
ಶಾರ್ಜಾ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಸೌಹಾರ್ದತೆಯ ಕ್ರಿಕೆಟ್ ಹಬ್ಬ-ಯುನೈಟೆಡ್ ಕಾಪು ಟ್ರೋಫಿ-2025

ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲೇ ಮೊತ್ತ ಮೊದಲಬಾರಿಗೆ ಶಾರ್ಜಾ ಅಂತರಾಷ್ಟ್ರೀಯ ಮೈದಾನದಲ್ಲಿ ಕಳೆದ ಬಾರಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದ ಯುನೈಟೆಡ್ ಕಾಪು ಯುಎಇ ತಂಡ ಈ ಬಾರಿ ಸೀಸನ್ 6 ರ ಯುನೈಟೆಡ್ ಕಾಪು ಟ್ರೋಫಿ ಕ್ರಿಕೆಟ್ ಪಂದ್ಯಾಟ ಆಯೋಜಿಸಲು ಸಜ್ಜಾಗಿ ನಿಂತಿದೆ.

ಕ್ರೀಡಾಪ್ರೋತ್ಸಾಹಕರಾದ ಆದಿಲ್,ಫೈಸಲ್ ಕಾಪು,ಶಾಫಿ,ಶಾಕೀರ್ ವಿಟ್ಲ ಮತ್ತು ಆಶಿಕ್ ಆಲಿ ಇವರೆಲ್ಲರ ಒಗ್ಗೂಡುವಿಕೆಯಲ್ಲಿ ಹುಟ್ಟಿಕೊಂಡ ಪರಿಕಲ್ಪನೆಯೇ ಯುನೈಟೆಡ್ ಕಾಪು ಟ್ರೋಫಿ. ಕಳೆದ 5 ವರ್ಷಗಳಿಂದ ಸತತವಾಗಿ ಸ್ನೇಹ,ಶಾಂತಿ, ಸೌಹಾರ್ದತೆಯನ್ನೇ ಧ್ಯೇಯವಾಗಿಸಿಕೊಂಡು ಯುನೈಟೆಡ್ ಕಾಪು ಟ್ರೋಫಿಯನ್ನು ಈ ತಂಡ ಅತ್ಯಂತ ಯಶಸ್ವಿಯಾಗಿ ಆಯೋಜಿಸಿಕೊಂಡು ಬಂದಿದೆ.


ಸೀಸನ್ 6 ರ ಯುನೈಟೆಡ್ ಕಾಪು ಟ್ರೋಫಿ ಫೆಬ್ರವರಿ 16 ರಂದು ಹೊನಲು ಬೆಳಕಿನಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಯಲಿದ್ದು ವಿಜೇತರಿಗೆ ಮಿನುಗುವ ಪಾರಿತೋಷಕಗಳೊಂದಿಗೆ ಆಕರ್ಷಕ ನಗದು ಬಹುಮಾನ ನೀಡಿ ಗೌರವಿಸಲಾಗುತ್ತಿದೆ ಹಾಗೂ ಶ್ರೇಷ್ಠ ಪ್ರದರ್ಶನ ನೀಡಿದ ಆಟಗಾರರು ವಿಶೇಷ ಬಹುಮಾನಗಳನ್ನು ಉಡುಗೊರೆ ರೂಪದಲ್ಲಿ ಪಡೆಯಲಿದ್ದಾರೆ.

ಈ ಬಗ್ಗೆ ಸ್ಪೋರ್ಟ್ಸ್ ಕನ್ನಡದೊಂದಿಗೆ ಮಾತನಾಡಿದ ಟೂರ್ನಮೆಂಟ್ ನ ಪ್ರಮುಖ ಆಯೋಜಕರಲ್ಲಿ ಓರ್ವರಾದ ಫೈಸಲ್ ಕಾಪು “ಶಾಂತಿ,ಸೌಹಾರ್ದತೆಯ ಪ್ರತೀಕವಾಗಿ ಹಾಗೂ ಅರಬ್ ರಾಷ್ಟ್ರದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರನ್ನು ಒಗ್ಗೂಡಿಸುವ ಸಲುವಾಗಿ ಯುನೈಟೆಡ್ ಕಾಪು ಟ್ರೋಫಿ ಆಯೋಜಿಸಲಾಗುತ್ತಿದೆ” ಎಂದರು…




