ಉಡುಪಿ-ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ,ಯೋಗರತ್ನ ತನುಶ್ರೀ ಪಿತ್ರೋಡಿ ಅವರ ಎರಡನೇ ಗಿನ್ನೆಸ್ ದಾಖಲೆಯ ಪ್ರಮಾಣ ಪತ್ರ ಸ್ವೀಕಾರ ಸಮಾರಂಭ ನಗರದ ಸೈಂಟ್ ಸಿಸಿಲೀಸ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕ ಯಶ್ ಪಾಲ್ ಸುವರ್ಣ ಜಯಕರ್ ಶೆಟ್ಟಿ ಇಂದ್ರಾಳಿ , ಗುರು ರಾಮಕೃಷ್ಣ ಕೊಡಂಚ, ಅಭಿನಯಾ ಅಧ್ಯಕ್ಷ ಉಮೇಶ್ ಅಲೆವೂರು , ಶ್ರೀಮತಿ ಸರಿತಾ ,ಸಿಸ್ಟರ್ ತೆರೆಸಾ ಜ್ಯೋತಿ, ದೈಹಿಕ ಶಿಕ್ಷಕ ದಿನೇಶ್ ಸರ್, ವಿಜಯ್ ಕೋಟ್ಯಾನ್ , ಕೃಷ್ಣ ಕುಲಾಲ್ ಉಪಸ್ಥಿತರಿದ್ದರು.
“ಜ್ಞಾನದ ಬೆಳಕು ತೋರಿದ ಗುರುವಿಗೊಂದು ನಮನ” ಶೀರ್ಷಿಕೆಯಡಿ ನಡೆದ ಈ ಕಾರ್ಯಕ್ರಮದಲ್ಲಿ ತನುಶ್ರೀ ಪಿತ್ರೋಡಿಯವರಿಗೆ ಆರಂಭದಿಂದ ಇದುವರೆಗೆ ಶಿಕ್ಷಣ ನೀಡಿದ ಎಲ್ಲಾ ಗುರುಗಳನ್ನು ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.
ಈ ಹಿಂದೆ 2023 ಜುಲೈನಲ್ಲಿ
ಮೋಸ್ಟ್ ಬ್ಯಾಕ್ವರ್ಡ್ ಸ್ಟೆಪ್ಸ್ ಇನ್ ಒನ್ ಮಿನಿಟ್… ದೇಹದ ಹಿಂಭಾಗಕ್ಕೆ ಎರಡೂ ಕೈಗಳನ್ನು ಚಲಿಸಿ ಪಾದವನ್ನು ಸುತ್ತುವರಿದು ಮತ್ತೆ ಮುಂಭಾಗಕ್ಕೆ ಬರುವ ರೀತಿಯ ಭಂಗಿಯನ್ನು ತನುಶ್ರೀ ಒಂದು ನಿಮಿಷದಲ್ಲಿ 53 ಬಾರಿ ಮಾಡಿದ್ದರು. ಆ ಸಾಧನೆಯನ್ನು ಗಿನ್ನೆಸ್ ಸಂಸ್ಥೆ ಪರಿಶೀಲಿಸಿ ಇದೀಗ ಪ್ರಮಾಣ ಪತ್ರ ನೀಡಿದೆ.
ಯುವ ಬರಹಗಾರ ಧೀರಜ್ ಬೆಳ್ಳಾರೆ ಕಾರ್ಯಕ್ರಮ ನಿರ್ವಹಿಸಿದರು. ಸಂಧ್ಯಾ ಉದಯ್ ಮತ್ತು ರೀತು ಶ್ರೀ ಕಾರ್ಯಕ್ರಮ ಆಯೋಜಿಸಿದರು.
ಚಿತ್ರಕೃಪೆ
ರತನ್ ಸುರಭಿ