ಕ್ರಿಕೆಟ್ದುಬೈನ ವಿದ್ವಾರ್ಸ್ ಬಾಯ್ಸ್ ತಂಡಕ್ಕೆ ಚಾಂಪಿಯನ್ ಟ್ರೋಫಿ

ದುಬೈನ ವಿದ್ವಾರ್ಸ್ ಬಾಯ್ಸ್ ತಂಡಕ್ಕೆ ಚಾಂಪಿಯನ್ ಟ್ರೋಫಿ

-

- Advertisment -spot_img

ದುಬೈನ ವಿದ್ವಾರ್ಸ್ ಬಾಯ್ಸ್ ತಂಡಕ್ಕೆ ಚಾಂಪಿಯನ್ ಟ್ರೋಫಿ.

ದುಬೈಯ ಅಜ್ಮಾನ್ ರಾಯಲ್ ಮೈದಾನದಲ್ಲಿ ಜರಗಿದ ಯು.ಎ.ಇ ಯ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾಕೂಟದಲ್ಲಿ ದುಬೈನ ವಿದ್ವಾರ್ಸ್ ಕ್ರಿಕೆಟ್ ತಂಡವು ಚಾಂಪಿಯನ್ ತಂಡವಾಗಿ ಎ-7 ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

ದುಬೈನ ಕನ್ನಡಿಗರ ಬಳಗದ ಶ್ರೀಸಾಹಿಲ್ ನೆಲೆಯಾಡಿ ಹಾಗೂ ಸ್ನೇಹಿತರು ಆಯೋಜಿಸಿದ ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡಿಗರಿಗೆ ಪ್ರಥಮ ಪ್ರಾಶಸ್ತ್ಯ ನೀಡಲಾಗಿತ್ತು.ಪ್ರತಿತಂಡವು ಗರಿಷ್ಠ ಇಬ್ಬರು ಕರ್ನಾಟಕೇತರ ಆಟಗಾರರನ್ನು ಮಾತ್ರ ಹೊಂದಿರಬಹುದು.

ದುಬೈನಲ್ಲಿ ನೆಲೆಸಿರುವ ಕನ್ನಡಿಗರ ಬಲಿಷ್ಠ ಹತ್ತುತಂಡಗಳು ಈ ಕ್ರಿಕೆಟ್ ಕೂಟದಲ್ಲಿ ಪಾಲ್ಗೊಂಡಿದ್ದು ಲೀಗ್ ಮಾದರಿಯಲ್ಲಿ ಈ ಪಂದ್ಯಾವಳಿಯು ಜರಗಿತ್ತು.

ಬಹುತೇಕ ಉಡುಪಿ ಮಂಗಳೂರು ಕುಂದಾಪುರದ ಆಟಗಾರರನ್ನೇ ಹೊಂದಿದ್ದ ವಿದ್ಯಾನಂದ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಒಡೆತನದ ವಿದ್ವಾರ್ಸ ಬಾಯ್ಸ್ ತಂಡವು ತೀವ್ರ ಜಿದ್ದಾಜಿದ್ದಿನ ಹೋರಾಟದಲ್ಲಿ ಮಂಗಳೂರಿನ ಟೀಮ್ ಎಲೀಗೆಂಟ್ ತಂಡವನ್ನು ಒಂದು ರನ್ನುಗಳ ಕೂದಲೆಳೆಯ ಅಂತರದಲ್ಲಿ ಸೋಲಿಸಿ ಮಿನುಗುವ ಎ-ಸೆವೆನ್ ಟ್ರೋಫಿ ಸಹಿತ 10-000 ಧೀರಮ್ ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.

ಕುಂದಾಪುರ ಸಮೀಪದ ಸೂರಾಲಿನ ವಿಠಲ್ ರಿಶಾನ್ ನಾಯಕ್ ಅವರ ಅನುಭವೀ ಮಾರ್ಗದರ್ಶನದೊಂದಿಗೆ ಎಂಬಿ ರವರನಾಯಕತ್ವ ಹಾಗೂ ವೈಭವರವರ ಉಪನಾಯಕತ್ವ ಉಳಿದಂತೆ ತನ್ಶೀರ್,ನದೀರ್,ಶಾಬುದೀನ್,ಅಂಕಿತ್,ಪ್ರತಮೇಶ್ ಚಿಕ್ಕು,ರೋಹಿತ್ ಪುಟ್ಟ, ನೌಫಲಅಪ್ಪು,ಪ್ರಣೀತ, ನಿಕೇತನ,ಆಕಾಶ್,ಜುನೈದಾ, ರತನ್ ಆಟಗಾರರೊಂದಿಗೆ ಕಣಕ್ಕೆ ಇಳಿದಿತ್ತು. ರೋಮಾಂಚಕವಾಗಿ ನಡೆದ ಫೈನಲ ಪಂದ್ಯದಲ್ಲಿ ವಿದ್ವಾರ್ಸ ಬಾಯ್ಸ್ ತಂಡದ ಭರ್ಜರಿ ಪ್ರದರ್ಶನವು ಭಾರೀ ಜನಮನ್ನಣೆ ಗಳಿಸಿತು.

2024ರಲ್ಲಿ ಜರಗಿದ ಪ್ರತಿಷ್ಠಿತ ಯಕ್ಷ ಪ್ರೀಮಿಯರ್ ಲೀಗ್ ಟ್ರೋಫಿ ಹಾಗೂ ಕರ್ನಾಟಕ ಪ್ರೀಮಿಯರ್ ಲೀಗ್ ಟ್ರೋಫಿಯನ್ನು ಈಗಾಗಲೇ ವಿದ್ವಾರ್ಸ್ ಬಾಯ್ಸ್ ತಂಡವು ಬಗಲಿಗೇರಿಸಿಕೊಂಡಿದೆ.

ಬಹುಮಾನ ಸಮಾರಂಭದಲ್ಲಿ ದುಬೈನ ಪ್ರಸಿದ್ಧ ಉದ್ಯಮಿಗಳು ಹಾಗೂ,ನೆಲೆಯಾಡಿ ಸ್ನೇಹ ಬಳಗದ ಶ್ರೀಯುತ ಸಾಹಿಲ್ ನೆಲೆಯಾಡಿ ಮತ್ತು ಸ್ನೇಹಿತರು ಮುಖ್ಯಸ್ಥರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

5 − two =

Latest news

ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ!

  ಭಾರತ ವಿಶ್ವ ಚಾಂಪಿಯನ್: ಟಿ20 ವಿಶ್ವಕಪ್ ಮತ್ತೆ ಭಾರತಕ್ಕೇ! ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸಿದೆ. ಹಾಲಿ ಚಾಂಪಿಯನ್ ಆಗಿ ಟಿ20 ವಿಶ್ವಕಪ್ ಉಳಿಸಿಕೊಳ್ಳುವುದರ ಜೊತೆಗೆ, ತವರು ನೆಲದಲ್ಲಿ...

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ

ಭಾರತಕ್ಕೆ ಮೂರನೇ ಟಿ20 ವಿಶ್ವಕಪ್ ಕಿರೀಟ – ಐತಿಹಾಸಿಕ ಸಾಧನೆ ಕ್ರಿಕೆಟ್ ಲೋಕದಲ್ಲಿ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ Team India ತಂಡವು ಟಿ20 ವಿಶ್ವಕಪ್‌ನಲ್ಲಿ ತನ್ನ ಪ್ರಭಾವವನ್ನು...

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್

NIPM ಕ್ರಿಕೆಟ್ ಎಕ್ಸ್‌ಪ್ಲೋಶನ್ ಕಾರ್ಪೊರೇಟ್ ಟೂರ್ನಮೆಂಟ್ 2026: NMPA ಚಾಂಪಿಯನ್ **New Mangalore Port Authority (ಎನ್‌ಎಂಪಿಎ)** ತಂಡವು **NIPM Cricket Explosion Corporate Cricket Tournament...

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ; NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ

ಮಂಗಳೂರಿನಲ್ಲಿ ಕಾರ್ಪೊರೇಟ್ ಕ್ರಿಕೆಟ್ ಹಬ್ಬಕ್ಕೆ ಚಾಲನೆ NIPM ಮಂಗಳೂರು ಚಾಪ್ಟರ್‌ನಿಂದ “ಕ್ರಿಕೆಟ್ ಎಕ್ಸ್‌ಪ್ಲೋಷನ್” ಟೂರ್ನಿ ಮಂಗಳೂರು: ಮಾನವ ಸಂಪನ್ಮೂಲ ಕ್ಷೇತ್ರದ ಪ್ರಮುಖ ಸಂಘಟನೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್‌ಮೆಂಟ್ (NIPM)...
- Advertisement -spot_imgspot_img

ಸಾಲಿಗ್ರಾಮದಲ್ಲಿ “ವಿಶ್ವ ವೃಷ್ಠಿ ಟ್ರೋಫಿ 2026” ಕ್ರಿಕೆಟ್ ಪಂದ್ಯಾಟ – ಮಾರ್ಚ್ 14 ಮತ್ತು 15 ರಂದು ಭರ್ಜರಿ ಆಯೋಜನೆ

ಸಾಲಿಗ್ರಾಮದಲ್ಲಿ “ ವಿಶ್ವ ವೃಷ್ಠಿ ಟ್ರೋಫಿ 2026” ಕ್ರಿಕೆಟ್ ಪಂದ್ಯಾಟ – ಮಾರ್ಚ್ 14 ಮತ್ತು 15 ರಂದು ಭರ್ಜರಿ ಆಯೋಜನೆ ಕ್ರೀಡಾಭಿಮಾನಿಗಳಿಗೆ ರೋಮಾಂಚನ ಮೂಡಿಸುವ ಕ್ರಿಕೆಟ್...

ಅಮ್ಗೆಲೆ ಅಭರಣ GPL ಉತ್ಸವ 2026 – ದಶಕದ ಸಂಭ್ರಮಕ್ಕೆ ಸಜ್ಜಾದ ಕ್ರೀಡಾ ಮಹೋತ್ಸವ

ಅಮ್ಗೆಲೆ ಅಭರಣ GPL ಉತ್ಸವ 2026 – ದಶಕದ ಸಂಭ್ರಮಕ್ಕೆ ಸಜ್ಜಾದ ಕ್ರೀಡಾ ಮಹೋತ್ಸವ ಕ್ರೀಡೆ, ಸಂಸ್ಕೃತಿ ಮತ್ತು ಸಮುದಾಯ ಒಗ್ಗಟ್ಟನ್ನು ಒಂದೇ ವೇದಿಕೆಯಲ್ಲಿ ಆಚರಿಸುವ ಮಹತ್ವದ...

Must read

- Advertisement -spot_imgspot_img

You might also likeRELATED
Recommended to you