ಶಿವಮೊಗ್ಗ-ಪರಿಸರದ ಹಿರಿಯ ಸಂಸ್ಥೆ ಸಹನಾ ಕ್ರಿಕೆಟ್ ಕ್ಲಬ್ ಇವರು ಶಿವಮೊಗ್ಗದ ಗೋಪಾಳದ ಮೈದಾನದಲ್ಲಿ ಸತತ ಎರಡನೇ ಬಾರಿಗೆ ಆಯೋಜಿಸಿದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಸಹನಾ ಟ್ರೋಫಿ-2023 ಪ್ರಶಸ್ತಿಯನ್ನು ರೇಣು ಗೌಡರ ಮಾಲೀಕತ್ವದ ಫ್ರೆಂಡ್ಸ್ ಬೆಂಗಳೂರು ತಂಡ ಜಯಿಸಿದೆ.ಸಹನಾ ಟ್ರೋಫಿಯಲ್ಲಿ ಸತತ ಎರಡನೇ ಬಾರಿಗೆ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸುವುದರ ಮೂಲಕ ವಿನೂತನ ಮೈಲಿಗಲ್ಲನ್ನು ಸ್ಥಾಪಿಸಿದೆ.
ರಾಜ್ಯ ಮಟ್ಟದ ತಂಡಗಳ ಜೊತೆ ಶಿವಮೊಗ್ಗ ಜಿಲ್ಲೆಯ ತಂಡಗಳಿಗೂ ಸಮಾನವಕಾಶ ಸಹನಾ ಕ್ರಿಕೆಟ್ ಕ್ಲಬ್ ಕಲ್ಪಿಸಿತ್ತು.ಶನಿವಾರ ಶಿವಮೊಗ್ಗ ಪರಿಸರದ 8 ತಂಡಗಳು ಭಾಗವಹಿಸಿದ್ದು,ರವಿವಾರದಂದು ರಾಜ್ಯದ 6 ಪ್ರತಿಷ್ಠಿತ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಿತು.
ಬಹುತೇಕ ಏಕ ಪಕ್ಷೀಯವಾಗಿ ಗೆಲುವನ್ನು ಸಾಧಿಸಿದ ಫ್ರೆಂಡ್ಸ್ ಬೆಂಗಳೂರು ಅಂತಿಮವಾಗಿ ಶಿವಮೊಗ್ಗ ಲಯನ್ಸ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿತು.
ಪ್ರಥಮ ಪ್ರಶಸ್ತಿ ರೂಪದಲ್ಲಿ ಫ್ರೆಂಡ್ಸ್ ಬೆಂಗಳೂರು 2 ಲಕ್ಷ ನಗದು,ದ್ವಿತೀಯ ಸ್ಥಾನಿ ಶಿವಮೊಗ್ಗ ಲಯನ್ಸ್ 1 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ತಮ್ಮದಾಗಿಸಿಕೊಂಡರು.
ಫೈನಲ್ ಪಂದ್ಯಶ್ರೇಷ್ಟ ಮತ್ತು ಬೆಸ್ಟ್ ಬ್ಯಾಟರ್ ಫ್ರೆಂಡ್ಸ್ ಬೆಂಗಳೂರಿನ ಗಿಳಿಯಾರು ನಾಗ,ಬೆಸ್ಟ್ ಬೌಲರ್ ಶಿವು ಲಷ್ಕರ್ ಬಾಯ್ಸ್ ಹಾಗೂ ಪಂದ್ಯಾಟದಲ್ಲಿ ಸರ್ವಾಂಗೀಣ ಆಟ ಪ್ರದರ್ಶಿಸಿದ ಎಸ್.ಕೆ ಲಯನ್ಸ್ ನ ಸಚಿನ್ ಹಿರೇಸರ ಸರಣಿಶ್ರೇಷ್ಟ ಗೌರವಕ್ಕೆ ಭಾಜನರಾದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿಸಹನಾ ಕ್ರಿಕೆಟ್ ಕ್ಲಬ್ ನ ಸಂಸ್ಥಾಪಕ ಬಸವೇಗೌಡ್ರು, ಶಿವ ಟೈರ್ ಮಾಲೀಕರು ಶಿವಕುಮಾರ್ ಎನ್, ಎನ್ ಎಸ್ ಮಂಜುನಾಥ್ ಆಯೋಜಕರು ಹಾಗೂ ಮಹಾನಗರ ಪಾಲಿಕೆ ಸದಸ್ಯರು, ಶ್ರೀನಾಥ್ ಅಧ್ಯಕ್ಷರು ದಯಾ ಫ್ರೆಂಡ್ಸ್ ಫುಟ್ಬಾಲ್ ಕ್ಲಬ್, ವರದರಾಜ ಹಿರಿಯ ಸಹನಾ ಕ್ರಿಕೆಟ್ ಕ್ಲಬ್ ಆಟಗಾರರು, ಇಂದ್ರೇಶ್, ಫೈರೋಜ್, ಮಂಜುನಾಥ್, ವೆಂಕಟೇಶ್ ಹಾಗೂ ಸಹನಾ ಕ್ರಿಕೆಟ್ ಕ್ಲಬ್ ಆಟಗಾರರು ಉಪಸ್ಥಿತರಿದ್ದರು.ರೋಹನ್ ಕಾರ್ಯಕ್ರಮ ನಿರೂಪಿಸಿದರು.