮತ್ತು ಮೂರನೇಯ ಸ್ಥಾನದಲ್ಲಿದ್ದಾರೆ.
6 —  1972ರ ನಂತರ ಫ್ರೆಂಚ್ ಓಪನ್ ಗೆದ್ದ ಹಿರಿಯ ಆಟಗಾರ ರಾಫೇಲ್ ನಡಾಲ್.ಮೂವತ್ತರ ಹರೆಯದಾಚೆ ಆರು ಗ್ರಾಂಡ್‌ಸ್ಲಾಮ್‌ಗಳನ್ನು ಗೆದ್ದ ಏಕೈಕ ಆಟಗಾರ. ಮೂವತ್ತರ ನಂತರ ಜೋಕೊವಿಚ್ ಐದು ಪ್ರಶಸ್ತಿಗಳನ್ನು ಗೆದ್ದಿದ್ದರೆ,ಫೆಡರರ್ ರಾಡ್ ಲೇವರ್ ಕೆನ್ ರೋಸ್ವಾಲ್ ತಲಾ ನಾಲ್ಕು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
4 — ಒಂದೇ ಒಂದು ಸೆಟ್ ಸೋಲದೇ ನಾಲ್ಕು ಗ್ರಾಂಡಸ್ಲಾಮ್ ಪಂದ್ಯಾವಳಿಗಳನ್ನು ಗೆದ್ದ ಆಟಗಾರ ನಡಾಲ್.ಬೋರ್ನ್ ಬೋರ್ಗ್ ಮೂರು ಪಂದ್ಯಾವಳಿಗಳನ್ನು ಹೀಗೆ ಸೆಟ್ ಸೋಲದೇ ಗೆದ್ದಿದ್ದರೆ ,ಫೆಡರರ್ ಎರಡು ಪಂದ್ಯಾವಳಿಗಳನ್ನು ಗೆದ್ದುಕೊಂಡಿದ್ದರು.
12 — ಗ್ರಾಂಡ್‌ಸ್ಲಾಮ್ ಪಂದ್ಯಾವಳಿಯೊಂದರಲ್ಲಿ 6 -0 ಯಿಂದ ನಡಾಲ್ ಸೆಟ್ ಗೆದ್ದಿರುವುದು ಇದು ಹನ್ನೆರಡನೇಯ ಬಾರಿ.ಕಾಕತಾಳೀಯವೆನ್ನುವಂತೆ ಜೋಕೊವಿಚ್‌ಗೆ ಇದು ಹನ್ನೆರಡನೇ ಬಾರಿಯ ಗೇಮ್ ರಹಿತ್ ಸೆಟ್ ಸೋಲು.
86 — ರಾಫೆಲ್ ನಡಾಲ್ ವೃತ್ತಿ ಬದುಕಿನ ಒಟ್ಟು ಪ್ರಶಸ್ತಿಗಳ ಸಂಖ್ಯೆ.ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದವರ ಪಟ್ಟಿಯಲ್ಲಿ ನಾಲ್ಕನೇಯ ಸ್ಥಾನವಿದು.ಜಿಮ್ಮಿ ಕಾನರ್ಸ್ (109) ,ರೋಜರ್ ಫೆಡರರ್ (103) ಮತ್ತು ಇವಾನ್ ಲೆಂಡ್ಲ್ (94) ಮೊದಲ ಮೂರು ಕ್ರಮಾಂಕಿತರು
15 — ನಡಾಲ್ ಮೊದಲ ಫ್ರೆಂಚ್ ಓಪನ್ ಜಯಿಸಿದ್ದು 2005ರಲ್ಲಿ ,ಸಧ್ಯದ ಗ್ರಾಂಡಸ್ಲಾಮ್ ಗೆಲುವು 2020ರಲ್ಲಿ.ಒಟ್ಟು ಹದಿನೈದು ವರ್ಷಗಳ ಅಂತರದಲ್ಲಿ ಪ್ರಶಸ್ತಿ ಗೆದ್ದಿರುವ ನಡಾಲ್ ಒಟ್ಟು ವೃತ್ತಿ ಜೀವನದ ಗ್ರಾಂಡ್‌ಸ್ಲಾಮ್ ಗೆಲುವಿನ ಅವಧಿ ಎರಡನೇ ಧೀರ್ಘಾವದಿಯ ಗೆಲುವಿನ ಕಾಲಮಾನ.ಅತೀ ಧೀರ್ಘ ಕಾಲದವರೆಗೆ ಪ್ರಶಸ್ತಿ ಗೆದ್ದ ದಾಖಲೆ ಸೆರಿನಾ ವಿಲಿಯಮ್ಸ್ ಹೆಸರಿನಡಿಯಿದ್ದು ಆಕೆ ಹದಿನೇಳು ವರ್ಷ ಮತ್ತು ಐದು ತಿಂಗಳುಗಳ ಕಾಲಾವಧಿಯಲ್ಲಿ ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಜಯಿಸಿದ್ದಾರೆ

Leave a Reply

Your email address will not be published.

four × three =